Site icon Vistara News

Most wanted : ಬೆಂಗಳೂರಲ್ಲಿ ಇಂಟರ್‌ನ್ಯಾಷನಲ್‌ ಕ್ರಿಮಿನಲ್ಸ್‌ ಅರೆಸ್ಟ್‌; ಅವರ ಹಿಂದಿದ್ದಾರೆ ಭಯಾನಕ ಪಾತಕಿಗಳು!

Criminals Mansur and Anbu

ಬೆಂಗಳೂರು: ಬೆಂಗಳೂರಿನ ಸಿಸಿಬಿ ಪೊಲೀಸರು (Bangalore CCB Police) ಶ್ರೀಲಂಕಾ ಮೂಲದ ಮೂವರು ಕುಖ್ಯಾತ ಇಂಟರ್‌ನ್ಯಾಷನಲ್‌ ಕ್ರಿಮಿನಲ್‌ಗಳಾದ (International criminals from Srilanka) ಕಾಸಿನ್ ಕುಮಾರ್, ಅಮಿಲಾ ನುವಾನ್, ರಂಗ ಪ್ರಸಾದ್‌ನನ್ನು ಬಂಧಿಸುವ ಮೂಲಕ ದೊಡ್ಡ ಜಾಲವೊಂದನ್ನು (Big Network) ಬೇಧಿಸಿದ್ದರು. ಇದೀಗ ಅವರ ಹಿಂದೆ ಕೆಲಸ ಮಾಡುತ್ತಿರುವ ಶಕ್ತಿಗಳನ್ನು ಪತ್ತೆ ಹಚ್ಚಿದ್ದು ಅವರ ಪೈಕಿ ಇಬ್ಬರನ್ನು ಬಂಧಿಸಿದ್ದಾರೆ (Two more criminals arrested).

ಇಂಟರ್‌ನ್ಯಾಷನಲ್‌ ಕ್ರಿಮಿನಲ್‌ ಕಾಸಿನ್ ಕುಮಾರ್ ವಿರುದ್ಧ ಶ್ರೀಲಂಕಾದಲ್ಲಿ 4 ಕೊಲೆ ಪ್ರಕರಣವಿದೆ. ಮತ್ತೊಬ್ಬ ಪಾತಕಿ ಅಮಿಲಾ ನುವಾನ್ ಮೇಲೆ 5 ಕೊಲೆ ಕೇಸ್​​ಗಳಿವೆ. ರಂಗ ಪ್ರಸಾದ್ ವಿರುದ್ಧ ಹಲ್ಲೆ, ಕೊಲೆ ಕೇಸ್​ ಇರುವ ಬಗ್ಗೆ ಮಾಹಿತಿ ಇದೆ. ಇವರ ಕೈಯಿಂದ 13 ಮೊಬೈಲ್​, ಶ್ರೀಲಂಕಾದ ವಿವಿಧ ವಿಸಿಟಿಂಗ್ ಕಾರ್ಡ್, ಬಸ್​ ಟಿಕೆಟ್​, ಪೇಪರ್​ ಕಟ್ಟಿಂಗ್ಸ್​​, ರೆಂಟಲ್​ ಅಗ್ರಿಮೆಂಟ್​ ಪ್ರತಿ, ಆಧಾರ್​ ಕಾರ್ಡ್​, ಚುನಾವಣಾ ಗುರುತಿನ ಚೀಟಿಯ ಜೆರಾಕ್ಸ್ ಪತ್ತೆಯಾಗಿತ್ತು. ಇವರು ಶಾರ್ಪ್‌ ಶೂಟರ್‌ಗಳು ಎಂದು ಹೇಳಲಾಗಿದೆ. ಇವುಗಳ ಆಧಾರದಲ್ಲಿ ಬೆನ್ನು ಹತ್ತಿದಾಗ ಇವರನ್ನು ಬೆಂಬಲಿಸುವ ಒಂದು ದೊಡ್ಡ ಜಾಲವೇ ಇರುವುದು ಸ್ಪಷ್ಟವಾಗಿದೆ. ಅದರ ಪೈಕಿ ಹಣಕಾಸು ನೆರವು ನೀಡುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಅವರೇ ಚೆನೈ ಮೂಲದ ಮನ್ಸೂರ್ ಮತ್ತು ವಿವೇಕ್ ನಗರದ ಅನ್ಬು.

ಬಂಧಿತರ ಪಾತ್ರವೇನು?

ಬಂಧಿತರಲ್ಲಿ ಒಬ್ಬನಾದ ಮನ್ಸೂರ್‌ ಚೆನ್ನೈಯಲ್ಲಿದ್ದುಕೊಂಡೇ ಈ ಆರೋಪಿಗಳಿಗೆ ಹಣಕಾಸಿನ ನೆರವು ನೀಡುತ್ತಿದ್ದ ಎನ್ನಲಾಗಿದೆ. ಆತನಿಂದ 57 ಲಕ್ಷ ರೂ. ನಗದು, 1.5 ಕೋಟಿ ಡಿಡಿ ವಶಕ್ಕೆ ಪಡೆಯಲಾಗಿದೆ.

ಶ್ರೀಲಂಕಾದಿಂದ ಬಂದಿರುವ ಕ್ರಿಮಿನಲ್‌ಗಳು ಬೆಂಗಳೂರಿನಲ್ಲಿ ಉಳಿಯಲು, ಅವರ ಖರ್ಚು ವೆಚ್ಚ ಮತ್ತಿತರ ಸೌಲಭ್ಯಗಳಿಗಾಗಿ ಆತ 57 ಲಕ್ಷ ಹಣ ಹೊಂದಿಸಿದ್ದ. ಕೆಲವೇ ದಿನಗಳಲ್ಲಿ ಆ ಹಣವನ್ನು ಬೆಂಗಳೂರಿಗೆ ಬಂದು ತಲುಪಿಸಲು ರೆಡಿಯಾಗಿದ್ದ ಎನ್ನಲಾಗಿದೆ.

ಒಮ್ಮೆ ಈ 57 ಲಕ್ಷ ರೂ. ಹಣ ಕೈ ಸೇರಿದ್ದರೆ ಶ್ರೀಲಂಕಾದಿಂದ ಬಂದಿರುವ ಕ್ರಿಮಿನಲ್‌ಗಳು ವಿದೇಶಕ್ಕೆ ಹಾರಲು ಸಜ್ಜಾಗಿದ್ದರು ಎಂಬುದು ಮಾಹಿತಿ. ಹಾಗಿದ್ದರೆ ಈ ಮನ್ಸೂರ್‌ ಯಾರು? ಅವನು ಯಾಕಾಗಿ ಇವರಿಗೆ ಹಣ ತಂದುಕೊಡುತ್ತಿದ್ದ ಎಂಬ ಮಾಹಿತಿಯನ್ನೂ ಪೊಲೀಸರು ಪತ್ತೆ ಹಚ್ಚುತ್ತಿದ್ದಾರೆ.

ಹಣ ಕೊಡಲು ನಿರ್ದೇಶನ ಕೊಟ್ಟವನು ಓಮನ್‌ನಲ್ಲಿರುವ ಜಲಾಲ್!‌

ಅಂದ ಹಾಗೆ, ಲಂಕಾದ ಶಾರ್ಪ್‌ ಶೂಟರ್‌ಗಳಿಗೆ ಹಣ ನೀಡುವಂತೆ ಹೇಳಿದವನು ಓಮನ್‌ನಲ್ಲಿ ಬಂಧನಕ್ಕೆ ಸಿಲುಕಿರುವ ಜಲಾಲ್‌ ಎನ್ನಲಾಗಿದೆ. ಮನ್ಸೂರ್‌ ಜಲಾಲ್‌ನ ಬೇನಾಮಿಯಾಗಿ ಕೆಲಸ ಮಾಡುತ್ತಿದ್ದ ಎಂಬುದು ಮಾಹಿತಿ.

ಈ ನಡುವೆ ಜಲಾಲ್‌ ಮನ್ಸೂರ್​​ನನ್ನು ಎಲ್​​ಟಿಟಿ ಲಿಂಕ್ ಹೊಂದಿರುವ, ನೇಪಾಳದಲ್ಲಿರುವ ಸಂಜೀವ್ ಜೊತೆ ಸೇರಿಸಲು ಪ್ಲ್ಯಾನ್‌ ಮಾಡಿದ್ದನಂತೆ. ಸಂಜೀವ್ ಜೊತೆ ಜಲಾಲ್​ ಮತ್ತು ಮನ್ಸೂರ್​ ಸಿಂಹಳಿ ಭಾಷೆಯಲ್ಲಿ ಚಾಟಿಂಗ್ ಮಾಡಿರುವುದು ಬಯಲಾಗಿದೆ. ಹಾಗಿದ್ದರೆ ಇವರ ಉದ್ದೇಶವೇನು ಎನ್ನುವುದನ್ನು ಹುಡುಕುವ ಕೆಲಸ ಮಾಡಲಾಗುತ್ತಿದೆ.

ಹೊಸದಾಗಿ ಬಂಧನಕ್ಕೆ ಒಳಗಾಗಿರುವ ಅನ್ಬು ಬೆಂಗಳೂರಿನಲ್ಲಿ ಪಾಸ್​​ಪೋರ್ಟ್ ಮಾಡಿಕೊಡುವ ಕೆಲಸ ಮಾಡುತ್ತಿದ್ದನು. ಶ್ರೀಲಂಕಾ ಪ್ರಜೆಗಳಿಗೆ ಭಾರತದ ಪಾಸ್​​ಪೋರ್ಟ್ ಮಾಡಿಕೊಡುವ ಜವಾಬ್ದಾರಿ ಅವನಿಗಿತ್ತು.

ಹಾಗಿದ್ದರೆ ಓಮನ್‌ನಲ್ಲಿರುವ ಜಲಾಲ್‌ ಯಾರು?

ಓಮನ್‌ನಿಂದ ಆಪರೇಟ್‌ ಮಾಡುತ್ತಿದ್ದ ಜಲಾಲ್ ಅಲಿಯಾಸ್ ಮಹಮದ್ ಸಿದ್ದಿಕಿ ಶ್ರೀಲಂಕಾದ ಡ್ರಗ್ಸ್ ಕಿಂಗ್​ಪಿನ್ ಎಂದು ಹೇಳಲಾಗಿದೆ. ಶ್ರೀಲಂಕಾದ ಭೂಗತ ಜಗತ್ತಿನಲ್ಲಿ ಸಕ್ರಿಯನಾಗಿದ್ದ ಈಗ ಪಾಕಿಸ್ತಾನದ ಒಬ್ಬ‌ ಡ್ರಗ್ಸ್‌ ಕಿಂಗ್​​ಪಿನ್ ಸಹೋದರಿಯನ್ನು ಮದುವೆಯಾಗಿದ್ದ! ಶ್ರೀಲಂಕಾದಲ್ಲಿ ಅಪರಾಧ ಮಾಡಿ ಭಾರತಕ್ಕೆ ಬಂದು ತಲೆಮರೆಸಿಕೊಳ್ಳುತ್ತಿದ್ದ ಈತ ಇಲ್ಲಿಂದ ಒಮಾನ್ ದೇಶಕ್ಕೆ ಓಡಿ ಹೋಗಿದ್ದ. ಇದೀಗ ಭಾರತೀಯ ಗುಪ್ತಚರ ತಂಡದ ಸಹಕಾರದಿಂದ ಆತನನ್ನು ಓಮಾನ್‌ನಲ್ಲಿ ಸೆರೆ ಹಿಡಿಯಲಾಗಿದೆ. ಮುಂದೆ ಈ ಜಾಲದ ಒಂದೊಂದೇ ಕಥೆಗಳು ಹೊರಬೀಳಲಿವೆ.

Exit mobile version