Site icon Vistara News

Shoe Theft: ಬೆಂಗಳೂರಿನಲ್ಲಿ 10,000 ಶೂ, ಚಪ್ಪಲಿ ಕದ್ದ ಖತರ್‌ನಾಕ್‌ ಕಳ್ಳರ ಬಂಧನ!

Shoe Theft


ಬೆಂಗಳೂರು: ಸಾಮಾನ್ಯವಾಗಿ ಜನರು ದೇವಸ್ಥಾನದ ಒಳಗೆ (Shoe Theft) ಹೋಗುವಾಗ ಮತ್ತು ಮನೆಯೊಳಗೆ ಹೋಗುವಾಗ ಶೂ, ಚಪ್ಪಲಿಗಳನ್ನು ಹೊರಗೆ ಇಟ್ಟು ಹೋಗುವುದು ಸಹಜ. ಆದರೆ ಕೆಲವೊಮ್ಮೆ ಅವರು ವಾಪಾಸು ಬಂದು ನೋಡಿದರೆ ಅವರ ಶೂ, ಚಪ್ಪಲಿಗಳೇ ಇರುವುದಿಲ್ಲ. ಕೆಲವರು ಇದರಿಂದ ಬೇಸರಗೊಳ್ಳುತ್ತಾರೆ. ಯಾಕೆಂದರೆ ಮೊನ್ನೆಯಷ್ಟೇ ಖರೀದಿಸಿದ ಚಪ್ಪಲಿ ಕಳೆದುಹೋಯಿತೆಂದು. ಇನ್ನೂ ಕೆಲವರು ತಲೆ ಕೆಡಿಸಿಕೊಳ್ಳುವುದಿಲ್ಲ. ಯಾಕೆಂದರೆ ಚಪ್ಪಲಿ ಕಳೆದು ಹೋದರೆ ದಾರಿದ್ರ್ಯ ನಿವಾರಣೆಯಾದಂತೆ ಎಂಬ ನಂಬಿಕೆ ಇದೆ! ಆದರೆ ಕೆಲವರಿಗೆ ದೇವಸ್ಥಾನ, ಮನೆಗಳಿಂದ ಶೂ ಕದಿಯುವ ಅಭ್ಯಾಸವಿರುತ್ತದೆ. ಬೆಂಗಳೂರಿನಲ್ಲಿ ಅಂತಹದೊಂದು ಶೂ ಕಳವು ಪ್ರಕರಣ (Robbery Case) ವರದಿಯಾಗಿದೆ.

ಶೂ ಕಳ್ಳತನವನ್ನೇ (Robbery Case)ಕಸುಬಾಗಿಸಿಕೊಂಡ ಇಬ್ಬರು ಶೂ ಕಳ್ಳರು ಕಳೆದ ಏಳು ವರ್ಷಗಳಲ್ಲಿ ದೇವಾಲಯಗಳು ಮತ್ತು ಮನೆಗಳ ಹೊರಗಿನಿಂದ 10,000ಕ್ಕೂ ಹೆಚ್ಚು ಶೂಗಳನ್ನು ಕದ್ದಿದ್ದಾರೆ. ದೇವಾಲಯಗಳಲ್ಲಿ ಜನರು ತಮ್ಮ ಚಪ್ಪಲಿಗಳನ್ನು ಹೊರಗೆ ಬಿಟ್ಟು ಹೋಗುತ್ತಾರೆ. ಅದೇರೀತಿ ಅನೇಕ ಜನರು ಮನೆಯೊಳಗೆ ಶೂಗಳನ್ನು ಧರಿಸಿಕೊಂಡು ಹೋಗದ ಕಾರಣ ಈ ಇಬ್ಬರು ಕಳ್ಳರು ದೇವಸ್ಥಾನಗಳು, ಮನೆಗಳು ಮತ್ತು ಅಪಾರ್ಟ್‍ಮೆಂಟ್ ಸಂಕೀರ್ಣಗಳನ್ನು ದರೋಡೆ ಮಾಡಲು ಉತ್ತಮ ಸ್ಥಳಗಳಾಗಿ ಗುರುತಿಸಿದ್ದಾರೆ. ಇದ್ದರಿಂದ ಅವರು ಹಣವನ್ನು ಸಂಪಾದಿಸಲು ಒಂದು ವಿಧಾನವನ್ನು ರೂಪಿಸಿದರು. ಅವರು ರಾತ್ರಿಯಲ್ಲಿ ಆಟೋರಿಕ್ಷಾದಲ್ಲಿ ತಿರುಗಾಡುತ್ತಾ ಅಪಾರ್ಟ್‍ಮೆಂಟ್‌ಗಳು ಮತ್ತು ದೇವಾಲಯಗಳಲ್ಲಿ ದುಬಾರಿ ಶೂಗಳನ್ನು ಕಂಡಾಗ, ಅವರು ಅವುಗಳನ್ನು ಕದ್ದಿಯುತ್ತಿದ್ದರು. ನಂತರ ಅವರು ಶೂಗಳನ್ನು ಹೊಸದರ ಹಾಗೇ ಕಾಣುವಂತೆ ಸ್ವಚ್ಛಗೊಳಿಸಿ ಅವುಗಳನ್ನು ಊಟಿ, ಪುದುಚೇರಿ ಮತ್ತು ಇತರ ಪ್ರವಾಸೋದ್ಯಮ ಕೇಂದ್ರಗಳಲ್ಲಿ ಮಾರಾಟ ಮಾಡುತ್ತಿದ್ದರು. ಒಟ್ಟಾರೆಯಾಗಿ, ಇವರಿಬ್ಬರು ಕಳೆದ ಏಳು ವರ್ಷಗಳಲ್ಲಿ 10,000 ಕ್ಕೂ ಹೆಚ್ಚು ಶೂಗಳನ್ನು ಕದಿಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ವರದಿಯಾಗಿದೆ.

ಕಳೆದ ವಾರ ದಾಖಲಾದ ದರೋಡೆ ಪ್ರಕರಣದಲ್ಲಿ ಪೊಲೀಸರು ಕಳ್ಳರ ಸುಳಿವುಗಳನ್ನು ಅನುಸರಿಸಿ ನಂತರ ಅವರನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ಗಂಗಾಧರ್ ಮತ್ತು ಯಲ್ಲಪ್ಪ ಎಂದು ಗುರುತಿಸಲಾಗಿದೆ. ವಿದ್ಯಾರಣ್ಯಪುರದ ಬಿಇಎಲ್ ಲೇಔಟ್‍ನ ಮನೆಯೊಂದರಲ್ಲಿ ಕಳ್ಳತನವಾಗಿರುವ ಬಗ್ಗೆ ಬೆಂಗಳೂರು ಪೊಲೀಸರಿಗೆ ದೂರು ಬಂದಾಗ ಈ ವಿಷಯ ಬೆಳಕಿಗೆ ಬಂದಿದೆ. ಪೊಲೀಸರು ಆ ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ಮಾಡಿದಾಗ ಮನೆಯಿಂದ ಶೂಗಳನ್ನು ಕದ್ದು ಆಟೋರೀಕ್ಷದಲ್ಲಿ ಸಾಗಿಸುತ್ತಿರುವುದನ್ನು ಗಮನಿಸಿದ್ದಾರೆ. ನಂತರ ಅವರು ಶೀಘ್ರದಲ್ಲೇ ಆರೋಪಿಗಳನ್ನು ಪತ್ತೆಹಚ್ಚಿ ಅವರನ್ನು ಬಂಧಿಸಿದ್ದಾರೆ.

ವಿದ್ಯಾರ್ಥಿನಿಯನ್ನು ಅಪಹರಿಸಿ 12 ದಿನ ಅತ್ಯಾಚಾರ ಎಸಗಿ ಪೊಲೀಸ್‌ ಠಾಣೆ ಮುಂದೆಯೇ ಬಿಟ್ಟು ಹೋದರು!

ಆದರೆ ಪೊಲೀಸರು ಅವರ ಮನೆಯನ್ನು ಪರಿಶೀಲಿಸಿದಾಗ ಅವರ ಮನೆಯಲ್ಲಿ ಸಂಗ್ರಹಿಸಿದ ಶೂಗಳನ್ನು ನೋಡಿ ಪೊಲೀಸರು ಆಘಾತಕ್ಕೊಳಗಾಗಿದ್ದಾರೆ. ಅವರ ಮನೆಯಲ್ಲಿ 715 ಜೋಡಿ ಬ್ರಾಂಡೆಡ್ ಶೂಗಳನ್ನು ರಾಶಿ ಇದೆ. ಅವರ ಮನೆಯಲ್ಲಿ ವಶಪಡಿಸಿಕೊಳ್ಳಲಾದ ವಸ್ತುಗಳ ಒಟ್ಟು ಮೌಲ್ಯ ಅಂದಾಜು 10 ಲಕ್ಷ ರೂಪಾಯಿ. ಇದರಲ್ಲಿ ಶೂಗಳಲ್ಲದೆ ಇತರ ಕೆಲವು ವಸ್ತುಗಳೂ ಸೇರಿವೆ.

Exit mobile version