ಬೆಂಗಳೂರು: ರಾಜಧಾನಿಯಲ್ಲಿ (Bangalore news) 22 ವರ್ಷದ ಟೆಕ್ಕಿಯೊಬ್ಬ (techie) ಹೀಲಿಯಂ ಗ್ಯಾಸ್ (Helium Gas) ಬಳಸಿ ಆತ್ಮಹತ್ಯೆ (Self Harming) ಮಾಡಿಕೊಂಡಿದ್ದಾನೆ. ಪ್ರತಿಷ್ಟಿತ ಸಾಫ್ಟ್‌ವೇರ್ ಕಂಪನಿಯ ಉದ್ಯೋಗಿಯಾಗಿರುವ ಈತ, ಬಲೂನ್‌ಗೆ ತುಂಬಲು ಬಳಸುವ ಹೀಲಿಯಂ ಗ್ಯಾಸ್ ಮೂಲಕ ಜೀವ ತೆಗೆದುಕೊಂಡಿದ್ದಾನೆ.
ಹಾಸನ ಜಿಲ್ಲೆ ಸಕಲೇಶಪುರ ಮೂಲದ 22 ವರ್ಷದ ಯಾಜ್ಙಿಕ್ ಮೃತಪಟ್ಟ ಟೆಕ್ಕಿ. ಎಲೆಕ್ಟ್ರಾನಿಕ್ ಸಿಟಿಯಲ್ಲಿ ಘಟನೆ ನಡೆದಿದೆ. ಕಳೆದ ಕೆಲವು ತಿಂಗಳುಗಳಿಂದ ವರ್ಕ್ ಫ್ರಂ ಹೋಂನಲ್ಲಿದ್ದ ಟೆಕ್ಕಿ ಯಾಜ್ಙಿಕ್, ಎಂಟೆಕ್ ಎಕ್ಸಾಂ ಬರೆಯುವ ಸಲುವಾಗಿ ಬೆಂಗಳೂರಿಗೆ ಬಂದಿದ್ದ. ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ನೀಲಾದ್ರಿ ನಗರದ ಹೋಟೆಲ್‌ನಲ್ಲಿ ಆಗಸ್ಟ್ 16ರಂದು ರೂಂ ಬುಕ್ ಮಾಡಿದ್ದ. ನಿನ್ನೆ ದೊಡ್ಡ ಬ್ಯಾಗ್ ತೆಗೆದುಕೊಂಡು ಪೀಣ್ಯ ಕಡೆ ತೆರಳಿದ್ದಾನೆ.
ಪೀಣ್ಯದಲ್ಲಿ ಹೀಲಿಯಂ ಗ್ಯಾಸ್ ಖರೀದಿ ಮಾಡಿ ಲಾಡ್ಜ್‌ಗೆ ತಂದಿದ್ದಾನೆ. ಕಳೆದ ರಾತ್ರಿ ಲಾಡ್ಜ್‌ನ ಕೋಣೆಯಲ್ಲಿ ಪ್ಲಾಸ್ಟಿಕ್ ಕವರ್‌ಗೆ ಹೀಲಿಯಂ ಗ್ಯಾಸ್ ತುಂಬಿಸಿದ್ದಾನೆ. ಕವರ್ ಮೂಲಕ ಹೀಲಿಯಂ ಗ್ಯಾಸ್ ಇನ್‌ಹೇಲ್ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಘಟನಾ ಸ್ಥಳಕ್ಕೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು, ಯಾಜ್ಙಿಕ್ ಮೃತದೇಹವನ್ನು ಸೆಂಟ್ ಜಾನ್ ಆಸ್ಪತ್ರೆಗೆ ರವಾನಿಸಿದ್ದಾರೆ.
ಮತ್ತೆ ರೋಡ್ ರೇಜ್, ಕಾರಿನ ಮೇಲೆ ಕಲ್ಲು ಎತ್ತಿಹಾಕಿದ ಭೂಪ
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಒಂದಲ್ಲ ಎರಡಲ್ಲ ಹತ್ತಾರು ಕಡೆಗಳಲ್ಲಿ ರೋಡ್ ರೇಜ್ ಪ್ರಕರಣಗಳು ನಡೆಯುತ್ತಲೇ ಇವೆ. ಸದ್ಯ ಕಿಡಿಗೇಡಿಯೊಬ್ಬ ಕಾರಿನ ಗ್ಲಾಸ್ ಮೇಲೆ ಕಲ್ಲು ಎತ್ತು ಹಾಕಿ ಅಟ್ಟಹಾಸ (Assault Case) ಮೆರೆದಿದ್ದಾನೆ. ಬೆಂಗಳೂರಿನ ಸರ್ಜಾಪುರ ಮುಖ್ಯರಸ್ತೆಯ ದೊಡ್ಡಕನ್ನೆಹಳ್ಳಿಯಲ್ಲಿ ಘಟನೆ ನಡೆದಿದೆ.
ಬೆಂಗಳೂರು ಪೊಲೀಸರಿಗೆ ಟ್ಯಾಗ್ ಮಾಡಿ ಎಕ್ಸ್‌ನಲ್ಲಿ ವಿಡಿಯೋ ಶೇರ್ ಮಾಡಲಾಗಿದೆ. ಸರ್ಜಾಪುರ ರಸ್ತೆಯ ದೊಡ್ಡಕನ್ನಲಿ ಬಳಿ ನಿನ್ನೆ ಸೋಮವಾರ ರಾತ್ರಿ 10.30ರ ಸುಮಾರಿಗೆ ಘಟನೆ ನಡೆದಿದೆ. ಕಾರು ಅಡ್ಡಗಟ್ಟಿ ಗುಂಡಾ ವರ್ತನೆ ತೋರಿದ ಬೈಕ್ ಸವಾರನೊಬ್ಬ, ಕಾರಿನ ವೈಪರ್ ಕಿತ್ತು ಮುಂಭಾಗದ ಗಾಜಿಗೆ ಕಲ್ಲುಎತ್ತಿಹಾಕಿ ಹೊಡೆದು ಹಾಕಿದ್ದಾನೆ.
ಇತ್ತ ವ್ಯಕ್ತಿಯ ದೌರ್ಜನ್ಯ ಕಂಡು ಕಾರೊಳಗೆ ಇದ್ದ ಮಹಿಳೆ ಮತ್ತು ಮಗು ಕಿರುಚಾಡಿದ್ದಾರೆ. ಅಲ್ಲದೇ ಬೈಕ್ ಸವಾರನ ಗುಂಡಾ ವರ್ತನೆ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ. ಇದೇ ವೇಳೆ ಸ್ಥಳೀಯರು ದರ್ಪ ತೋರುತ್ತಿದ್ದ ವ್ಯಕ್ತಿಯನ್ನು ತಡೆದು ನಿಲ್ಲಿಸಿ, ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಬೈಕ್ ಸವಾರನನ್ನು ಬೆಳ್ಳಂದೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಘಟನೆಗೆ ಅಸಲಿ ಕಾರಣ ಏನು ಎಂಬುದರ ಬಗ್ಗೆ ಇಬ್ಬರಿಂದ ಮಾಹಿತಿ ಪಡೆಯುತ್ತಿದ್ದಾರೆ.
ಕಾರು ಅಡ್ಡಗಟ್ಟಿ ಗಲಾಟೆ
ಬೆಂಗಳೂರಿನಲ್ಲಿ ರೋಡ್ ರೇಜ್ ಪ್ರಕರಣವು ಮುಂದುವರಿದಿದ್ದು, ಬೈಕ್‌ನಲ್ಲಿ ಬಂದವರು ಕಾರನ್ನು ಚೇಸ್ ಮಾಡಿ ಅಡ್ಡಗಟ್ಟಿ ಗಲಾಟೆ ಮಾಡಿದ್ದಾರೆ. ಜಿತಿನ್ ರಾಜ್ ಎಂಬುವವರು ತಮ್ಮ ಕಾರಲ್ಲಿ ಗೆಳೆಯನ ಜತೆ ಇಂದಿರಾನಗರದ ಗೆಳೆಯನ ಮನೆಗೆ ಹೋಗುತ್ತಿದ್ದರು. ಈ ವೇಳೆ ಸಿಗ್ನಲ್ ವೇಳೆ ಅಡ್ಡ ಬಂದು ಮೂರ್ನಾಲ್ಕು ಕಿಲೋ ಮೀಟರ್ ಕಾರನ್ನು ಫಾಲೋ ಮಾಡಿದ್ದಾರೆ. ನಂತರ ಇಂದಿರಾನಗರದ ಬಳಿ ಪಲ್ಸರ್ ಬೈಕಲ್ಲಿ ಓವರ್ ಟೇಕ್ ಮಾಡಿ, ಕಾರನ್ನು ಅಡ್ಡಗಟ್ಟಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಆರೋಪಿಗಳು ಕಾರು ಅಡ್ಡಗಟ್ಟುವ ದೃಶ್ಯ ಕಾರಿನ ಡ್ಯಾಶ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕಾರು ಚಾಲಕ ಜಿತಿನ್ ರಾಜ್ ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದಾರೆ.
ಇದನ್ನೂ ಓದಿ: Rayara Aradhane 2024 : ಏಕಾಏಕಿ ಸುರಿದ ಮಳೆ; ಭಕ್ತರಿಗೆ ಮಠದ ಪ್ರಾಕಾರದಲ್ಲಿ ಮಲಗಲು ವ್ಯವಸ್ಥೆ ಮಾಡಿಕೊಟ್ಟ ಮಂತ್ರಾಲಯ ಶ್ರೀಗಳು