ಬೆಂಗಳೂರು: ದೇಶದಲ್ಲಿ ಶಿಕ್ಷಣದ ಬಗ್ಗೆ ಜಾಗೃತಿ ಮೂಡುತ್ತಿದೆ. ನಗರ, ಗ್ರಾಮಾಂತರ ಪ್ರದೇಶಗಳಲ್ಲಿ ಸಾಕ್ಷರತೆ ಪ್ರಮಾಣ ಹೆಚ್ಚಾಗುತ್ತಿದೆ. ಅದಾಗ್ಯೂ ಉನ್ನತ ಶಿಕ್ಷಣ ಎನ್ನುವುದು ಇನ್ನೂ ಹಲವು ಕಡೆ ಗಗನ ಕುಸುಮ ಎನಿಸಿಕೊಂಡಿದೆ. ಅದರಲ್ಲಿಯೂ ಎಂಜಿನಿಯರಿಂಗ್, ಮೆಡಿಕಲ್, ಎಂಬಿಎಯಂತಹ ಉನ್ನತ ಶಿಕ್ಷಣದಲ್ಲಿದಲ್ಲಿನ ದುಬಾರಿ ಫೀಸ್ ಕಾರಣದಿಂದ ಹಣ ಹೊಂದಿಸಲು ಬಡ ಮತ್ತು ಮಧ್ಯಮ ವರ್ಗದ ಮಂದಿ ಇಂದಿಗೂ ಪರದಾಡುತ್ತಿದ್ದಾರೆ. ಇದೇ ಕಾರಣಕ್ಕೆ ಸರ್ಕಾರಗಳು ಮತ್ತು ಬ್ಯಾಂಕ್‌ನಂತಹ ಕೆಲವು ಖಾಸಗಿ ಸಂಸ್ಥೆಗಳು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ನೀಡಲು ಮುಂದು ಬಂದಿವೆ (Scholarship For Students). ಈ ಪೈಕಿ ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ನೀಡುವ ಸ್ಕಾಲರ್‌ಶಿಪ್ ಪ್ರಮುಖವಾದುದು (IDFC FIRST Bank MBA Scholarship 2024-26). ಬ್ಯಾಂಕ್ ಬಡ ಎಂಬಿಎ ವಿದ್ಯಾರ್ಥಿಗಳಿಗೆ 2 ವರ್ಷಕ್ಕೆ 2 ಲಕ್ಷ ರೂ. ಒದಗಿಸುತ್ತಿದೆ. ಇದಕ್ಕೆ ಯಾರೆಲ್ಲ ಅರ್ಹರು? ಅಪ್ಲೈ ಮಾಡುವುದು ಹೇಗೆ? ಮುಂತಾದ ವಿವರ ಇಲ್ಲಿದೆ (Edu Guide).
ಏನಿದು ಯೋಜನೆ?
ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ಎಂಬಿಎ ಓದುತ್ತಿರುವ ಬಡ ವಿದ್ಯಾರ್ಥಿಗಳಿಗೆ ನೆರವಾಗುವ ಉದ್ದೇಶದಿಂದ ಈ ಯೋಜನೆಯನ್ನು 2018ರಲ್ಲಿ ಪರಿಚಯಿಸಿದೆ. ಈ ಯೋಜನೆ ಮೂಲಕ ಅರ್ಹ ವಿದ್ಯಾರ್ಥಿಗಳ ಶಿಕ್ಷಣಕ್ಕೆ 2 ಲಕ್ಷ ರೂ. ನೆರವು ಒದಗಿಸಲಾಗುತ್ತದೆ. ಇದುವರೆಗೆ 152 ಕಾಲೇಜುಗಳ ಸುಮಾರು 1,154 ವಿದ್ಯಾರ್ಥಿಗಳು ಸ್ಕಾಲರ್‌ಶಿಪ್ ಪಡೆದುಕೊಂಡಿದ್ದಾರೆ.
ಯಾರೆಲ್ಲ ಅರ್ಹರು?
ಈ ಬಾರಿಯ ಸ್ಕಾಲರ್‌ಶಿಪ್‌ನ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಅರ್ಹರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ಅರ್ಜಿ ಸಲ್ಲಿಕೆಗೆ ಕೊನೆಯ ದಿನ ಜುಲೈ 31. ಸ್ಕಾಲರ್‌ಶಿಪ್‌ಗೆ ಈ ಕೆಳಗಿನ ಅರ್ಹತೆ ಅಗತ್ಯ.
- ಭಾರತೀಯ ನಾಗರಿಕರಾಗಿರಬೇಕು.
- ಕುಟುಂಬದ ವಾರ್ಷಿಕ ಆದಾಯ 6 ಲಕ್ಷ ರೂ. ಅಥವಾ ಅದಕ್ಕಿಂತ ಕಡಿಮೆ ಇರಬೇಕು.
- ಪಟ್ಟಿಯಲ್ಲಿ ಇರುವ ಕಾಲೇಜಿನಲ್ಲಿ ಪ್ರವೇಶ ಪಡೆದಿರಬೇಕು (ಕಾಲೇಜಿನ ಪಟ್ಟಿ ಕೆಳಗೆ ನೀಡಲಾಗಿದೆ).
- 2 ವರ್ಷಗಳ ಪೂರ್ಣ ಅವಧಿಯ ಎಂಬಿಎ ಕೋರ್ಸ್ನ ಮೊದಲ ವರ್ಷದಲ್ಲಿರಬೇಕು.
- ಆಧಾರ್ ನಂಬರ್ ಜತೆ ಲಿಂಕ್ ಆಗಿರುವ ಮೊಬೈಲ್ ನಂಬರ್ ಹೊಂದಿರಬೇಕು.
ಅಗತ್ಯ ದಾಖಲೆಗಳು
- ಕಾಲೇಜಿಗೆ ಪ್ರವೇಶ ಪಡೆದಿರುವ ಪುರಾವೆ (ಕಾಲೇಜು ಹೆಸರು, ಅಡ್ಮಿಷನ್ ವರ್ಷ ಇತ್ಯಾದಿ ಮಾಹಿತಿ ಒಳಗೊಂಡಿರಬೇಕು).
- ಶುಲ್ಕ ಪಾವತಿಯ ರಸೀದಿ.
- ಪದವಿ ತರಗತಿಯ ಅಂಕಪಟ್ಟಿ ಮತ್ತು ಉತ್ತೀರ್ಣ ಪ್ರಮಾಣಪತ್ರದ ಪ್ರತಿ.
- ಆದಾಯ ಪ್ರಮಾಣ ಪತ್ರ.
ಅರ್ಜಿ ಸಲ್ಲಿಸುವ ವಿಧಾನ
- ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ (https://www.buddy4study.com/page/idfc-first-bank-mba-scholarship#scholarships)
- ಹೆಸರು ನೋಂದಾಯಿಸಿ.
- ಈಗ IDFC FIRST Bank MBA Scholarship 2024-26 ಪುಟ ಕಾಣಿಸುತ್ತದೆ.
- ವಿವರಗಳನ್ನು ಓದಿ ‘Apply Now’ ಬಟನ್ ಕ್ಲಿಕ್ ಮಾಡಿ.
- ಆಧಾರ್ ನಂಬರ್ನೊಂದಿಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ನಮೂದಿಸಿ.
- ಈಗ ಯುಆರ್ಎಲ್, ಯೂಸರ್ ಐಡಿ, ಮತ್ತು ಪಾಸ್ವರ್ಡ್ ಸ್ವೀಕರಿಸುತ್ತೀರಿ.
- ಅದನ್ನು ಬಳಸಿ ಲಾಗಿನ್ ಆಗಿ ಅಪ್ಲಿಕೇಷನ್ ಫಾರಂ ಭರ್ತಿ ಮಾಡಿ.
- ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ.
- ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಿ ಎಲ್ಲವೂ ಸರಿ ಇದ್ದರೆ Submit ಬಟನ್ ಕ್ಲಿಕ್ ಮಾಡಿ.
ಇದನ್ನೂ ಓದಿ: Edu Guide: ಉನ್ನತ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ಸಿಗಲಿವೆ ಇವೆಲ್ಲ ಸ್ಕಾಲರ್‌ಶಿಪ್