Site icon Vistara News

JEE Advanced 2024 Result: ಜೆಇಇ ಅಡ್ವಾನ್ಸ್ಡ್‌ ಫಲಿತಾಂಶ ಪ್ರಕಟ; ರಿಸಲ್ಟ್‌ ಹೀಗೆ ಚೆಕ್‌ ಮಾಡಿ

JEE Advanced Result 2024

JEE Advanced Result 2024

ನವದೆಹಲಿ: ಜಂಟಿ ಪ್ರವೇಶ ಪರೀಕ್ಷೆ (ಜೆಇಇ) ಅಡ್ವಾನ್ಸ್ಡ್ (JEE Advanced 2024) ಫಲಿತಾಂಶಗಳನ್ನು ಇಂದು (ಜೂನ್‌ 9) ಪ್ರಕಟಿಸಲಾಗಿದೆ (JEE Advanced 2024 Result). ಐಐಟಿ ದೆಹಲಿ ವಲಯದ ವೇದ್‌ ಲಹೋಟಿ 360 ಅಂಕಗಳಲ್ಲಿ 355 ಅಂಕ ಗಳಿಸುವ ಮೂಲಕ ಟಾಪರ್‌ ಆಗಿ ಹೊರ ಹೊಮ್ಮಿದ್ದಾರೆ. ಐಐಟಿ ಪ್ರವೇಶಕ್ಕಾಗಿ ಒಟ್ಟು 48,248 ಅಭ್ಯರ್ಥಿಗಳು ಅರ್ಹತೆ ಪಡೆದಿದ್ದು, ಅವರಲ್ಲಿ 7,964 ಮಹಿಳೆಯರು.

ಮೇ 26ರಂದು ಪರೀಕ್ಷೆ ನಡೆಸಲಾಗಿತ್ತು. ಎರಡು ಪತ್ರಿಕೆಗಳಲ್ಲಿ ನಡೆದ ಪರೀಕ್ಷೆಯಲ್ಲಿ 1,80,200 ಮಂದಿ ಭಾಗವಹಿಸಿದ್ದರು. ಐಐಟಿ ಬಾಂಬೆ ವಲಯದ ದ್ವಿಜಾ ಧರ್ಮೇಶ್‌ ಕುಮಾರ್‌ ಪಟೇಲ್‌ 360 ಅಂಕಗಳಲ್ಲಿ 322 ಅಂಕ ಪಡೆದು ಮಹಿಳಾ ಅಭ್ಯರ್ಥಿಗಳ ಪೈಕಿ ಅಗ್ರಸ್ಥಾನ ಪಡೆದಿದ್ದಾರೆ. ಅವರಿಗೆ ಅಖಿಲ ಭಾರತದಲ್ಲಿ 7ನೇ ರ‍್ಯಾಂಕ್‌ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಎಷ್ಟು ಮಂದಿಗೆ ಅರ್ಹತೆ?

1,43,637 ಪುರುಷ ಅಭ್ಯರ್ಥಿಗಳು ಪರೀಕ್ಷೆಗೆ ನೋಂದಾಯಿಸಿದ್ದು, ಈ ಪೈಕಿ 1,39,180 ಮಂದಿ ಎರಡೂ ಪರೀಕ್ಷೆಗೆ ಹಾಜರಾಗಿದ್ದರು. ಇದರಲ್ಲಿ 40,284 ಮಂದಿ ಐಐಟಿ ಪ್ರವೇಶಕ್ಕಾಗಿ ಅರ್ಹತೆ ಪಡೆದಿದ್ದಾರೆ. ಇನ್ನು ಹೆಸರು ನೋಂದಾಯಿಸಿದ 42,947 ಮಹಿಳಾ ಅಭ್ಯರ್ಥಿಗಳ ಪೈಕಿ 41,020 ಮಂದಿ ಎರಡು ಪತ್ರಿಕೆಗಳನ್ನು ಎದುರಿಸಿದ್ದಾರೆ. ಅವರ ಪೈಕಿ 7,964 ಮಂದಿ ಐಐಟಿ ಪ್ರವೇಶಕ್ಕೆ ಅರ್ಹತೆ ಪಡೆದುಕೊಂಡಿದ್ದಾರೆ. ಒಟ್ಟಾರೆಯಾಗಿ ಪರೀಕ್ಷೆ ಬರೆದ 1,86,584 ಅಭ್ಯರ್ಥಿಗಳ ಪೈಕಿ 48,248 ಮಂದಿ ಐಐಟಿ ಪ್ರವೇಶಿಸಲು ಅರ್ಹರಾಗಿದ್ದಾರೆ.

ಟಾಪ್‌ ಟೆನ್‌ ಅಭ್ಯರ್ಥಿಗಳು

ವೇದ್ ಲಹೋಟಿ (ಐಐಟಿ ದೆಹಲಿ ವಲಯ), ಆದಿತ್ಯ (ಐಐಟಿ ದೆಹಲಿ ವಲಯ), ಪೊಗಲ್‌ಪಲ್ಲಿ ಸಂದೇಶ್‌ (ಐಐಟಿ ಮದ್ರಾಸ್‌‍ ವಲಯ), ರಿದಮ್‌ ಕೆಡಿಯಾ (ಐಐಟಿ ರೂರ್ಕಿ ವಲಯ), ಪುಟ್ಟಿ ಕುಶಾಲ್‌ ಕುಮಾರ್‌ (ಐಐಟಿ ಮದ್ರಾಸ್‌‍ ವಲಯ), ರಾಜ್‌ದೀಪ್‌ ಮಿಶ್ರಾ (ಐಐಟಿ ಬಾಂಬೆ ವಲಯ), ದ್ವಿಜಾ ಧರ್ಮೇಶ್ ಕುಮಾರ್ ಪಟೇಲ್ (ಐಐಟಿ ಬಾಂಬೆ ವಲಯ), ಕೊಡೂರಿ ತೇಜೇಶ್ವರ್‌ (ಐಐಟಿ ಮದ್ರಾಸ್‌‍ ವಲಯ), ಧ್ರುವಿನ್ ಹೇಮಂತ್ ದೋಷಿ (ಐಐಟಿ ಬಾಂಬೆ ವಲಯ) ಅಲ್ಲದಬೋನ ಎಸ್‌‍ಎಸ್‌‍ಡಿಬಿ ಸಿಧ್ವಿಕ್‌ ಸುಹಾಸ್‌‍ (ಐಐಟಿ ಮದ್ರಾಸ್‌‍ ವಲಯ).

ಫಲಿತಾಂಶವನ್ನು ಪರಿಶೀಲಿಸುವ ವಿಧಾನ

ಜೆಇಇ ಅಡ್ವಾನ್ಸ್ಡ್‌ ಫಲಿತಾಂಶ 2024 ಅನ್ನು ಪರಿಶೀಲಿಸಲು, ಅರ್ಜಿ ಸಂಖ್ಯೆ ಮತ್ತು ಜನ್ಮ ದಿನಾಂಕದ ಅಗತ್ಯ.

ಜೆಇಇ-ಮೇನ್‌‍, ಇದು ದೇಶಾದ್ಯಂತ ಎಂಜಿನಿಯರಿಂಗ್‌ ಕಾಲೇಜುಗಳಿಗೆ ಪ್ರವೇಶ ಪರೀಕ್ಷೆಯಾಗಿದ್ದು, ಜೆಇಇ-ಅಡ್ವಾನ್ಸ್ಡ್‌ ಅರ್ಹತಾ ಪರೀಕ್ಷೆಯಾಗಿದೆ.

ಇದನ್ನೂ ಓದಿ: NEET 2024: ನೀಟ್‌ ಅಕ್ರಮ; 1,500 ವಿದ್ಯಾರ್ಥಿಗಳ ಪತ್ರಿಕೆ ಮರು ಮೌಲ್ಯಮಾಪನಕ್ಕೆ ಸಮಿತಿ ರಚಿಸಿದ ಕೇಂದ್ರ!

Exit mobile version