Site icon Vistara News

Anonymous Box : ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿ 2 ಅನಾಮಧೇಯ ಬಾಕ್ಸ್‌; ಮೇಡ್‌ ಇನ್‌ ಬಾಂಗ್ಲಾ ಬರಹ

shivamogga railway station Box and bomb squad

ಶಿವಮೊಗ್ಗ: ಇಲ್ಲಿನ ರೈಲ್ವೆ ನಿಲ್ದಾಣದ ಪಾರ್ಕಿಂಗ್ (Shivamogga Railway Station Parking) ಪ್ರದೇಶದಲ್ಲಿ 2 ಅನಾಮಧೇಯ ಬಾಕ್ಸ್ (Anonymous Box) ಕಂಡು ಬಂದಿದ್ದು, ತೀವ್ರ ಆತಂಕವನ್ನು ಹುಟ್ಟುಹಾಕಿದೆ. ಕೂಡಲೇ ಈ ವಿಷಯವನ್ನು ರೈಲ್ವೆ ಪೊಲೀಸರಿಗೆ (Railway Police) ತಿಳಿಸಲಾಗಿದ್ದು, ಅಲ್ಲಿಂದ ಬಾಂಬ್‌ ನಿಷ್ಕ್ರಿಯ ದಳ ಸಿಬ್ಬಂದಿ ಮಾಹಿತಿ ನೀಡಲಾಗಿದೆ. ಸದ್ಯ ಬಾಂಬ್‌ ಸ್ಕ್ವಾಡ್‌ ಸಿಬ್ಬಂದಿ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ.

ಬಾಂಬ್​ ಸ್ಕ್ವಾಡ್, ಶ್ವಾನದಳ ಸಿಬ್ಬಂದಿ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಈ ಬಾಕ್ಸ್‌ಗಳ ಮೇಲೆ ಮೇಡ್ ಇನ್ ಬಾಂಗ್ಲಾದೇಶ ಮತ್ತು ಫುಡ್​ ಗ್ರೈನ್ಸ್ ಆ್ಯಂಡ್‌​​ ಶುಗರ್ಸ್ ಎಂದು ಬರೆಯಲಾಗಿದೆ. ಇದು ಇನ್ನಷ್ಟು ಆತಂಕವನ್ನು ಸೃಷ್ಟಿ ಮಾಡಿತ್ತು. ಹೀಗಾಗಿ ಆ ಬಾಕ್ಸ್‌ ಸಮೀಪ ಯಾರೂ ಹೋಗದಂತೆ ನಿಗಾ ವಹಿಸಲಾಗಿತ್ತು. ಸುತ್ತಮುತ್ತ ಕಟ್ಟೆಚ್ಚರ ವಹಿಸಲಾಗಿದೆ.

ಬಾಕ್ಸ್‌ ಪತ್ತೆಯಾದ ಜಾಗದ ಪಕ್ಕ ಇದ್ದ ಕಾರು. ಈ ಕಾರಿನ ಬಗ್ಗೆ ಮಾಹಿತಿ ಕಲೆಹಾಕುತ್ತಿರುವ ಪೊಲೀಸರು.

ಇದನ್ನೂ ಓದಿ: CM Siddaramaiah : ಮೈಸೂರನ್ನು ಅಭಿವೃದ್ಧಿಯಲ್ಲಿ ನಂಬರ್ ಒನ್ ಮಾಡಿ; ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಕರೆ

ಶನಿವಾರದಿಂದಲೂ ಪಾರ್ಕಿಂಗ್ ಲಾಟ್​​ನಲ್ಲಿಯೇ ಬಾಕ್ಸ್​ಗಳಿದ್ದು, ಬಾಕ್ಸ್​​ ಬಳಿ ಯಾರೂ ತೆರಳದಂತೆ ಪೊಲೀಸರು ಬ್ಯಾರಿಕೇಡ್​​ ಹಾಕಿದ್ದಾರೆ. ಸದ್ಯ ಅನಾಮಧೇಯ ಬಾಕ್ಸ್​ಗಳನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ

ಈಗ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಆ ಜಾಗದಲ್ಲಿ ಯಾರಾದರೂ ಬಂದಿದ್ದಾರಾ? ಯಾವ ಯಾವ ವಾಹನಗಳು ಅಲ್ಲಿ ನಿಂತಿದ್ದವು ಎಂಬುದನ್ನು ಪರಿಶೀಲನೆ ನಡೆಸಿದ್ದಾರೆ. ಸದ್ಯಕ್ಕೆ ಬಿಳಿ ಬಣ್ಣದ ಕಾರೊಂದರ ಮೇಲೆ ಅನುಮಾನ ಮೂಡಿದ್ದು, ಆ ಕಾರಿನ ಪತ್ತೆಗೆ ಮುಂದಾಗಲಾಗಿದೆ ಎಂದು ಹೇಳಲಾಗುತ್ತಿದೆ.

ಈ ಬಾಕ್ಸ್ ಯಾರದ್ದು, ಯಾಕೆ ಇಲ್ಲಿ ಬಿಟ್ಟು ಹೋಗಲಾಗಿದೆ? ಇದರಲ್ಲಿ ನಿಜಕ್ಕೂ ಏನಿದೆ ಎಂಬುದು ಇದುವರೆಗೂ ತಿಳಿದು ಬಂದಿಲ್ಲ. ಕಳೆದ ನಾಲ್ಕೈದು ದಿನಗಳಿಂದ ರೈಲು ನಿಲ್ದಾಣದಲ್ಲಿ ರೈಲ್ವೆ ಪೊಲೀಸರು ಪರಿಶೀಲನಾ ಕಾರ್ಯವನ್ನು ಮುಂದುವರಿಸಿದ್ದಾರೆ. ಪ್ರಯಾಣಿಕರನ್ನು ಪರೀಕ್ಷಿಸಿ ಒಳಗೆ ಬಿಡಲಾಗುತ್ತಿದೆ.

ಮರಳಿನ ಚೀಲ ಜೋಡಿಸಿದ ಪೊಲೀಸರು

ಸದ್ಯ ಈ ಎರಡೂ ಬಾಕ್ಸ್‌ಗಳ ಸುತ್ತ 2 ಲೋಡ್‌ ಮರಳಿನ ಚೀಲಗಳನ್ನು ಪೊಲೀಸರು ಜೋಡಿಸಿಟ್ಟಿದ್ದಾರೆ. ಒಂದು ವೇಳೆ ಇದರಲ್ಲಿ ಬಾಂಬ್‌ ಇದ್ದು ಸ್ಫೋಟಗೊಂಡರೆ ಹೆಚ್ಚಿನ ಅನಾಹುತಗಳು ಆಗದಿರಲಿ ಎಂಬ ಮುನ್ನೆಚ್ಚರಿಕಾ ಕ್ರಮವಾಗಿ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ.

ಇದನ್ನೂ ಓದಿ: Karnataka Politics : ಇನ್ನೂ 5 ತಿಂಗಳು ಟೈಂ ಕೊಡ್ತೀನಿ, ಕಾಂಗ್ರೆಸ್‌ನಿಂದ 50 ಶಾಸಕರನ್ನು ಸೆಳೆಯಿರಿ: ಪ್ರಿಯಾಂಕ್‌ ಖರ್ಗೆ

ಬೆಂಗಳೂರಿನಿಂದ ಬರಲಿದೆ ಬಾಂಬ್‌ ನಿಷ್ಕ್ರಿಯ ದಳ

ಬೆಂಗಳೂರಿನಿಂದ ಬಾಂಬ್ ನಿಷ್ಕ್ರಿಯ ತಂಡವು ಶಿವಮೊಗ್ಗದತ್ತ ಹೊರಟಿದ್ದು, ಸಂಜೆ ವೇಳೆಗೆ ಆಗಮಿಸಲಿದ್ದಾರೆ. ಈ ತಂಡವು ಬಂದ ಬಳಿಕವಷ್ಟೇ ಈ ಬಾಕ್ಸ್​ಗಳನ್ನು ಓಪನ್ ಮಾಡಲಾಗುವುದು ಬಳಿಕವಷ್ಟೇ ಇದರ ಸತ್ಯಾಸತ್ಯತೆ ತಿಳಿದುಬರಲಿದೆ.

Exit mobile version