Site icon Vistara News

Education: ಇನ್ನು ಮಗುವಿಗೆ 6 ವರ್ಷ ಆಗದೆ 1ನೇ ತರಗತಿಗೆ ಸೇರಿಸುವಂತಿಲ್ಲ!

life circle education

ಬೆಂಗಳೂರು: ಮಗುವಿಗೆ ಒಂದನೇ ತರಗತಿ ಸೇರ್ಪಡೆಯಾಗಲು ಕನಿಷ್ಠ 6 ವರ್ಷ ವಯಸ್ಸು ಆಗಿರಬೇಕು ಎಂದು ಕೇಂದ್ರ ಶಿಕ್ಷಣ ಸಚಿವಾಲಯದಿಂದ ರಾಜ್ಯಗಳಿಗೆ ಸೂಚನೆ ಕಳುಹಿಸಲಾಗಿದೆ.

ನೂತನ ಶಿಕ್ಷಣ ನೀತಿಯ ಅನ್ವಯ ಮಗುವಿನ ಶಾಲೆ ಸೇರ್ಪಡೆಗೆ ಕನಿಷ್ಠ ವಯೋಮಿತಿ ಜಾರಿಗೊಳಿಸಲಾಗಿದೆ. ಕರ್ನಾಟಕದಲ್ಲಿ 2025-26ರ ಸಾಲಿನಿಂದ ಈ ನಿಯಮ ಜಾರಿಯಾಗಲಿದೆ. ಈ ಹಿಂದೆ 2023-24ರಲ್ಲೇ ಈ ನಿಯಮ ಜಾರಿಗೆ ಚಿಂತಿಸಲಾಗಿತ್ತು. ಆದರೆ ಆ ವೇಳೆ ಪೋಷಕರ (education news) ವಿರೋಧ ಹಿನ್ನೆಲೆಯಲ್ಲಿ ಅದನ್ನು ಮುಂದೂಡಿಕೆ ಮಾಡಲಾಗಿತ್ತು. ಇದೀಗ ಮತ್ತೆ ಕನಿಷ್ಠ ವಯೋಮಿತಿ ಜಾರಿಗೆ ಸೂಚನೆ ನೀಡಲಾಗಿದೆ. ಈ ಹಿಂದೆ 5 ವರ್ಷ 10 ತಿಂಗಳಾಗಿದ್ದರೆ ದಾಖಲು ಮಾಡಿಕೊಳ್ಳಲಾಗುತ್ತಿತ್ತು.

ಇದನ್ನೂ ಓದಿ: Education News : ಶಿಕ್ಷಕರಿಗೆ, ವಿದ್ಯಾರ್ಥಿಗಳಿಗೆ ವೈದ್ಯಕೀಯ ಧನಸಹಾಯ ಪರಿಷ್ಕರಣೆ

Exit mobile version