Site icon Vistara News

Viral News: ವಿಮಾನ ಪ್ರಯಾಣಿಕನ ಜೇಬಿನಲ್ಲಿತ್ತು ಎರಡು ಹಾವು!

Viral News

ಮಿಯಾಮಿ: ಪ್ರಯಾಣಿಕನೊಬ್ಬ ಪ್ಯಾಂಟ್‌ ಜೇಬಿನಲ್ಲಿ (Viral News) ಹಾವುಗಳನ್ನು (Snakes In Pant) ಸಾಗಿಸುತ್ತಿದ್ದ ಘಟನೆ ಫ್ಲೋರಿಡಾದ (Florida ) ಮಿಯಾಮಿಯ ವಿಮಾನ ನಿಲ್ದಾಣದಲ್ಲಿ (Miami Airport) ಬೆಳಕಿಗೆ ಬಂದಿದೆ. ಭದ್ರತಾ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದ ವೇಳೆ ಪ್ರಯಾಣಿಕನೊಬ್ಬ ಪ್ಯಾಂಟ್‌ನ ಜೇಬಿನಲ್ಲಿ ಹಾವುಗಳನ್ನು ಇಟ್ಟಿರುವುದನ್ನು ಪತ್ತೆ ಮಾಡಿದ್ದಾರೆ.

ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಭದ್ರತಾ ಅಧಿಕಾರಿಗಳು, ಏಪ್ರಿಲ್ 26ರಂದು ಚೆಕ್‌ಪಾಯಿಂಟ್‌ನಲ್ಲಿ ಪ್ರಯಾಣಿಕನೊಬ್ಬ ಪ್ಯಾಂಟ್‌ನಲ್ಲಿ ಹಾವುಗಳನ್ನು ಸಣ್ಣ ಚೀಲದಲ್ಲಿ ಇಟ್ಟು ಸಾಗಿಸುತ್ತಿರುವುದನ್ನು ಪತ್ತೆ ಮಾಡಿರುವ ಬಗ್ಗೆ ತಿಳಿಸಿದ್ದಾರೆ. ಸನ್‌ಗ್ಲಾಸ್ ಬ್ಯಾಗ್‌ನಲ್ಲಿ ಎರಡು ಸಣ್ಣ ಹಾವುಗಳನ್ನು ಪತ್ತೆ ಹಚ್ಚಿರುವ ಸಾರಿಗೆ ಭದ್ರತಾ ಆಡಳಿತದ (ಟಿಎಸ್‌ಎ) ವಕ್ತಾರರು ಹಾವುಗಳನ್ನು ಫ್ಲೋರಿಡಾ ಮೀನು ಮತ್ತು ವನ್ಯಜೀವಿ ಸಂರಕ್ಷಣಾ ಆಯೋಗಕ್ಕೆ ಒಪ್ಪಿಸಿರುವುದಾಗಿ ಅವರು ತಿಳಿಸಿದ್ದಾರೆ.

ಪ್ರಯಾಣಿಕನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭದ್ರತಾ ತಪಾಸಣೆಗೆ ನಿಂತಿದ್ದಾಗ ಎಚ್ಚರಿಕೆ ಸದ್ದು ಕೇಳಿದಾಗ ಆತನೇ ತನ್ನ ಪ್ಯಾಂಟ್‌ನಲ್ಲಿ ಹಾವುಗಳಿವೆ ಎಂದು ಒಪ್ಪಿಕೊಂಡಿದ್ದಾನೆ. ಆತ ತನ್ನ ಚೀಲದಲ್ಲಿ ಈ ಹಾವುಗಳನ್ನು ಏಕೆ ಸಾಗಿಸುತ್ತಿದ್ದ ಎಂಬುದು ತಿಳಿದು ಬಂದಿಲ್ಲ. ಪ್ರಯಾಣಿಕನನ್ನು ವಶಕ್ಕೆ ಪಡೆಯಲಾಗಿದೆ.



ಬೇಬಿ ಡೈಪರ್ ನಲ್ಲಿತ್ತು ಗುಂಡು

ಮಿಯಾಮಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮತ್ತೊಂದು ವಿಲಕ್ಷಣ ಘಟನೆ ನಡೆದಿದೆ. ನ್ಯೂಯಾರ್ಕ್‌ನ ಲಾಗಾರ್ಡಿಯಾ ವಿಮಾನ ನಿಲ್ದಾಣದಲ್ಲಿ ಬಿಸಾಡಬಹುದಾದ ಬೇಬಿ ಡೈಪರ್‌ನಲ್ಲಿ 17 ಗುಂಡುಗಳನ್ನು ಬಚ್ಚಿಟ್ಟಿರುವುದನ್ನು ಭದ್ರತಾ ಅಧಿಕಾರಿಗಳು ಪತ್ತೆ ಮಾಡಿದ್ದಾರೆ.

ವಿಮಾನ ನಿಲ್ದಾಣದ ಭದ್ರತಾ ಚೆಕ್‌ಪಾಯಿಂಟ್‌ನಲ್ಲಿ ಎಕ್ಸ್-ರೇ ಯಂತ್ರದಲ್ಲಿ ಎಚ್ಚರಿಕೆ ಬಂದಿದ್ದರಿಂದ ಅಧಿಕಾರಿಗಳು ಪ್ರಯಾಣಿಕರ ಕ್ಯಾರಿ-ಆನ್ ಬ್ಯಾಗ್‌ನಿಂದ ಕ್ಲೀನ್ ಡೈಪರ್ ಅನ್ನು ತೆಗೆದು ನೋಡಿದಾಗ ಅದರಲ್ಲಿ ಬುಲೆಟ್ ತುಂಬಿದ ಡಯಾಪರ್ ಕಂಡು ಬಂದಿತ್ತು.

ಈ ಬಗ್ಗೆ ಪ್ರಯಾಣಿಕನನ್ನು ವಿಚಾರಿಸಿದಾಗ ತನಗೆ ಇದು ಗೊತ್ತೇ ಇಲ್ಲ ಎಂದು ಹೇಳಿದ್ದ. ತನ್ನ ಗೆಳತಿ ಅದನ್ನು ಇಟ್ಟುಕೊಳ್ಳುವಂತೆ ಸೂಚಿಸಿದ್ದಳು ಎಂದು ತಿಳಿಸಿದ್ದ ಎನ್ನಲಾಗಿದೆ.

ಬೆಂಗಳೂರಿನಲ್ಲೂ ಪತ್ತೆಯಾಗಿತ್ತು

ಇತ್ತೀಚೆಗೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೂ ಥಾಯ್ಲೆಂಡ್‌ನಿಂದ ಬಂದ ವ್ಯಕ್ತಿಯ ಬ್ಯಾಗ್‌ನಲ್ಲಿ 17 ಅತಿ ವಿಷಕಾರಿ ಕಾಳಿಂಗ ಸರ್ಪ , 55 ಚೆಂಡು ಹೆಬ್ಬಾವು ಮತ್ತು ಆರು ಕಾಪುಚಿನ್‌ ಕೋತಿ ಮರಿಗಳನ್ನು ಪತ್ತೆಯಾಗಿತ್ತು.

ಬ್ಯಾಂಕಾಕ್‌ನಿಂದ ಬೆಂಗಳೂರಿಗೆ ಏರ್ ಏಷಿಯಾ ವಿಮಾನದಲ್ಲಿ ಟರ್ಮಿನಲ್ 1ರಲ್ಲಿ ಬಂದಿಳಿದಿದ್ದ ವಿಮಾನದಿಂದ ಇಳಿದ ಪ್ರಯಾಣಿಕರ ವಿವರಗಳನ್ನು ಪಡೆದುಕೊಳ್ಳುತ್ತಿದ್ದಾಗ ಒಬ್ಬ ವ್ಯಕ್ತಿ ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದುದು ಕಂಡುಬಂದಿತ್ತು.

ಇದನ್ನೂ ಓದಿ: ಹಿಂದೂ ಸಂಘಟನೆಯ ನಾಯಕನನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದ ಮೌಲ್ವಿಯ ಬಂಧನ

ಕೂಡಲೇ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಆತನ ಚೆಕ್‌ ಇನ್‌ ಲಗೇಜನ್ನು ಸ್ಕ್ಯಾನ್‌ ಮಾಡಿದರು. ಅದರಲ್ಲಿ ಹಾವು, ಕೋತಿಗಳು ಇರುವುದು ಕಂಡುಬಂತು. ಬಳಿಕ ಅವನನ್ನು ತಡೆ ಹಿಡಿದು ಹೆಚ್ಚಿನ ತಪಾಸಣೆ ನಡೆಸಿದಾಗ ಆತನ ಬಳಿ ವಿಷಕಾರಿ ಕಾಳಿಂಗ ಸರ್ಪ, ಹೆಬ್ಬಾವು ಮತ್ತು ಕೋತಿ ಮರಿಗಳನ್ನು ತಂದಿರುವುದು ಪತ್ತೆಯಾಗಿತ್ತು.

ಹಾವು ಮತ್ತು ಕೋತಿಯನ್ನು ತಂದಿರುವ ವ್ಯಕ್ತಿ ತಮಿಳುನಾಡಿನವನು ಎಂದು ತಿಳಿದು ಬಂದಿತ್ತು. ವನ್ಯ ಜೀವಿ ಕಳ್ಳಸಾಗಣೆದಾರ ಎಂದು ಗುರುತಿಸಿ ಆತನನ್ನು ಬಂಧಿಸಿ 1962ರ ಕಸ್ಟಮ್ಸ್ ಕಾಯಿದೆಯ ಸೆಕ್ಷನ್ 110ರ ಅಡಿಯಲ್ಲಿಆತನ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.

Exit mobile version