Site icon Vistara News

Sultanpuri Death Case | ಅಪಘಾತಕ್ಕೆ ಬಲಿಯಾದ ಅಂಜಲಿ ಸಿಂಗ್‌ ಮನೆಯಲ್ಲಿ ಕಳವು, ಪೊಲೀಸರ ಮೇಲೆ ನಂಬಿಕೆ ಇಲ್ಲ ಎಂದ ಕುಟುಂಬಸ್ಥರು

Sultanpuri Death Case

ನವದೆಹಲಿ: ರಾಷ್ಟ್ರ ರಾಜಧಾನಿಯ ಸುಲ್ತಾನ್‌ಪುರಿಯಲ್ಲಿ (Sultanpuri Death Case) ಜನವರಿ 1ರಂದು ಸಂಭವಿಸಿದ ಭೀಕರ ಅಪಘಾತದಲ್ಲಿ ಮೃತಪಟ್ಟ ಅಂಜಲಿ ಸಿಂಗ್‌ (20) ಮನೆಯಲ್ಲಿ ಕಳ್ಳತನ ನಡೆದಿದೆ ಎಂದು ಯುವತಿಯ ಕುಟುಂಬಸ್ಥರು ಆರೋಪಿಸಿದ್ದಾರೆ. ಹಾಗೆಯೇ, ಪ್ರಕರಣದ ತನಿಖೆಯಲ್ಲಿ ದೆಹಲಿ ಪೊಲೀಸರ ಮೇಲೆ ನಂಬಿಕೆ ಇಲ್ಲ ಎಂದು ಹೇಳಿದ್ದಾರೆ.

“ರೋಹಿಣಿ ಪ್ರದೇಶದ ಕರ್ಣ ವಿಹಾರದಲ್ಲಿರುವ ಮನೆಯಲ್ಲಿ ಕಳ್ಳತನ ಮಾಡಲಾಗಿದೆ. ಎಲ್‌ಇಡಿ ಟಿವಿ ಸೆಟ್‌ ಸೇರಿ ಹಲವು ವಸ್ತುಗಳನ್ನು ಕಳ್ಳತನ ಮಾಡಲಾಗಿದೆ. ಅಪಘಾತ ಪ್ರಕರಣಕ್ಕೆ ಸಂಬಂಧಿಸಿದ ವಸ್ತುಗಳು ಅಥವಾ ದಾಖಲೆಗಳನ್ನು ಕದಿಯಲು ಯತ್ನಿಸಲಾಗಿದೆ” ಎಂದು ಅಂಜಲಿಯ ಚಿಕ್ಕಪ್ಪ ಪ್ರೇಮ್‌ ಸಿಂಗ್‌ ತಿಳಿಸಿದ್ದಾರೆ.

“ಅಂಜಲಿ ತಾಯಿಯು ಕಿಡ್ನಿ ಕಾಯಿಲೆಯಿಂದ ಬಳಲುತ್ತಿದ್ದು, ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದೆವು. ಆದರೆ, ಬರುವಷ್ಟರಲ್ಲಿ ಮನೆಯಲ್ಲಿ ಟಿವಿ ಸೆಟ್‌ ಇಲ್ಲ. ಮನೆ ತುಂಬ ಬಟ್ಟೆಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ತನಿಖೆ ನಡೆಸುತ್ತಿರುವ ಪೊಲೀಸರ ಮೇಲೆ ನಮಗೆ ನಂಬಿಕೆ ಇಲ್ಲ. ಅವರು ನಮ್ಮನ್ನು ರಕ್ಷಿಸುತ್ತಾರೆ ಎಂಬ ಭರವಸೆ ಇಲ್ಲ” ಎಂದಿದ್ದಾರೆ.

ಜನವರಿ 1ರ ಬೆಳಗಿನ ಜಾವ ಅಂಜಲಿ ಸಿಂಗ್‌ಗೆ ಕಾರು ಡಿಕ್ಕಿಯಾಗಿತ್ತು. ಅಪಘಾತದ ಬಳಿಕ ಕಾರಿನ ಅಡಿಗೆ ಸಿಲುಕಿದ ಆಕೆಯನ್ನು 12 ಕಿ.ಮೀ ಎಳೆಯಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿಂತೆ ಪೊಲೀಸರು ಇದುವರೆಗೆ ಹಲವು ಆರೋಪಿಗಳನ್ನು ಬಂಧಿಸಿದ್ದು, ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ | Shah Rukh Khan Donation | ಭೀಕರ ಅಪಘಾತಕ್ಕೆ ಬಲಿಯಾದ ಅಂಜಲಿ ಸಿಂಗ್ ಕುಟುಂಬಸ್ಥರಿಗೆ ಶಾರುಖ್‌ ಖಾನ್‌ ನೆರವು

Exit mobile version