Site icon Vistara News

3 ವರ್ಷದ ಹಿಂದೆ ಯುವತಿ ಮೇಲೆ ಅತ್ಯಾಚಾರ ಎಸಗಿದರು, ಜೈಲಿಂದ ಬಂದು ಆಕೆಯನ್ನೇ ಕೊಂದರು

Physical Abuse

Father of rape victim found hanging from tree days after she died by Suicide In Uttar Pradesh

ಲಖನೌ: ದೇಶದಲ್ಲಿ ಹೆಣ್ಣುಮಕ್ಕಳ ಸುರಕ್ಷತೆಗಾಗಿ ಎಷ್ಟೇ ಕಠಿಣ ಕಾನೂನು ಜಾರಿಯಾಗಲಿ, ಯಾವುದೇ ಕ್ರಮ ತೆಗೆದುಕೊಳ್ಳಲಿ, ಹೆಣ್ಣುಮಕ್ಕಳ ಮೇಲೆ ನಡೆಯುವ ದೌರ್ಜನ್ಯಗಳು (Physical Abuse) ನಿಲ್ಲುತ್ತಿಲ್ಲ. ಇದಕ್ಕೆ ನಿದರ್ಶನ ಎಂಬಂತೆ, ಉತ್ತರ ಪ್ರದೇಶದ (Uttar Pradesh) ಕೌಶಂಬಿ ಜಿಲ್ಲೆಯಲ್ಲಿ 19 ವರ್ಷದ ಯುವತಿಯೊಬ್ಬರಳನ್ನು ಇಬ್ಬರು ದುಷ್ಕರ್ಮಿಗಳು ಹಾಡಹಗಲೇ ಕೊಚ್ಚಿ ಕೊಂದಿದ್ದಾರೆ ಎಂದು ತಿಳಿದುಬಂದಿದೆ. ಮತ್ತೊಂದು ದುರಂತ ಅಂದರೆ, ಇದೇ ಯುವತಿಯು ಮೂರು ವರ್ಷದ ಹಿಂದೆ ಅತ್ಯಾಚಾರಕ್ಕೀಡಾಗಿದ್ದಳು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಮತ್ತೊಂದು ಕೊಲೆ ಪ್ರಕರಣದಲ್ಲಿ ಎರಡು ದಿನಗಳ ಹಿಂದಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದ ಅಶೋಕ್‌ ಹಾಗೂ ಪವನ್‌ ನಿಶಾದ್‌ ಎಂಬುವರು ಯುವತಿಯನ್ನು ಕೊಡಲಿಯಿಂದ ಕೊಚ್ಚಿ ಹತ್ಯೆಗೈದಿದ್ದಾರೆ. ಅತ್ಯಾಚಾರ ಸಂತ್ರಸ್ತೆಯನ್ನು ಬೆನ್ನತ್ತಿಕೊಂಡು ಬಂದ ಯುವಕರು ಆಕೆಯನ್ನು ಕೊಲೆ ಮಾಡಿದ್ದಾರೆ. ಅಶೋಕ್‌ ಹಾಗೂ ಪವನ್‌ ನಿಶಾದ್‌ ಎಂಬುವರು ಯುವತಿಯನ್ನು ಬೆನ್ನತ್ತಿ, ಆಕೆಯನ್ನು ಕೊಡಲಿಯಿಂದ ಕೊಚ್ಚಿದರೂ ಗ್ರಾಮಸ್ಥರು ಮೂಕ ಪ್ರೇಕ್ಷಕರಾಗಿ ನಿಂತಿದ್ದರು ಎಂದು ತಿಳಿದುಬಂದಿದೆ.

ಪ್ರಕರಣದ ಕುರಿತು ಮಾಹಿತಿ ನೀಡಿದ ಪೊಲೀಸರು

ಕೇಸ್‌ ವಾಪಸ್‌ ತೆಗೆದುಕೊಳ್ಳುವಂತೆ ಒತ್ತಾಯ

ಪವನ್‌ ನಿಶಾದ್‌ ಹಾಗೂ ಆತನ ಸ್ನೇಹಿತರು ಮೂರು ವರ್ಷಗಳ ಹಿಂದೆ ಅಂದರೆ, ಯುವತಿಯು ಬಾಲಕಿಯಾಗಿದ್ದಾಗ ಆಕೆಯ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದರು. ಇದಾದ ಬಳಿಕ ಬಾಲಕಿಯ ಪೋಷಕರು ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಇದೇ ಪ್ರಕರಣದಲ್ಲಿ ಪವನ್‌ ನಿಶಾದ್‌ ಸೇರಿ ಹಲವರು ಜೈಲಿಗೆ ಹೋಗಿದ್ದರು. ಜೈಲಿನಿಂದ ಬಳದ ಪವನ್‌ ನಿಶಾದ್‌, ಅದೇ ಯುವತಿ ದಾಖಲಿಸಿದ ಪ್ರಕರಣವನ್ನು ಹಿಂಪಡೆಯಬೇಕು ಎಂದು ಒತ್ತಡ ಹೇರಿದ್ದರು. ಇದಕ್ಕೆ ಯುವತಿ ಹಾಗೂ ಆಕೆಯ ಕುಟುಂಬಸ್ಥರು ನಿರಾಕರಿಸಿದ್ದು, ಕುಪಿತಗೊಂಡ ಪವನ್‌ ನಿಶಾದ್‌, ಆತನ ಸಹೋದರ ಅಶೋಕ್‌ ಎಂಬುವರು ಕೊಚ್ಚಿ ಕೊಂದಿದ್ದಾರೆ ಎಂಬುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Physical Abuse : ಹುಡುಗಿ ಒಪ್ಪದೆ ಪುರುಷ ಅತ್ಯಾಚಾರ ಮಾಡಲಾಗದು!; ಕಾಂಗ್ರೆಸ್‌ ನಾಯಕನ ಸಂಶೋಧನೆ!

“ಕೌಶಂಬಿ ಜಿಲ್ಲೆಯ ದೆರ್ಹಾ ಎಂಬ ಗ್ರಾಮದಲ್ಲಿ ಭೀಕರ ಘಟನೆ ನಡೆದಿದೆ. ಯುವತಿ ಹಾಗೂ ಆರೋಪಿಗಳು ಒಂದೇ ಸಮುದಾಯದವರಾಗಿದ್ದಾರೆ. ಇವರ ಮಧ್ಯೆ ಮೊದಲಿನಿಂದಲೂ ದ್ವೇಷ ಇತ್ತು ಎಂದು ತಿಳಿದುಬಂದಿದೆ. ಇದು ಕೂಡ ಮಹಿಳೆಯ ಹತ್ಯೆಗೆ ಕಾರಣವಾಗಿರಬಹುದು. ಇಬ್ಬರೂ ಯುವಕರ ಬಂಧನಕ್ಕೆ ಬಲೆ ಬೀಸಲಾಗಿದೆ” ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಅಂದಹಾಗೆ, ಅಶೊಕ್‌ ಹಾಗೂ ಪವನ್‌ ನಿಶಾದ್‌ ವಿರುದ್ಧ ಬೇರೊಂದು ಕೊಲೆ ಪ್ರಕರಣ ದಾಖಲಾಗಿದೆ. ಮಹಿಳೆಯೊಬ್ಬರ ಕೊಲೆ ಪ್ರಕರಣದಲ್ಲಿ ಇಬ್ಬರೂ ಜೈಲುಪಾಲಾಗಿದ್ದು, ಎರಡು ದಿನಗಳ ಹಿಂದಷ್ಟೇ ಬಿಡುಗಡೆಯಾಗಿದ್ದರು ಎಂದು ತಿಳಿದುಬಂದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version