Site icon Vistara News

NEET PG 2024 Result: ಬಹುನಿರೀಕ್ಷಿತ ನೀಟ್-ಪಿಜಿ ಪರೀಕ್ಷೆಯ ಫಲಿತಾಂಶ ಪ್ರಕಟ; ಹೀಗೆ ಚೆಕ್‌ ಮಾಡಿ

ನವದೆಹಲಿ: ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆದ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಯ (NEET PG 2024) ಫಲಿತಾಂಶ ಪ್ರಕಟಗೊಂಡಿದೆ. ನ್ಯಾಷನಲ್ ಬೋರ್ಡ್ ಆಫ್ ಎಕ್ಸಾಮಿನೇಷನ್ಸ್ ಇನ್ ಮೆಡಿಕಲ್ ಸೈನ್ಸಸ್ (National Board of Examinations in Medical Sciences- NBEMS) ಈ ಬಹುನಿರೀಕ್ಷಿತ ಫಲಿತಾಂಶಗಳನ್ನು ಪ್ರಕಟಿಸಿದೆ. ಪಿಜಿ ವೈದ್ಯಕೀಯ ಪ್ರವೇಶ ಪರೀಕ್ಷೆಗೆ ನೋಂದಾಯಿಸಿದ ಅರ್ಜಿದಾರರು ತಮ್ಮ ಫಲಿತಾಂಶಗಳನ್ನು natboard.edu.inನಲ್ಲಿ ವೀಕ್ಷಿಸಬಹುದು. ಎಲ್ಲ ಅಭ್ಯರ್ಥಿಗಳ ಅಂಕಗಳನ್ನು ಮಂಡಳಿಯು ಪ್ರಕಟಿಸಿದ್ದು,, ಸಮಗ್ರ ಸ್ಕೋರ್ ಕಾರ್ಡ್‌ಗಳನ್ನು ನಂತರ ನೀಡಲಾಗುವುದು ಎಂದು ತಿಳಿಸಿದೆ.

ಸಾಮಾನ್ಯ, ಇಡಬ್ಲ್ಯುಎಸ್‌, ಸಾಮಾನ್ಯ-ಪಿಡಬ್ಲ್ಯುಬಿಡಿ, ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಸೇರಿದಂತೆ ವಿವಿಧ ವಿಭಾಗಗಳ ಅಭ್ಯರ್ಥಿಗಳ ಎಂಡಿ, ಎಂಎಸ್, ಡಿಎನ್‌ಬಿ ಮತ್ತು ಡಿಪ್ಲೊಮಾ ಪ್ರೋಗ್ರಾಂಗಳ ಪ್ರವೇಶ ಪರೀಕ್ಷೆಯ ಫಲಿತಾಂಶಗಳ ಜತೆಗೆ ನೀಟ್ ಪಿಜಿ ಕಟ್-ಆಫ್ ಅಂಕಗಳನ್ನೂ ಎನ್‌ಬಿಇಎಂಎಸ್‌ ಬಿಡುಗಡೆ ಮಾಡಿದೆ.

NEET PG 2024 ಫಲಿತಾಂಶ ಹೀಗೆ ಚೆಕ್‌ ಮಾಡಿ

ನೀಟ್ ಪಿಜಿ 2024 ಪರೀಕ್ಷೆಯನ್ನು ಆಗಸ್ಟ್ 11ರಂದು ದೇಶದ 170 ನಗರಗಳ 416 ಕೇಂದ್ರಗಳಲ್ಲಿ ಎರಡು ಪಾಳಿಗಳಲ್ಲಿ ನಡೆಸಲಾಯಿತು. ಸುಮಾರು 2,28,540 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. 3 ಗಂಟೆ 30 ನಿಮಿಷಗಳ ಅವಧಿಯ ಪರೀಕ್ಷೆಯನ್ನು ಮೂರು ಭಾಗಗಳಾಗಿ ವಿಂಗಡಿಸಲಾಗಿತ್ತು. ಪ್ರತಿಯೊಂದು ವಿಭಾಗಕ್ಕೂ ತನ್ನದೇ ಆದ ಸಮಯದ ಮಿತಿಯನ್ನು ನಿಗದಿಪಡಿಸಲಾಗಿತ್ತು.

ಮುಂದೇನು?

ಸದ್ಯ ಫಲಿತಾಂಶ ಪ್ರಕಟವಾಗಿದ್ದು, ಇನ್ನು ಮುಂದೆ ಸೀಟು ಹಂಚಿಕೆಗೆ ಕೌನ್ಸೆಲಿಂಗ್ ನಡೆಸಲಾಗುತ್ತದೆ. ವೈದ್ಯಕೀಯ ಕೌನ್ಸೆಲಿಂಗ್ ಸಮಿತಿ (Medical Counselling Committee -MCC) ಅಖಿಲ ಭಾರತ ಕೋಟಾ ಸೀಟುಗಳಿಗೆ mcc.nic.in ಮೂಲಕ ಕೌನ್ಸೆಲಿಂಗ್ ನಡೆಸಲಿದ್ದು, ವೇಳಾಪಟ್ಟಿಯನ್ನು ಶೀಘ್ರದಲ್ಲೇ ಪ್ರಕಟಿಸಲಿದೆ. ವಿವಿಧ ರಾಜ್ಯಗಳ ಏಜೆನ್ಸಿಗಳು ರಾಜ್ಯ ಕೋಟಾದ ನೀಟ್ ಪಿಜಿ ಕೌನ್ಸೆಲಿಂಗ್ ನಡೆಸಲಿವೆ.

ಇಬ್ಬರು ಅಥವಾ ಅದಕ್ಕಿಂತ ಹೆಚ್ಚು ಅಭ್ಯರ್ಥಿಗಳು ಒಂದೇ ಸ್ಕೋರ್ ಹೊಂದಿದ್ದರೆ, ಕೆಳಗೆ ಪಟ್ಟಿ ಮಾಡಲಾದ ಟೈಬ್ರೇಕರ್ ಮಾನದಂಡಗಳ ಆಧಾರದ ಮೇಲೆ ರ‍್ಯಾಂಕ್‌ ನೀಡಲಾಗುತ್ತದೆ:

ಇದನ್ನೂ ಓದಿ: NEET UG Row : ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಮುಖ್ಯಸ್ಥರನ್ನು ವಜಾಗೊಳಿಸಿದ ಕೇಂದ್ರ ಸರ್ಕಾರ

Exit mobile version