Site icon Vistara News

Video| ಶ್ರದ್ಧಾ ಹತ್ಯೆ ಮಾದರಿಯಲ್ಲೇ ನಡೆದ ಮರ್ಡರ್​​; ಪತಿಯನ್ನು ಕೊಂದು, 22 ಪೀಸ್​​ಗಳಾಗಿ ಕತ್ತರಿಸಿ ಫ್ರಿಜ್​​ನಲ್ಲಿಟ್ಟ ಮಹಿಳೆ!

Woman Murdered her Husband And Chopped body in Delhi

ನವ ದೆಹಲಿ: ಪ್ರೀತಿಸುತ್ತೇನೆ ಎಂದು ಜತೆಗಿದ್ದ ಲಿವ್​ ಇನ್​ ಪಾರ್ಟ್ನರ್​​ ಕೈಯಲ್ಲಿ ಹತ್ಯೆಗೀಡಾಗಿ, 35 ತುಂಡುಗಳಾಗಿ ಹೋದ ಶ್ರದ್ಧಾ ವಾಳ್ಕರ್​ ಕೇಸ್​​​ ಇಡೀ ದೇಶಕ್ಕೆ ಶಾಕ್​ ನೀಡಿದೆ. ಅದರ ತನಿಖೆಯಿನ್ನೂ ನಡೆಯುತ್ತಿದೆ. ಹೀಗಿರುವಾಗ ಇಂಥದ್ದೇ ಮಾದರಿಯಲ್ಲಿ ನಡೆದ ಇನ್ನೊಂದು ಕೊಲೆ ಕೇಸ್​ ಬೆಳಕಿಗೆ ಬಂದಿದೆ. ಅದೂ ಕೂಡ ರಾಷ್ಟ್ರರಾಜಧಾನಿ ದೆಹಲಿಯಲ್ಲೇ ನಡೆದ ಹತ್ಯೆ. ಇಲ್ಲಿ ಮಹಿಳೆ ತನ್ನ ಪತಿಯನ್ನು ಕೊಲೆ ಮಾಡಿ, 22 ತುಂಡುಗಳಾಗಿ ಕತ್ತರಿಸಿ ಬಿಸಾಕಿದ್ದಾಳೆ.

ನವದೆಹಲಿಯ ಪಾಂಡವಪುರದಲ್ಲಿ ಮಹಿಳೆ ತನ್ನ ಮಗನೊಂದಿಗೆ ಸೇರಿ ಪತಿಯನ್ನು ಹತ್ಯೆಗೈದು ಪೀಸ್​ಪೀಸ್​ ಮಾಡಿದ್ದಾಳೆ. ನಂತರ ಆಕೆಯೂ ಕೂಡ ಆ ದೇಹದ ತುಂಡುಗಳನ್ನು ಫ್ರಿಜ್​​ನಲ್ಲಿ ಇಟ್ಟಿದ್ದಳು. ಬಳಿಕ ಇಬ್ಬರೂ ಸೇರಿ ಪಾಂಡವಪುರದ ರಾಮಲೀಲಾ ಮೈದಾನದ ಸಮೀಪದ ಮತ್ತು ಪೂರ್ವ ದೆಹಲಿಯ ವಿವಿಧ ಭಾಗಗಳಲ್ಲಿ ಶವದ ತುಂಡುಗಳನ್ನು ಹೂತುಹಾಕಿದ್ದಾರೆ.

ಹತ್ಯೆಯಾದವನ ಹೆಸರು ಅಂಜನ್​ದಾಸ್​. ಕೊಲೆ ಮಾಡಿದ ಮಹಿಳೆ ಹೆಸರು ಪೂನಂ ಮತ್ತು ಸಹಾಯ ಮಾಡಿದ ಮಗನ ಹೆಸರು ದೀಪಕ್​ ದಾಸ್​. ಇದೀಗ ಅಮ್ಮ-ಮಗ ಇಬ್ಬರೂ ಅರೆಸ್ಟ್​ ಆಗಿದ್ದಾರೆ. ತಾನು ಪತಿಯ ಹತ್ಯೆಯನ್ನು ಏಕೆ ಮತ್ತು ಹೇಗೆ ಮಾಡಿದೆ ಎಂಬುದನ್ನು ಪೂನಂ ಪೊಲೀಸರ ಎದುರು ಹೇಳಿಕೊಂಡಿದ್ದಾಳೆ. ‘ನನ್ನ ಪತಿ ಅಂಜನ್​ದಾಸ್​ಗೆ ಅನೈತಿಕ ಸಂಬಂಧ ಇತ್ತು. ಆತ ಕುಡಿದು ಬಂದು ಇಲ್ಲಿ ನಮಗೆ ಹಿಂಸೆ ಮಾಡುತ್ತಿದ್ದ, ಹಾಗಾಗಿಯೇ ಕೊಂದೆವು’ ಎಂದು ಪೂನಂ ತಿಳಿಸಿದ್ದಾಳೆ. ‘ಮೊದಲು ನಾನು ಮತ್ತು ನನ್ನ ಮಗ ದೀಪಕ್​ ಸೇರಿ ಅಂಜನ್​ ದಾಸ್​ಗೆ ನಿದ್ದೆ ಮಾತ್ರೆ ಕೊಟ್ಟೆವು. ಆತ ನಿದ್ದೆ ಮಾಡಿದಾಗ ಕೊಂದು, ದೇಹವನ್ನು ತುಂಡರಿಸಿದ್ದೇವೆ. ಬಳಿಕ ಅದನ್ನು ಫ್ರಿಜ್​​ನಲ್ಲಿ ಶೇಖರಿಸಿಟ್ಟಿದ್ದೆವು. ದಿನವೂ ಒಂದೊಂದೇ ತುಂಡುಗಳನ್ನು ತೆಗೆದುಕೊಂಡು ಹೋಗಿ ವಿವಿಧ ಕಡೆಗಳಲ್ಲಿ ಹೂಳುತ್ತಿದ್ದೆವು’ ಎಂದು ಪೂನಂ ಹೇಳಿಕೆ ನೀಡಿದ್ದಾರೆ.

ಶವದ ತುಂಡುಗಳನ್ನು ದಿನವೂ ಒಂದೊಂದು ಪ್ರದೇಶಗಳಲ್ಲಿ ಹೂಳುತ್ತಿದ್ದ ಅಮ್ಮ-ಮಗ ಒಂದು ದಿನ ಪಾಂಡವನಗರದ ಸೈಬರ್​ ಪೊಲೀಸ್ ಠಾಣೆಯ ಹಿಂಭಾಗದಲ್ಲಿರುವ ದೊಡ್ಡ ಮೈದಾನಕ್ಕೆ ಹೋಗಿದ್ದಾರೆ. ಅಲ್ಲಿಯೇ ಇದ್ದ ಸಿಸಿಟಿವಿ ಕ್ಯಾಮರಾದಲ್ಲಿ ಈ ದೃಶ್ಯ ಸೆರೆಯಾಗಿದೆ. ಮೃತದೇಹದ ಒಂದು ಭಾಗ ಇದ್ದ ದೊಡ್ಡದಾದ ಚೀಲವನ್ನು ಹೊತ್ತು ಮಗ ಮುನ್ನಡೆಯುತ್ತಿದ್ದರೆ, ತಾಯಿ ಅವನ ಹಿಂದೆ ಹೋಗುತ್ತಿರುವುದನ್ನು ವಿಡಿಯೊದಲ್ಲಿ ನೋಡಬಹುದು. ಈ ಸಿಸಿಟಿವಿ ದೃಶ್ಯದ ಆಧಾರದ ಮೇಲೆ ಪೊಲೀಸರು ತನಿಖೆ ನಡೆಸಿದಾಗ ಹತ್ಯೆ ವಿಷಯ ಬೆಳಕಿಗೆ ಬಂದಿದೆ.

ಶ್ರದ್ಧಾ ಕೂಡ ಹೀಗೆ ಹತ್ಯೆಯಾಗಿದ್ದಳು. ಆಕೆಯ ಲಿವ್​ ಇನ್​ ಪಾರ್ಟ್ನರ್​ ಅಫ್ತಾಬ್​ ಪೂನಾವಾಲಾ ಸದ್ಯ ಪೊಲೀಸರ ವಶದಲ್ಲಿದ್ದಾನೆ. ಈತನ ಕೈಯಲ್ಲಿ ತುಂಡಾದ ಶ್ರದ್ಧಾಳ ದೇಹದ ಭಾಗಗಳಿಗಾಗಿ ದೆಹಲಿಯ ಮೆಹ್ರೌಲಿ ಅರಣ್ಯದಲ್ಲಿ ಪೊಲೀಸರು ಸಿಕ್ಕಾಪಟೆ ಹುಡುಕಾಟ ನಡೆಸಿದ್ದರು. ಅಲ್ಲಿ ಸಿಕ್ಕಿರುವ ಭಾಗಗಳನ್ನೆಲ್ಲ ಪರಿಶೀಲನೆಗೆ ಕಳಿಸಲಾಗಿದೆ.

ಇದನ್ನೂ ಓದಿ: Shraddha Murder Case | ಶ್ರದ್ಧಾ ವಾಳ್ಕರ್​ ಹತ್ಯೆ ಕೇಸ್​​ ಸಿಬಿಐಗೆ ವರ್ಗಾಯಿಸಲು ಸಾಧ್ಯವಿಲ್ಲ ಎಂದ ದೆಹಲಿ ಹೈಕೋರ್ಟ್​

Exit mobile version