Site icon Vistara News

Tunisha Sharma Death | ತುನಿಶಾ ಶರ್ಮಾ ಜತೆ ಬ್ರೇಕಪ್‌ಗೆ ಶ್ರದ್ಧಾ ಮರ್ಡರ್‌ ಕೇಸ್‌ ಕಾರಣ, ಪೊಲೀಸರಿಗೆ ಶಿಜಾನ್‌ ಹೇಳಿದ್ದೇನು?

Tunisha Sharma Death Case

ಮುಂಬೈ: ಕಿರುತೆರೆ ನಟಿ ತುನಿಶಾ ಶರ್ಮಾ ಸಾವಿನ ಪ್ರಕರಣದ (Tunisha Sharma Death) ಕುರಿತು ದಿನೇದಿನೆ ಹಲವು ಕುತೂಹಲಕಾರಿ ಅಂಶಗಳು ಸುದ್ದಿಯಾಗುತ್ತಿವೆ. ಪ್ರಕರಣದಲ್ಲಿ ಬಂಧಿತನಾಗಿರುವ ತುನಿಶಾ ಶರ್ಮಾ ಪ್ರಿಯತಮ ಶಿಜಾನ್‌ ಮೊಹಮ್ಮದ್‌ ಖಾನ್‌ ಪೊಲೀಸರಿಗೆ ಹಲವು ಮಾಹಿತಿ ನೀಡಿದ್ದು, “ದೆಹಲಿಯಲ್ಲಿ ನಡೆದ ಶ್ರದ್ಧಾ ವಾಳ್ಕರ್‌ ಕೊಲೆ ಪ್ರಕರಣವೇ ನಾನು ತುನಿಶಾ ಶರ್ಮಾ ಜತೆ ಬ್ರೇಕಪ್‌ ಮಾಡಿಕೊಳ್ಳಲು ಕಾರಣ ಎಂಬುದಾಗಿ ಹೇಳಿದ್ದಾನೆ” ಎಂದು ತಿಳಿದುಬಂದಿದೆ.

“ಶ್ರದ್ಧಾ ವಾಳ್ಕರ್‌ ಕೊಲೆ ಕೇಸ್‌ ನೋಡಿ ನನ್ನನ್ನು ವಿಚಲಿತನನ್ನಾಗಿ ಮಾಡಿತು. ದೇಶದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಆತಂಕಕ್ಕೀಡು ಮಾಡಿದವು. ನನ್ನ ವಯಸ್ಸು ಹಾಗೂ ನನ್ನ ಧರ್ಮದ ಕಾರಣದಿಂದಾಗಿ ತುನಿಶಾ ಜತೆಗಿನ ಸಂಬಂಧಕ್ಕೆ ಇತಿಶ್ರೀ ಹಾಡಿದೆ ಎಂದು ತಿಳಿಸಿದ್ದಾನೆ” ಎಂದು ಮೂಲಗಳು ತಿಳಿಸಿವೆ.

ನನ್ನ ಮಗಳಿಗೆ ಮೋಸ ಎಂದ ತುನಿಶಾ ತಾಯಿ
ತುನಿಶಾ ಶರ್ಮಾ ತಾಯಿ ವನಿತಾ ಶರ್ಮಾ ಅವರು ಶಿಜಾನ್‌ ಖಾನ್‌ ವಿರುದ್ಧ ಆರೋಪಿಸಿದ್ದಾರೆ. “ಶಿಜಾನ್‌ ಖಾನ್‌ ನನ್ನ ಮಗಳ ಜೀವನದಲ್ಲಿ ಬಂದ. ಮದುವೆಯಾಗುವುದಾಗಿ ಭರವಸೆ ನೀಡಿದ. ಆದರೆ, ಕೊನೆಗೆ ಮೋಸ ಮಾಡಿಬಿಟ್ಟ. ಇದರಿಂದಾಗಿ ನನ್ನ ಮಗಳನ್ನು ಕಳೆದುಕೊಳ್ಳಬೇಕಾಯಿತು” ಎಂದಿದ್ದಾರೆ.

ಡಿಸೆಂಬರ್‌ 24ರಂದು ಮುಂಬೈನ ವಸಾಯಿಯಲ್ಲಿ ಶೂಟಿಂಗ್‌ ಮಾಡುತ್ತಿರುವಾಗ ಸೆಟ್‌ನ ಕೋಣೆಯಲ್ಲಿಯೇ ತುನಿಶಾ ಶರ್ಮಾ ಶವ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಶಿಜಾನ್‌ ಖಾನ್‌ನನ್ನು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ | Tunisha Sharma Death | ಪ್ರಿಯಕರ ಶಿಜಾನ್​​ಗೆ ಇತ್ತು ಹಲವು ಹುಡುಗಿಯರ ಸಂಗ; ನಟಿ ತುನಿಶಾ ಖಿನ್ನತೆಗೆ ಇದೇ ಕಾರಣವಾಗಿತ್ತು

Exit mobile version