Site icon Vistara News

Transfer Scam : ಎಗ್ಗಿಲ್ಲದೆ ನಡೀತಿದ್ಯಾ ಪೊಲೀಸ್‌ ಟ್ರಾನ್ಸ್‌ಫರ್‌ ದಂಧೆ; ಉಮಾಪತಿ ಡೀಲ್‌?

Umapathy gowda and vijay Dennis

ಬೆಂಗಳೂರು: ರಾಜ್ಯದಲ್ಲಿ ಪೊಲೀಸ್‌ ಟ್ರಾನ್ಸ್‌ಫರ್‌ ದಂಧೆ (Transfer Scam) ಇನ್ನೂ ಜೋರಾಗಿಯೇ ನಡೆಯುತ್ತಿದೆಯಾ? ಹೌದು ಎನ್ನುತ್ತದೆ ಒಂದು ಆಡಿಯೋ ಮತ್ತು ಅದರ ಸುತ್ತ ತಿರುಗುತ್ತಿರುವ ವಾದ ವಿವಾದ. ಕಾಂಗ್ರೆಸ್‌ ನಾಯಕರೂ ಆಗಿರುವ ಸಿನಿಮಾ ನಿರ್ಮಾಪಕ ಉಮಾಪತಿ ಗೌಡ (Congress leader Umapathy gowda) ಅವರು ಸಾಮಾಜಿಕ ಕಾರ್ಯಕರ್ತ ವಿಜಯ್‌ ಡೆನ್ನಿಸ್‌ (Social worker Vijay Dennis) ಅವರ ಜತೆಗೆ ನಡೆಸಿರುವ ಮಾತುಕತೆಯ ಚಿತ್ರಣ ರಾಜ್ಯದಲ್ಲಿ ಪೊಲೀಸ್‌ ವರ್ಗಾವಣೆ (Police Transfer) ದಂಧೆಗೆ ಸಾಕ್ಷಿ ನುಡಿದಿದೆ.

ಪೊಲೀಸ್‌ ಇನ್ಸ್‌ಪೆಕ್ಟರ್‌ ಒಬ್ಬರ ವರ್ಗಾವಣೆಗೆ ಸಂಬಂಧಿಸಿದಂತೆ ಉಮಾಪತಿ ಗೌಡ ಮತ್ತು ವಿಜಯ್‌ ಡೆನ್ನಿಸ್‌ ನಡುವೆ ಮಾತುಕತೆ ನಡೆದಿರುವ ಆಡಿಯೋ ಇದು. ಇದರಲ್ಲಿ ಇನ್ಸ್ ಪೆಕ್ಟರ್ ಒಬ್ಬರ ಟ್ರಾನ್ಸ್ ಫರ್‌ ಗೆ ಉಮಾಪತಿ ಗೌಡ ಹಣ ಪಡೆದ ಆರೋಪ ಕೇಳಿಬರುತ್ತದೆ.

ಇನ್ಸ್‌ಪೆಕ್ಟರ್‌ ಅವರು ತಮ್ಮ ವರ್ಗಾವಣೆಗೆ ಉಮಾಪತಿ ಗೌಡ ಅವರಿಗೆ ಹಣ ನೀಡಿದ್ದಾರೆ ಎನ್ನಲಾಗಿದೆ. ಆದರೆ, ಈಗ ಅವರಿಗೆ ವರ್ಗಾವಣೆಗೆ ಮನಸ್ಸಿಲ್ಲ. ಹೀಗಾಗಿ ಅವರು ವಿಜಯ್‌ ಡೆನ್ನಿಸ್‌ ಅವರಿಗೆ ವಿಷಯ ತಿಳಿಸಿದ್ದಾರೆ. ಹಣ ಕೊಟ್ಟ ಇನ್ಸ್‌ಪೆಕ್ಟರ್‌ ತಮ್ಮ ಸಂಬಂಧಿಕರು ಎಂದು ವಿಜಯ್‌ ಡೆನ್ನಿಸ್‌ ಹೇಳುತ್ತಾರೆ.

ಈ ಹಂತದಲ್ಲಿ ಉಮಾಪತಿ ಗೌಡ ಅವರೊಂದಿಗೆ ಮಾತನಾಡುವ ವಿಜಯ್‌ ಡೆನ್ನಿಸ್‌ ವರ್ಗಾವಣೆಯನ್ನು ತಡೆ ಹಿಡಿಯುವಂತೆ ಮನವಿ ಮಾಡುತ್ತಾರೆ. ಇಷ್ಟೆಲ್ಲ ದುಡ್ಡು ಕೊಟ್ಟು ಟ್ರಾನ್ಸ್‌ಫರ್‌ ಮಾಡಿಸಿಕೊಳ್ಳುವಷ್ಟು ಈಗಿನ ಟ್ರಾಫಿಕ್‌ ವ್ಯವಸ್ಥೆ ಫಲದಾಯಕವಾಗಿಲ್ಲ ಎಂದು ವಿಜಯ್‌ ಹೇಳುತ್ತಾರೆ. ಹಾಗಾಗಿ ವರ್ಗಾವಣೆ ಮನವಿ ತಡೆ ಹಿಡಿಯಿರಿ. ಅದಕ್ಕೆ ಕೊಟ್ಟಿರುವ ಹಣವನ್ನು ವಾಪಸ್‌ ಕೊಡಿ ಎನ್ನುವುದು ವಿಜಯ್‌ ಡೆನ್ನಿಸ್‌ ಮನವಿ.

ಆದರೆ, ಉಮಾಪತಿ ಗೌಡ ಅವರದೆಂದು ಹೇಳಲಾದ ಧ್ವನಿಯು ಆದರೆ ಈಗಾಗಲೇ ಹಣವನ್ನು ಹೋಂ ಮಿನಿಸ್ಟರ್ ಗೆ ತಲುಪಿಸಿರುವುದಾಗಿ ಹೇಳುತ್ತದೆ. ಇನ್ನು ಮತ್ತೆ ಚೇಂಜಸ್‌ ಮಾಡುವುದು ತಮ್ಮ ವ್ಯವಹಾರದ ಮಾದರಿಯಲ್ಲ ಎನ್ನುತ್ತಾರೆ.

ʻʻನಾನು ಹೇಳಿದ್ರೆ ನಮ್ ಸರ್ಕಾರದಲ್ಲಿ ಕೆಲಸ ಆಗೇ ಆಗುತ್ತದೆ. ನಮ್ ಸರ್ಕಾರ ರೀ ನಾನು ಹೇಳಿದ್ರೆ ಮಾಡ್ಲೇಬೇಕು, ಡಿಸಿಪಿ, ಎಸಿಪಿ ಮಟ್ಟದಲ್ಲೂ ಟ್ರಾನ್ಸ್‌ಫರ್‌ ಆಗುತ್ತದೆʼʼ ಎಂಬರ್ಥದಲ್ಲಿ ಅವರು ಮಾತನಾಡಿದ್ದಾರೆ.

ಉಮಾಪತಿ ಗೌಡ ಮತ್ತು ವಿಜಯ್‌ ಡೆನ್ನಿಸ್‌ ನಡುವೆ ನಡೆದಿದೆ ಎನ್ನಲಾದ ಸಂಭಾಷಣೆ

http://vistaranews.com/wp-content/uploads/2023/11/WhatsApp-Audio-2023-11-27-at-09.17.53.ogg

ನನ್ನನ್ನೇ ಬ್ಲ್ಯಾಕ್‌ ಮೇಲ್‌ ಮಾಡ್ತಾ ಇದಾನೆ ಎಂದ ಉಮಾಪತಿ

ಈ ನಡುವೆ, ಆಡಿಯೋ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ ನಾಯಕ ಉಮಾಪತಿ ಅವರು, ರಿಲೀಸ್ ಆಗಿರುವ ಆಡಿಯೋ ವಾಯ್ಸ್ ನನ್ನದಲ್ಲ ಎಂದಿದ್ದಾರೆ.

ʻʻವಿಜಯ್ ಡೆನ್ನಿಸ್‌ ಆಪ್ತ ನನ್ನ ಬಳಿ ದುಡ್ಡು ಕೇಳಿದ್ದ. ಸುಮಾರು 25 ಲಕ್ಷ ರೂ.ಗಳಿಗೆ ಬೇಡಿಕೆ ಇಟ್ಟು ನಂತರ 5ರಿಂದ 10ಲಕ್ಷ ಡಿಮ್ಯಾಂಡ್ ಮಾಡಿದರು. ನಾನು ನಯಾ ಪೈಸ ಕೊಡಲ್ಲ ಅಂತ ಹೇಳಿದ್ದೆ. ದುಡ್ಡು ಕೊಡಲು ನಿರಾಕರಿಸಿದ್ದಕ್ಕೆ ನನ್ನ ಮೇಲೆ ಈ ಆರೋಪ ಮಾಡಿದ್ದಾರೆʼʼ ಎಂದು ಉಮಾಪತಿ ಹೇಳಿದ್ದಾರೆ.

ʻʻನನ್ನ ಮೇಲಿನ ತೇಜೋವಧೆಗೆ ಕಂಪ್ಲೇಂಟ್ ಫೈಲ್ ಮಾಡ್ತಿದೀನಿʼʼ ಎಂದು HSR ಲೇಔಟ್ ಪೊಲೀಸ್ ಸ್ಟೇಷನ್ ಕಡೆ ಹೊರಟರು.

ಇದನ್ನೂ ಓದಿ: Police Transfer : ವರ್ಗಾವಣೆ ದಂಧೆ ಆರೋಪದ ನಡುವೆಯೇ 211 ಇನ್ಸ್‌ಪೆಕ್ಟರ್‌ಗಳ ವರ್ಗ, ದಿಢೀರ್‌ ರದ್ದು!

ಟ್ರಾನ್ಸ್‌ಫರ್‌ ದಂಧೆ, ಭ್ರಷ್ಟಾಚಾರ 100ಕ್ಕೆ ನೂರು ಸತ್ಯ ಎಂದ ಶ್ರೀರಾಮುಲು

ಉಮಾಪತಿ ಆಡಿಯೋ ವಿಚಾರಕ್ಕೆ ಪ್ರತಿಕ್ರಿಯಿಸಿರುವ ಮಾಜಿ ಸಚಿವ ಶ್ರೀರಾಮುಲು ಅವರು, ಉಮಾಪತಿ ಆಡಿಯೋ ವಿಚಾರ ನೋಡಿಲ್ಲ. ಆದರೆ, ವರ್ಗಾವಣೆ, ಭ್ರಷ್ಟಾಚಾರ ನಡೆಯುತ್ತಿರೋದು ನೂರಕ್ಕೆ ನೂರು ಸತ್ಯ ಎಂದು ಹೇಳಿದ್ದಾರೆ.

ʻʻಸ್ವತಃ ಸಿಎಂ ಪುತ್ರನೇ ವರ್ಗಾವಣೆ ಬಗ್ಗೆ ಮಾತಾಡಿದ್ರು. ಸಿಎಂ ಅದನ್ನ ಬೇರೆ ವಿಚಾರ ಸಿಎಸ್ಆರ್ ಫಂಡ್ ಅಂದ್ರು. ನೂರಕ್ಕೆ ನೂರು ಕಾಂಗ್ರೆಸ್ ಪಕ್ಷ ವರ್ಗಾವಣೆ ದಂಧೆಯಲ್ಲಿ ಮುಳುಗಿದೆʼʼ ಎಂದರು.

Exit mobile version