Site icon Vistara News

Terror Attack: ಕಾಶ್ಮೀರದಲ್ಲಿ ಹಿಂದೂ ಯಾತ್ರಿಗಳಿದ್ದ ಬಸ್‌ ಮೇಲೆ ಉಗ್ರರ ದಾಳಿ; 10 ಸಾವು

Terror Attack

ರಿಯಾಸಿ(ಕಾಶ್ಮೀರ): ಯಾತ್ರಾರ್ಥಿಗಳಿದ್ದ (pilgrims) ಬಸ್ (bus) ಮೇಲೆ ಪಾಕಿಸ್ತಾನ ಪ್ರೇರಿತ ಭಯೋತ್ಪಾದಕರು (Terror Attack) ಗುಂಡಿನ ದಾಳಿ ನಡೆಸಿದ್ದು, ಬಸ್ ಕಂದಕಕ್ಕೆ ಉರುಳಿ ಬಿದ್ದಿದೆ. ಇದರಿಂದ ಹತ್ತು ಮಂದಿ ಹಿಂದೂ ಯಾತ್ರಿಕರು ಸಾವನ್ನಪ್ಪಿದ್ದಾರೆ. ಹಲವಾರು ಮಂದಿ ಗಾಯಗೊಂಡಿದ್ದಾರೆ. ಜಮ್ಮು ಮತ್ತು ಕಾಶ್ಮೀರದ (jammu and kashmir) ಪೋನಿ ಪ್ರದೇಶದ ತೆರ್ಯಾತ್ ಗ್ರಾಮದಲ್ಲಿ ಭಾನುವಾರ ಈ ಘಟನೆ ನಡೆದಿದೆ.

ಜಮ್ಮು ಮತ್ತು ಕಾಶ್ಮೀರದ ರಿಯಾಸಿಯಲ್ಲಿರುವ ಶಿವಖೋರಿ ದೇವಸ್ಥಾನಕ್ಕೆ ಯಾತ್ರಾರ್ಥಿಗಳನ್ನು ಕರೆದುಕೊಂಡು ಹೋಗುತ್ತಿದ್ದ ಬಸ್ ಮೇಲೆ ಭಾನುವಾರ ಉಗ್ರರ ದಾಳಿ ನಡೆದಿದೆ ಎನ್ನಲಾಗಿದೆ. ಗುಂಡಿನ ದಾಳಿಯ ಕಾರಣ ಬಸ್‌ ಕಂದಕಕ್ಕೆ ಉರುಳಿ ಬಿದ್ದಿದೆ ಎನ್ನಲಾಗಿದೆ.


ಭಯೋತ್ಪಾದಕರ ಗುಂಡಿನ ದಾಳಿಯಲ್ಲಿ ಮೊದಲು ಮೂವರು ಯಾತ್ರಾರ್ಥಿಗಳು ಸಾವನ್ನಪ್ಪಿದ್ದಾರೆ. ದಾಳಿ ನಡೆಯುತ್ತಿದ್ದಂತೆ ಬಸ್ ಆಳವಾದ ಕಮರಿಗೆ ಉರುಳಿ ಬಿದ್ದಿದೆ. ಇದರಿಂದಾಗಿ ಏಳು ಮಂದಿ ಮೃತ ಪಟ್ಟಿದ್ದು, ಒಟ್ಟು ಹತ್ತು ಮಂದಿ ಸಾವನ್ನಪ್ಪಿರುವುದಾಗಿ ಪ್ರಾಥಮಿಕ ವರದಿಗಳಿಂದ ತಿಳಿದುಬಂದಿದೆ.

ಘಟನೆಯ ಮಾಹಿತಿ ತಿಳಿದ ತಕ್ಷಣ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು ಮತ್ತು ಪೊಲೀಸ್, ಸೇನೆ ಮತ್ತು ಅರೆಸೇನಾ ಪಡೆಗಳು ಸ್ಥಳಕ್ಕೆ ಧಾವಿಸಿತು ಎಂದು ಪೋನಿ ಪ್ರದೇಶದ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.


ಬಸ್ಸಿನ ಮೇಲೆ ಹಲವು ಬಾರಿ ದಾಳಿ ನಡೆಸಲಾಗಿದ್ದು, ಸ್ಥಳದಲ್ಲಿ ಹಲವಾರು ಖಾಲಿ ಗುಂಡುಗಳು ಕೂಡ ಪತ್ತೆಯಾಗಿವೆ.


ಇದನ್ನೂ ಓದಿ: Road Accident : ಟೆಂಪೋ ಪಲ್ಟಿ; ಓವರ್‌ಟೇಕ್‌ ಧಾವಂತಕ್ಕೆ ಕಾರ್ಮಿಕ ಸಾವು, ಮತ್ತೋರ್ವ ಗಂಭೀರ

ಈ ಹಿಂದೆ 22 ಯಾತ್ರಾರ್ಥಿಗಳು ಸಾವನ್ನಪ್ಪಿದ್ದರು

ಉತ್ತರಪ್ರದೇಶದ ಹತ್ರಾಸ್‌ನಿಂದ ಬಂದ ಬಸ್ ಅಖ್ನೂರ್‌ನ ಆಳವಾದ ಕಮರಿಗೆ ಬಿದ್ದ ಪರಿಣಾಮ ಒಂಬತ್ತು ಮಹಿಳೆಯರು ಮತ್ತು ಇಬ್ಬರು ಮಕ್ಕಳು ಸೇರಿದಂತೆ 22 ಯಾತ್ರಾರ್ಥಿಗಳು ಪ್ರಾಣ ಕಳೆದುಕೊಂಡು 57 ಮಂದಿ ಗಾಯಗೊಂಡ ಕೆಲವು ದಿನಗಳ ಅನಂತರ ಈ ಘಟನೆ ನಡೆದಿದೆ.

ಅಖ್ನೂರ್‌ನಲ್ಲಿ ಬಸ್ ಅಪಘಾತದಿಂದ ಪ್ರಾಣಹಾನಿಯಿಂದ ದುಃಖವಾಗಿದೆ. ನನ್ನ ಬೆಂಬಲ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರ ಜೊತೆಯಲ್ಲಿವೆ. ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ. ಮೃತರ ಕುಟುಂಬಕ್ಕೆ 2 ಲಕ್ಷ ರೂ. ಹಾಗೂ ಬಸ್ ಅಪಘಾತದಿಂದಾಗಿ ಗಾಯಗೊಂಡವರಿಗೆ 50,000 ರೂ. ನೆರವನ್ನು ಘೋಷಿಸಿ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ.

Exit mobile version