Site icon Vistara News

CET 2024: ಸಿಇಟಿ ಪ್ರವೇಶಪತ್ರ ಸಿಗುತ್ತಿಲ್ಲವೆ? ಮಾನವೀಯ‌ ದೃಷ್ಟಿಯಿಂದ ಈ ಅವಕಾಶ ಕಲ್ಪಿಸಿದೆ ಪರೀಕ್ಷಾ ಪ್ರಾಧಿಕಾರ

CET 2024

CET 2024

ಬೆಂಗಳೂರು: ಬಹುನಿರೀಕ್ಷಿತ ದ್ವಿತೀಯ ಪಿಯುಸಿ ಫಲಿತಾಂಶ (2nd PUC Result) ಪ್ರಕಟವಾಗಿದೆ. ಇನ್ನೇನಿದ್ದರೂ ವಿದ್ಯಾರ್ಥಿಗಳ ಗಮನ ಸಿಇಟಿ (Karnataka CET 2024) ಮೇಲೆ. ವಿವಿಧ ವೃತ್ತಿಪರ ಕೋರ್ಸ್‌ಗಳಿಗೆ ಸೇರಲು, ಪ್ರಮುಖ ಶಿಕ್ಷಣ ಸಂಸ್ಥೆಗಳಲ್ಲಿ ಸೀಟು ಪಡೆಯಲು ಕನಸು ಕಾಣುತ್ತಿರುವ ವಿದ್ಯಾರ್ಥಿಗಳಿಗೆ ಇದೇ ಏಪ್ರಿಲ್‌ 18ರಿಂದ ಸಿಇಟಿ ಪರೀಕ್ಷೆ (CET 2024) ಆರಂಭವಾಗಲಿದೆ. ಈ ಸಂಬಂಧ ಈಗಾಗಲೇ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (Karnataka Examination Authority)ವು ಸಿಇಟಿ ಹಾಲ್‌ ಟಿಕೆಟ್‌ ಬಿಡುಗಡೆ ಮಾಡಿದೆ. ಈ ಮಧ್ಯೆ ಸಿಇಟಿಗೆ ಅರ್ಜಿ ಸಲ್ಲಿಸಿ ಶುಲ್ಕ ಪಾವತಿ ವಿಫಲವಾಗಿರುವ ಹಾಗೂ ಅರ್ಜಿಯಲ್ಲಿ ಸಿಇಟಿ ಪರೀಕ್ಷೆಯನ್ನು ಆಯ್ಕೆ ಮಾಡದಿರುವ ವಿದ್ಯಾರ್ಥಿಗಳಿಗೆ ಹಾಲ್‌ ಟಿಕೆಟ್‌ ಡೌನ್‌ಲೋಡ್‌ ಮಾಡಲು ಸಾಧ್ಯವಾಗದ ಕಾರಣ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಮಾನವೀಯ‌ ದೃಷ್ಟಿಯಿಂದ ಅವಕಾಶವೊಂದನ್ನು ನೀಡಿದೆ. ಈ ಬಗ್ಗೆ ಪ್ರಕಟಣೆ ಹೊರಡಿಸಲಾಗುದೆ.

ಪ್ರಕಟಣೆಯಲ್ಲಿ ಏನಿದೆ?

ಯುಜಿಸಿಇಟಿ 2024ರ ಪರೀಕ್ಷೆಗಳು ಏಪ್ರಿಲ್‌ 18 ಮತ್ತು 19ರಂದು ನಡೆಯಲಿದೆ. ಈ ಸಂಬಂಧ ಪ್ರವೇಶ ಪತ್ರ (ಹಾಲ್‌ ಟಿಕೆಟ್‌) ಬಿಡುಗಡೆ ಮಾಡಲಾಗಿದೆ. ಕೆಲವು ವಿದ್ಯಾರ್ಥಿಗಳು ತಾವು ಅರ್ಜಿ ಸಲ್ಲಿಸುವಾಗ ಸಿಇಟಿ ಪರೀಕ್ಷೆ ಆಯ್ಕೆ ಮಾಡಿಕೊಳ‍್ಳದ ಕಾರಣ ಮತ್ತು ಇನ್ನು ಕೆಲವರಿಗೆ ಶುಲ್ಕ ಪಾವತಿ ವಿಫಲವಾಗಿರುವುದರಿಂದ ಹಾಲ್‌ ಟಿಕೆಟ್‌ ಡೌನ್‌ಲೋಡ್‌ ಮಾಡಲು ಸಾಧ್ಯವಾಗುತ್ತಿಲ್ಲವೆಂದು ತಿಳಿಸಿದ್ದಾರೆ. ಮಾನವೀಯತೆಯ ದೃಷ್ಟಿಯಿಂದ ಅಂತಹ ವಿದ್ಯಾರ್ಥಿಗಳಿಗೆ ಇನ್ನೊಂದು ಅವಕಾಶ ನೀಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ನೀವೇನು ಮಾಡಬೇಕು?

ಇಂತಹ ಸಮಸ್ಯೆ ಎದುರಾಗಿರುವ ಅಭ್ಯರ್ಥಿಗಳು ಈಗೇನು ಮಾಡಬೇಕು ಎನ್ನುವುದನ್ನು ಪರೀಕ್ಷಾ ಪ್ರಾಧಿಕಾರ ವಿವರಿಸಿದೆ.

ಪ್ರಕಟಣೆಗಾಗಿ ಇಲ್ಲಿ ಕ್ಲಿಕ್‌ ಮಾಡಿ.

ಹಾಲ್‌ ಟಿಕೆಟ್‌ ಡೌನ್‌ಲೋಡ್‌ ಮಾಡುವ ವಿಧಾನ

ಕೆಸಿಇಟಿ 2024ರ ವೇಳಾಪಟ್ಟಿ

ಏಪ್ರಿಲ್ 18 – ಬೆಳಿಗ್ಗೆ 10-30ರಿಂದ ಜೀವಶಾಸ್ತ್ರ , ಮಧ್ಯಾಹ್ನ 2.30ರಿಂದ ಗಣಿತ
ಏಪ್ರಿಲ್ 19 – ಬೆಳಿಗ್ಗೆ 10-30ರಿಂದ ಭೌತಶಾಸ್ತ್ರ , ಮಧ್ಯಾಹ್ನ ರಸಾಯನ ಶಾಸ್ತ್ರ
ಏಪ್ರಿಲ್ 20 – ಹೊರನಾಡು ಮತ್ತು ಗಡಿನಾಡ ಕನ್ನಡಿಗರಿಗೆ ಭಾಷಾ ಪರೀಕ್ಷೆ

ಇದನ್ನೂ ಓದಿ: NET Scores: ಪಿಎಚ್‌.ಡಿ ಪ್ರವೇಶಾತಿಗೆ ನೆಟ್‌ ಅಂಕಗಳ ಪರಿಗಣನೆಗೆ ಯುಜಿಸಿ ಅಸ್ತು; ಸಿಇಟಿ ಇನ್ನಿರಲ್ಲ

Exit mobile version