ಗುರುಗ್ರಾಮ: ಮಹಿಳೆಯೊಬ್ಬಳು ಪುರುಷರಿಬ್ಬರ ಮೇಲೆ ಸುಳ್ಳು ಅತ್ಯಾಚಾರದ ಆರೋಪ ಮಾಡಿ ಅವರಿಂದ ಹಣ ವಸೂಲಿ ಮಾಡಿರುವ ಪ್ರಕರಣದ ದೆಹಲಿ ಸಮೀಪದ ಗುರುಗ್ರಾಮದಲ್ಲಿ ನಡೆದಿದೆ. ಮಹಿಳೆಯನ್ನು ಪೊಲೀಸರು ಗುರುವಾರ ಬಂಧಿಸಿರುವುದಾಗಿ (Viral News) ವರದಿಯಾಗಿದೆ.
ಇದನ್ನೂ ಓದಿ: Viral Video: ಬೆನ್ನಟ್ಟಿದ 4 ನಾಯಿಗಳು, ಅಡ್ಡಬಂದ ಹಸುಗಳ ಹಿಂಡು; ಗಲಿಬಿಲಿಯಾಗಿ ಭಯದಿಂದ ಓಡಿದ ಸಿಂಹ!
ಗುರುಗ್ರಾಮದಲ್ಲಿ ನೋಯ್ಡಾ ಮೂಲದ ಖಾಸಗಿ ಮೀಡಿಯಾ ಮ್ಯಾನೇಜ್‌ಮೆಂಟ್ ಕಂಪನಿಯಲ್ಲಿ ವೆಬ್ ಡಿಸೈನರ್ ಆಗಿ ಕೆಲಸ ಮಾಡುತ್ತಿರುವ 22 ವರ್ಷದ ಮಹಿಳೆ ಈ ರೀತಿ ಆರೋಪ ಮಾಡಿದಾಕೆ. ಆಕೆ ಈ ಹಿಂದೆ ದೆಹಲಿಯ ರೋಹಿಣಿಯಲ್ಲಿನ ಅಮನ್ ವಿಹಾರ್ ಪೊಲೀಸ್ ಠಾಣೆಯಲ್ಲೂ ಇದೇ ರೀತಿ ದೂರು ದಾಖಲಿಸಿದ್ದಳು. ಮಾರ್ಚ್ 17ರಂದು ಗುರುಗ್ರಾಮದಲ್ಲಿ ಸೆಕ್ಟರ್ 53 ಪೊಲೀಸ್ ಠಾಣೆಯಲ್ಲಿ ಇಬ್ಬರು ಪುರುಷರ ವಿರುದ್ಧ ಅತ್ಯಾಚಾರ ದೂರು ದಾಖಲಿಸಿದ್ದಾರೆ. ದೂರನ್ನು ವಾಪಸು ಪಡೆಯಬೇಕೆಂದರೆ 2 ಲಕ್ಷ ರೂ. ಕೊಡಬೇಕೆಂದು ಹೇಳಿ ಹಣ ಸುಲಿಗೆ ಮಾಡಿದ್ದಾಳೆ.
ಅದಷ್ಟೇ ಅಲ್ಲದೆ ಇನ್ನೂ ನಾಲ್ಕು ಲಕ್ಷ ರೂ. ಕೊಡಬೇಕೆಂದು ಬೇಡಿಕೆ ಇಟ್ಟಿದ್ದಳು. ಈ ಮಹಿಳೆಯು ಅದೇ ರೀತಿಯ ಪ್ರಕರಣವನ್ನು ದೆಹಲಿಯಲ್ಲಿ ಕೊಟ್ಟಿದ್ದು ಪೊಲೀಸರ ಗಮನಕ್ಕೆ ಬಂದಿದೆ. ಅನುಮಾನ ಬಂದು ಅವರು ತನಿಖೆ ನಡೆಸಿದ್ದಾರೆ. ಆಗ ಆಕೆಯ ನಿಜ ಕಥೆ ಹೊರಬಿದ್ದಿದೆ.
ಇದನ್ನೂ ಓದಿ: Viral News : ನವಜಾತ ಶಿಶುವನ್ನೇ ಬೂಟು ಕಾಲಿನಲ್ಲಿ ಮೆಟ್ಟಿ ಕೊಂದ ಪೊಲೀಸರು!
ಗುರುವಾರದಂದು ಪೊಲೀಸರು ಆರೋಪಿ ಮಹಿಳೆಯನ್ನು ಬಂಧಿಸಿದ್ದಾರೆ. ಆಕೆ ತನ್ನ ಫೇಸ್‌ಬುಕ್ ಸ್ನೇಹಿತ ಹಾಗೂ ಆತನ ಸಹಚರರಿಬ್ಬರು ಸೇರಿಕೊಂಡು ಪಿಜಿಯೊಂದಕ್ಕೆ ಕರೆದುಕೊಂಡು ಹೋಗಿ ತನ್ನ ಮೇಲೆ ಅತ್ಯಾಚಾರವೆಸಗಿದ್ದಾಗಿ ದೂರಿನಲ್ಲಿ ಆರೋಪಿಸಿದ್ದಳು ಎಂದು ಪೊಲೀಸರು ಮಾಹಿತಿ ಕೊಟ್ಟಿದ್ದಾರೆ.