NEET Result 2023 mbbs seats increased in karnataka as well as indiaNEET Result 2023 : ನೀಟ್‌ ಫಲಿತಾಂಶದ ಬೆನ್ನಲ್ಲೇ ಸಿಹಿ ಸುದ್ದಿ; ರಾಜ್ಯದ ಮೆಡಿಕಲ್‌ ಸೀಟುಗಳ ಸಂಖ್ಯೆ ಹೆಚ್ಚಳ - Vistara News

ಪ್ರಮುಖ ಸುದ್ದಿ

NEET Result 2023 : ನೀಟ್‌ ಫಲಿತಾಂಶದ ಬೆನ್ನಲ್ಲೇ ಸಿಹಿ ಸುದ್ದಿ; ರಾಜ್ಯದ ಮೆಡಿಕಲ್‌ ಸೀಟುಗಳ ಸಂಖ್ಯೆ ಹೆಚ್ಚಳ

ನೀಟ್‌ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆ (NEET Result 2023). ಈ ಬಾರಿ ರಾಜ್ಯದಲ್ಲಿ ವೈದ್ಯಕೀಯ ಸೀಟುಗಳ ಸಂಖ್ಯೆ ಕೂಡ ಹೆಚ್ಚಾಗಿದೆ. ಈ ಕುರಿತು ಮಾಹಿತಿ ನೀಡುವ ವರದಿ ಇಲ್ಲಿದೆ.

VISTARANEWS.COM


on

karnataka medical college neet result 2023
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಇಎ) ನಡೆಸಿದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯ (ನೀಟ್‌) ಫಲಿತಾಂಶ (NEET Result 2023) ಪ್ರಕಟವಾಗಿದೆ. ಈ ಪರೀಕ್ಷೆಯಲ್ಲಿ ಅರ್ಹತೆ ಪಡೆದ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿಯೊಂದು ಇಲ್ಲಿದೆ.

ಪ್ರಸಕ್ತ ಶೈಕ್ಷಣಿಕ ವರ್ಷದಿಂದ ರಾಜ್ಯ ಸರ್ಕಾರಿ ಕೋಟಾದಡಿ ಲಭ್ಯವಿರುವ ವೈದ್ಯಕೀಯ ಸೀಟುಗಳ ಸಂಖ್ಯೆಯೂ ಏರಿಕೆಯಾಗಿದೆ. ವೈದ್ಯಕೀಯ ಶಿಕ್ಷಣ ಇಲಾಖೆಯು ನೀಡಿರುವ ಮಾಹಿತಿ ಪ್ರಕಾರ ಸರ್ಕಾರಿ ಕೋಟಾದಡಿ ಲಭ್ಯವಿರುವ ಸೀಟುಗಳ ಸಂಖ್ಯೆ 4,735 ರಿಂದ 4,899ಕ್ಕೆ ಏರಿದೆ. ಒಟ್ಟಾರೆ ರಾಜ್ಯದಲ್ಲಿ ಲಭ್ಯವಿರುವ ಒಟ್ಟು ವೈದ್ಯಕೀಯ ಸೀಟುಗಳ ಸಂಖ್ಯೆ 11,320 ಕ್ಕೆ ಏರಿದೆ.

ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲೇ 314 ಸೀಟುಗಳು ದೊರೆಯಲಿವೆ. ಚನ್ನಪಟ್ಟಣದಲ್ಲಿ ಒಂದು ಖಾಸಗಿ ವೈದ್ಯಕೀಯ ಕಾಲೇಜು ಆರಂಭವಾಗುತ್ತಿದ್ದು, ಅಲ್ಲಿ 150 ಸೀಟುಗಳು, ಅಂಬೇಡ್ಕರ್‌ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ 50 ಹಾಗೂ ಕಲಬುರಗಿಯ ಇಎಸ್‌ಐ ವೈದ್ಯಕೀಯ ಕಾಜೇಜಿನಲ್ಲಿ 25 ಸೀಟುಗಳನ್ನು ಹೆಚ್ಚಿಸಲು ಈಗಾಗಲೇ ಅನುಮತಿ ಸಿಕ್ಕಿದೆ ಎಂದು ವೈದ್ಯಕೀಯ ಶಿಕ್ಷಣ ಇಲಾಖೆಯು ಮಾಹಿತಿ ನೀಡಿದೆ.

ಶಿಕ್ಷಣಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ (Click Here) ಕ್ಲಿಕ್‌ ಮಾಡಿ.

ದೇಶದಲ್ಲಿ 8,195 ಸೀಟು ಹೆಚ್ಚಳ

ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ದೇಶಾದ್ಯಂತ 50 ಹೊಸ ವೈದ್ಯಕೀಯ ಕಾಲೇಜುಗಳಿಗೆ ಅನುಮೋದನೆ ನೀಡಲಾಗಿದ್ದು, ಇದರಿಂದಾಗಿ 8,195 ಸೀಟುಗಳು ಸೇರ್ಪಡೆಯಾಗಿವೆ. ಇದರಿಂದಾಗಿ ದೇಶದ ಮೆಡಿಕಲ್‌ ಕಾಲೇಜುಗಳಲ್ಲಿನ ಒಟ್ಟು ಸೀಟುಗಳ ಸಂಖ್ಯೆ 1,07,658ಕ್ಕೆ ಏರಿದಂತಾಗಿದೆ. ಹೊಸದಾಗಿ ಆರಂಭವಾಗಿರುವ ಮೆಡಿಕಲ್‌ ಕಾಲೇಜುಗಳಲ್ಲಿ 30 ಸರ್ಕಾರಿ ಕಾಲೇಜುಗಳಾದರೆ 20 ಖಾಸಗಿ ಕಾಲೇಜುಗಳಾಗಿವೆ. ಇದರಿಂದಾಗಿ ದೇಶದಲ್ಲಿ ಒಟ್ಟಾರೆ ಮೆಡಿಕಲ್‌ ಕಾಲೇಜುಗಳ ಸಂಖ್ಯೆ 702ಕ್ಕೆ ಏರಿದೆ.

ಈ ವರ್ಷ ನಮ್ಮ ರಾಜ್ಯ ಸೇರಿದಂತೆ ತೆಲಂಗಾಣ, ರಾಜಸ್ಥಾನ, ತಮಿಳುನಾಡು, ಒಡಿಶಾ, ನಾಗಲ್ಯಾಂಡ್‌, ಮಹಾರಾಷ್ಟ್ರ, ಅಸ್ಸಾಂ, ಗುಜರಾತ್‌, ಹರಿಯಾಣ, ಜಮ್ಮು ಮತ್ತು ಕಾಶ್ಮೀರ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಮಧ್ಯಪ್ರದೇಶ ರಾಜ್ಯಗಳಲ್ಲಿ ಹೊಸದಾಗಿ ಮೆಡಿಕಲ್‌ ಕಾಲೇಜುಗಳು ಆರಂಭವಾಗಿವೆ.

ಈ ನಡುವೆ ರಾಷ್ಟ್ರೀಯ ವೈದ್ಯಕೀಯ ಆಯೋಗವು (ಎನ್‌ಎಂಸಿ) ನಿಗದಿತ ಗುಣಮಟ್ಟ ಕಾಯ್ದುಕೊಳ್ಳದ 38 ಮೆಡಿಕಲ್‌ ಕಾಲೇಜುಗಳ ಅನುಮೋದನೆಯನ್ನು ಹಿಂದಕ್ಕೆ ಪಡೆದಿದೆ. ಇನ್ನೂ 102 ಮೆಡಿಕಲ್‌ ಕಾಲೇಜುಗಳಿಗೆ ಗುಣಮಟ್ಟ ಕಾಯ್ದುಕೊಳ್ಳುವಂತೆ ನೋಟಿಸ್‌ ಸಹ ನೀಡಲಾಗಿದೆ.

ಇದನ್ನೂ ಓದಿ : NIRF Ranking 2023 : ಮೆಡಿಕಲ್‌ ಕಾಲೇಜುಗಳ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ನಿಮಾನ್ಸ್‌ಗೆ 4 ನೇ ಸ್ಥಾನ; ಟಾಪ್‌ ವೈದ್ಯಕೀಯ ಕಾಲೇಜುಗಳಿವು

ಪರೀಕ್ಷೆ ಬರೆದವರ ಸಂಖ್ಯೆ 5 ವರ್ಷದಲ್ಲೇ ಹೆಚ್ಚು

ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಸಲಾಗುವ ಈ ಪರೀಕ್ಷೆಯನ್ನು ಬರೆದ ವಿದ್ಯಾರ್ಥಿಗಳ ಸಂಖ್ಯೆ ಕಳೆದ ಐದು ವರ್ಷಗಳಲ್ಲಿ ಈ ವರ್ಷವೇ ಹೆಚ್ಚು. ಈ ವರ್ಷ ಒಟ್ಟು 20,38,596 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. 2022 ರಲ್ಲಿ 17,64,571 ವಿದ್ಯಾರ್ಥಿಗಳು, 2021 ರಲ್ಲಿ 15,44,273 ವಿದ್ಯಾರ್ಥಿಗಳು, 2020 ರಲ್ಲಿ 13,66,945 ವಿದ್ಯಾರ್ಥಿಗಳು ಹಾಗೂ 2019ರಲ್ಲಿ 14,10,755 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು ಎಂದು ಎನ್‌ಟಿಎ ತಿಳಿಸಿದೆ.

ಈ ಬಾರಿ ಪರೀಕ್ಷೆ ಬರೆದವರಲ್ಲಿ 11,44,399 ಭಾರತೀಯ ವಿದ್ಯಾರ್ಥಿಗಳು, 521 ವಿದೇಶಿ ವಿದ್ಯಾರ್ಥಿಗಳು ಹಾಗೂ 533 ಎನ್‌ಆರ್‌ಐ ಮತ್ತು 523 ಈಸಿಐ ವಿದ್ಯಾರ್ಥಿಗಳು ಅರ್ಹತೆ ಪಡೆದಿದ್ದಾರೆ. ಈ ಬಾರಿಯ ವಿಶೇಷವೆಂದರೆ ಟಾಪ್‌ 50 ರ‍್ಯಾಂಕಿಂಗ್‌ನಲ್ಲಿ 40 ಬಾಲಕರು ಸ್ಥಾನ ಪಡೆದಿದ್ದರೆ, ಉಳಿದ 10 ಸ್ಥಾನವನ್ನು ಬಾಲಕಿಯರು ಪಡೆದಿದ್ದಾರೆ.

ಇದನ್ನೂ ಓದಿ: NIRF Ranking 2023 : ದೇಶದ ಟಾಪ್‌ 40 ಡೆಂಟಲ್‌ ಕಾಲೇಜುಗಳ ಪೈಕಿ 10 ಕರ್ನಾಟಕದಲ್ಲಿವೆ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

HD Revanna: 3 ದಿನದಿಂದ ಕುಟುಂಬಸ್ಥರನ್ನು ಭೇಟಿಯಾಗದೆ ಜೈಲಲ್ಲಿ ರೇವಣ್ಣ ಪರದಾಟ; ಪತ್ರಿಕೆಯೇ ಸಂಗಾತಿ!

HD Revanna: ಪರಪ್ಪನ ಅಗ್ರಹಾರ ಜೈಲಿನಲ್ಲಿ ಭಾನುವಾರ (ಮೇ 12) ಬೆಳಗ್ಗೆ ವೆಜ್‌ ಪಲಾವ್‌ ಸೇವಿಸಿದ ರೇವಣ್ಣ, ಕಾಫಿ ಕುಡಿದು, ಪೇಪರ್‌ ಓದಿದ್ದಾರೆ. ಕುಟುಂಬಸ್ಥರು, ಆಪ್ತರನ್ನು ಭೇಟಿಯಾಗದ ಕಾರಣ ಪತ್ರಿಕೆಯೇ ಅವರಿಗೆ ಸಂಗಾತಿಯಾದಂತಾಗಿದೆ. ಸೋಮವಾರ ಜಾಮೀನು ಅರ್ಜಿಯ ವಿಚಾರಣೆ ನಡೆಯಲಿದ್ದು, ಎಚ್‌.ಡಿ.ರೇವಣ್ಣ ಅವರು ಜಾಮೀನಿನ ನಿರೀಕ್ಷೆಯಲ್ಲಿದ್ದಾರೆ.

VISTARANEWS.COM


on

HD Revanna
Koo

ಬೆಂಗಳೂರು: ಹಾಸನ ಜೆಡಿಎಸ್‌ ಸಂಸದ ಪ್ರಜ್ವಲ್‌ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ (Prajwal Revanna Case) ಸಂತ್ರಸ್ತೆಯ ಅಪಹರಣಕ್ಕೆ ಸಂಬಂಧಿಸಿದಂತೆ ಜೈಲುಪಾಲಾಗಿರುವ ಜೆಡಿಎಸ್‌ ಶಾಸಕ ಎಚ್‌.ಡಿ.ರೇವಣ್ಣ (HD Revanna) ಅವರು ಕಳೆದ ಮೂರು ದಿನಗಳಿಂದಲೂ ಕುಟುಂಬಸ್ಥರನ್ನು ಭೇಟಿಯಾಗದೆ ಪರದಾಡುತ್ತಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ಭಾನುವಾರ (ಮೇ 12) ಬೆಳಗ್ಗೆ ವೆಜ್‌ ಪಲಾವ್‌ ಸೇವಿಸಿದ ರೇವಣ್ಣ, ಕಾಫಿ ಕುಡಿದು, ಪೇಪರ್‌ ಓದಿದ್ದಾರೆ. ಕುಟುಂಬಸ್ಥರು, ಆಪ್ತರನ್ನು ಭೇಟಿಯಾಗದ ಕಾರಣ ಪತ್ರಿಕೆಯೇ ಅವರಿಗೆ ಸಂಗಾತಿಯಾದಂತಾಗಿದೆ. ಇದರ ಮಧ್ಯೆಯೇ, ರೇವಣ್ಣ ಅವರಿಗೆ ಮತ್ತೆ ಹೊಟ್ಟೆ ನೋವು ಕಾಣಿಸಿಕೊಂಡಿದೆ ಎಂದು ತಿಳಿದುಬಂದಿದೆ.

ಶುಕ್ರವಾರ, ಶನಿವಾರ ಹಾಗೂ ಭಾನುವಾರ ಸರ್ಕಾರಿ ರಜೆ ಹಿನ್ನೆಲೆಯಲ್ಲಿ ಎಚ್‌.ಡಿ.ರೇವಣ್ಣ ಅವರು ಯಾರನ್ನೂ ಭೇಟಿಯಾಗಲು ಸಾಧ್ಯವಾಗಿಲ್ಲ. ಇದರಿಂದಾಗಿ ಅವರು ಮಾನಸಿಕವಾಗಿ ಕುಗ್ಗಿಹೋಗಿದ್ದಾರೆ. ಜೈಲಿನ ಬ್ಯಾರಕ್‌ನಲ್ಲಿ ಕೆಲ ಹೊತ್ತು ವಾಕ್‌ ಮಾಡಿದ ರೇವಣ್ಣ, ಬಳಿಕ ದೀರ್ಘ ಅವಧಿಗೆ ಪೇಪರ್‌ ಓದುತ್ತಲೇ ಕುಳಿತಿದ್ದರು ಎಂದು ಜೈಲಿನ ಮೂಲಗಳು ಮಾಹಿತಿ ನೀಡಿವೆ. ರೇವಣ್ಣ ಅವರು ಸೋಮವಾರ (ಮೇ 13) ಜಾಮೀನು ಸಿಗುವ ನಿರೀಕ್ಷೆಯಲ್ಲಿದ್ದಾರೆ. ಕಳೆದ ನಾಲ್ಕು ದಿನಗಳಿಂದ ಅವರು ಪರಪ್ಪನ ಅಗ್ರಹಾರದಲ್ಲೇ ಇದ್ದಾರೆ.

ಲೈಂಗಿಕ ದೌರ್ಜನಕ್ಕೀಡಾದ ಸಂತ್ರಸ್ತೆಯನ್ನು ಅಪಹರಣ ಮಾಡಿದ ಪ್ರಕರಣದಲ್ಲಿ ಮೊದಲ ಆರೋಪಿಯಾಗಿರುವ ಎಚ್‌.ಡಿ.ರೇವಣ್ಣ ಅವರನ್ನು ಎಸ್‌ಐಟಿ ಅಧಿಕಾರಿಗಳು ಬಂಧಿಸಿದ್ದಾರೆ. ಅವರು ಸಲ್ಲಿಸಿದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ನ್ಯಾಯಾಲಯವು ತಿರಸ್ಕರಿಸಿತ್ತು. ಇದಾದ ಬಳಿಕ ಅವರು ಸಲ್ಲಿಸಿದ ರೆಗ್ಯುಲರ್ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ್ದ ಕೋರ್ಟ್‌, ಜಾಮೀನು ನೀಡದೆ ಮೇ 13ಕ್ಕೆ ವಿಚಾರಣೆ ಮುಂದೂಡಿತ್ತು. ಹಾಗಾಗಿ, ಸೋಮವಾರ ಮತ್ತೆ ವಿಚಾರಣೆ ನಡೆಯಲಿದ್ದು, ರೇವಣ್ಣ ಜಾಮೀನಿನ ನಿರೀಕ್ಷೆಯಲ್ಲಿದ್ದಾರೆ.

ಭವಾನಿ ರೇವಣ್ಣಗೆ 2ನೇ ನೋಟಿಸ್‌

ಸಂತ್ರಸ್ತೆಯ ಅಪಹರಣ ಪ್ರಕರಣದಲ್ಲಿ ಎಚ್‌.ಡಿ.ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಅವರಿಗೂ ಸಂಕಷ್ಟ ಎದುರಾಗಿದ್ದು, ವಿಚಾರಣೆಗೆ ಹಾಜರಾಗುವಂತೆ ಎಸ್‌ಐಟಿ ಎರಡನೇ ನೋಟಿಸ್‌ ಜಾರಿ ಮಾಡಿದೆ. ಮೊದಲ ನೋಟಿಸ್ ಉತ್ತರಿಸದ ಹಿನ್ನೆಲೆಯಲ್ಲಿ ಎರಡನೇ ನೋಟಿಸ್ ಜಾರಿ ಮಾಡಲಾಗಿದೆ. ರೇವಣ್ಣ ಮೇಲೆ ಕೇಳಿ ಬಂದಿರುವ ಅಪಹರಣ ಪ್ರಕರಣದಲ್ಲಿ ಕೇಸ್‌ನಲ್ಲಿ ಕುಮ್ಮಕ್ಕು ಕೊಟ್ಟ ಆರೋಪವನ್ನು ಭವಾನಿ ರೇವಣ್ಣ ಹೊತ್ತಿದ್ದಾರೆ. ಈ ಸಂಬಂಧ ಹಲವಾರು ಪ್ರಶ್ನೆಗಳನ್ನು ಕೇಳಲು ಎಸ್‌ಐಟಿ ಸಿದ್ಧವಾಗಿದೆ. ಆದರೆ, ಭವಾನಿ ವಿಚಾರಣೆಗೆ ಹಾಜರಾಗದೆ ತಪ್ಪಿಸಿಕೊಳ್ಳುತ್ತಿದ್ದಾರೆ. ಈ ಬಾರಿಯೂ ಭವಾನಿ ವಿಚಾರಣೆಗೆ ಹಾಜರಾಗದಿದ್ದರೆ ಎಸ್‌ಐಟಿ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳಲು ಸಿದ್ಧತೆ ನಡೆಸಿದೆ.

ಇದನ್ನೂ ಓದಿ: Prajwal Revanna Case: ಪ್ರಜ್ವಲ್ ರೇವಣ್ಣ ಹುಡುಕಿ ಕೊಟ್ಟವರಿಗೆ 1 ಲಕ್ಷ ರೂ. ಬಹುಮಾನ ಘೋಷಣೆ!

Continue Reading

ದೇಶ

Maggi Tragedy: ಮ್ಯಾಗಿ ತಿಂದ ಬಳಿಕ 10 ವರ್ಷದ ಬಾಲಕ ಸಾವು, ಒಂದೇ ಕುಟುಂಬದ ಐವರು ಅಸ್ವಸ್ಥ

Maggi Tragedy: ಡೆಹ್ರಾಡೂನ್‌ನ ಸೀಮಾ ಎಂಬುವರು ಪತಿ, ಮೂವರು ಮಕ್ಕಳ ಜತೆ ತಮ್ಮ ತವರು ಮನೆ ಇರುವ ರಾಹುಲ್‌ ನಗರಕ್ಕೆ ಆಗಮಿಸಿದರು. ಕಳೆದ ಗುರುವಾರ (ಮೇ 9) ರಾತ್ರಿ ಮೂವರು ಮಕ್ಕಳು ಸೇರಿ ಎಲ್ಲರೂ ಮ್ಯಾಗಿ ಹಾಗೂ ಅನ್ನ ಊಟ ಮಾಡಿದ್ದಾರೆ. ರಾತ್ರಿ ಮಲಗಿದವರೇ ಒಬ್ಬೊಬ್ಬರಾಗಿ ಅಸ್ವಸ್ಥರಾಗಿದ್ದಾರೆ. ಎಲ್ಲರಿಗೂ ವಾಂತಿ-ಭೇದಿ ಕಾಣಿಸಿಕೊಂಡಿದೆ.

VISTARANEWS.COM


on

Maggi Tragedy
Koo

ಲಖನೌ: ಉತ್ತರ ಪ್ರದೇಶದ ಪಿಲಿಭಿಟ್‌ನಲ್ಲಿ (Pilibhit) ಮ್ಯಾಗಿ ಸೇವಿಸಿ 10 ವರ್ಷದ ಬಾಲಕನೊಬ್ಬ (Maggi Tragedy) ಮೃತಪಟ್ಟಿದ್ದಾನೆ. ಒಂದೇ ಕುಟುಂಬದ ಐವರು ಅಸ್ವಸ್ಥರಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಹಜಾರ ಪೊಲೀಸ್‌ ಠಾಣೆ ವ್ಯಾಪ್ತಿಯ ರಾಹುಲ್‌ ನಗರದಲ್ಲಿ (Rahul Nagar) ಘಟನೆ ನಡೆದಿದೆ. ಪುರಾನ್‌ಪುರದ ಸಿಎಚ್‌ಸಿಯಲ್ಲಿ ಐವರೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಡೆಹ್ರಾಡೂನ್‌ನ ಸೀಮಾ ಎಂಬುವರು ಪತಿ, ಮೂವರು ಮಕ್ಕಳ ಜತೆ ತಮ್ಮ ತವರು ಮನೆ ಇರುವ ರಾಹುಲ್‌ ನಗರಕ್ಕೆ ಆಗಮಿಸಿದರು. ಕಳೆದ ಗುರುವಾರ (ಮೇ 9) ರಾತ್ರಿ ಮೂವರು ಮಕ್ಕಳು ಸೇರಿ ಎಲ್ಲರೂ ಮ್ಯಾಗಿ ಹಾಗೂ ಅನ್ನ ಊಟ ಮಾಡಿದ್ದಾರೆ. ರಾತ್ರಿ ಮಲಗಿದವರೇ ಒಬ್ಬೊಬ್ಬರಾಗಿ ಅಸ್ವಸ್ಥರಾಗಿದ್ದಾರೆ. ಎಲ್ಲರಿಗೂ ವಾಂತಿ-ಭೇದಿ ಕಾಣಿಸಿಕೊಂಡಿದೆ. ಶುಕ್ರವಾರ ಬೆಳಗ್ಗೆ ಎಲ್ಲರೂ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆದರೆ, ಚಿಕಿತ್ಸೆ ಫಲಿಸದೆ 10 ವರ್ಷದ ಬಾಲಕನು ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.

ಚಿಕನ್‌ ಶವರ್ಮಾ ತಿಂದು ಯುವಕ ಸಾವು

ಮಹಾರಾಷ್ಟ್ರದಲ್ಲಿ ಕೆಲ ದಿನಗಳ ಹಿಂದಷ್ಟೇ ಚಿಕನ್‌ ಶವರ್ಮಾ ಸೇವಿಸಿ 19 ವರ್ಷದ ಯುವಕ ಮೃತಪಟ್ಟಿದ್ದ. ಮೃತ ಯುವಕನನ್ನು ಪ್ರಥಮೇಶ್‌ ಭೋಕ್ಸೆ ಎಂದು ಗುರುತಿಸಲಾಗಿತ್ತು. ಮೇ 3ರಂದು ಸಾಯಂಕಾಲ ಮುಂಬೈನ ಮಾಂಖುರ್ದ್‌ ಪ್ರದೇಶದಲ್ಲಿರುವ ಬೀದಿ ಬದಿಯ ಅಂಗಡಿಯೊಂದಕ್ಕೆ ತೆರಳಿದ ಯುವಕನು ಚಿಕನ್‌ ಶವರ್ಮಾ ತಿಂದಿದ್ದಾನೆ. ಇದಾದ ಬಳಿಕ ಆತನು ಎಂದಿನಂತೆ ಮನೆಗೆ ತೆರಳಿದ್ದಾನೆ. ಮನೆಗೆ ತೆರಳಿದ ಮರುದಿನವೇ ಆತನಿಗೆ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಪದೇಪದೆ ವಾಂತಿ ಮಾಡಿಕೊಂಡಿದ್ದಾನೆ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ತೀವ್ರವಾಗಿ ಅಸ್ವಸ್ಥಗೊಂಡಿದ್ದ ಯುವಕನು ಮಂಗಳವಾರ (ಮೇ 7) ಬೆಳಗ್ಗೆ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.

ಬೀದಿ ಬದಿ ಅಂಗಡಿ ಮಾಲೀಕರು ಚಿಕನ್‌ ಶವರ್ಮಾ ತಯಾರಿಸುವಾಗ ಅದಕ್ಕೆ ಕೊಳೆತ ಮಾಂಸವನ್ನು ಬೆರೆಸಿದ್ದೇ ಯುವಕ ಮೃತಪಟ್ಟು, ಐವರು ಅಸ್ವಸ್ಥರಾಗಲು ಕಾರಣ ಎಂದು ತಿಳಿದುಬಂದಿತ್ತು. ಐವರು ಅಸ್ವಸ್ಥರು ಕೆಇಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಪ್ರಥಮೇಶ್‌ ಭೋಕ್ಸೆ ಸಾವಿನ ಬಳಿಕ ಅಂಗಡಿ ಮಾಲೀಕರ ವಿರುದ್ಧ ಆತನ ಪೋಷಕರು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದಾದ ಬಳಿಕ ಇಬ್ಬರು ಅಂಗಡಿ ಮಾಲೀಕರನ್ನು ಪೊಲೀಸರು ಬಂಧಿಸಿದ್ದರು.

ಇದನ್ನೂ ಓದಿ: Food Poisoning: ಮದುವೆ ಮನೆ ಊಟ ತಿಂದವರಿಗೆ ವಾಂತಿ, ಭೇದಿ; ನೂರಾರು ಮಂದಿ ಅಸ್ವಸ್ಥ

Continue Reading

ಸಂಪಾದಕೀಯ

ವಿಸ್ತಾರ ಸಂಪಾದಕೀಯ: ಸೌರ ವಿದ್ಯುತ್‌ ಉತ್ಪಾದನೆಯಲ್ಲಿ ಭಾರತ ಆತ್ಮನಿರ್ಭರ ಸಾಧನೆ ಶ್ಲಾಘನೀಯ

ಶುದ್ಧ ವಿದ್ಯುತ್‌ ಉತ್ಪಾದನೆ ಹೆಚ್ಚಳ, ವಿದ್ಯುತ್‌ ವಲಯದಲ್ಲಿ ಹೊರಸೂಸುವ ಇಂಗಾಲದ ಪ್ರಮಾಣ ಕಡಿಮೆ ಮಾಡುವುದು ಸೌರ ವಿದ್ಯುತ್‌ ಉತ್ಪಾದನೆಯ ಪ್ರಮುಖ ಅನುಕೂಲಗಳವಾಗಿವೆ. ಇದು ಹವಾಮಾನ ಬದಲಾವಣೆ ನಿಯಂತ್ರಣಕ್ಕೂ ಕಾರಣವಾಗಲಿದೆ. ಇದರ ಬೆನ್ನಲ್ಲೇ, ಭಾರತವು ಸೌರ ವಿದ್ಯುತ್‌ ಉತ್ಪಾದನೆಯಲ್ಲಿ ಐತಿಹಾಸಿಕ ಸಾಧನೆಯೊಂದನ್ನು ಮಾಡಿದೆ. ಜಪಾನ್‌ಅನ್ನೂ ಹಿಂದಿಕ್ಕಿ, ಜಗತ್ತಿನಲ್ಲೇ ಹೆಚ್ಚು ಸೌರ ವಿದ್ಯುತ್‌ ಉತ್ಪಾದನೆ ಮಾಡುವ ಮೂರನೇ ರಾಷ್ಟ್ರ ಎಂಬ ಖ್ಯಾತಿಯನ್ನು ಭಾರತ ಗಳಿಸಿದೆ. ಇದು ನಿಜಕ್ಕೂ ಶ್ಲಾಘನೀಯ ಸಾಧನೆಯಾಗಿದೆ.

VISTARANEWS.COM


on

Solar
Koo

ಹವಾಮಾನ ಬದಲಾವಣೆ (Climate Change), ಜಾಗತಿಕ ತಾಪಮಾನ ಏರಿಕೆ ಕುರಿತು ಜಗತ್ತಿನಾದ್ಯಂತ ಚರ್ಚೆಗಳು, ಪರಿಹಾರಕ್ಕಾಗಿ ಯೋಜನೆ ರೂಪಿಸುವುದು ಸೇರಿ ಹತ್ತಾರು ಕಾರ್ಯಚಟುವಟಿಕೆಗಳು ನಡೆಯುತ್ತಿವೆ. ಅತಿವೃಷ್ಟಿ, ಅನಾವೃಷ್ಟಿ, ಚಳಿಗಾಲದಲ್ಲೂ ಬಿರುಬಿಸಿಲು, ಬೇಸಿಗೆಯಲ್ಲಿ ಅಕಾಲಿಕ ಮಳೆ, ಕಾಡುಗಳು ಇರುವ ಪ್ರದೇಶದಲ್ಲೂ ಹೆಚ್ಚಿದ ತಾಪ ಸೇರಿ ಹಲವು ಪರಿಣಾಮಗಳು ಹವಾಮಾನ ಬದಲಾವಣೆಗೆ ಹಿಡಿದ ಕನ್ನಡಿಯೇ ಆಗಿದೆ. ಇದರ ಬೆನ್ನಲ್ಲೇ, ಭಾರತವು ಸೌರ ವಿದ್ಯುತ್‌ ಉತ್ಪಾದನೆಯಲ್ಲಿ (Solar Power Generation) ಐತಿಹಾಸಿಕ ಸಾಧನೆಯೊಂದನ್ನು ಮಾಡಿದೆ. ಜಪಾನ್‌ಅನ್ನೂ ಹಿಂದಿಕ್ಕಿ, ಜಗತ್ತಿನಲ್ಲೇ ಹೆಚ್ಚು ಸೌರ ವಿದ್ಯುತ್‌ ಉತ್ಪಾದನೆ ಮಾಡುವ ಮೂರನೇ ರಾಷ್ಟ್ರ ಎಂಬ ಖ್ಯಾತಿಯನ್ನು ಭಾರತ ಗಳಿಸಿದೆ. ಹಾಗಾಗಿ, ಇದು ಮರುಮಾತೇ ಇಲ್ಲದೆ ಶ್ಲಾಘನೀಯ ಸಾಧನೆ ಎಂದು ಹೇಳಬಹುದಾಗಿದೆ.

2015ರಲ್ಲಿ ಸೌರ ವಿದ್ಯುತ್‌ ಉತ್ಪಾದನೆಯಲ್ಲಿ ಭಾರತವು 9ನೇ ಸ್ಥಾನದಲ್ಲಿತ್ತು. ಆದರೆ, 2015ರಿಂದ 2023ರ ಅವಧಿಯಲ್ಲಿ ಭಾರತವು ಆರು ಪಟ್ಟು ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡಿರುವುದೇ ಮೂರನೇ ಸ್ಥಾನಕ್ಕೇರಲು ಕಾರಣವಾಗಿದೆ. 2023ರಲ್ಲಿ ಜಾಗತಿಕ ವಿದ್ಯುತ್‌ ವಲಯದಲ್ಲಿ ದಾಖಲೆಯ ಶೇ. 5.5ರಷ್ಟು ಸೌರ ಶಕ್ತಿಯನ್ನು ಉತ್ಪಾದಿಸಲಾಗಿದೆ. ಆದರೆ, ಭಾರತದಲ್ಲಿ ಸೌರ ಶಕ್ತಿಯಿಂದ ಶೇ. 5.8ರಷ್ಟು ವಿದ್ಯುತ್‌ ಉತ್ಪಾದಿಸಲಾಗಿದೆ ಎಂದು ಜಾಗತಿಕ ಇಂಧನ ಚಿಂತಕರ ಚಾವಡಿ ಎಂಬರ್‌ (Ember) ತಿಳಿಸಿದೆ. ಇದು ಭಾರತವು ಸೌರ ವಿದ್ಯುತ್‌ ಶಕ್ತಿಯನ್ನು ಉತ್ಪಾದಿಸುವಲ್ಲಿ ಕಂಡುಕೊಂಡರುವ ವೇಗಕ್ಕೆ ಸಾಕ್ಷಿಯಾಗಿದೆ.

ಸೌರ ವಿದ್ಯುತ್‌ ಉತ್ಪಾದನೆಯು 2015ರಲ್ಲಿದ್ದ ಶೇ. 0.5ರಿಂದ 2023ಕ್ಕೆ ಶೇ. 5.8ಕ್ಕೆ ಏರಿಕೆಯಾಗಿದೆ ಎಂದು ಎಂಬರ್‌ ತನ್ನ ವರದಿಯಲ್ಲಿ ಕಂಡುಕೊಂಡಿದೆ. ಇಂಟರ್‌ ನ್ಯಾಷನಲ್‌ ಎನರ್ಜಿ ಏಜೆನ್ಸಿಯ(IEA) ಪ್ರಕಾರ, 2030ರ ವೇಳೆಗೆ ಸೌರ ವಿದ್ಯುತ್ ಉತ್ಪಾದನೆಯು ಜಾಗತಿಕ ವಿದ್ಯುತ್ ಉತ್ಪಾದನೆಯ ಶೇ. 22ಕ್ಕೆ ಏರಿಕೆಯಾಗಲಿದೆ. ಭಾರತದ ವಾರ್ಷಿಕ ಇಂಗಾಲದ ಡೈ ಆಕ್ಸೈಡ್ ಹೊರಸೂಸುವಿಕೆಗೆ ಅರ್ಧದಷ್ಟು (2023ರಲ್ಲಿ 1.18 ಗಿಗಾಟನ್) ವಿದ್ಯುತ್ ಉತ್ಪಾದನೆ ಕಾರಣವಾಗುತ್ತಿರುವುದರಿಂದ ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳುವುದು ಅನಿವಾರ್ಯ ಎನಿಸಿಕೊಂಡಿದೆ. ಆದರೆ, ಭಾರತವು ಗಣನೀಯವಾಗಿ ಸೌರ ವಿದ್ಯುತ್‌ ಉತ್ಪಾದನೆ ಮಾಡುತ್ತಿರುವುದರಿಂದ ಪರಿಸರದ ಮೇಲಿನ ಪರಿಣಾಮಕ್ಕೂ ಭಾರತ ಪರಿಹಾರ ಕಂಡುಕೊಳ್ಳುವಂತಾಗಿದೆ.

ಸೌರ ವಿದ್ಯುತ್‌ ಉತ್ಪಾದನೆಯಲ್ಲಿ ಈಗ ಚೀನಾ ಮೊದಲ ಸ್ಥಾನದಲ್ಲಿದ್ದರೆ, ಅಮೆರಿಕ ಎರಡನೇ ಸ್ಥಾನದಲ್ಲಿದೆ. ಹಾಗಾಗಿ, ಮುಂದಿನ ದಿನಗಳಲ್ಲಿ ಭಾರತವು ಇನ್ನಷ್ಟು ಸಾಧನೆ ಮಾಡಿದರೂ ಅಚ್ಚರಿ ಇಲ್ಲ. ಶುದ್ಧ ವಿದ್ಯುತ್‌ ಉತ್ಪಾದನೆ ಹೆಚ್ಚಳ, ವಿದ್ಯುತ್‌ ವಲಯದಲ್ಲಿ ಹೊರಸೂಸುವ ಇಂಗಾಲದ ಪ್ರಮಾಣ ಕಡಿಮೆ ಮಾಡುವುದು ಸೌರ ವಿದ್ಯುತ್‌ ಉತ್ಪಾದನೆಯ ಪ್ರಮುಖ ಮುನ್ನಡೆಯಾಗಿವೆ. ಅದರಲ್ಲೂ, ಭಾರತದ ಜನಸಂಖ್ಯೆ ಜಾಸ್ತಿ ಇರುವುದರಿಂದ ಬೇಡಿಕೆಗೆ ತಕ್ಕಷ್ಟು ವಿದ್ಯುತ್‌ ಪೂರೈಸುವುದು ಕಷ್ಟವಾಗುವ ಜತೆಗೆ ಖಜಾನೆಗೂ ಹೊರೆಯಾಗುತ್ತದೆ. ಇದಕ್ಕೆ ಸೌರ ವಿದ್ಯುತ್‌ ಉತ್ಪಾದನೆಯೇ ರಾಜಮಾರ್ಗವಾಗಿದೆ.

ಹವಾಮಾನ ಬದಲಾವಣೆ ಕುರಿತು ಭಾರತ ಜಾಗತಿಕ ವೇದಿಕೆಗಳಲ್ಲಿ ಭಾರತವು ಪ್ರಬಲವಾಗಿ ಪ್ರತಿಪಾದನೆ ಮಾಡುತ್ತದೆ. ಹವಾಮಾನ ನಿಯಂತ್ರಣದ ಕುರಿತು ನರೇಂದ್ರ ಮೋದಿ ಅವರು ಮಾತನಾಡುತ್ತಾರೆ. ಹವಾಮಾನ ಬದಲಾವಣೆ ವಿರುದ್ಧದ ಸಮರದ ತಂಡದಲ್ಲಿ ಭಾರತವೂ ಪ್ರಮುಖ ಸದಸ್ಯವಾಗಿದೆ. ಇದೇ ಕಾರಣಕ್ಕಾಗಿ, ಸೌರ ವಿದ್ಯುತ್‌ ಉತ್ಪಾದನೆಯ ಸಾಧನೆಯು ಜಗತ್ತಿಗೇ ಮಾದರಿಯಾಗಿದೆ. ಇನ್ನು ನರೇಂದ್ರ ಮೋದಿ ಅವರು 2047ರ ವೇಳೆಗೆ ವಿಕಸಿತ ಭಾರತದ ನಿರ್ಮಾಣದ ಕನಸು ಕಾಣುತ್ತಿದ್ದಾರೆ. ವಿಕಸಿತ ಭಾರತದ ನಿರ್ಮಾಣಕ್ಕಿರುವ ಮಾನದಂಡಗಳಲ್ಲಿ ಸೌರ ವಿದ್ಯುತ್‌ ಕ್ಷೇತ್ರದ ಸಾಧನೆಯು ಪ್ರಮುಖವಾಗಿದೆ. ಹಾಗಾಗಿ, ಜಪಾನ್‌ಗಿಂತ ಭಾರತ ಮುಂದೆ ಹೋಗಿರುವುದು ವಿಕಸಿತ ಭಾರತದತ್ತ ದಾಪುಗಾಲು ಇಡುತ್ತಿರುವುದಕ್ಕೆ ಸಾಕ್ಷಿಯಾಗಿದೆ.

ಇದನ್ನೂ ಓದಿ: Selco India: ಸೌರವಿದ್ಯುತ್ ಪ್ರವರ್ತಕ ರಿಚರ್ಡ್‌ ಹ್ಯಾನ್ಸೆನ್‌ಗೆ ಸೆಲ್ಕೋದ ಪ್ರತಿಷ್ಠಿತ ʼಸೂರ್ಯಮಿತ್ರʼ ಪ್ರಶಸ್ತಿ

Continue Reading

ಭವಿಷ್ಯ

Dina Bhavishya: ಹತಾಶೆಯಲ್ಲಿ ಈ ತೀರ್ಮಾನ ಮಾಡಲೇಬೇಡಿ; ಈ ರಾಶಿಯವರು ಜೀವನ ಪೂರ್ತಿ ಕೊರಗಬೇಕಾಗುತ್ತೆ!

Dina Bhavishya: ಶ್ರೀ ಶಕೇ 1946, ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಶುಕ್ಲ ಪಕ್ಷದ ಪಂಚಮಿ ದಿನವಾದ ಇಂದು ದ್ವಾದಶಿ ರಾಶಿಗಳ ಭವಿಷ್ಯ ಹೇಗಿದೆ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

VISTARANEWS.COM


on

By

Dina Bhavishya
Koo

ಚಂದ್ರನು ಭಾನುವಾರವೂ ಕಟಕ ರಾಶಿಯಲ್ಲೆ ನೆಲಸಲಿದ್ದಾನೆ. ಇದರಿಂದಾಗಿ ಮೇಷ, ಮಿಥುನ, ಸಿಂಹ, ಕನ್ಯಾ, ಧನಸ್ಸು, ಮಕರ ರಾಶಿಯವರಿಗೆ ಚಂದ್ರನ ಬಲ ಸಿಗಲಿದೆ. ಇಂದಿನ ದಿನ ಭವಿಷ್ಯವನ್ನು (Kannada Dina Bhavishya) ನೋಡುವುದಾದರೆ, ಮೇಷ ರಾಶಿಯವರು ಅನಿವಾರ್ಯ ಕಾರಣದಿಂದ ಇಂದು ನಿಮ್ಮ ಸಮಯ ವ್ಯರ್ಥವಾಗುತ್ತದೆ. ಸಂಬಂಧಿಗಳು ಇಂದು ನಿಮ್ಮ ಸಂಗಾತಿಯ ಜತೆಗೆ ವಾದಕ್ಕೆ ಇಳಿಯಬಹುದು. ಆರೋಗ್ಯ ಪರಿಪೂರ್ಣ ಇರಲಿದೆ. ಉದ್ಯೋಗಿಗಳಿಗೆ ಶುಭ ಫಲವಿರಲಿದೆ. ಕನ್ಯಾ ರಾಶಿಯವರು ಹತಾಶೆಯಲ್ಲಿ ಯಾವುದೇ ತೀರ್ಮಾನ ಕೈಗೊಳ್ಳುವುದು ಬೇಡ. ಆರೋಗ್ಯದ ಕುರಿತು ಕಾಳಜಿ ವಹಿಸಿ. ಉದ್ಯೋಗಿಗಳಿಗೆ ಭರವಸೆಯ ಅವಕಾಶ ಇರಲಿದೆ. ಧನಸ್ಸು ರಾಶಿಯವರು ಒತ್ತಡದ ವಾತಾವರಣದಿಂದ ಹೊರ ಬರಲು ಧ್ಯಾನ, ಯೋಗ ಮಾಡಿ. ಇಂದು ವ್ಯಾಪಾರದಲ್ಲಿ ಲಾಭ ಗಳಿಸಲು ನಿಮಗೆ ಸಲಹೆ ನೀಡಬಹುದು. ನೀವು ಈ ಸಲಹೆಯನ್ನು ಅನುಸರಿಸಿದರೆ, ನೀವು ಖಂಡಿತವಾಗಿಯೂ ಹಣವನ್ನು ಗಳಿಸುವಿರಿ. ಇವೂ ಸೇರಿದಂತೆ ದ್ವಾದಶ ರಾಶಿಗಳ ಇಂದಿನ ಭವಿಷ್ಯ ಹೇಗಿದೆ? ಪಂಚಾಂಗ ಏನು ಹೇಳುತ್ತದೆ ಎಂಬುದನ್ನು ತಿಳಿಯೋಣ.

ಇಂದಿನ ಪಂಚಾಂಗ (kannada panchanga) (12-05-2024)

ಶ್ರೀ ಶಕೇ 1946, ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಶುಕ್ಲ ಪಕ್ಷ
ತಿಥಿ: ಪಂಚಮಿ 26:03 ವಾರ: ಭಾನುವಾರ
ನಕ್ಷತ್ರ: ಆರಿದ್ರಾ 10:25 ಯೋಗ: ಧೃತಿ 08:32
ಕರಣ: ಭವ 13:57
ದಿನದ ವಿಶೇಷ: ಶಂಕರ ಜಯಂತಿ, ರಾಮಾನುಜಾಚಾರ್ಯ ಜಯಂತಿ, ಶೃಂಗೇರಿ ಜಯಂತೋತ್ಸವ, ಉಜ್ಜಿನಿ ರಥೋತ್ಸವ

ಸೂರ್ಯೋದಯ : 05:55   ಸೂರ್ಯಾಸ್ತ : 06:37

ರಾಹುಕಾಲ : ಸಂಜೆ 05:02 ರಿಂದ 06:37
ಗುಳಿಕಕಾಲ: ಮಧ್ಯಾಹ್ನ 03:27 ರಿಂದ 05:02
ಯಮಗಂಡಕಾಲ: ಮಧ್ಯಾಹ್ನ 12:16 ರಿಂದ 01:51

ದ್ವಾದಶ ರಾಶಿ ಭವಿಷ್ಯ (Dina Bhavishya in Kannada)

Horoscope Today

ಮೇಷ: ಅನಿವಾರ್ಯ ಕಾರಣದಿಂದ ಇಂದು ನಿಮ್ಮ ಸಮಯ ವ್ಯರ್ಥವಾಗುತ್ತದೆ. ಸಂಬಂಧಿಗಳು ಇಂದು ನಿಮ್ಮ ಸಂಗಾತಿಯ ಜತೆಗೆ ವಾದಕ್ಕೆ ಇಳಿಯಬಹುದು. ಆರೋಗ್ಯ ಪರಿಪೂರ್ಣ ಇರಲಿದೆ. ಉದ್ಯೋಗಿಗಳಿಗೆ ಶುಭ ಫಲವಿರಲಿದೆ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 6

Horoscope Today

ವೃಷಭ: ನಕಾರಾತ್ಮಕ ಭಾವನೆಗಳನ್ನು ಹಿಂದೆ ಬಿಡಲು ಸಿದ್ಧರಾಗಿ, ಹೆಚ್ಚು ಆಶಾವಾದಿಗಳಾಗಿರಲು ನಿಮ್ಮನ್ನು ನೀವೇ ಪ್ರೇರೇಪಿಸಿಕೊಳ್ಳಿ. ವ್ಯಾಪಾರವನ್ನು ಬಲಪಡಿಸಲು ಇಂದು ನೀವು ಯಾವುದೇ ಪ್ರಮುಖ ಕ್ರಮಗಳನ್ನು ತೆಗೆದುಕೊಳ್ಳಬಹುದು. ಇದಕ್ಕಾಗಿ ನಿಮ್ಮ ಆಪ್ತರು ನಿಮಗೆ ಆರ್ಥಿಕವಾಗಿ ಸಹಾಯ ಮಾಡಬಹುದು. ಆರೋಗ್ಯ ಪರಿಪೂರ್ಣವಾಗಿರಲಿದೆ. ಕೌಟುಂಬಿಕವಾಗಿ ಶುಭ ಫಲ. ಉದ್ಯೋಗಿಗಳಿಗೆ ಭರವಸೆ. ಅದೃಷ್ಟ ಸಂಖ್ಯೆ: 5

Horoscope Today

ಮಿಥುನ: ಇಂದು ನಿಮಗೆ ಅನೇಕ ಹೊಸ ಆರ್ಥಿಕ ಯೋಜನೆಗಳು ದೊರಕುತ್ತವೆ. ಯಾವುದೇ ಬದ್ಧತೆಗೊಳಗಾಗುವ ಮುನ್ನ ಸಾಧಕ ಬಾಧಕಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಿ. ಮಕ್ಕಳ ಸಾಧನೆಗಳಿಂದ ನೀವು ಹೆಮ್ಮೆ ಪಡುವಂತೆ ಆಗಲಿದೆ. ಜನರ ಸಹಕಾರ ಸಿಗಲಿದೆ. ನಿಮ್ಮ ಕೋಪದಿಂದ ಇತರರ ಮೇಲೆ ಒತ್ತಡ ಹೇರುವುದು ಬೇಡ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 4

Horoscope Today

ಕಟಕ: ಹಣದ ಅಗತ್ಯವಿರುತ್ತದೆ, ಆದ್ದರಿಂದ ಇಂದು ಸಾಧ್ಯವಾದಷ್ಟು ನಿಮ್ಮ ಹಣವನ್ನು ಸಂಗ್ರಹಿಸುವ ಬಗ್ಗೆ ಆಲೋಚಿಸಿ. ಯಾರಾದರೂ ನಿಮ್ಮನ್ನು ಶ್ಲಾಘಿಸಬಹುದು. ಆರೋಗ್ಯ ಪರಿಪೂರ್ಣವಾಗಿರಲಿದೆ. ಉದ್ಯೋಗಿಗಳಿಗೆ ಒತ್ತಡ ಇರಲಿದೆ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 7

Horoscope Today

ಸಿಂಹ:ನೀವು ಅತ್ಯಂತ ಅನಿರೀಕ್ಷಿತ ಮೂಲಗಳಿಂದ ಗಳಿಕೆಯನ್ನು ಹೊಂದುವ ಸಾಧ್ಯತೆ ಇದೆ. ಕುಟುಂಬದ ಬೆಂಬಲ ಸಿಗಲಿದೆ. ಆತುರದ ತೀರ್ಮಾನ ಕೈಗೊಳ್ಳುವುದು ಬೇಡ. ಆರೋಗ್ಯದ ಕುರಿತು ಕಾಳಜಿ ವಹಿಸಿ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 5

Horoscope Today

ಕನ್ಯಾ: ಹತಾಶೆಯಲ್ಲಿ ಯಾವುದೇ ತೀರ್ಮಾನ ಕೈಗೊಳ್ಳುವುದು ಬೇಡ. ಆರೋಗ್ಯದ ಕುರಿತು ಕಾಳಜಿ ವಹಿಸಿ. ಉದ್ಯೋಗಿಗಳಿಗೆ ಭರವಸೆಯ ಅವಕಾಶ ಇರಲಿದೆ. ಆರ್ಥಿಕ ಪ್ರಗತಿ ಸಾಧರಣವಾಗಿರಲಿದೆ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 4

ಭವಿಷ್ಯ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನ/ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ

Horoscope Today

ತುಲಾ:ಅನಿವಾರ್ಯ ಕಾರಣದಿಂದ ಖರ್ಚು ಹೆಚ್ಚಾಗಲಿದೆ. ನಿಮ್ಮ ಜ್ಞಾನದಾಹ ನಿಮಗೆ ಹೊಸ ಸ್ನೇಹಿತರನ್ನು ಪಡೆಯಲು ಸಹಾಯ ಮಾಡುತ್ತದೆ. ನಿಮ್ಮ ಸಂಗಾತಿಯ ವರ್ತನೆ ನಿಮ್ಮ ವೃತ್ತಿಪರ ಸಂಬಂಧಗಳಿಗೆ ತೊಂದರೆ ಉಂಟು ಮಾಡಬಹುದು. ಉದ್ಯೋಗಿಗಳಿಗೆ ಒತ್ತಡದ ವಾತಾವರಣ ನಿರ್ಮಾಣವಾಗಲಿದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಕೌಟುಂಬಿಕವಾಗಿ ಸಾಧಾರಣ ಫಲ. ಅದೃಷ್ಟ ಸಂಖ್ಯೆ: 6

Horoscope Today

ವೃಶ್ಚಿಕ:ನಿಮ್ಮ ನಿರಂತರ ಪ್ರಯತ್ನ ಖಂಡಿತವಾಗಿಯೂ ಯಶಸ್ಸು ತರುವುದರಿಂದ ತಾಳ್ಮೆಯಿಂದಿರಿ. ವ್ಯಾಪಾರ ಅಥವಾ ಉದ್ಯೋಗದಲ್ಲಿ ಆರ್ಥಿಕ ಲಾಭವನ್ನು ಪಡೆಯುವ ಸಾಧ್ಯತೆ ಇದೆ. ನಿಜವಾಗಿಯೂ ಅದ್ಭುತ ಮತ್ತು ಸೃಜನಶೀಲವಾಗಿರುವಂತಹ ಆಲೋಚನೆಗಳು ಬರಬಹುದು. ಆರೋಗ್ಯ ಪರಿಪೂರ್ಣವಾಗಿರಲಿದೆ. ಕೌಟುಂಬಿಕವಾಗಿ ಮಿಶ್ರ ಫಲ. ಅದೃಷ್ಟ ಸಂಖ್ಯೆ: 8

Horoscope Today

ಧನಸ್ಸು: ಒತ್ತಡದ ವಾತಾವರಣದಿಂದ ಹೊರ ಬರಲು ಧ್ಯಾನ, ಯೋಗ ಮಾಡಿ. ಇಂದು ವ್ಯಾಪಾರದಲ್ಲಿ ಲಾಭ ಗಳಿಸಲು ನಿಮಗೆ ಸಲಹೆ ನೀಡಬಹುದು. ನೀವು ಈ ಸಲಹೆಯನ್ನು ಅನುಸರಿಸಿದರೆ, ನೀವು ಖಂಡಿತವಾಗಿಯೂ ಹಣವನ್ನು ಗಳಿಸುವಿರಿ. ಆರೋಗ್ಯ ಪರಿಪೂರ್ಣವಾಗಿರಲಿದೆ. ಉದ್ಯೋಗಿಗಳಿಗೆ ವಿರಾಮದ ವಾತಾವರಣ ಇರಲಿದೆ. ಕೌಟುಂಬಿಕವಾಗಿ ಮಿಶ್ರ ಫಲ. ಅದೃಷ್ಟ ಸಂಖ್ಯೆ: 5

Horoscope Today

ಮಕರ:ಧಾರ್ಮಿಕ ಭಾವನೆ ಉದ್ಭವಿಸಿ, ದೈವಿಕ ಜ್ಞಾನವನ್ನು ಪಡೆಯಲು ನೀವು ಒಂದು ಧಾರ್ಮಿಕ ಸ್ಥಳಕ್ಕೆ ಭೇಟಿ ನೀಡುವಂತೆ ಮಾಡುತ್ತವೆ. ಹಣಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಯನ್ನು ಇಂದು ಪರಿಹರಿಸಬಹುದು ಮತ್ತು ನೀವು ಹಣದಿಂದ ಲಾಭ ಪಡೆಯಬಹುದು. ಉದ್ಯೋಗಿಗಳಿಗೆ ಹೊಸ ಉತ್ಸಾಹ ಇರಲಿದೆ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 5

Horoscope Today

ಕುಂಭ: ಅನೇಕ ವಿಷಯಗಳು ನಿಮಗೆ ಸಂತಸ ತರುವುದು. ದೀರ್ಘಕಾಲದ ಕೆಲಸ ಇಂದು ಪೂರ್ಣಗೊಳ್ಳುವ ಸಾಧ್ಯತೆ ಇದೆ. ಆರ್ಥಿಕ ವ್ಯವಹಾರದಲ್ಲಿ ಪ್ರಗತಿ ಇರಲಿದೆ. ಟೀಕಿಸುವವರ ಮಾತುಗಳಿಗೆ ಕಿವಿ ಕೊಡದೆ ಕಾರ್ಯದಲ್ಲಿ ಮುನ್ನುಗ್ಗಿ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 3

Horoscope Today

ಮೀನ: ಉದ್ಯೋಗಿಗಳು ಅನುಮಾನದಿಂದ ಕಾರ್ಯದಲ್ಲಿ ತೊಡಗುವುದು ಬೇಡ. ಹೊಸ ಅವಕಾಶಗಳು ಒದಗಿ ಬರಲಿದೆ. ಮಕ್ಕಳ ಆರೋಗ್ಯದ ಕಡೆಗೆ ಗಮನ ಇರಲಿ. ಕುಟುಂಬದಲ್ಲಿ ವ್ಯತಿರಿಕ್ತವಾದ ವಾತಾವರಣ ಸೃಷ್ಟಿಯಾಗುವ ಮುಂಚೆ ಎಚ್ಚರಿಕೆ ವಹಿಸಿ. ಕೌಟುಂಬಿಕವಾಗಿ ಮಿಶ್ರ ಫಲ. ಅದೃಷ್ಟ ಸಂಖ್ಯೆ: 9

Horoscope Today

ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು

M: 9481854580 | pnaveenshastri@gmail.com

Continue Reading
Advertisement
Nijjar Killing Case
ವಿದೇಶ11 mins ago

Nijjar Killing Case: ಖಲಿಸ್ತಾನಿ ಉಗ್ರ ಹರ್ದೀಪ್‌ ಸಿಂಗ್‌ ನಿಜ್ಜಾರ್‌ ಹತ್ಯೆ; ನಾಲ್ಕನೇ ಆರೋಪಿ ಅರೆಸ್ಟ್‌

HD Revanna
ಪ್ರಮುಖ ಸುದ್ದಿ12 mins ago

HD Revanna: 3 ದಿನದಿಂದ ಕುಟುಂಬಸ್ಥರನ್ನು ಭೇಟಿಯಾಗದೆ ಜೈಲಲ್ಲಿ ರೇವಣ್ಣ ಪರದಾಟ; ಪತ್ರಿಕೆಯೇ ಸಂಗಾತಿ!

Maggi Tragedy
ದೇಶ48 mins ago

Maggi Tragedy: ಮ್ಯಾಗಿ ತಿಂದ ಬಳಿಕ 10 ವರ್ಷದ ಬಾಲಕ ಸಾವು, ಒಂದೇ ಕುಟುಂಬದ ಐವರು ಅಸ್ವಸ್ಥ

Viral News
ವೈರಲ್ ನ್ಯೂಸ್54 mins ago

Viral News: ಲಾರಿಗೆ ಡಿಕ್ಕಿ ಹೊಡೆಯಿತು ಕಂತೆ ಕಂತೆ ನಗದು ಸಾಗಿಸುತ್ತಿದ್ದ ವ್ಯಾನ್‌; ನೋಟಿನ ರಾಶಿ ಹೇಗಿದೆ ನೋಡಿ

Morning Tips
ಲೈಫ್‌ಸ್ಟೈಲ್2 hours ago

Morning Tips: ಬೆಳಗ್ಗೆ 7 ಗಂಟೆಯೊಳಗೆ ನೀವು ಈ 7 ಕೆಲಸಗಳನ್ನು ಮಾಡುತ್ತೀರಾ?

Karnataka Weather Forecast
ಮಳೆ3 hours ago

Karnataka Weather : ಮೇ 13ರ ತನಕ ಈ ಜಿಲ್ಲೆಗಳಲ್ಲಿ ಗುಡುಗು, ಮಿಂಚು ಸಹಿತ ಭಯಂಕರ ಮಳೆ; ಬಿರುಗಾಳಿಯು ಸಾಥ್‌

Solar
ಸಂಪಾದಕೀಯ3 hours ago

ವಿಸ್ತಾರ ಸಂಪಾದಕೀಯ: ಸೌರ ವಿದ್ಯುತ್‌ ಉತ್ಪಾದನೆಯಲ್ಲಿ ಭಾರತ ಆತ್ಮನಿರ್ಭರ ಸಾಧನೆ ಶ್ಲಾಘನೀಯ

Protein Supplements
ಆರೋಗ್ಯ4 hours ago

Protein Supplements: ಪ್ರೊಟಿನ್‌ ಸಪ್ಲಿಮೆಂಟ್‌ನ ಸೈಡ್‌ ಎಫೆಕ್ಟ್‌ ಏನೇನು? ರಾಷ್ಟ್ರೀಯ ಪೌಷ್ಟಿಕಾಂಶ ಸಂಸ್ಥೆಯ ಸೂಚನೆ ಇಲ್ಲಿದೆ

Shankara Jayanti 2024
ಧಾರ್ಮಿಕ4 hours ago

Shankara Jayanti 2024: ಇಂದು ಶಂಕರ ಜಯಂತಿ; ಶಂಕರಾಚಾರ್ಯರ ಕುರಿತ 9 ಕುತೂಹಲಕರ ಸಂಗತಿಗಳು

International Nurses’s Day
ಆರೋಗ್ಯ4 hours ago

International Nurses’s Day: ಇಂದು ನರ್ಸ್‌ಗಳ ದಿನ; ಈ ದಿನಾಚರಣೆ ಹಿನ್ನೆಲೆ ಏನು?

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ4 hours ago

Dina Bhavishya: ಹತಾಶೆಯಲ್ಲಿ ಈ ತೀರ್ಮಾನ ಮಾಡಲೇಬೇಡಿ; ಈ ರಾಶಿಯವರು ಜೀವನ ಪೂರ್ತಿ ಕೊರಗಬೇಕಾಗುತ್ತೆ!

Bengaluru News
ಬೆಂಗಳೂರು18 hours ago

Bengaluru News : ಕೆಎಎಸ್‌ ಅಧಿಕಾರಿ ಪತ್ನಿ ಅನುಮಾನಾಸ್ಪದ‌ ಸಾವು; ಹೈಕೋರ್ಟ್‌ ವಕೀಲೆಗೆ ಕಾಡಿದ್ದೇನು?

Dina Bhavishya
ಭವಿಷ್ಯ1 day ago

Dina Bhavishya : ಈ ದಿನ ಅತಿರೇಕದ ಮಾತುಗಳು ಅಪಾಯ ತರಬಹುದು

Physical Abuse The public prosecutor called the client woman to the lodge
ಕ್ರೈಂ2 days ago

Physical Abuse : ಲೈಂಗಿಕ ದೌರ್ಜನ್ಯ; ಕಕ್ಷಿದಾರ ಮಹಿಳೆಯನ್ನು ಮಂಚಕ್ಕೆ ಕರೆದ ಪಬ್ಲಿಕ್ ಪ್ರಾಸಿಕ್ಯೂಟರ್!

murder case kalaburagi
ಕಲಬುರಗಿ2 days ago

Murder Case : ಕಾಂಗ್ರೆಸ್‌ಗೆ ವೋಟ್‌ ಹಾಕಿದ್ದಕ್ಕೆ ಅಮಾವಾಸ್ಯೆ ದಿನ ಕರೆದು ಕೊಂದರು

Rain Effect In karnataka
ಮಳೆ2 days ago

Rain Effect : ಬಿರುಗಾಳಿ ರಭಸಕ್ಕೆ ಮನೆಯ ಗೇಟ್ ಬಿದ್ದು ಬಾಲಕಿ ಸಾವು; ಸಿಡಿಲಿಗೆ ಎತ್ತುಗಳು ಬಲಿ

Dina Bhavishya
ಭವಿಷ್ಯ2 days ago

Dina Bhavishya: ಶುಭ ಶುಕ್ರವಾರ ಈ ರಾಶಿಯವರಿಗೆ ಖುಲಾಯಿಸಲಿದೆ ಲಕ್‌

Prajwal Revanna case Revanna bail plea to be heard on Monday Advocate Nagesh argument was as follows
ಕ್ರೈಂ2 days ago

Prajwal Revanna Case: ರೇವಣ್ಣ ಜಾಮೀನು ಅರ್ಜಿ ಸೋಮವಾರಕ್ಕೆ: ಎಸ್‌ಐಟಿಗೆ ಹಿಗ್ಗಾಮುಗ್ಗಾ ತರಾಟೆ; ವಕೀಲ ನಾಗೇಶ್‌ ವಾದ ಹೀಗಿತ್ತು!

Prajwal Revanna Case Hasanambe is going to destroy this government HD Kumaraswamy curse
ರಾಜಕೀಯ3 days ago

Prajwal Revanna Case: ಈ ಸರ್ಕಾರವನ್ನು ಹಾಸನಾಂಬೆ ಧ್ವಂಸ ಮಾಡಲಿದ್ದಾಳೆ: ಎಚ್‌ಡಿಕೆ ಶಾಪ

Prajwal Revanna Case DK Shivakumar alleged mastermind in 25000 pen drive allotment
ಹಾಸನ3 days ago

Prajwal Revanna Case: 25,000 ಪೆನ್ ಡ್ರೈವ್ ಹಂಚಿಕೆಯಲ್ಲಿ ಡಿ.ಕೆ. ಶಿವಕುಮಾರ್ ಮಾಸ್ಟರ್ ಮೈಂಡ್ ಎಂದು ರಾಜ್ಯಪಾಲರಿಗೆ ದೂರು!

ಟ್ರೆಂಡಿಂಗ್‌