ಬೆಂಗಳೂರು: ಹಲಸೂರಿನ ದಿ ಪಾರ್ಕ್ ಹೋಟೆಲ್‌ನಲ್ಲಿ ಡ್ರಗ್ಸ್ ಪಾರ್ಟಿ ನಡೆಸಿದ ಪ್ರಕರಣದಲ್ಲಿ ಆರೋಪಿಯಾಗಿ ಪೊಲೀಸ್ ವಶದಲ್ಲಿದ್ದ ಬಾಲಿವುಡ್ ನಟ ಸಿದ್ಧಾಂತ್ ಕಪೂರ್‌ಗೆ ಜಾಮೀನು ಲಭಿಸಿದ್ದು, ಜೈಲಿನಿಂದ ಬಿಡುಗಡೆಯಾಗಿದ್ದಾರೆ. ನಿಷೇಧಿತ ಮಾದಕ ದ್ರವ್ಯ ಕೊಕೇನ್ ಅನ್ನು ಸಿದ್ಧಾಂತ್ ಕಪೂರ್ ಸೇವಿಸಿರುವುದು ದೃಢಪಟ್ಟಿದೆ.
ಬಾಲಿವುಡ್ ನಟ ಶಕ್ತಿಕಪೂರ್ ಮಗನಾಗಿರುವ ಸಿದ್ಧಾಂತ್ ಕಪೂರ್ ಮತ್ತು ಇತರರನ್ನು ಭಾನುವಾರ ತಡರಾತ್ರಿ ಬಂಧಿಸಲಾಗಿತ್ತು. ಸೋಮವಾರ ತಡರಾತ್ರಿ ಅವರನ್ನು ಜೈಲಿನಿಂದ ಬಿಡುಗಡೆಗೊಳಿಸಲಾಗಿದೆ. ಇತರ ನಾಲ್ವರನ್ನೂ ಜಾಮೀನಿನ ಮೇರೆಗೆ ಬಿಡುಗಡೆಗೊಳಿಸಲಾಯಿತು.
ಪೊಲೀಸರು ವಿಚಾರಣೆಗೆ ಕರೆದಾಗ ಸಿದ್ಧಾಂತ್ ಕಪೂರ್ ಮತ್ತು ಇತರ ನಾಲ್ವರು ಹಾಜರಾಗಬೇಕಾಗುತ್ತದೆ. ಮಾದಕ ದ್ರವ್ಯ ಸೇವಿಸಿರುವುದು ಮತ್ತು ಡ್ರಗ್ಸ್ ಪಾರ್ಟಿ ನಡೆಸಿರುವ ಶಂಕೆಯಲ್ಲಿ ಪೊಲೀಸರು ಬಂಧಿಸಿದ್ದರು. ಘಟನೆಗೆ ಸಂಬಂಧಿಸಿ 35 ಯುವಕ ಯುವತಿಯರನ್ನು ವಶಕ್ಕೆ ತೆಗೆದುಕೊಳ್ಳಳಾಗಿತ್ತು. ಬಳಿಕ ವೈದ್ಯಕೀಯ ಪರೀಕ್ಷೆಯಲ್ಲಿ ಕೊಕೇನ್ ಡ್ರಗ್ಸ್ ಸೇವಿಸಿರುವುದು ಸಾಬೀತಾಗಿತ್ತು. ಹೋಟೆಲ್‌ಗೆ ನೋಟಿಸ್ ಕೊಟ್ಟು ವಿಚಾರಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾ
ಹೋಟೆಲ್‌ನಲ್ಲಿ ತನಿಖೆ ಚುರುಕು
ಸಿದ್ಧಾಂತ್ ಸೇರಿದಂತೆ ಹಲವು ವ್ಯಕ್ತಿಗಳ ಮೊಬೈಲನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹಲಸೂರು ದಿ ಪಾರ್ಕ್ ಹೋಟೆಲ್ ನ ಎಂಟ್ರಿ ಲೆಡ್ಜರ್ ಬುಕ್ ವಶಪಡಿಸಿಕೊಳ್ಳಳಾಗಿದೆ. ದಾಳಿ ದಿನ 15 ಪೊಲೀಸರು ಹೋಟೆಲ್ ಒಳಕ್ಕೆ ಹೋಗಿದ್ದರು. ಈ ಕಾರಣಕ್ಕಾಗಿ ಕೇವಲ 50 ರಷ್ಟು ಮಂದಿಯನ್ನ ಮಾತ್ರ ಪೊಲೀಸರು ಸೆಕ್ಯುರ್ ಮಾಡಲು ಸಾಧ್ಯವಾಗಿತ್ತು. ದಿನದ ಡ್ರಗ್ಸ್ ಪಾರ್ಟಿಗೆ ಬಂದವರ ಸಂಖ್ಯೆ ಬರೋಬ್ಬರಿ 321 ಮಂದಿ. ಅದರಲ್ಲಿ ಇಂಟರ್ನ್ಯಾಷನಲ್ ಮಾಡೆಲ್ಸ್ ಗಳೇ 32 ಮಂದಿ ಇದ್ರು. ಕೇರಳ ಮೂಲದ ಹತ್ತಾರು ಮಂದಿ ಉದ್ಯಮಿಗಳು ಈ ಕಾರ್ಯಕ್ರಮವನ್ನ ಆಯೋಜಿಸಿದ್ದರು.
ಕೇರಳದ ಉದ್ಯಮಿಗಳ ಕೈವಾಡ ಶಂಕೆ
ಆ ಬ್ಯೂಟಿ ಮಾಡೆಲ್ ಗಳನ್ನ ಕೂಡ ಆ ಕೇರಳದ ಉದ್ಯಮಿಗಳೇ ಪಾರ್ಟಿಗೆ ಕಳುಹಿಸುತ್ತಿದ್ದರು. ಮಾಂಸ ದಂಧೆಯ ಜೊತೆಗೆ ದೊಡ್ಡ ದೊಡ್ಡ ಉದ್ಯಮಿದಾರರನ್ನ ಸೆಳೆಯುವ ಉದ್ದೇಶ ದಿಂದಲೇ ಕೇರಳದ ಉದ್ಯಮಿಗಳು ಮಾಡೆಲ್ಸ್ ಗಳನ್ನ ಛೂ ಬಿಟ್ಟಿದ್ದರು. ಡ್ರಗ್ಸ್ ಪೆಡ್ಲರ್ ಗಳ ಕಾಂಟ್ಯಾಕ್ಟನ್ನ ಕೂಡ ಪೊಲೀಸರು ಶೋಧಿಸಿದ್ದಾರೆ.
ಇದನ್ನೂ ಓದಿ: ಸಂಜಯ್ ದತ್ TO ಸಿದ್ಧಾಂತ್ ಕಪೂರ್: ಬಾಲಿವುಡ್ ಬೆಂಬಿಡದ ಡ್ರಗ್ಸ್ ನಂಟು!