ಕಲಬುರಗಿ: ಕಲಬುರಗಿಯಲ್ಲಿ ಮನೆಗಳ್ಳರ (Theft Case) ಹಾವಳಿ ಹೆಚ್ಚಾಗಿದ್ದು, ಜನರಲ್ಲಿ ಆತಂಕ ಹೆಚ್ಚಿಸಿದೆ. ಚಿಂಚೋಳಿ ತಾಲೂಕಿನ ನಿಡಗುಂದಾ ಗ್ರಾಮದಲ್ಲಿ ರಾತ್ರಿಯಾದರೆ ಸಾಕು ಕಳ್ಳರ ಹಾವಳಿ ಹೆಚ್ಚಾಗಿತ್ತು. ನಿಡಗುಂದಾ ಗ್ರಾಮದ ಹಲವು ಮನೆಗಳ ಕಳ್ಳತನಕ್ಕೆ ಯತ್ನಿಸಿದ್ದಾರೆ.
ರಾತ್ರಿ ಹೊತ್ತಲ್ಲಿ ಮನೆಯ ಬಾಗಿಲು ತಟ್ಟಿ ಕಳ್ಳತನಕ್ಕೆ ಯತ್ನಿಸುತ್ತಿದ್ದರು. ಕಳೆದ ಮೂರ್ನಾಲ್ಕು ದಿನಗಳಿಂದ ಕಳ್ಳರ ಹಾವಳಿಗೆ ಗ್ರಾಮಸ್ಥರು ಬೇಸತ್ತಿದ್ದರು. ನಿನ್ನೆ ಶನಿವಾರ ಕೂಡ ಕಳ್ಳತನಕ್ಕೆ ಆಗಮಿಸಿದ್ದ ಕಳ್ಳನೊಬ್ಬನನ್ನು ಹಿಡಿದು ಕಟ್ಟಿ ಹಾಕಿದ್ದರು. ಈರಣ್ಣ ಎಂಬಾತನನ್ನ ಹಿಡಿದು ಕಟ್ಟಿ ಹಾಕಿ ಬಳಿಕ ಪೊಲೀಸರಿಗೆ ಒಪ್ಪಿಸಿದ್ದರು. ಈರಣ್ಣನ ಜತೆಗಿದ್ದಇತರರು ಎಸ್ಕೇಪ್ ಆಗಿದ್ದಾರೆ. ಸುಲೇಪೆಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಐನಾತಿ ಮನೆಗಳ್ಳರನ್ನು ಹೆಡೆಮುರಿ ಕಟ್ಟಿದ ಹೊಸಪೇಟೆ ಪೊಲೀಸರು
ವಿಜಯನಗರ: ವಿಜಯನಗರದ ಹೊಸಪೇಟೆಯ ಎಂ.ಜೆ ನಗರದಲ್ಲಿ ಹಾಡಹಗಲೇ ಮನೆಗೆ ಕನ್ನ ಹಾಕಿದ್ದ ಐನಾತಿ ಮನೆಗಳ್ಳರನ್ನು ಹೊಸಪೇಟೆ ಬಡಾವಣೆ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಖದೀಮರು ತ್ರಿವೇಣಿ ಎಂಬುವವರ ಮನೆಯಲ್ಲಿ ಬಂಗಾರ ಕದ್ದಿದ್ದರು. ಸುಮಾರು 7.5 ಲಕ್ಷ ಮೌಲ್ಯದ 110 ಗ್ರಾಂ ಬಂಗಾರದ ಆಭರಣ ಕದ್ದು ಎಸ್ಕೇಪ್ ಆಗಿದ್ದರು. 15 ದಿನಗಳಲ್ಲಿ ಪ್ರಕರಣ ಬೇಧಿಸಿದ ಪೊಲೀಸರು ಇಬ್ಬರು ಮನೆಗಳ್ಳರನ್ನು ಬಂಧಿಸಿದ್ದಾರೆ.
ಹೊಸಪೇಟೆ ನಿವಾಸಿಗಳಾದ ಕಾರ್ತಿಕ್, ಸಣ್ಣಕ್ಕೆಪ್ಪ ಬಂಧಿತ ಮನೆಗಳ್ಳರಾಗಿದ್ದಾರೆ. ಬಂಧಿತರಿಂದ 7.5 ಲಕ್ಷ ಮೌಲ್ಯದ ಬಂಗಾರದ ಆಭರಣ ವಶಕ್ಕೆ ಪಡೆದಿದ್ದಾರೆ. ಕಳ್ಳರನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದ ತಂಡಕ್ಕೆ ಎಸ್‌ಪಿ ಶ್ರೀಹರಿಬಾಬು ಬಹುಮಾನ ಘೋಷಣೆ ಮಾಡಿದ್ದಾರೆ.
ಇದನ್ನೂ ಓದಿ: Leopard Attack : ಮೈಸೂರಲ್ಲಿ ರೈತನ ಮೇಲೆ ಚಿರತೆ ದಾಳಿ; ಚಾಮರಾಜನಗರದಲ್ಲಿ ಬೋನಿಗೆ ಬಿದ್ದ ಚಿರತೆ
ಜತೆಯಲ್ಲಿದ್ದ ಆಪ್ತನಿಂದಲೇ ಸೆಕೆಂಡ್ ಕಾರ್ ಶೋರೂಂನಲ್ಲಿ ಕಳ್ಳತನ
ಬೆಂಗಳೂರಿನ ಗಿರಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜತೆಯಲ್ಲಿದ್ದ ಆಪ್ತನೇ ಕಳ್ಳತನಕ್ಕೆ ಇಳಿದಿರುವ ಘಟನೆ ನಡೆದಿದೆ. ಭಾವನ ಕಾರ್ಸ್ ಎಂಬ ಸೆಕೆಂಡ್ ಶೋ ರೂಂನಲ್ಲಿ ಲಿತಿನ್ ಎಂಬಾತ ಹಣ ಕದ್ದಿದ್ದ.
ಲಿತಿನ್ ಹಲವು ದಿನಗಳಿಂದ ಭಾವನಾ ಕಾರ್ಸ್ ಮಾಲೀಕ ಕೆಂಪೆಗೌಡ ಜತೆಯಲ್ಲೆ ಇದ್ದ. ಕಳೆದ ತಿಂಗಳು 20ರಂದು ಮಾಲೀಕ ಕೆಂಪೆಗೌಡಗೆ ತಿಳಿಯದ ಹಾಗೆ ಕಛೇರಿಯ ಕೀ ಪಡೆದುಕೊಂಡಿದ್ದ. ನಂತರ ಮಧ್ಯರಾತ್ರಿ1.30 ಸುಮಾರಿಗೆ ಕ್ಯಾಪ್ ಮಾಸ್ಕ್ ಹಾಕಿ ಕಛೇರಿಗೆ ಎಂಟ್ರಿ ಕೊಟ್ಟಿದ್ದ. ಆಫೀಸ್ ಡ್ರಾನಲ್ಲಿದ್ದ ಒಂದು ಲಕ್ಷ ನಗದು ಹಣ ಕಳ್ಳತನ ಮಾಡಿದ್ದ. ನಂತರ ಆಫೀಸ್ ಮುಂಭಾಗದಲ್ಲಿದ್ದ ಕಾರನ್ನು ಕದ್ದು ರೌಂಡ್ಸ್ ಹಾಕಿ ಮತ್ತೆ ವಾಪಸ್ ಬಂದಿದ್ದ.
ಆಫೀಸ್ ಮುಂದೆ ಕಾರ್ ಬಿಟ್ಟು ಹೋಗುವಾಗ ಕಾರಿನ ಕೀ ಗೇಟ್ ಬಳಿ ಎಸೆದು ಎಸ್ಕೇಪ್ ಆಗಿದ್ದ. ಮಾಲೀಕ ಕೆಂಪೇಗೌಡ ಸಿಸಿಟಿವಿ ಪರಿಶೀಲಿಸಿ ಗಿರಿನಗರ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಮೇರೆಗೆ ಲಿತಿನ್‌ನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಸದ್ಯ ಗಿರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ನಡೆಸುತ್ತಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ