Site icon Vistara News

Surathkal Murder | ಸುರತ್ಕಲ್‌ನಲ್ಲಿ ಜಲೀಲ್‌ ಹತ್ಯೆ ಪ್ರಕರಣ, ಮರಣೋತ್ತರ ಪರೀಕ್ಷೆ ಆರಂಭ

Surathkal Murder

ಮಂಗಳೂರು: ಸುರತ್ಕಲ್‌ನ ಕಾಟಿಪಳ್ಳದಲ್ಲಿ ಹತ್ಯೆಗೀಡಾಗಿರುವ ಫ್ಯಾನ್ಸಿ ಸ್ಟೋರ್‌ ವ್ಯಾಪಾರಿ ಅಬ್ದುಲ್ ಜಲೀಲ್ ಮೃತ ದೇಹದ ಮರಣೋತ್ತರ ಪರೀಕ್ಷೆ (Surathkal Murder) ಆರಂಭವಾಗಿದೆ.

ಅಬ್ದುಲ್‌ ಜಲೀಲ್

ಮರಣೋತ್ತರ ಪರೀಕ್ಷೆ ಬಳಿಕ ಕಾಟಿಪಳ್ಳದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗುವುದು. ಬಳಿಕ ಕೂಳೂರಿನಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ‌ ನಡೆಯುತ್ತಿದೆ. ಸುರತ್ಕಲ್‌ನಲ್ಲಿ ಕಳೆದ ಐದು ತಿಂಗಳ ಹಿಂದೆ ನಡೆದ ಫಾಜಿಲ್‌ ಎಂಬುವರ ಹತ್ಯೆಯ ಬಳಿಕ, ಇದೀಗ ಮತ್ತೊಂದು ಕೊಲೆ ನಡೆದಿದೆ. ಹೀಗಾಗಿ ಜನತೆ ಆತಂಕದಲ್ಲಿದ್ದಾರೆ.‌

ಇದನ್ನೂ ಓದಿ: Surathkal Murder | ಸುರತ್ಕಲ್‌ನಲ್ಲಿ ಹತ್ಯೆ ಪ್ರಕರಣ, ಅಹಿತಕರ ಘಟನೆ ನಡೆಯದಂತೆ ಡಿ.27 ಸಂಜೆ ತನಕ ನಿಷೇಧಾಜ್ಞೆ ಜಾರಿ

Exit mobile version