ನವ ದಹೆಲಿ: ಸಂಘಟಿತ ಅಪರಾಧ ಮತ್ತು ಗ್ಯಾಂಗ್‌ಗಳನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ(NIA Raid) ಸೋಮವಾರ ಬೆಳಗ್ಗೆ ದೇಶದ್ಯಾಂತ 60 ಸ್ಥಳಗಳಲ್ಲಿ ದಾಳಿ ನಡೆಸಿದೆ. ದಿಲ್ಲಿ, ನ್ಯಾಷನಲ್ ಕ್ಯಾಪಿಟಲ್ ರೀಜನ್, ಹರ್ಯಾಣ, ಉತ್ತರ ಪ್ರದೇಶ ಮತ್ತು ಪಂಜಾಬ್ ಸೇರಿದಂತೆ ವಿವಿಧಡೆ ದಾಳಿ ಕೈಗೊಳ್ಳಲಾಗಿದೆ.
ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್, ಬಾಂಬಿಹಾ ಗ್ಯಾಂಗ್, ನೀರಜ್ ಬವನಾ ಗ್ಯಾಂಗ್ ವಿರುದ್ಧ ದಿಲ್ಲಿ ಸ್ಪೆಷಲ್ ಸೆಲ್ ಪೊಲೀಸರು ಎರಡು ಎಫ್ಐಆರ್‌ಗಳನ್ನು ದಾಖಲಿಸಿದ್ದಾರೆ. ಕಾನೂನುಬಾಹಿರ ಚಟವಟಿಕೆಗಳ ನಿಗ್ರಹ(ಯುಎಪಿಎ) ಅಡಿ 10 ಜನರ ವಿರುದ್ಧ ಎಫ್ಐಆರ್‌ಗಳನ್ನು ದಾಖಲಿಸಲಾಗಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆಯು ದಾಳಿಗಳನ್ನು ಕೈಗೊಂಡಿದೆ.
ಗ್ಯಾಂಗ್‌ಸ್ಟರ್ ಮತ್ತು ಉಗ್ರ ಗುಂಪುಗಳ ಮಧ್ಯೆ ಲಿಂಕ್
ಪಂಜಾಬ್ ಪೊಲೀಸ್ ಮಹಾ ನಿರ್ದೇಶಕ ಗೌರವ್ ಯಾದವ್ ಅವರು, ಭಯೋತ್ಪಾದನಾ ಗುಂಪುಗಳು ಮತ್ತು ಗ್ಯಾಂಗ್‌ಸ್ಟರ್ ಗುಂಪುಗಳ ಮಧ್ಯೆ ನಿಕಟವಾದ ಲಿಂಕ್ ಎಂದು ಹೇಳಿದ್ದರು. ಸಿಧು ಮೂಸೇ ಮಾಲಾ ಮರ್ಡರ್ ಪ್ರಕರಣದಲ್ಲಿ ಬಂಧಿತರ ವಿಚಾರಣೆಯ ಹಿನ್ನೆಲೆಯಲ್ಲಿ ಈ ಸಂಗತಿ ಬೆಳಕಿಗೆ ಬಂದಿತ್ತು. ಪಾಕಿಸ್ತಾನದ ಗುಪ್ತಚರ ಸಂಸ್ಥೆಯು ಈ ಗ್ಯಾಂಗ್‌ಸ್ಟರ್ ಗುಂಪುಗಳನ್ನು ತನ್ನ ಹಿತಾಸಕ್ತಿಗೆ ಅನುಗುಣವಾಗಿ ಬಳಸಿಕೊಳ್ಳುತ್ತಿದೆ ಎಂದು ಅವರು ಆರೋಪಿಸಿದ್ದರು.
ಪ್ರಮುಖ ವ್ಯಕ್ತಿಗಳನ್ನು ಕೊಲೆ ಮಾಡಿ, ಸೋಷಿಯಲ್ ಮೀಡಿಯಾಗಳಲ್ಲಿ ಭಯದ ವಾತಾವರಣ ಮೂಡಿಸುವುದರಲ್ಲಿ ನೀರಜ್ ಸೆಹ್ರಾವತ್ ಅಲಿಯಾಸ್ ನೀರಜ್ ಬವನಾ ಮತ್ತು ಆತನ ಗ್ಯಾಂಗ್ ನಿರತವಾಗಿದೆ ಎಂದು ಎನ್ಐಎ ವರದಿಯಲ್ಲಿ ತಿಳಿಸಲಾಗಿದೆ. ಅದೇ ರೀತಿ, ನೀರಜ್ ಬವನಾ ಮತ್ತು ಆತನ ಗ್ಯಾಂಗ್ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ಜತೆ ಗ್ಯಾಂಗ್‌ವಾರ್‌ನಲ್ಲಿ ತೊಡಗಿದೆ. ಪಂಜಾಬಿ ಗಾಯಕ ಮತ್ತು ರಾಜಕಾರಣಿ ಸಿಧು ಮೂಸೇ ವಾಲಾ ಕೊಲೆಯಾದ ತಾಸಿನಲ್ಲೇ, ಈ ಕೊಲೆಗೆ ಸೇಡು ತೀರಿಸಿಕೊಳ್ಳಲಾಗುವುದು ಎಂದು ನೀರಜ್ ಬವನಾ ಹೇಳಿದ್ದ. ಅಷ್ಟು ಮಾತ್ರವಲ್ಲದೇ, ಲಾರೆನ್ಸ್ ಬಿಷ್ಣೋಯಿಯನ್ನು ಸುಮ್ಮನೆ ಬಿಡುವುದಿಲ್ಲ ಎಂದು ಕಿಡಿ ಕಾರಿದ್ದ.
ಜೈಲಿನೊಳಗೇ ಇದ್ದುಕೊಂಡು ಭಾರತ ಮತ್ತು ವಿದೇಶಗಳಲ್ಲಿ ತಮ್ಮ ಕಾರಸ್ಥಾನ ನಡೆಸುತ್ತಿರುವ ಗ್ಯಾಂಗ್‌ಗಳನ್ನು ಮಟ್ಟ ಹಾಕಲು ಎನ್ಐಎ ಮುಂದಾಗಿದೆ. ಈ ಪೈಕಿ, ಸಿಧು ಮೂಸೇ ವಾಲಾ ಕೊಲೆಯನ್ನು ಕೆನಡಾದಲ್ಲಿ ಇದ್ದುಕೊಂಡೇ ಕೋಆರ್ಡಿನೇಟ್ ಮಾಡಿದ ಗೋಲ್ಡಿ ಬ್ರಾರ್ ಕೂಡ ಇದ್ದಾನೆ. ಪಾಕಿಸ್ತಾನದಲ್ಲಿರುವ ಖಲಿಸ್ತಾನಿ ಉಗ್ರ ಹರ್ವೀಂದೇರ್ ಸಿಂಗ್ ರಿಂಧಾ ಜತೆಗೆ ಲಾರೆನ್ಸ್ ಬಿಷ್ಣೋಯಿ ಸಖ್ಯೆ ಹೊಂದಿದ್ದಾನೆ ಎಂದು ಎಫ್ಐಆರ್‌ನಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ | Praveen Nettaru | ಬಿಜೆಪಿ ಕಾರ್ಯಕರ್ತರ ಸಮಾಧಾನ ಮಾಡಲು PFI ಟಾರ್ಗೆಟ್ ಮಾಡುತ್ತಿರುವ NIA: ಆರೋಪ