ಆನೇಕಲ್: ಅನ್ನ ಹಾಕಿದ ಮನೆಗೆ ಕೆಲಸಗಾರನೊಬ್ಬ ಕನ್ನ (Theft case) ಹಾಕಿದ್ದಾನೆ. ಬೆಂಗಳೂರಿನ ಜಿಗಣಿ ಸಂತೆ ಬೀದಿ ಬಳಿ ಇರುವ ಮನಿ ಟ್ರಾನ್ಸ್‌ಫರ್ ಅಂಗಡಿಯಲ್ಲಿ ಸಂಗ್ರಹವಾಗಿದ್ದ 9 ಲಕ್ಷಕ್ಕೂ ಹೆಚ್ಚು ಹಣವನ್ನು ಕೆಲಸಗಾರನೇ ಕಳವು ಮಾಡಿದ್ದಾನೆ. ರಾಜು ಎಂಬುವವರಿಗೆ ಸೇರಿದ ಮನಿ ಟ್ರಾನ್ಸ್‌ಫರ್ ಅಂಗಡಿಯಲ್ಲಿ ಬಿಹಾರ ಮೂಲದ ದಿಲೀಪ್ ಎಂಬಾತ ಕೆಲಸ ಮಾಡುತ್ತಿದ್ದ.
ಐದಾರು ತಿಂಗಳ ಹಿಂದೆ ಕೆಲಸ ಬಿಟ್ಟು ವಾಪಸ್ ಬಿಹಾರಕ್ಕೆ ತೆರಳಿದ್ದ. ಆದರೆ ತಿಂಗಳ ಹಿಂದೆ ವಾಪಸ್ ಕೆಲಸಕ್ಕೆ ಬಂದಿದ್ದ. ಹೀಗೆ ಬಂದವನು ನಿನ್ನೆ ಸೋಮವಾರ ಸಂಜೆ ಸಿಸಿ ಕ್ಯಾಮೆರಾ ಆಫ್ ಮಾಡಿ ಮನಿ ಟ್ರಾನ್ಸ್‌ಫರ್‌ನಿಂದ ಸಂಗ್ರಹವಾಗಿದ್ದ ಹಣ ಕದ್ದು ಎಸ್ಕೇಪ್ ಆಗಿದ್ದಾನೆ. ಪ್ರಕರಣ ಸಂಬಂಧ ಬೆಂಗಳೂರಿನ ಜಿಗಣಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆಯನ್ನು ನಡೆಸಲಾಗುತ್ತಿದೆ.
ಆಟೋ ಚಾಲಕನ ಸರ ಕಿತ್ತು ಪರಾರಿಯಾದ ಕಳ್ಳರು
ಬೆಂಗಳೂರಿನ ಗಿರಿನಗರದ ವಿವೆರಕಾನಂದ ಪಾರ್ಕ್ ಬಳಿ ಆಟೋ ರಿಕ್ಷಾ ಬಾಡಿಗೆ ಕೇಳುವ ನೆಪದಲ್ಲಿ ಸರಗಳ್ಳತನ ನಡೆದಿದೆ. ಬೈಕ್‌ನಲ್ಲಿ ಬಂದಿದ್ದ ಕಳ್ಳರಿಬ್ಬರು, ಬನಶಂಕರಿ ಕಡೆಗೆ ಬರುತ್ತೀರಾ ಎಂದು ಕೇಳಿದ್ದಾರೆ. ಈ ವೇಳೆ ಆಟೋ ಚಾಲಕ ಆ ಕಡೆಗೆ ಬರುವುದಿಲ್ಲ ಎಂದಾಗ ಬೈಕ್‌ನ ಹಿಂಬದಿ ಕುಳಿತ್ತಿದ್ದ ಕಿರಾತಕ ಚಾಕು ತೋರಿಸಿ ಸುಲಿಗೆ ಮಾಡಿದ್ದಾನೆ. ಸುಮಾರು 12 ಲಕ್ಷ ಮೌಲ್ಯದ 25 ಗ್ರಾಂ ತೂಕದ ಚಿನ್ನದ ಸರವನ್ನು ಕದ್ದೊಯ್ದಿದ್ದಾರೆ. ಕೂಡಲೇ ಆಟೋ ಚಾಲಕ ಈ ಸಂಬಂಧ ದೂರು ನೀಡಿದ್ದರು. ದೂರು ದಾಖಲಾದ ಕೂಡಲೆ ಸಿಸಿಟಿವಿ ಆಧರಿಸಿ ಪರಿಶೀಲನೆ ನಡೆಸಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ: Physical Abuse : ಶಿಕ್ಷಕನಿಂದ ಇದೆಂಥ ಅನಾಚಾರ! ಬಾಲಕಿಗೆ ಲೈಂಗಿಕ ಕಿರುಕುಳ
ರಾಯಚೂರಿನಲ್ಲಿ ಮಂಕಿ ಕ್ಯಾಪ್ ಗ್ಯಾಂಗ್ ಹಾವಳಿ
ರಾಯಚೂರು ನಗರದ ಮಂತ್ರಾಲಯ ರೋಡ್‌ನಲ್ಲಿರೋ ಟ್ರೆಂಡ್ಸ್ ಮಾಲ್‌ನಲ್ಲಿ ಕಳ್ಳತನ ನಡೆದಿದೆ. ಗುರುತು ಸಿಗಬಾರೆಂದು ಮಂಕಿ ಕ್ಯಾಪ್ ಹಾಗೂ ಹ್ಯಾಂಡ್ ಗ್ಲೌಸ್ ಧರಿಸಿ ಬಂದಿದ್ದ ಕಳ್ಳರು ಮಾಲ್‌ನ ಬೀಗ ಮುರಿದು ಕಳ್ಳತನ ಮಾಡಿದ್ದಾರೆ. ಕಳ್ಳರ ಕೃತ್ಯ ಮಾಲ್‌ನಲ್ಲಿದ್ದ ಸಿಸಿಟಿವಿಯಲ್ಲಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಮೊದಲು ಕಬ್ಬಿಣದ ರಾಡ್‌ನಿಂದ ಬೀಗ ಮುರಿದು ಮಾಲ್ ಒಳಗೆ ಎಂಟ್ರಿ ಕೊಟ್ಟ ಕಳ್ಳರು ಕ್ಯಾಶ್ ಕೌಂಟರ್‌ನಲ್ಲಿದ್ದ 65 ಸಾವಿರ ರೂಪಾಯಿಗೂ ಅಧಿಕ ಹಣವನ್ನು ಕದ್ದು ಪರಾರಿ ಆಗಿದ್ದಾರೆ. ನೇತಾಜಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಧಾರವಾಡದಲ್ಲಿ ಟಾಟಾ ಹಿಟಾಚಿ ಕಂಪನಿಯಲ್ಲಿ ಕಳ್ಳತನ
ಧಾರವಾಡ ತಾಲೂಕಿನ ಗರಗ್ ಗ್ರಾಮದ ಬಳಿ ಇರುವ ಟಾಟಾ ಹಿಟಾಚಿ ಕಂಪನಿಯಲ್ಲಿ ಕಳ್ಳತನ ನಡೆದಿತ್ತು. ಕಳ್ಳತನವಾಗಿದ್ದ ರೂ. 10 ಲಕ್ಷ ಮೌಲ್ಯದ ಟೈರ್ ಮತ್ತು ಬ್ಯಾಟರಿ, 5.5 ಲಕ್ಷ ನಗದು ವಶಕ್ಕೆ ಪಡೆಯಲಾಗಿದೆ. ಕಳ್ಳತನ ಮಾಡಿದ್ದ ಮೂವರನ್ನು ಬಂಧನ ಮಾಡಲಾಗಿದೆ. ಕಂಪನಿ ನೌಕರನಿಂದಲೇ ಕಳ್ಳತನ ನಡೆದಿರುವುದು ತಿಳಿದು ಬಂದಿದೆ. ಬಸವರಾಜ ಶಿಪ್ರಿ ಎಂಬಾತ ಅಭಿಷೇಕ ಕಂಬಾರ, ಉಮೇಶ ಜೈನರ್ ಜತೆ ಸೇರಿ ಕಳ್ಳತನ ನಡೆಸಿ ಪೊಲೀಸರಿಗೆ ಲಾಕ್ ಆಗಿದ್ದಾರೆ. ಗರಗ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಬೆಂಗಳೂರಲ್ಲಿ ಡ್ರಗ್ ಪೆಡ್ಲರ್ ಬಂಧನ
ಸ್ಟೂಡೆಂಟ್ ವೀಸಾದಲ್ಲಿ ಬಂದು ಡ್ರಗ್ ಪೆಡ್ಲರ್ ಆದ ವಿದೇಶಿ ಪ್ರಜೆಗಳನ್ನು ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಆರೋಪಿಗಳು ಮೋಜು-ಮಸ್ತಿಗಾಗಿ ಡ್ರಗ್ಸ್ ಮಾರಾಟ ಮಾಡುತ್ತಿದ್ದರು. ಗೋವಾ, ಮುಂಬೈ ಹಾಗು ದೆಹಲಿಯಲ್ಲಿ ವಾಸವಾಗಿರುವ ತಮ್ಮದೇ ದೇಶದ ಪ್ರಜೆಗಳಿಂದ ಕಡಿಮೆ ಬೆಲೆಗೆ ಡ್ರಗ್ಸ್ ಖರೀದಿಸಿ ಬೆಂಗಳೂರಲ್ಲಿ ಮಾರಾಟ ಮಾಡುತ್ತಿದ್ದರು. ಆರೋಪಿಗಳಿಂದ ಸುಮಾರು 12 ಲಕ್ಷ ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ