ಬೆಂಗಳೂರು: ಆನ್‌ಲೈನ್‌ನಲ್ಲಿ ಶಾಪಿಂಗ್ ಮಾಡುವುದು ಅತ್ಯಂತ ಸುಲಭ. ಗ್ರಾಹಕರು ಆನ್‌ಲೈನ್‌ನಲ್ಲಿ ಮೋಸ ಹೋಗಬಾರದು ಎಂಬ ಉದ್ದೇಶಕ್ಕೆ ಇ ಕಾಮರ್ಸ್ ಕಂಪನಿಗಳು, ಬ್ಯಾಂಕ್‌ಗಳು ಹಾಗೂ ಆರ್‌ಬಿಐ ಅನೇಕ ಕ್ರಮಗಳನ್ನು ಕೈಗೊಳ್ಳುತ್ತಲೇ ಇರುತ್ತವೆ. ಆದರೆ ಈವುಗಳ ಕುರಿತು ಜಾಗೃತಿ ಮೂಡಿಸಿಕೊಳ್ಳದೆ ವಂಚನೆಗೆ ಒಳಗಾಗುವ ಜನರು ಇದ್ದಾರೆ. ಇಂತಹದ್ದೇ ಒಂದು ಪ್ರಕರಣದಲ್ಲಿ, ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ಲಿಪ್‌ಸ್ಟಿಕ್ ಖರೀದಿಸಿದ 25 ವರ್ಷದ ಮಹಿಳೆ ಸೈಬರ್ ಕ್ರಿಮಿನಲ್‌ಗಳಿಂದ ₹3.3 ಲಕ್ಷ ವಂಚನೆ ನಡೆದಿದೆ.
ಹೆಬ್ಬಾಳದಲ್ಲಿ ವಾಸಿಸುತ್ತಿರುವ, ಖಾಸಗಿ ಕಂಪನಿ ಉದ್ಯೋಗಿ ಮಹಿಳೆ ಮೋಸ ಹೋದವರು. ಏಪ್ರಿಲ್ 20 ರಂದು ಲಿಪ್‌ಸ್ಟಿಕ್ ಖರೀದಿಸಿದ್ದರು. ಅದರಲ್ಲಿ ಏನೂ ಮೋಸ ಆಗಿರಲಿಲ್ಲ. ಆದರೆ ಲಿಪ್‌ಸ್ಟಿಕ್ ಖರೀದಿ ನಂತರ ಆಕೆಗೆ ಎರಡು ಅಪರಿಚಿತ ಸಂಖ್ಯೆಗಳಿಂದ ಫೋನ್ ಕರೆಗಳು ಬಂದವು. ಕರೆ ಮಾಡಿದವರು ಇ-ಕಾಮರ್ಸ್ ಸಂಸ್ಥೆಯ ಪ್ರತಿನಿಧಿಗಳು ಎಂದು ಹೇಳಿಕೊಂಡು, ಅಗ್ಗದ ಬೆಲೆಗೆ ಲ್ಯಾಪ್‌ಟಾಪ್ ಮತ್ತು ಐಫೋನ್ ಖರೀದಿಸಲು ಆಕೆಗೆ ಕೇಳಿದರು. ಇತ್ತೀಚೆಗೆ ಲಿಪ್‌ಸ್ಟಿಕ್ ಖರೀದಿಸಿದ್ದರಿಂದ ಇದನ್ನು ನಿಮಗೆ ಕಮ್ಮಿ ಬೆಲೆಗೆ ಸಿಗುತ್ತದೆ ಎಂದು ಹೇಳಿದ್ದರು.
ಇದನ್ನೂ ಓದಿ | Auditor Arrest: ₹10 ಕೋಟಿಗೂ ಹೆಚ್ಚು ತೆರಿಗೆ ಹಣ ವಂಚಿಸಿದ್ದ ಅಡಿಟರ್ ಬಂಧನ
ಇದನ್ನು ನಂಬಿದ ಮಹಿಳೆಯಿಂದ ಅವರು ಲ್ಯಾಪ್‌ಟಾಪ್ ಖರೀದಿಸಲು ಆಸಕ್ತಿ ತೋರಿದರು. ಕೂಡಲೇ ಆಕೆಯ ಹತ್ತಿರದಿಂದ ಹಣವನ್ನು ಕದಿಯಲು ಖದೀಮರು ಬಲೆ ಬೀಸಿದರು. ತಕ್ಷಣ ಆಕೆ ಅವರನ್ನು ನಂಬಿ ₹3,34,958 ಟ್ರಾನ್ಸ್‌ಫರ್ ಮಾಡಿದ್ದಾರೆ. ತನಗೆ ಇಂತಹದ್ದೊಂದು ಆಫರ್ ಬಂದಿದೆ ಎಂದು ಸಂತೋಷದಿಂದ ಸ್ನೇಃಇತರಿಗೆ ವಿಷಯ ತಿಳಿಸಿದ್ದಾರೆ. ಆಗಲೇ, ಇದು ವಂಚನೆ ಎಂದು ತಿಳಿದುಬಂದಿದೆ.
ಈ ಕುರಿತುಮೇ 7 ರಂದು ಉತ್ತರ ಸಿಇಎನ್ ಅಪರಾಧ ಪೊಲೀಸರಿಗೆ ದೂರು ನೀಡಿದ್ದಾರೆ. ಮೊಬೈಲ್ ಸಂಖ್ಯೆ ಮತ್ತು ಬ್ಯಾಂಕ್ ಖಾತೆ ವಿವರಗಳ ಸಹಾಯದಿಂದ ಆರೋಪಿಗಳನ್ನು ಪೊಲೀಸರು ಹುಡುಕಾಡುತ್ತಾ ಇದ್ದಾರೆ.