1.ಜನುಮದಿನದ ಸಂಭ್ರಮಕ್ಕೆ ಸಾವಿನ ಸೂತಕ: ಕಟೌಟ್‌ಗೆ ವಿದ್ಯುತ್ ತಗುಲಿ ಮೂವರು ಯಶ್ ಅಭಿಮಾನಿಗಳ ಸಾವು
ಚಿತ್ರ ನಟ ಯಶ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಬೃಹತ್ ಕಟೌಟ್ ನಿಲ್ಲಿಸಲು ಹೋಗಿ ಮೂವರು ಯಶ್ ಅಭಿಮಾನಿಗಳು ವಿದ್ಯುತ್ ಆಘಾತಕ್ಕೆ ಒಳಗಾಗಿ ಮೃತಪಟ್ಟಿದ್ದಾರೆ. ಗದಗ ಜಿಲ್ಲೆಯ ಲಕ್ಷ್ಮೇಶ್ವರದ ಸೂರಣಗಿ ಗ್ರಾಮದಲ್ಲಿ ನಡೆದ ಘಟನೆಗೆ ಮರುಗಿದ ಚಿತ್ರನಟ ಯಶ್ ಕೂಡಲೇ ಅಲ್ಲಿಗೆ ಧಾವಿಸಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಪೂರಕ ಸುದ್ದಿ: Yash Birthday : ಬರ್ತ್‌ಡೇ ಅಂದ್ರೇನೆ ಭಯವಾಗುತ್ತಿದೆ; ಫ್ಯಾನ್ಸ್ ಸಾವಿಗೆ ಕಂಬನಿ ಮಿಡಿದ ಯಶ್
2.ಭಾರತ, ಮೋದಿ ವಿರುದ್ಧ ಆರೋಪ; ಆಕ್ರೋಶದ ಬಳಿಕ ಕ್ಷಮೆಯಾಚಿಸಿದ ಮಾಲ್ಡೀವ್ಸ್
ಪ್ರಧಾನಿ ನರೇಂದ್ರ ಮೋದಿ ಅವರು ಲಕ್ಷದ್ವೀಪಕ್ಕೆ ತೆರಳಿ, ಎಲ್ಲರೂ ಲಕ್ಷದ್ವೀಪಕ್ಕೆ ಬನ್ನಿ ಎಂದು ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಿ ಎಂದು ಕರೆ ನೀಡಿದ್ದಕ್ಕೆ ಭಾರತ ಹಾಗೂ ಮೋದಿ (Narendra Modi) ಬಗ್ಗೆ ಇಲ್ಲಸಲ್ಲದ ಆರೋಪ ಮಾಡಿದ ಮಾಲ್ಡೀವ್ಸ್ ವಿರುದ್ಧ ಭಾರತದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಬಾಯ್ಕಾಟ್ ಮಾಲ್ಡೀವ್ಸ್ (Boycott Maldives) ಎಂಬ ಅಭಿಯಾನ ಶುರುವಾಗಿದೆ. ಇದರಿಂದ ಬೆಚ್ಚಿಬಿದ್ದಿರುವ ಮಾಲ್ಡೀವ್ಸ್ ಈಗ ಭಾರತದ ಕ್ಷಮೆಯಾಚಿಸಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
3.ಹಿಟ್ ಆಂಡ್ ರನ್ ಕಾನೂನು ಜಾರಿ ಇಲ್ಲ; ಮುಷ್ಕರ ಬೆನ್ನಲ್ಲೇ ಕೇಂದ್ರದಿಂದ ಮಹತ್ವದ ಆದೇಶ
ಕೇಂದ್ರ ಸರ್ಕಾರವು ಜಾರಿಗೆ ತರಲು ಮುಂದಾಗಿದ್ದ ಹಿಟ್ ಆ್ಯಂಡ್ ರನ್ ಕಠಿಣ ಕಾನೂನು (Hit And Run Law) ವಿರುದ್ಧ ದೇಶಾದ್ಯಂತ ಟ್ರಕ್ ಚಾಲಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಇದು ತೀವ್ರಗೊಳ್ಳುವ ಸೂಚನೆ ಬೆನ್ನಲ್ಲೇ ಕೇಂದ್ರ ಸರ್ಕಾರವು ಹಿಟ್ ಆ್ಯಂಡ್ ರನ್ ಕಠಿಣ ಕಾನೂನು ಜಾರಿ ಸದ್ಯಕ್ಕಿಲ್ಲ ಎಂದು ತಿಳಿಸಿದೆ. ಇದರಿಂದಾಗಿ ಸಂಘಟನೆಗಳು ಅನಿರ್ದಿಷ್ಟಾವಧಿ ಮುಷ್ಕರ ವಾಪಸ್ ಪಡೆದಿವೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
4. ರಾಮ ಮಾತ್ರ ದೇವರಾ? ಅಯೋಧ್ಯೆಯದು ಮಾತ್ರ ರಾಮ ಮಂದಿರವಾ?: ಕಾಂಗ್ರೆಸ್ ಸಚಿವರ ಪ್ರಶ್ನೆ
ಹಿಂದೂಗಳಿಗೆ ಕೇವಲ ರಾಮ ಮಾತ್ರ ದೇವರಾ (Rama Mandir)? ಅಯೋಧ್ಯೆಯಲ್ಲಿ ಕಟ್ಟುವುದು ಮಾತ್ರ ರಾಮ ಮಂದಿರವೇ?: ಇಂಥ ಗಂಭೀರ ಪ್ರಶ್ನೆಗಳನ್ನು ಕೇಳಿದ್ದಾರೆ ಕಾಂಗ್ರೆಸ್‌ನ ಇಬ್ಬರು ಪ್ರಮುಖ ನಾಯಕರಾದ ಶಿಕ್ಷಣ ಸಚಿವ ಮಧು ಬಂಗಾರಪ್ಪ (Madhu Bangarappa) ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ (Dr MC Sudhakar). ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಈ ಸುದ್ದಿಯನ್ನೂ ಓದಿ: ಜ.22ರಂದು ಅಮೆರಿಕದಲ್ಲೂ ರಾಮನ ಜಪ; ನ್ಯೂಯಾರ್ಕ್‌ನಲ್ಲಿ ಲೈವ್ ಟೆಲಿಕಾಸ್ಟ್
5. ಬಿಲ್ಕಿಸ್ ಬಾನೊ ಅತ್ಯಾಚಾರಿಗಳಿಗೆ ಜೈಲೇ ಗತಿ; ಗುಜರಾತ್ ಸರಕಾರದ ಆದೇಶ ರದ್ದುಗೊಳಿಸಿದ ಸುಪ್ರೀಂ
2002ರಲ್ಲಿ ಗುಜರಾತ್‌ನಲ್ಲಿ ನಡೆದ ಗುಜರಾತ್ ಹತ್ಯಾಕಾಂಡದ ವೇಳೆ ಬಿಲ್ಕಿಸ್ ಬಾನೊ (Bilkis Bano Case) ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ ಅಪರಾಧಿಗಳನ್ನು ಬಿಡುಗಡೆಗೊಳಿಸಿದ್ದ ಗುಜರಾತ್ ಸರ್ಕಾರಕ್ಕೆ ತೀವ್ರ ಹಿನ್ನಡೆಯಾಗಿದೆ. ಹಾಗಾಗಿ, ಕ್ಷಮಾದಾನದ ಆಧಾರದ ಮೇಲೆ ಬಿಡುಗಡೆಯಾಗಿದ್ದ 11 ಅಪರಾಧಿಗಳಿಗೆ ಈಗ ಜೈಲೇ ಗತಿಯಾಗಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
6. ಪಾವಗಡ ಸ್ಫೋಟ ಪ್ರಕರಣ; ಐವರು ಮಾಜಿ ನಕ್ಸಲೀಯರ ಸೆರೆ
2005ರ ಪಾವಗಡದ ವೆಂಕಟಮ್ಮನಹಳ್ಳಿ ಬ್ಲಾಸ್ಟ್ ಪ್ರಕರಣದಲ್ಲಿ (Pavagada Naxal Attack) ಐವರು ಮಾಜಿ ನಕ್ಸಲೀಯರನ್ನು ಪೊಲೀಸರು ಬಂಧಿಸಿದ್ದಾರೆ. ಕೋರ್ಟ್ ವಿಚಾರಣೆಗೆ ನಿರಂತರವಾಗಿ ಗೈರಾಗಿದ್ದ ಪರಿಣಾಮ ಐವರು ಆರೋಪಿಗಳನ್ನು ಬಂಧಿಸಲಾಗಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
7. ಕೆಆರ್‌ಎಸ್‌ನಿಂದ 20 ಕಿ.ಮೀ ವ್ಯಾಪ್ತಿಯಲ್ಲಿ ಗಣಿಗಾರಿಕೆಗೆ ನಿಷೇಧ; ಹೈಕೋರ್ಟ್ ಆರ್ಡರ್
ಮಂಡ್ಯದ ಕೃಷ್ಣರಾಜ ಸಾಗರ ಅಣೆಕಟ್ಟೆ (KRS Dam) ಸುತ್ತಮುತ್ತ 20 ಕಿ.ಮೀಟರ್ ವ್ಯಾಪ್ತಿಯಲ್ಲಿ ಗಣಿಗಾರಿಕೆಗೆ (Mining restricted) ಹೈಕೋರ್ಟ್ ತಾತ್ಕಾಲಿಕ ನಿರ್ಬಂಧ (High court Restriction) ವಿಧಿಸಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
8. ಪುತ್ತಿಗೆ ಶ್ರೀಗಳು ವಿದೇಶಕ್ಕೆ ಹೋದರೆ ತಪ್ಪೇನು?; ಹೈಕೋರ್ಟ್ ಪ್ರಶ್ನೆ
ಪುತ್ತಿಗೆ ಮಠದ (Puttige Matt) ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು (Sri Sugunendra theertha seer) ವಿದೇಶದಲ್ಲಿ ಜ್ಞಾನ ಪ್ರಸಾರ ಮಾಡಿದರೆ ತಪ್ಪೇನು?: ಹೀಗೆಂದು ರಾಜ್ಯ ಹೈಕೋರ್ಟ್‌ನ (Karnataka High Court) ವಿಭಾಗೀಯ ಪೀಠ ಪ್ರಶ್ನೆ ಮಾಡಿದೆ. ಆದರೆ, ಪರ್ಯಾಯ ಮಹೋತ್ಸವಕ್ಕೆ ತಡೆ ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ದಾವೆಯನ್ನು ವಜಾ ಮಾಡಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
9. ನಿಯಮ ಮೀರಿ ಪಾರ್ಟಿ: ನಟ ದರ್ಶನ್ ಸಹಿತ ಹಲವು ಸೆಲೆಬ್ರಿಟಿಗಳಿಗೆ ಸಂಕಷ್ಟ
ಬೆಂಗಳೂರಿನ ರಾಜಾಜಿನಗರದ ರಾಜ್ ಕುಮಾರ್ ರಸ್ತೆಯಲ್ಲಿರುವ ಜೆಟ್ ಲ್ಯಾಗ್ ಪಬ್ (Jet lag Party Case) ಎಂಬ ಬಾರ್ ಎಂಡ್ ರೆಸ್ಟೋರೆಂಟ್‌ನಲ್ಲಿ ಸಮಯ ಮೀರಿ ಪಾರ್ಟಿ ಮಾಡಿದ್ದ ಪ್ರಕರಣ ಇದೀಗ ಸಿನಿಮಾ ನಟರಿಗೆ (Film Actors) ದುಬಾರಿಯಾಗಿ ಪರಿಣಮಿಸಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಈ ಸುದ್ದಿಯನ್ನೂ ಓದಿ: ಫೆಬ್ರುವರಿಯಲ್ಲಿ ರಶ್ಮಿಕಾ-ವಿಜಯ್ ದೇವರಕೊಂಡ ಎಂಗೇಜ್‌ಮೆಂಟ್?
ಈ ಸುದ್ದಿಯನ್ನೂ ಓದಿ: ಓಪನ್ ಹೈಮರ್, ಬಾರ್ಬಿ, ಪೂರ್ ಥಿಂಗ್ಸ್…ಗೋಲ್ಡನ್ ಗ್ಲೋಬ್ ಪ್ರಶಸ್ತಿ ಪುರಸ್ಕೃತರ ಪಟ್ಟಿ ಇಲ್ಲಿದೆ
10. ಓಡೋಡಿ ಬಂದು ಮೇಕೆ ಮರಿಗೆ ಹಾಲುಣಿಸುವ ಶ್ವಾನ! ಮಾತೃತ್ವಕ್ಕೆ ಮಾರುಹೋದ ಜನ
ಹಿಂದೊಮ್ಮೆ ವಿಜಯನಗರದ ಅಂಗೂರು ಗ್ರಾಮದಲ್ಲಿ ಹಸುವೊಂದು ಶ್ವಾನಕ್ಕೆ ಹಾಲುಣಿಸುತ್ತಿರುವ ವಿಡಿಯೊ ವೈರಲ್ ಆಗಿತ್ತು. ಇದೀಗ ದೊಡ್ಡಬಳ್ಳಾಪುರದಲ್ಲಿ ಶ್ವಾನವೊಂದು (Dog Love) ಮೇಕೆ ಮರಿಗೆ ಹಾಲುಣಿಸಿದ್ದು, ಈ ಅಪರೂಪದ ದೃಶ್ಯವನ್ನು (Dog motherhood) ಜನರು ಕಣ್ತುಂಬಿಕೊಳ್ಳುತ್ತಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ: