ನವದೆಹಲಿ: ಮದುವೆಯಲ್ಲಿ ಯಾವೆಲ್ಲ ಕಾರಣಕ್ಕೆ ಗಲಾಟೆಗಳಾಗುತ್ತವೆ ಮತ್ತು ಅವು ಹೇಗೆ ಕೊಲೆಯಲ್ಲಿ ಅಂತ್ಯವಾಗುತ್ತವೆ ಎಂಬುದು ಗೊತ್ತಾಗುವುದಿಲ್ಲ. ಮದುವೆ (Marriage Party) ವೇಳೆ, ಬಳಕೆಯಾದ ಪ್ಲೇಟ್‌ಗಳಿದ್ದ ಟ್ರೆಯೊಂದು ಅತಿಥಿಗಳಿಗೆ ತಗುಲಿತು (tray of used plates) ಎಂಬ ಕಾರಣಕ್ಕೆ ಜಗಳ ಉಂಟಾಗಿ, ಕೊನೆಗೆ 26 ವರ್ಷದ ವೇಟರ್ ಕೊಲೆಯಲ್ಲಿ ಅಂತ್ಯವಾಗಿದೆ(Beaten to death). ನವೆಂಬರ್ 17ರ ಸಂಜೆ, ಉತ್ತರ ಪ್ರದೇಶದ ಗಾಜಿಯಾಬಾದ್‌ನ ಪುಸ್ತಾ ರಸ್ತೆಯಲ್ಲಿರುವ ಸಿಜಿಎಸ್ ವಾಟಿಕಾ ಅತಿಥಿ ಗೃಹದಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ(UP Police).
ಮಾಣಿ ಒಯ್ಯುತ್ತಿದ್ದ ಪ್ಲೇಟ್‌ಗಳ ತಟ್ಟೆಯು ಸ್ಥಳದಲ್ಲಿ ಅತಿಥಿಗಳನ್ನು ತಗುಲಿದಾಗ ಹೊಡೆದಾಟ ಶುರುವಾಯಿತು. ಜಗಳದ ಸಮಯದಲ್ಲಿ ವೇಟರ್ ಪಂಕಜನನ್ನು ಕೆಲವು ಅಮಾನುಷವಾಗಿ ಥಳಿಸಿದ್ದಾರೆ. ಆಗ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಇಷ್ಟಕ್ಕೆ ಸುಮ್ಮನಾಗದ ಆರೋಪಿಗಳವನ್ನು ಶವವನ್ನು ಹತ್ತಿರದ ಕಾಡಿನಲ್ಲಿ ಎಸೆದಿದ್ದಾರೆ.
ಮಾರನೇ ದಿನ ಶವ ಪತ್ತೆಯಾಗುತ್ತಿದ್ದಂತೆ ಪೊಲೀಸರು ತೀವ್ರವಾಗಿ ತನಿಖೆಯನ್ನು ಕೈಗೊಂಡಿದ್ದಾರೆ. ಪಂಕಜ್‌ನ ತಲೆಯಲ್ಲಿ ಆಳವಾದ ಗಾಯ ಕಂಡು ಬಂದಿದೆ. ಕೂಡಲೇ ಶವವನ್ನು ಪೋಸ್ಟ್‌ಮಾರ್ಟ್‌ಗೆ ಕಳುಹಿಸಿದ್ದಾರೆ. ಮೃತ ಪಂಕಜ್ ಮದುವೆಯ ಕೆಲಸಕ್ಕಾಗಿ ಹೋಗಿದ್ದ. ಆದರೆ, ವಾಪಸ್ ಬಂದಿರಲಿಲ್ಲ ಎಂದು ಆತನ ತಾಯಿ ಪೊಲೀಸರಿಗೆ ತಿಳಿಸಿದ್ದಾಳೆ.
ಮದುವೆ ನಡೆದ ಗೆಸ್ಟ್‌ಹೌಸ್‌ನಲ್ಲಿ ಪಂಕಜ್ ವೇಟರ್ ಆಗಿ ಕೆಲಸ ಮಾಡುತ್ತಿದ್ದ. ಮದುವೆ ನಡೆದ ಸ್ಥಳದ ವ್ಯವಹಾರದಲ್ಲಿ ಪಾಟ್ನರ್ನರ್ ಆಗಿರುವ ಗುತ್ತಿಗೆದಾರ ಮನೋಜ್ ಗುಪ್ತಾ ಮೂಲಕ ಆತ ಕೆಲಸಕ್ಕೆ ಸೇರಿಕೊಂಡಿದ್ದ. ವಿಶೇಷ ಎಂದರೆ, ಕೆಲಸ ನೀಡಿದ ಮನೋಜ್ ಕೂಡ ಪಂಕಜ್ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ್ದಾನೆ ಎಂದು ಪೊಲೀಸ್ ತನಿಖೆ ವೇಳೆ ಗೊತ್ತಾಗಿದೆ. ಮನೋಜ್ ಗುಪ್ತಾ ಮತ್ತು ಅಮಿತ್ ಕುಮಾರ್ ಸೇರಿ ಹಲವರನ್ನು ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
ಈ ಸುದ್ದಿಯನ್ನೂ ಓದಿ: ಶಾಲೆಯಲ್ಲಿ ಕುಸಿದು ಬಿದ್ದು 4ನೇ ತರಗತಿ ಬಾಲಕಿ ಸಾವು, ಶಿಕ್ಷಕರು ಹೊಡೆದು ಕೊಂದರು ಎಂದು ಅರೋಪಿಸಿದ ಪೋಷಕರು