Site icon Vistara News

NEET Result 2023 : ನೀಟ್‌ ಫಲಿತಾಂಶದ ಬೆನ್ನಲ್ಲೇ ಸಿಹಿ ಸುದ್ದಿ; ರಾಜ್ಯದ ಮೆಡಿಕಲ್‌ ಸೀಟುಗಳ ಸಂಖ್ಯೆ ಹೆಚ್ಚಳ

karnataka medical college neet result 2023

#image_title

ಬೆಂಗಳೂರು: ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಇಎ) ನಡೆಸಿದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯ (ನೀಟ್‌) ಫಲಿತಾಂಶ (NEET Result 2023) ಪ್ರಕಟವಾಗಿದೆ. ಈ ಪರೀಕ್ಷೆಯಲ್ಲಿ ಅರ್ಹತೆ ಪಡೆದ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿಯೊಂದು ಇಲ್ಲಿದೆ.

ಪ್ರಸಕ್ತ ಶೈಕ್ಷಣಿಕ ವರ್ಷದಿಂದ ರಾಜ್ಯ ಸರ್ಕಾರಿ ಕೋಟಾದಡಿ ಲಭ್ಯವಿರುವ ವೈದ್ಯಕೀಯ ಸೀಟುಗಳ ಸಂಖ್ಯೆಯೂ ಏರಿಕೆಯಾಗಿದೆ. ವೈದ್ಯಕೀಯ ಶಿಕ್ಷಣ ಇಲಾಖೆಯು ನೀಡಿರುವ ಮಾಹಿತಿ ಪ್ರಕಾರ ಸರ್ಕಾರಿ ಕೋಟಾದಡಿ ಲಭ್ಯವಿರುವ ಸೀಟುಗಳ ಸಂಖ್ಯೆ 4,735 ರಿಂದ 4,899ಕ್ಕೆ ಏರಿದೆ. ಒಟ್ಟಾರೆ ರಾಜ್ಯದಲ್ಲಿ ಲಭ್ಯವಿರುವ ಒಟ್ಟು ವೈದ್ಯಕೀಯ ಸೀಟುಗಳ ಸಂಖ್ಯೆ 11,320 ಕ್ಕೆ ಏರಿದೆ.

ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲೇ 314 ಸೀಟುಗಳು ದೊರೆಯಲಿವೆ. ಚನ್ನಪಟ್ಟಣದಲ್ಲಿ ಒಂದು ಖಾಸಗಿ ವೈದ್ಯಕೀಯ ಕಾಲೇಜು ಆರಂಭವಾಗುತ್ತಿದ್ದು, ಅಲ್ಲಿ 150 ಸೀಟುಗಳು, ಅಂಬೇಡ್ಕರ್‌ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ 50 ಹಾಗೂ ಕಲಬುರಗಿಯ ಇಎಸ್‌ಐ ವೈದ್ಯಕೀಯ ಕಾಜೇಜಿನಲ್ಲಿ 25 ಸೀಟುಗಳನ್ನು ಹೆಚ್ಚಿಸಲು ಈಗಾಗಲೇ ಅನುಮತಿ ಸಿಕ್ಕಿದೆ ಎಂದು ವೈದ್ಯಕೀಯ ಶಿಕ್ಷಣ ಇಲಾಖೆಯು ಮಾಹಿತಿ ನೀಡಿದೆ.

ಶಿಕ್ಷಣಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ (Click Here) ಕ್ಲಿಕ್‌ ಮಾಡಿ.

ದೇಶದಲ್ಲಿ 8,195 ಸೀಟು ಹೆಚ್ಚಳ

ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ದೇಶಾದ್ಯಂತ 50 ಹೊಸ ವೈದ್ಯಕೀಯ ಕಾಲೇಜುಗಳಿಗೆ ಅನುಮೋದನೆ ನೀಡಲಾಗಿದ್ದು, ಇದರಿಂದಾಗಿ 8,195 ಸೀಟುಗಳು ಸೇರ್ಪಡೆಯಾಗಿವೆ. ಇದರಿಂದಾಗಿ ದೇಶದ ಮೆಡಿಕಲ್‌ ಕಾಲೇಜುಗಳಲ್ಲಿನ ಒಟ್ಟು ಸೀಟುಗಳ ಸಂಖ್ಯೆ 1,07,658ಕ್ಕೆ ಏರಿದಂತಾಗಿದೆ. ಹೊಸದಾಗಿ ಆರಂಭವಾಗಿರುವ ಮೆಡಿಕಲ್‌ ಕಾಲೇಜುಗಳಲ್ಲಿ 30 ಸರ್ಕಾರಿ ಕಾಲೇಜುಗಳಾದರೆ 20 ಖಾಸಗಿ ಕಾಲೇಜುಗಳಾಗಿವೆ. ಇದರಿಂದಾಗಿ ದೇಶದಲ್ಲಿ ಒಟ್ಟಾರೆ ಮೆಡಿಕಲ್‌ ಕಾಲೇಜುಗಳ ಸಂಖ್ಯೆ 702ಕ್ಕೆ ಏರಿದೆ.

ಈ ವರ್ಷ ನಮ್ಮ ರಾಜ್ಯ ಸೇರಿದಂತೆ ತೆಲಂಗಾಣ, ರಾಜಸ್ಥಾನ, ತಮಿಳುನಾಡು, ಒಡಿಶಾ, ನಾಗಲ್ಯಾಂಡ್‌, ಮಹಾರಾಷ್ಟ್ರ, ಅಸ್ಸಾಂ, ಗುಜರಾತ್‌, ಹರಿಯಾಣ, ಜಮ್ಮು ಮತ್ತು ಕಾಶ್ಮೀರ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಮಧ್ಯಪ್ರದೇಶ ರಾಜ್ಯಗಳಲ್ಲಿ ಹೊಸದಾಗಿ ಮೆಡಿಕಲ್‌ ಕಾಲೇಜುಗಳು ಆರಂಭವಾಗಿವೆ.

ಈ ನಡುವೆ ರಾಷ್ಟ್ರೀಯ ವೈದ್ಯಕೀಯ ಆಯೋಗವು (ಎನ್‌ಎಂಸಿ) ನಿಗದಿತ ಗುಣಮಟ್ಟ ಕಾಯ್ದುಕೊಳ್ಳದ 38 ಮೆಡಿಕಲ್‌ ಕಾಲೇಜುಗಳ ಅನುಮೋದನೆಯನ್ನು ಹಿಂದಕ್ಕೆ ಪಡೆದಿದೆ. ಇನ್ನೂ 102 ಮೆಡಿಕಲ್‌ ಕಾಲೇಜುಗಳಿಗೆ ಗುಣಮಟ್ಟ ಕಾಯ್ದುಕೊಳ್ಳುವಂತೆ ನೋಟಿಸ್‌ ಸಹ ನೀಡಲಾಗಿದೆ.

ಇದನ್ನೂ ಓದಿ : NIRF Ranking 2023 : ಮೆಡಿಕಲ್‌ ಕಾಲೇಜುಗಳ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ನಿಮಾನ್ಸ್‌ಗೆ 4 ನೇ ಸ್ಥಾನ; ಟಾಪ್‌ ವೈದ್ಯಕೀಯ ಕಾಲೇಜುಗಳಿವು

ಪರೀಕ್ಷೆ ಬರೆದವರ ಸಂಖ್ಯೆ 5 ವರ್ಷದಲ್ಲೇ ಹೆಚ್ಚು

ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಸಲಾಗುವ ಈ ಪರೀಕ್ಷೆಯನ್ನು ಬರೆದ ವಿದ್ಯಾರ್ಥಿಗಳ ಸಂಖ್ಯೆ ಕಳೆದ ಐದು ವರ್ಷಗಳಲ್ಲಿ ಈ ವರ್ಷವೇ ಹೆಚ್ಚು. ಈ ವರ್ಷ ಒಟ್ಟು 20,38,596 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. 2022 ರಲ್ಲಿ 17,64,571 ವಿದ್ಯಾರ್ಥಿಗಳು, 2021 ರಲ್ಲಿ 15,44,273 ವಿದ್ಯಾರ್ಥಿಗಳು, 2020 ರಲ್ಲಿ 13,66,945 ವಿದ್ಯಾರ್ಥಿಗಳು ಹಾಗೂ 2019ರಲ್ಲಿ 14,10,755 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು ಎಂದು ಎನ್‌ಟಿಎ ತಿಳಿಸಿದೆ.

ಈ ಬಾರಿ ಪರೀಕ್ಷೆ ಬರೆದವರಲ್ಲಿ 11,44,399 ಭಾರತೀಯ ವಿದ್ಯಾರ್ಥಿಗಳು, 521 ವಿದೇಶಿ ವಿದ್ಯಾರ್ಥಿಗಳು ಹಾಗೂ 533 ಎನ್‌ಆರ್‌ಐ ಮತ್ತು 523 ಈಸಿಐ ವಿದ್ಯಾರ್ಥಿಗಳು ಅರ್ಹತೆ ಪಡೆದಿದ್ದಾರೆ. ಈ ಬಾರಿಯ ವಿಶೇಷವೆಂದರೆ ಟಾಪ್‌ 50 ರ‍್ಯಾಂಕಿಂಗ್‌ನಲ್ಲಿ 40 ಬಾಲಕರು ಸ್ಥಾನ ಪಡೆದಿದ್ದರೆ, ಉಳಿದ 10 ಸ್ಥಾನವನ್ನು ಬಾಲಕಿಯರು ಪಡೆದಿದ್ದಾರೆ.

ಇದನ್ನೂ ಓದಿ: NIRF Ranking 2023 : ದೇಶದ ಟಾಪ್‌ 40 ಡೆಂಟಲ್‌ ಕಾಲೇಜುಗಳ ಪೈಕಿ 10 ಕರ್ನಾಟಕದಲ್ಲಿವೆ!

Exit mobile version