Site icon Vistara News

Gold Teeth Criminal: 15 ವರ್ಷದ ಹಿಂದೆ ಪರಾರಿಯಾದವನ 2 ಹಲ್ಲುಗಳೇ ಆತನ ಬಂಧನಕ್ಕೆ ಕಾರಣವಾಗಿದ್ದು ಹೇಗೆ?

Gold Teeth Criminal

#image_title

ಮುಂಬೈ: ಹತ್ತಾರು ವರ್ಷಗಳ ಹಿಂದೆ ಜೈಲಿನಿಂದ ತಪ್ಪಿಸಿಕೊಂಡವನ ಹಿಂದೆ ಬಿದ್ದು, ಶೋಧ ಮಾಡಿ, ಸುಳಿವು ಪತ್ತೆ ಹಚ್ಚಿ ಆತನನ್ನು ಬಂಧಿಸುವುದು ಸಿನಿಮಾಗಳಲ್ಲಿ ಮಾತ್ರ ನೋಡಲು ಸಾಧ್ಯ. ಆದರೆ, ಮುಂಬೈನಲ್ಲಿ ಪೊಲೀಸರು ೧೫ ವರ್ಷದ ಹಿಂದೆ ಜೈಲಿನಿಂದ ತಪ್ಪಿಸಿಕೊಂಡು ಹೋದ ಅಪರಾಧಿಯನ್ನು (Gold Teeth Criminal) ಆತನ ಎರಡು ಹಲ್ಲುಗಳಿಂದಲೇ ಸಿನಿಮೀಯ ರೀತಿಯಲ್ಲಿ ಪತ್ತೆಹಚ್ಚಿದ್ದಾರೆ.

ಪ್ರವೀಣ್‌ ಅಶುಬಾ ಜಡೇಜಾ (Pravin Ashuba Jadeja) ಎಂಬ ೩೮ ವರ್ಷದ ವ್ಯಕ್ತಿಯು ಬಟ್ಟೆ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ೨೦೦೭ರಲ್ಲಿ ಈತನು ಬೇರೆ ಅಂಗಡಿಯಲ್ಲಿ ೪೦ ಸಾವಿರ ರೂ. ಪಡೆದು, ಅದನ್ನು ಮಾಲೀಕನಿಗೆ ಕೊಟ್ಟಿರಲಿಲ್ಲ. ಹಣ ಎಲ್ಲಿ ಎಂದು ಕೇಳಿದರೆ ದರೋಡೆ ಮಾಡಲಾಗಿದೆ ಎಂದು ಸಬೂಬು ಹೇಳಿದ್ದ. ಆದರೆ, ಪೊಲೀಸರ ತನಿಖೆ ಬಳಿಕ ಆತನೇ ಹಣವನ್ನು ಬಳಸಿಕೊಂಡಿದ್ದು ಸಾಬೀತಾಗಿ, ಆತನನ್ನು ಬಂಧಿಸಲಾಗಿತ್ತು. ಆದರೆ, ಜಾಮೀನು ಪಡೆದು ಜೈಲಿನಿಂದ ಹೊರಬಂದ ಪ್ರವೀಣ್‌, ನಾಪತ್ತೆಯಾಗಿದ್ದ. ಕೊನೆಗೂ, ಪೊಲೀಸರು ೧೫ ವರ್ಷದ ಹಿಂದೆ ಪರಾರಿಯಾದವನನ್ನು ಬಂಧಿಸಿದ್ದಾರೆ.

ಅಪರಾಧಿಯ ಪತ್ತೆಗೆ ಬಂಗಾರದ ಹಲ್ಲುಗಳೇ ಕಾರಣ

ಪ್ರವೀಣ್‌ ಅಶುಬಾ ಜಡೇಜಾನ ಹೆಸರು ಹಾಗೂ ಆತನು ಎರಡು ಬಂಗಾರದ ಹಲ್ಲುಗಳನ್ನು ಇಂಪ್ಲಾಂಟ್‌ ಮಾಡಿಸಿಕೊಂಡಿದ್ದ ಮಾಹಿತಿಯಷ್ಟೇ ಪೊಲೀಸರ ದಾಖಲೆಯಲ್ಲಿತ್ತು. ಇದನ್ನು ಆಧರಿಸಿಯೇ ಪೊಲೀಸರು ಈತನಿಗಾಗಿ ಬಲೆ ಬೀಸಿದ್ದರು. ಕೊನೆಗೆ ಬಂಗಾರದ ಹಲ್ಲು ಹಾಕಿಸಿಕೊಂಡ ವ್ಯಕ್ತಿಯ ಬಗ್ಗೆ ಆತನ ಗೆಳೆಯನು ನೀಡಿದ ಮಾಹಿತಿ ಮೇರೆಗೆ ರಫಿ ಅಹ್ಮದ್‌ ಕಿದ್ವಾಯಿ ಮಾರ್ಗ್‌ ಠಾಣೆಯ ಪೊಲೀಸರು ಈತನನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: Bengaluru murders: ಎರಡು ಪ್ರತ್ಯೇಕ ಪ್ರಕರಣ, ಜಗಳ ವಿಕೋಪಕ್ಕೆ ತಿರುಗಿ ಇಬ್ಬರ ಕೊಲೆ

Exit mobile version