Site icon Vistara News

CBSE Result | 10ನೇ ತರಗತಿ ಫಲಿತಾಂಶ ಮತ್ತೆ ಮುಂದಕ್ಕೆ, ಹಾಗಿದ್ರೆ ಯಾವಾಗ ಪ್ರಕಟವಾಗುತ್ತದೆ?

CBSE Exam

ನವ ದೆಹಲಿ: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ಹತ್ತನೇ ತರಗತಿ ಹಾಗೂ 12ನೇ ತರಗತಿಯ ಫಲಿತಾಂಶ ಪ್ರಕಟಿಸುವ ದಿನಾಂಕವನ್ನು (CBSE Result) ಮತ್ತೆ ಮುಂದೂಡಿದೆ. ಫಲಿತಾಂಶ ಈಗಾಗಲೇ ತಡವಾಗಿದೆ. ಕೊನೆಗೆ ಅದನ್ನು ಜುಲೈ ೪ಕ್ಕೆ ಪ್ರಕಟಿಸಲಾಗುವುದು ಎಂದು ಹೇಳಲಾಯಿತು. ಆದರೆ, ಇದೀಗ ಆ ದಿನಾಂಕವನ್ನೂ ಮುಂದೂಡಲಾಗಿದೆ. ಜುಲೈ 13ಕ್ಕೆ 10ನೇ ತರಗತಿಯ ಫಲಿತಾಂಶ ಹಾಗೂ ಜುಲೈ 15ಕ್ಕೆ 12ನೇ ತರಗತಿ ಫಲಿತಾಂಶವನ್ನು ಪ್ರಕಟಿಸುವ ಸಾಧ್ಯತೆ ಇದೆ ಎಂದು ಬೋರ್ಡ್‌ ಮೂಲಗಳು ತಿಳಿಸಿವೆ.

ಏಪ್ರಿಲ್‌ ಹಾಗೂ ಮೇ ತಿಂಗಳಲ್ಲಿ ಸುಮಾರು 21 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಸಿಬಿಎಸ್‌ಇ ಬೋರ್ಡ್‌ನಲ್ಲಿ ಪರೀಕ್ಷೆ ಬರೆದಿದ್ದಾರೆ. 10 ಹಾಗೂ 12ನೇ ತರಗತಿ ಎಂದರೆ ಮುಂದಿನ ಘಟ್ಟಕ್ಕೆ ನಿರ್ಣಾಯಕ ಹಂತ, ಹೀಗಾಗಿ ಇವುಗಳ ಫಲಿತಾಂಶವನ್ನು ಶೀಘ್ರದಲ್ಲಿ ಪ್ರಕಟಿಸಬೇಕಾಗಿತ್ತು. ಉಳಿದ ಬೋರ್ಡ್‌ನಿಂದ ಫಲಿತಾಂಶ ಪ್ರಕಟವಾಗಿದ್ದು, ಸಿಬಿಎಸ್‌ಇ ಬೋರ್ಡ್‌ ಇನ್ನೂ ಪ್ರಕಟಿಸಿಲ್ಲ. ಇದರಿಂದ ಉನ್ನತ ವ್ಯಾಸಂಗದ ಅಪೇಕ್ಷಿತ ವಿದ್ಯಾರ್ಥಿಗಳಿಗೆ ವಿವಿಧ ವಿಶ್ವವಿದ್ಯಾಲಯಕ್ಕೆ ಅರ್ಜಿ ಸಲ್ಲಿಸಲು ತೊಂದರೆ ಉಂಟಾಗುತ್ತಿದೆ. ಫಲಿತಾಂಶ ಪ್ರಕಟವಾಗದೆ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಸಿಬಿಎಸ್‌ಸಿ ವಿದ್ಯಾರ್ಥಿಗಳು ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ.

ಈ ನಡುವೆ, ಜುಲೈ 4ರಂದು 10ನೇ ತರಗತಿ ಫಲಿತಾಂಶ ಹಾಗೂ ಜುಲೈ 12ರಂದು 12ನೇ ತರಗತಿಯ ಫಲಿತಾಂಶ ಪ್ರಕಟಿಲಾಗುವುದು ಎಂದು ತಿಳಿಸಲಾಗಿತ್ತು. ಆದರೆ, ಈ ದಿನಾಂಕದಂದೂ ಪ್ರಕಟಿಸದೆ ಇರುವುದರಿಂದ ವಿದ್ಯಾರ್ಥಿಗಳಿಗೆ ಮತ್ತೆ ನಿರಾಸೆಯಾಗಿದೆ.

ಈಗ 10ನೇ ತರಗತಿ ಫಲಿತಾಂಶವನ್ನು ಜುಲೈ 13, 12ನೇ ತರಗತಿ ರಿಸಲ್ಟನ್ನು ಜುಲೈ 15ರಂದು ಪ್ರಕಟಿಸಲಾಗುವುದು ಎಂದು ತಿಳಿಸಲಾಗಿದೆ. ಈ ದಿನಾಂಕದಂದು ಸರಿಯಾಗಿ ಫಲಿತಾಂಶ ಪ್ರಕಟವಾಗಲಿ ಎಂದು ವಿದ್ಯಾರ್ಥಿಗಳು ಪ್ರಾರ್ಥಿಸಿದ್ದಾರೆ.

ಉತ್ತೀರ್ಣರಾಗಲು ಎಷ್ಟು ಫಲಿತಾಂಶ ಇರಬೇಕು?

10ನೇ ತರಗತಿಯ ಮೊದಲ ಟರ್ಮ್‌ ಪರೀಕ್ಷೆಯನ್ನು 2021ರ ನವೆಂಬರ್‌-ಡಿಸೆಂಬರ್‌ ತಿಂಗಳಲ್ಲಿ ನಡೆಸಲಾಗಿತ್ತು. ಈ ಪರೀಕ್ಷೆಯಲ್ಲಿ ಕೇವಲ ಒಬ್ಜೆಕ್ಟಿವ್‌ ಪ್ರಶ್ನೆಗಳಿಗೆ ಮಾತ್ರ ಉತ್ತರಿಸಲು ಸೂಚಿಸಲಾಗಿತ್ತು. ಈ ಪರೀಕ್ಷೆ ನಡೆದು ಮೂರು ತಿಂಗಳ ಬಳಿಕ ಸಿಬಿಎಸ್‌ಸಿ ಬೋರ್ಡ್ ಫಲಿತಾಂಶವನ್ನು ಪ್ರಕಟಿಸಿತ್ತು.

ಎರಡನೇ ಟರ್ಮ್‌ ಪರೀಕ್ಷೆಯನ್ನು 2022ರ ಏಪ್ರಿಲ್‌ ಹಾಗೂ ಮೇ ತಿಂಗಳಲ್ಲಿ ನಡೆಸಲಾಗಿತ್ತು. ಈ ಹಂತದ ಪರೀಕ್ಷೆಯಲ್ಲಿ ಕೇವಲ ಆಬ್ಜೆಕ್ಟಿವ್‌ ಪ್ರಶ್ನೆ ಮಾತ್ರವಲ್ಲ, ವಿವರವಾಗಿ ಉತ್ತರಿಸಬೇಕಾದ ಪ್ರಶ್ನೆಗಳನ್ನೂ ಕೇಳಲಾಗಿತ್ತು. ಈ ಎರಡೂ ಟರ್ಮ್‌ ಪರೀಕ್ಷೆಯ ಫಲಿತಾಂಶವನ್ನು ಪರಿಗಣಿಸಿ, ಎರಡೂ ಫಲಿತಾಂಶದ ಆಧಾರದ ಮೇಲೆ ಒಟ್ಟು ಫಲಿತಾಂಶ ಪ್ರಕಟವಾಗಲಿದೆ ಎಂದು ಸಿಬಿಎಸ್‌ಸಿ ಬೋರ್ಡ್‌ ತಿಳಿಸಿದೆ. 10ನೇ ತರಗತಿಯ ಎರಡೂ ಟರ್ಮ್‌ ಪರೀಕೆಯಲ್ಲಿ 33% ರಷ್ಟು ಅಂಕಗಳಿಸಿದರೆ ಮಾತ್ರ ವಿದ್ಯಾರ್ಥಿಗಳು ಪಾಸ್‌ ಆಗುತ್ತಾರೆ.

ನಿಮ್ಮ ಫಲಿತಾಂಶವನ್ನು ನೋಡಲು ಇಲ್ಲಿ ಒತ್ತಿ: cbseresults.nic.in

ಇದನ್ನೂ ಓದಿ: CBSE Result | ಜುಲೈ ತಿಂಗಳಲ್ಲಿ ಸಿಬಿಎಸ್‌ಇ ಫಲಿತಾಂಶ ಪ್ರಕಟ, ವಿದ್ಯಾರ್ಥಿಗಳು ನಿರಾಳ

Exit mobile version