Site icon Vistara News

Drowned in Pond : ಕೃಷಿ ಹೊಂಡಕ್ಕೆ ಬಿದ್ದು ಮೂವರು ಸಾವು; ದೇವರ ಊಟ ಮಾಡಿ ಕೈ ತೊಳೆಯುವಾಗ ದುರಂತ

Drowned in pond three died near Hoskote

ಹೊಸಕೋಟೆ (ಬೆಂಗಳೂರು): ಬೆಂಗಳೂರು ಹೊರವಲಯದ (Bangalore news) ಹೊಸಕೋಟೆ ಬಳಿ ಒಂದೇ ಕುಟುಂಬದ ಮೂವರು (three of the Family dead) ಕೃಷಿ ಹೊಂಡದಲ್ಲಿ ಮುಳುಗಿ ಮೃತಪಟ್ಟಿದ್ದಾರೆ (Drowned in Pond). ಹೊಸಕೋಟೆ ತಾಲೂಕಿನ ಕರಿಬೀರನಹೊಸಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಊಟ ಮಾಡಿ ಕೈ ತೊಳೆಯಲು ಹೋದ ವೇಳೆ ಅವರು ನೀರಿಗೆ ಬಿದ್ದು ಜಲ ಸಮಾಧಿ ಹೊಂದಿದ್ದಾರೆ.

ಮರಿಯಪ್ಪ (70) ಮುನಿಯಮ್ಮ ( 60 ) ಮತ್ತು ಭಾರತಿ (40) ಮೃತ ದುರ್ದೈವಿಗಳು. ಇವರು ಕರಿಬೀರನಹಳ್ಳಿ ಹೊಸಕಟ್ಟೆ ಸಮೀಪ ನಡೆಯುತ್ತಿದ್ದ ದೇವರ ಉತ್ಸವದಲ್ಲಿ (Temple Festival) ಭಾಗಿಯಾಗಿದ್ದರು. ಅಲ್ಲಿ ಮಧ್ಯಾಹ್ನ ಊಟದ ವ್ಯವಸ್ಥೆ ಇತ್ತು. ಕುಟುಂಬದ ಕಷ್ಟ ಪರಿಹಾರಕ್ಕಾಗಿ ಅವರು ಅಲ್ಲಿಗೆ ಹೋಗಿ ದೇವರ ಊಟದ ಪ್ರಸಾದವನ್ನು ಸ್ವೀಕರಿಸಿದ್ದರು. ಈ ವೇಳೆ ಊಟ ಮಾಡಿದ ಬಳಿಕ ಕೈ ತೊಳೆಯಲು ಹೋದಾಗ ಸಾವು ಬೆನ್ನಟ್ಟಿದೆ.

ಮಗಳು ಭಾರತಿ ಸ್ವಲ್ಪ ಬುದ್ಧಿ ಮಾಂದ್ಯಳಾಗಿದ್ದು, ಆಕೆ ಕೈ ತೊಳೆಯಲು ಹೋದಾಗ ನೀರಿಗೆ ಬಿದ್ದಿರುವ ಶಂಕೆ ಇದೆ. ಆಕೆಯನ್ನು ರಕ್ಷಣೆ ಮಾಡಲು ವಯಸ್ಸಾದ ಅಪ್ಪ ಅಮ್ಮ ಮುಂದೆ ನುಗ್ಗಿದ್ದಾರೆ. ಆಗ ಅವರೆಲ್ಲರೂ ಪ್ರಾಣ ಕಳೆದುಕೊಂಡಿದ್ದಾರೆ ಎನ್ನಲಾಗಿದೆ.

ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಜಾತ್ರೆಗೆ ಬಂದ ಸ್ಥಳೀಯರು ಸೇರಿ ಮೃತದೇಹಗಳನ್ನು ನೀರಿನಿಂದ ಹೊರತೆಗೆದಿದ್ದಾರೆ. ಸ್ಥಳಕ್ಕೆ ಹೊಸಕೋಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಕರಿಬೀರನಹೊಸಹಳ್ಳಿ ಗ್ರಾಮದಲ್ಲಿ ದುರ್ಘಟನೆ ನಡೆದಿದ್ದು, ಉತ್ಸವಕ್ಕೆ ಬಂದವರು ಕಣ್ಣೀರು ಹಾಕುತ್ತಿದ್ದ ದೃಶ್ಯ ಕಂಡುಬಂತು.

ಇದನ್ನೂ ಓದಿ : Drowned in River : ಕಾವೇರಿ ನದಿಗಿಳಿದ ವಿದ್ಯಾರ್ಥಿ ಈಜಲು ಬಾರದೆ ನೀರುಪಾಲು

ಪರೀಕ್ಷೆ ಮುಗಿಸಿ ಈಜಲು ತೆರಳಿದ್ದ ನಾಲ್ಕು ಮಕ್ಕಳು ಮೃತ್ಯು

ಕೆಲವು ದಿನಗಳ ಹಿಂದೆ ಮಂಗಳೂರು ಬಳಿ ಎಸ್ಸೆಸ್ಸೆಲ್ಸಿ ಪೂರ್ವಭಾವಿ ಪರೀಕ್ಷೆ ಮುಗಿಸಿ ಖುಷಿಯಿಂದ ಈಜಲೆಂದು (Swimming) ನದಿಗೆ ಹೋಗಿದ್ದ ನಾಲ್ವರು ಮಕ್ಕಳು ಮೃತಪಟ್ಟಿದ್ದರು.

ಸುರತ್ಕಲ್‌ನ ವಿದ್ಯಾದಾಯಿನಿ ಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿಗಳಾಗಿದ್ದ ಸುರತ್ಕಲ್ ಅಗರಮೇಲ್ ನಿವಾಸಿ ಚಂದ್ರಕಾಂತ ಅವರ ಮಗ ಯಶ್ವಿತ್ (15), ಹಳೆಯಂಗಡಿ ತೋಕೂರು ನಿವಾಸಿ ವಸಂತ ಅವರ ಪುತ್ರ ರಾಘವೇಂದ್ರ (15), ಸುರತ್ಕಲ್ ಗೊಡ್ಡೆಕೊಪ್ಲ ನಿವಾಸಿ ವಿಶ್ವನಾಥ ಅವರ ಮಗ ನಿರೂಪ(15), ಚಿತ್ರಾಪುರ ನಿವಾಸಿ ದೇವದಾಸ ಅವರ ಪುತ್ರ ಅನ್ವಿತ್ (15) ಸಾವಿಗೀಡಾದ ಮಕ್ಕಳು.

ಮಕ್ಕಳು ನೇರವಾಗಿ ಶಾಲೆಯಿಂದ ಹಳೆಯಂಗಡಿ ನದಿಗೆ ಈಜಾಡಲು ಹೋಗಿದ್ದ ಅವರು ನೀರಿನಲ್ಲಿ ಈಜುವಾಗ ಸುಳಿಗೆ ಸಿಲುಕಿ ಆಳಕ್ಕೆ ಹೋಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಮೊದಲು ಇವರು ನೀರಿನಲ್ಲಿ ಬಿದ್ದು ಮೃತಪಟ್ಟದ್ದು ಯಾರಿಗೂ ಗೊತ್ತಿರಲಿಲ್ಲ. ನಾಪತ್ತೆಯಾಗಿದ್ದ ಅವರನ್ನು ಹುಡುಕಿದಾಗ ಹಳೆಯಂಗಡಿ ರೈಲ್ವೇ ಸೇತುವೆ ಕೆಳಭಾಗದಲ್ಲಿ ವಿದ್ಯಾರ್ಥಿಗಳ ಶಾಲಾ ಬ್ಯಾಗ್‌ಗಳು ಹಾಗೂ ಸಮವಸ್ತ್ರ ಪತ್ತೆಯಾಗಿದ್ದವು. ನದಿಯಲ್ಲಿ ಹುಡುಕಾಟ ನಡೆಸಿದಾಗ ನಾಲ್ವರು ವಿದ್ಯಾರ್ಥಿಗಳ ಶವ ಪತ್ತೆಯಾದವು.

Exit mobile version