Site icon Vistara News

Chandan Kumar | ಲಕ್ಷ್ಮೀ ಬಾರಮ್ಮ ಖ್ಯಾತಿಯ ಚಂದನ್‌ ಹೋಟೆಲ್‌ನಲ್ಲಿ ಕಳ್ಳತನ: ಸಿಸಿಟಿವಿ ದೃಶ್ಯ ವೈರಲ್‌

Chandan Kumar

ಬೆಂಗಳೂರು: ಲಕ್ಷ್ಮೀ ಬಾರಮ್ಮ ಧಾರಾವಾಹಿ ಖ್ಯಾತಿಯ ನಟ ಚಂದನ್ (Chandan Kumar) ಅವರಿಗೆ ಸೇರಿದ ಹೋಟೆಲ್‌ ಒಂದರಲ್ಲಿ ಕಳ್ಳತನವಾಗಿದ್ದು, ಸಿಸಿಟಿವಿ ದೃಶ್ಯ ವೈರಲ್‌ ಆಗಿದೆ.

ನಟ ಚಂದನ್‌ ಅವರ ಸಹಕಾರ ನಗರದಲ್ಲಿರುವ ಹೋಟೆಲ್‌ನಲ್ಲಿ ಕಳ್ಳತನವಾಗಿದೆ ಎಂದು ಸ್ವತಃ ಚಂದನ್‌ ಅವರೇ ಮಾಹಿತಿ ನೀಡಿದ್ದಾರೆ. ತಮ್ಮ ಹೋಟೆಲ್‌ ಸೇರಿದಂತೆ ಐದು ಹೋಟೆಲ್‌ಗಳಲ್ಲಿ ಕಳ್ಳತನ ಆಗಿದೆ ಎಂದು ಅವರು ತಿಳಿಸಿದ್ದಾರೆನ್ನಲಾಗಿದೆ. ಕಳ್ಳತನ ಆಗುತ್ತಿದ್ದ ದೃಶ್ಯ ಸಿಸಿಟಿಟಿಯಲ್ಲಿ ಸೆರೆಯಾಗಿದ್ದು, ಹೋಟೆಲ್‌ ಸಿಬ್ಬಂದಿ ಸಿಸಿಟಿವಿ ದೃಶ್ಯವನ್ನು ಪೊಲೀಸರಿಗೆ ನೀಡಿದ್ದಾರೆ. ಈ ಕುರಿತಂತೆ ನಟ ಚಂದನ್‌ ಕೊಡಿಗೆಹಳ್ಳಿ ಪೊಲೀಸ್‌ ಸ್ಟೇಷನ್‌ನಲ್ಲಿ ದೂರು ನೀಡಲಿದ್ದಾರೆ ಎಂದು ಹೇಳಲಾಗಿದೆ.

ಇದನ್ನೂ ಓದಿ | Chandan Kumar | ಸೀರಿಯಲ್ ಸೆಟ್‌ನಲ್ಲಿ ಚಂದನ್‌ ಗಲಾಟೆ ಹಿನ್ನೆಲೆ: ಸ್ಪಷ್ಟನೆ ನೀಡಿದ ಚಂದನ್‌

ಹಲವು ಕನ್ನಡ ಹಾಗೂ ತೆಲುಗು ಸೀರಿಯಲ್‌ಗಳಲ್ಲಿ ಚಂದನ್‌ ನಟಿಸಿದ್ದರು. ಪ್ರೇಮ ಬರಹ ಸಿನಿಮಾ ಮೂಲಕ ನಾಯಕನಾಗಿ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡಿದ್ದರು. ಬಿಗ್ ಬಾಸ್‌ನಲ್ಲೂ ಚಂದನ್‌ ಸ್ಪರ್ಧಿಯಾಗಿದ್ದರು. ಅಲ್ಲದೆ, ಟೆಕ್ನಿಶಿಯನ್ಸ್ ಜತೆ ಈಚೆಗೆ ಹೈದಾರಾಬಾದ್‌ನಲ್ಲಿ ಜಟಾಪಟಿ ನಡೆದಿತ್ತು. ಇದರ ಬೆನ್ನಲ್ಲೆ ಇದೀಗ ಹೊಸ ಸುದ್ದಿಯೊಂದು ಬೆಳಕಿಗೆ ಬಂದಿದೆ. ಅವರ ಹೋಟೆಲ್‌ ಒಂದರಲ್ಲಿ ಕಳ್ಳತನ ಆಗಿದೆ ಎನ್ನಲಾಗಿದೆ.

Exit mobile version