ಲಕ್ನೋ: ಗಂಡ ಹೆಂಡತಿ ಸಂಬಂಧವೆಂದರೆ ಹಾಲು ಜೇನಿನಂತಿರಬೇಕು ಎನ್ನುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಪತಿಯೇ ಪತ್ನಿಯನ್ನು ಕೊಲೆ ಮಾಡುವುದು, ಪತ್ನಿಯೇ ಪತಿಯನ್ನು ಕೊಲೆ ಮಾಡುವಂತಹ ಹಲವಾರು ಘಟನೆಗಳ ಬಗ್ಗೆ ನಾವು ಕೇಳುತ್ತಿದ್ದೇವೆ. ಅದೇ ರೀತಿಯಲ್ಲಿ ಇದೀಗ ಉತ್ತರ ಪ್ರದೇಶದಲ್ಲಿ ಮಹಿಳೆಯೊಬ್ಬಳು ಮಲಗಿದ್ದ ಪತಿಯನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ನಡೆದಿದೆ. ಈ ವಿಚಾರ ಎಲ್ಲೆಡೆ ವೈರಲ್ (Viral News)ಆಗಿದೆ.
ಉತ್ತರ ಪ್ರದೇಶದ ಪಿಲಿಭಿತ್ ಎಂಬಲ್ಲಿ ಈ ಘಟನೆ ನಡೆದಿದೆ. ದುಲಾರಾವೊ ದೇವಿ ಹೆಸರಿನ ಮಹಿಳೆ ತನ್ನ 55 ವರ್ಷದ ಪತಿ ರಾಮ್ ಪೌಲ್ ಅನ್ನು ಕೊಲೆ ಮಾಡಿದ್ದಾಳೆ. ಭಾನುವಾರಂದು ಪತಿ ಮನೆಯ ಮಂಚದ ಮೇಲೆ ಮಲಗಿದ್ದಾಗ ಆತನನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಾಳೆ. ನಂತರ ಆತನ ದೇಹವನ್ನು ಐದು ಪೀಸುಗಳಾಗಿ ತುಂಡರಿಸಿ ಮನೆಯ ಹತ್ತಿರದಲ್ಲಿದ್ದ ನೀರಿನ ಕಾಲುವೆಯಲ್ಲಿ ಎಸೆದಿದ್ದಾಳೆ.
ಇದನ್ನೂ ಓದಿ: Viral Video: ಇದು ಕದ್ದುಮುಚ್ಚಿ ಮುತ್ತು ಕೊಡುವ ಮುದ್ದಾದ ನಾಯಿ! ನಿಮ್ಮ ಮನೆ ನಾಯಿನೂ ಹೀಗೇನಾ?
ದುಲಾರಾವೊ ದೇವಿ ಪತಿ ಕಾಣೆಯಾಗಿದ್ದಾನೆ ಎಂದು ಮಗನ ಬಳಿ ಹೇಳಿದ್ದಾಳೆ. ಈ ಬಗ್ಗೆ ಮಗ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಪೊಲೀಸರು ದುಲಾರಾವೊ ಅನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದಾರೆ. ಆ ವೇಳೆ ಆಕೆ ತಾನು ಕೊಲೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾಳೆ. ಶುಕ್ರವಾರದಂದು ಆಕೆಯನ್ನು ಪೊಲೀಸರು ಬಂಧಿಸಿದ್ದಾರೆ.
ದುಲಾರಾವೊ ದೇವಿ ಪತಿಯ ದೇಹದ ತುಂಡುಗಳನ್ನು ಎಲ್ಲೆಲ್ಲಿ ಎಸೆದಿದ್ದಾಳೆ ಎನ್ನುವ ಮಾಹಿತಿಯನ್ನು ಪಡೆದುಕೊಳ್ಳಲಾಗಿದೆ. ಪೊಲೀಸರು ದೇಹದ ಹುಡುಕಾಟ ನಡೆಸುತ್ತಿದ್ದಾರೆ. ಆಕೆ ಹೇಳಿದ ಸ್ಥಳದಲ್ಲಿ ರಕ್ತವಾಗಿದ್ದ ಬಟ್ಟೆ ಮತ್ತು ಬೆಡ್‌ಶೀಟ್ ಸಿಕ್ಕಿರುವುದಾಗಿ ತಿಳಿಸಲಾಗಿದೆ. ಕೊಲೆಗೆ ಕಾರಣ ಏನು ಎನ್ನುವುದು ಇನ್ನೂ ತಿಳಿದುಬಂದಿಲ್ಲ. ಪೊಲೀಸರು ಈ ಬಗ್ಗೆ ಹೆಚ್ಚಿನ ತನಿಖೆ ನಡೆಸುವುದಾಗಿ ಮಾಹಿತಿ ನೀಡಿದ್ದಾರೆ.