ಭಾರತೀಯ ರೈಲ್ವೆ ತನ್ನ ಚಾಲಕರು ಮತ್ತು ಇತರ ಸಿಬ್ಬಂದಿಗಳಿಗಾಗಿ ಕೆಲವು ಸುರಕ್ಷತಾ ಚಿಹ್ನೆಗಳನ್ನು ಹೊಂದಿದ ಫಲಕಗಳನ್ನು ವಿನ್ಯಾಸಗೊಳಿಸಿದೆ. ರೈಲ್ವೆ ಹಳಿಯ ಪಕ್ಕದಲ್ಲಿ ಮತ್ತೆಮತ್ತೆ ಗೋಚರಿಸುವ ಈ ಫಲಕಗಳು ಏನು ಹೇಳುತ್ತವೆ ಎಂಬುದು ಸಾಮಾನ್ಯರಿಗೆ ಅರ್ಥವಾಗದಿರಬಹುದು. ಅಂಥ ಕೆಲವು ಫಲಕಗಳ ಬಗ್ಗೆ ಕೆಲವು ಮಾಹಿತಿ ಇಲ್ಲಿದೆ.
ಹಳದಿ ಬಣ್ಣದ ಹಿನ್ನೆಲೆಯಲ್ಲಿ ಕಪ್ಪು ಅಕ್ಷರಗಳಲ್ಲಿ ಬರೆಯಲಾಗುವ W/L ಮತ್ತು C/Fa ಫಲಕಗಳು ಹಳಿಯ ಪಕ್ಕದಲ್ಲಿ ಉದ್ದಕ್ಕೂ ಕಂಡುಬರುತ್ತವೆ. ಇದರರ್ಥ ಸಿಳ್ಳೆ ಅಗತ್ಯವಿದೆ ಎಂದು. ಅಂದರೆ, ರೈಲು ಬರುತ್ತಿರುವ ಸೂಚನೆ ಮುಂದಿನ ಕ್ರಾಸಿಂಗ್‌ಗೆ ರವಾನೆಯಾಗಬೇಕಾದ ನಿಟ್ಟಿನಲ್ಲಿ ಸಿಳ್ಳೆಯ ಶಬ್ದ ಮಾಡುವ ಅಗತ್ಯವಿದೆ ಎಂದು ಲೊಕೊ ಪೈಲಟ್‌ಗಳಿಗೆ ನೀಡುವ ಪ್ರಮುಖ ಸೂಚನೆ ಇದಾಗಿದೆ. ಇದನ್ನು ಸಾಮಾನ್ಯವಾಗಿ ರೈಲ್ವೆ ಕ್ರಾಸಿಂಗ್‌ನಿಂದ ಕನಿಷ್ಟ 250 ಮೀ. ದೂರದಲ್ಲಿ ಕಾಣಬಹುದು.
W/L ಎನ್ನುವ ಫಲಕ ಇಂಗ್ಲಿಷ್ ನಲ್ಲಿದ್ದರೆ, C/Fa ಎನ್ನುವುದನ್ನು ಹಿಂದಿಯಲ್ಲಿ ಕಾಣಬಹುದು.
ಹಾಗೆಯೇ, W/B ಎನ್ನುವುದು ಮತ್ತೊಂದು ಪ್ರಮುಖವಾದ ಫಲಕ. ಇದರರ್ಥ ಮುಂದೆ ಸೇತುವೆಯಿದೆ/ ಸಿಳ್ಳೆ ಅಗತ್ಯವಿದೆ. ಇದಲ್ಲದೆ, T/P ಅಥವಾ T/G ಫಲಕಗಳೂ ಅಲ್ಲಲ್ಲಿ ಕಾಣಸಿಗುತ್ತವೆ. ಇದರರ್ಥ ಯಾವುದೋ ಕೊನೆ ಸಮೀಪಿಸುತ್ತಿದೆ, ಹಾಗಾಗಿ ರೈಲಿನ ವೇಗ ಕಡಿಮೆಯಾಗಬೇಕು ಎಂದು. ಇಂಥ ಹಲವಾರು ಸಂಕೇತಗಳನ್ನು ಹೊಂದಿರುವ ಫಲಕಗಳು ಹಳಿಯ ಉದ್ದಕ್ಕೂ ಕಾಣಸಿಕ್ಕು, ಚಾಲಕರಿಗೆ ಪ್ರಮುಖ ಮಾಹಿತಿ ನೀಡುತ್ತವೆ. ಈ ಮೂಲಕ ಅನಾಹುತಗಳನ್ನು ತಪ್ಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.
ಇದನ್ನೂ ಓದಿ: ನಿಮಗಿದು ಗೊತ್ತೆ? ವಿಮಾನದಲ್ಲಿ ಸುರಕ್ಷತೆಗೆ ಪ್ಯಾರಾಚೂಟ್ ಬಳಕೆಯಿಲ್ಲವೇಕೆ?