ನವದೆಹಲಿ: 8ನೇ ತರಗತಿಯ ವಿದ್ಯಾರ್ಥಿಯನ್ನು, ಆತನ ಸಹಪಾಠಿಗಳೇ ಅಪಹರಿಸಿ(Student kidnapped), ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ(strangled by classmates). ಕೊಲೆ ಮಾಡುವುದಕ್ಕಿಂತ ಮುಂಚೆ ಸಂತ್ರಸ್ತ ವಿದ್ಯಾರ್ಥಿಯ ಕೊನೆಯ ಆಸೆಯಂತೆ ರಸಗುಲ್ಲಾ (Rasgulla Sweet) ಮತ್ತು ಸಾಫ್ಟ್ ಡ್ರಿಂಕ್ (Soft Drinks) ನೀಡಿದ್ದಾರೆ. ವಿದ್ಯಾರ್ಥಿಯನ್ನು ಅಪಹರಿಸಿದ್ದ ಮೂವರು ಸಹಪಾಠಿಗಳು, 3 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದರು. ಆದರೆ, ಆತನ ತಂದೆ ತಾಯಿ ಹಣ ನೀಡಲು ವಿಫಲವಾದ್ದರಿಂದ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ ಎಂದು ಪಶ್ಚಿಮ ಬಂಗಾಳ ಪೊಲೀಸರು (West Bengal Police) ತಿಳಿಸಿದ್ದಾರೆ.
ಕೊಲೆಯಾದ ಬಾಲಕನ ಪೋಷಕರು ತಮ್ಮ ಮಗ ಕಾಣೆಯಾಗಿದ್ದಾನೆಂದು ಪಶ್ಚಿಮ ಬಂಗಾಳದ ಕೃಷ್ಣನಗರ ಪೊಲೀಸ್ ಠಾಣೆಗೆ ದೂರು ನೀಡಿದ ಬಳಿಕವೇ ಇಡೀ ಘಟನೆಯು ಕುರಿತು ಮಾಹಿತಿಯು ಹೊರ ಬಿದ್ದಿದೆ. ಕುಟುಂಬದ ಪ್ರಕಾರ, ಕೊಲೆಯಾದ ಬಾಲಕ ಶುಕ್ರವಾರ ತನ್ನ ಗೆಳೆಯರನ್ನು ಭೇಟಿಯಾಗಿ ಬರುವೆ ಎಂದು ಸೈಕಲ್ ತೆಗೆದುಕೊಂಡು ಹೋದವನು ಮತ್ತೆ ಮನೆಗೆ ವಾಪಸ್ ಆಗಿರಲಿಲ್ಲ.
ಈ ಸುದ್ದಿಯನ್ನೂ ಓದಿ: Murder Case | ಖಾಸಗಿ ಹೋಟೆಲ್ನಲ್ಲಿ ಯುವತಿ ಅನುಮಾನಾಸ್ಪದ ಸಾವು; ಪ್ರಿಯಕರನಿಂದಲೇ ಕೊಲೆ!
ಗೇಮಿಂಗ್ ಲ್ಯಾಪ್ಟ್ಯಾಪ್ ಖರೀದಿಗಾಗಿ ಕಿಡ್ನ್ಯಾಪ್ ಮಾಡಿದ್ರು
ಕಾಣೆಯಾದ ದೂರು ದಾಖಲಾಗುತ್ತಿದ್ದಂತೆ ಪೊಲೀಸರು ತನಿಖೆಯನ್ನು ಆರಂಭಿಸಿದರು. ಈ ಘಟನೆ ಸಂಬಂಧ ಅಪಹರಿಸಿದ್ದ ಮೂವರು ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಎಲ್ಲ ಮಾಹಿತಿಯು ಹೊರ ಬಿದ್ದಿದೆ. ಪೊಲೀಸರ ಪ್ರಕಾರ, ಬಂಧಿತ ವಿದ್ಯಾರ್ಥಿಗಳು ಗೇಮಿಂಗ್ ಲ್ಯಾಪ್ಟಾಪ್ ಖರೀದಿಸಲು ಬಾಲಕನ ಕುಟುಂಬದಿಂದ 3 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದರು. ಆದರೆ, ಅಪಹರಣಕಾರರ ಬೇಡಿಕೆಗಳನ್ನು ಪೂರೈಸಲು ಕುಟುಂಬ ವಿಫಲವಾದಾಗ, ಅವರು ವಿದ್ಯಾರ್ಥಿಯ ಕತ್ತು ಹಿಸುಕಿ ಕೊಂದಿದ್ದಾರೆ.
ಅಪಹೃತ ವಿದ್ಯಾರ್ಥಿಯ ಕೊನೆಯ ಆಸೆಯನ್ನು ಕೇಳಿ ಈಡೇರಿಸಿದ್ದಾರೆ. ವಿದ್ಯಾರ್ಥಿಯ ಆಸೆಯಂತೆ ರಸಗುಲ್ಲಾ ಮತ್ತು ತಂಪು ಪಾನೀಯ ನೀಡಿದ್ದಾರೆ. ನಂತಕ ಕತ್ತುಹಿಸುಕಿ ಕೊಲೆ ಮಾಡಿ, ಮಗುವಿನ ಶವವನ್ನು ಚೀಲದಲ್ಲಿ ತುಂಬಿ ನಿರ್ಜನ ಪ್ರದೇಶದಲ್ಲಿ ಬಿಸಾಡಿದ್ದಾರೆ ಪೊಲೀಸರು ಹೇಳಿದ್ದಾರೆ.
ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.