Site icon Vistara News

ʼವಿವಾದದ ಚಕ್ರತೀರ್ಥʼದಲ್ಲಿ ಪಠ್ಯಪುಸ್ತಕ : ಹೊಸ ಪಠ್ಯವನ್ನು ತಡೆಹಿಡಿಯಲು ಹಂಪನಾ ಆಗ್ರಹ

hampana

ಬೆಂಗಳೂರು: ಪಠ್ಯಪುಸ್ತಕ ವಿವಾದದ ಕುರಿತು ಇದೀಗ ಹಿರಿಯ ಸಂಶೋಧಕ ಹಾಗೂ ಸಾಹಿತಿ ಪ್ರೊ. ಹಂ. ಪ. ನಾಗರಾಜಯ್ಯ ಖಾರವಾಗಿಯೇ ಪ್ರತಿಕ್ರಿಯಿಸಿದ್ದು, ಇಡೀ ಪಠ್ಯಪುಸ್ತಕ ಪರಿಷ್ಕರಣೆ ವಿಚಾರ ʼವಿವಾದದ ಚಕ್ರತೀರ್ಥದಲ್ಲಿ ಮುಳುಗಿದೆʼ ಎಂದು ಟೀಕಿಸಿದ್ದಾರೆ. ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯ ಅಧ್ಯಕ್ಷ ರೋಹಿತ್‌ ಚಕ್ರತೀರ್ಥ ಅವರನ್ನೂ ಸೇರಿಸಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ ಹಂಪನಾ. ಶಾಲೆಗಳು ಆರಂಭವಾಗಿವೆ. ಆದರೆ ಪಠ್ಯಪುಸ್ತಕ ವಿವಾದದ ಚಕ್ರತೀರ್ಥದಲ್ಲಿ ಒದ್ದಾಡುತ್ತ ಸರ್ಕಾರವನ್ನು ಪೇಚಿಗೆ ಸಿಲುಕಿಸಿದೆ. ವಿದ್ಯಾರ್ಥಿಗಳಲ್ಲಿ, ಪೋಷಕರಲ್ಲಿ ತಳಮಳವಾಗಿದೆ. ವ್ಯಕ್ತಿಗಳನ್ನು ಅನಗತ್ಯವಾಗಿ ನಿಂದಿಸುವ ಅಪಾಯಕಾರಿ ಪ್ರವೃತ್ತಿ ಹಬ್ಬುತ್ತಿದೆ. ಕುವೆಂಪು ಕುರಿತು ಅವಹೇಳನಕಾರಿ ಬರಹಗಳು ಹರಿದಾಡುತ್ತಿವೆ. ದಿನದಿಂದ ದಿನಕ್ಕೆ ಪರ ವಿರೋಧ ಚರ್ಚೆಗಳು ತೂಕ ತಪ್ಪಿ ಬಿಸಿ ಏರುತ್ತಿವೆ ಎಂದಿದ್ದಾರೆ.

ಇದನ್ನೂ ಓದಿ | ಪಠ್ಯಪುಸ್ತಕ ಕುರಿತು ಪ್ರಶ್ನಿಸಲು ಸಿದ್ದರಾಮಯ್ಯ ಅವರಿಗೆ ನೈತಿಕತೆ ಇಲ್ಲ: ಸಚಿವ ನಾಗೇಶ್

ಸರ್ಕಾರದ ತಟಸ್ಥಧೋರಣೆ ಸರಿಯಲ್ಲ ಎಂದಿರುವ ಹಂಪನಾ, ಸರ್ಕಾರ ಕೂಡಲೆ ಕಾರ್ಯಪ್ರವೃತ್ತವಾಗಬೇಕು. ಭಿನ್ನಾಭಿಪ್ರಾಯಗಳು ಒಂದು ತಾರ್ಕಿಕ ಅಂತ್ಯ ಕಾಣುವವರೆಗೆ ಪಠ್ಯಪುಸ್ತಕ ಸಮಿತಿ ಸಿದ್ಧಪಡಿಸಿರುವ ಹೊಸ ಪಠ್ಯವನ್ನು ತಡೆಹಿಡಿದು, ಹಿಂದಿನ ಪಠ್ಯವನ್ನೇ ಮುಂದುವರಿಸುವಂತೆ ಸುತ್ತೋಲೆಯನ್ನು ತಕ್ಷಣವೇ ಹೊರಡಿಸಬೇಕು. ಕಲುಷಿತ ವಾತಾವರಣವನ್ನು ತಿಳಿಗೊಳಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿದ್ದಾರೆ.

ಇದನ್ನೂ ಓದಿ | ತಿಳಿಗೇಡಿ ಯುವಕನಿಂದ ಪಠ್ಯಪುಸ್ತಕ ಪರಿಷ್ಕರಣೆ ಎಂದ ಸಿದ್ದರಾಮಯ್ಯ

Exit mobile version