Site icon Vistara News

ಕಾಶ್ಮೀರದ ಅವಂತಿಪುರದಲ್ಲಿ ನಡೆದ ಎನ್‌ ಕೌಂಟರ್‌ನಲ್ಲಿ ಇಬ್ಬರು ಭಯೋತ್ಪಾದಕರ ಹತ್ಯೆ

Jammu Kashmir Terrorists

ಶ್ರೀನಗರ: ಜಮ್ಮು-ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಅವಂತಿಪುರದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಇಬ್ಬರು ಭಯೋತ್ಪಾದಕರು ಹತ್ಯೆಯಾಗಿದ್ದಾರೆ.

ಈ ಭಯೋತ್ಪಾದಕರನ್ನು ಶಹೀದ್‌ ರಾಥರ್‌ ಮತ್ತು ಉಮರ್‌ ಯೂಸುಫ್‌ ಎಂದು ಗುರುತಿಸಲಾಗಿದೆ ಎಂದು ಕಾಶ್ಮೀರ ವಲಯದ ಪೊಲೀಸರು ಟ್ವೀಟ್‌ ಮಾಡಿದ್ದಾರೆ. ಎನ್‌ ಕೌಂಟರ್‌ ನಡೆದ ಸ್ಥಳದಲ್ಲಿ ಎಕೆ-47 ಮತ್ತು ಇತರ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.

ಉಗ್ರ ಶಹೀದ್‌, ಮಹಿಳೆಯೊಬ್ಬರನ್ನು ಹಾಗೂ ಸರಕಾರಿ ಉದ್ಯೋಗಿಯೊಬ್ಬರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದ.

ಇತ್ತೀಚೆಗೆ ಕಾಶ್ಮೀರ ಕಣಿವೆಯಲ್ಲಿ ಭದ್ರತಾ ಸಿಬ್ಬಂದಿ 26 ಭಯೋತ್ಪಾದಕರನ್ನು ಕೊಂದು ಹಾಕಿದ್ದಾರೆ. ಈ ಉಗ್ರರು ಲಷ್ಕರೆ ತೈಬಾ, ಜೈಶೆ ಮಹಮ್ಮದ್‌ ಉಗ್ರ ಸಂಘಟನೆಗೆ ಸೇರಿದವರು ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ:ಕಾಶ್ಮೀರದಲ್ಲಿ ನಟಿ ಅಮ್ರೀನ್‌ ಭಟ್‌ ಕೊಂದಿದ್ದ ಇಬ್ಬರು ಭಯೋತ್ಪಾದಕರ ಎನ್‌ಕೌಂಟರ್

Exit mobile version