Site icon Vistara News

Scholarships: ವಿದ್ಯಾರ್ಥಿಗಳಿಗೆ ಗುಡ್‌ ನ್ಯೂಸ್‌; ಎಲ್‌ಐಸಿ ಸ್ಕಾಲರ್‌ಶಿಪ್‌ಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿ

lic scholarship

lic scholarship

ಬೆಂಗಳೂರು: ಪ್ರತಿಯೊಬ್ಬರ ಜೀವನದಲ್ಲಿ ಶಿಕ್ಷಣ ಎನ್ನುವುದು ಬಹಳ ಮುಖ್ಯ ಪಾತ್ರವಹಿಸುತ್ತದೆ. ಇದಕ್ಕೆಂದೇ ಸರ್ಕಾರಗಳು ಶಿಕ್ಷಣಕ್ಕೆ ಒತ್ತು ನೀಡುತ್ತವೆ. ಉಚಿತ ವಿದ್ಯಾಭ್ಯಾಸ, ಉನ್ನತ ಶಿಕ್ಷಣಕ್ಕೆ ಸಾಲ ಸೌಲಭ್ಯ, ಸ್ಕಾಲರ್‌ಶಿಪ್‌ (Scholarships) ಮುಂತಾದ ಯೋಜನೆಗಳನ್ನು ಪ್ರಕಟಿಸಿ ವಿದ್ಯಾರ್ಥಿಗಳಿಗೆ ನೆರವಿಗೆ ಧಾವಿಸುತ್ತವೆ. ಸರ್ಕಾರದ ಜತೆಗೆ ಕೆಲವು ಸಂಸ್ಥೆಗಳು ಕೂಡ ವಿದ್ಯಾರ್ಥಿವೇತನ ನೀಡುತ್ತವೆ. ಭಾರತದ ನಂಬರ್ ಒನ್ ಇನ್ಷೂರೆನ್ಸ್ ಕಂಪೆನಿ ಎನಿಸಿಕೊಂಡಿರುವ ಲೈಫ್ ಇನ್ಶುರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (LIC) ಕೂಡ ಇದಕ್ಕೆ ಹೊರತಲ್ಲ. ನೀವೂ ಕೂಡ ಎಲ್‌ಐಸಿಯ ಈ ಯೋಜನೆಯ ಲಾಭ ಪಡೆಯಬಹುದು. ಆ ಕುರಿತಾದ ವಿವರ ಇಲ್ಲಿದೆ (LIC Golden Jubilee Scholarship Scheme 2023).

ಏನಿದು ಯೋಜನೆ?

ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಸೇರಿದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ನೆರವಾಗುವ ಉದ್ದೇಶದಿಂದ ಎಲ್‌ಐಸಿ ಗೋಲ್ಡನ್‌ ಜುಬಿಲಿ ಸ್ಕಾಲರ್‌ಶಿಪ್‌ ಸ್ಕೀಮ್‌ 2023 ಅನ್ನು ಪರಿಚಯಿಸಲಾಗಿದೆ. 12ನೇ ತರಗತಿಯ ನಂತರ ಮತ್ತು 10ನೇ ತರಗತಿಯ ನಂತರದ ಕೋರ್ಸ್‌ಗಳನ್ನು ಅಧ್ಯಯನ ಮಾಡುವ ವಿದ್ಯಾರ್ಥಿಗಳು ಸ್ಕಾಲರ್‌ಶಿಪ್‌ಗೆ ಅರ್ಜಿ ಸಲ್ಲಿಸಬಹುದು. ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ಕೊನೆಯ ದಿನಾಂಕ ಜನವರಿ 14. ಈ ವಿದ್ಯಾರ್ಥಿ ವೇತನವನ್ನು ಜನರಲ್‌ ಸ್ಕಾಲರ್‌ಶಿಪ್‌ ಮತ್ತು ಹೆಣ್ಣು ಮಕ್ಕಳಿಗಾಗಿ ವಿಶೇಷ ಸ್ಕಾಲರ್‌ಶಿಪ್‌ ಎನ್ನುವ ಎರಡು ವಿಭಾಗಗಳಲ್ಲಿ ಒದಗಿಸಲಾಗುತ್ತದೆ.

ಅರ್ಹತೆಗಳೇನು?

ಜನರಲ್‌ ಸ್ಕಾಲರ್‌ಶಿಪ್‌: ಸಾಮಾನ್ಯ ವಿಭಾಗದ, 12ನೇ ತರಗತಿಯ ನಂತರದ ಸ್ಕಾಲರ್‌ಶಿಪ್‌ ಪಡೆಯಲು ಅಗತ್ಯವಾದ ಅರ್ಹತೆಗಳೇನು ಎನ್ನುವುದನ್ನು ನೋಡೋಣ. 12ನೇ ತರಗತಿ (ದ್ವಿತೀಯ ಪಿಯುಸಿ) ಅಥವಾ ತತ್ಸಮಾನ ಕೋರ್ಸ್‌ ಮುಗಿಸಿ ಮೆಡಿಕಲ್‌, ಎಂಜಿನಿಯರಿಂಗ್‌, ಪದವಿ ಅಥವಾ ಯಾವುದೇ ವೃತ್ತಿಪರ ಕೋರ್ಸ್‌ಗಳಲ್ಲಿ ಶಿಕ್ಷಣ ಮುಂದುವರಿಸುತ್ತಿರುವವರು ಅರ್ಜಿ ಸಲ್ಲಿಸಬಹುದು. ಇನ್ನು 10ನೇ ತರಗತಿ ನಂತರದ ಸಾಮಾನ್ಯ ವಿಭಾಗದ ಸ್ಕಾಲರ್‌ಶಿಪ್‌ ಪಡೆಯಲು ಬೇಕಾದ ಅರ್ಹತೆ: ಹತ್ತನೇ ತರಗತಿ ತೇರ್ಗಡೆಯಾಗಿ ವೃತ್ತಿಪರ / ಡಿಪ್ಲೋಮಾ ಕೋರ್ಸ್‌ಗಳಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿರುವವರು ಅರ್ಜಿ ಸಲ್ಲಿಸಬಹುದು.

ಹೆಣ್ಣು ಮಕ್ಕಳ ವಿಶೇಷ ಸ್ಕಾಲರ್‌ಶಿಪ್‌: ಹತ್ತನೇ ತರಗತಿಯಲ್ಲಿ ತೇರ್ಗಡೆಯಾಗಿ ದ್ವಿತೀಯ ಪಿಯುಸಿ / ಪ್ಲಸ್‌ 2 / ವೃತ್ತಿಪರ ಅಥವಾ ಡಿಪ್ಲೋಮಾ ಕೋರ್ಸ್‌ ಓದುತ್ತಿರುವ ವಿದ್ಯಾರ್ಥಿನಿಯರು ಈ ವಿಭಾಗದಲ್ಲಿ ಅರ್ಜಿ ಸಲ್ಲಿಸಬಹುದು.

ಷರತ್ತುಗಳು

ಸ್ಕಾಲರ್‌ಶಿಪ್‌ ಮೊತ್ತ

ಜನರಲ್‌ ಸ್ಕಾಲರ್‌ಶಿಪ್‌: ಮೆಡಿಸಿನ್‌ ಕೋರ್ಸ್‌ಗೆ: ಪ್ರತಿ ವರ್ಷ 3 ಕಂತುಗಳಲ್ಲಿ 40,000 ರೂ. ಎಂಜಿನಿಯರಿಂಗ್‌ ಕೋರ್ಸ್‌ಗೆ: 3 ಕಂತುಗಳಲ್ಲಿ 30,000 ರೂ. ಯಾವುದೇ ರೀತಿಯ ಪದವಿ, ಡಿಪ್ಲೋಮಾ ಮತ್ತು ಇದೇ ಮಾದರಿಯ ವೃತ್ತಿಪರ ಕೋರ್ಸ್‌ಗಳಿಗೆ: 3 ಕಂತುಗಳಲ್ಲಿ 20,000 ರೂ.
ಹೆಣ್ಣು ಮಕ್ಕಳ ವಿಶೇಷ ಸ್ಕಾಲರ್‌ಶಿಪ್‌: 3 ಕಂತುಗಳಲ್ಲಿ 15,000 ರೂ.

ಆಯ್ಕೆ ವಿಧಾನ

ಅರ್ಜದಾರರ 10 / 12ನೇ ತರಗತಿಯ ಅಂಕ, ಕುಟುಂಬದ ವಾರ್ಷಿಕ ಆದಾಯ ಪರಿಶೀಲಿಸಿ ಸ್ಕಾಲರ್‌ಶಿಪ್‌ಗೆ ಆಯ್ಕೆ ಮಾಡಲಾಗುತ್ತದೆ.

ಹೆಚ್ಚಿನ ಮಾಹಿತಿ ತಿಳಿಯಲು ಇಲ್ಲಿ ಕ್ಲಿಕ್‌ ಮಾಡಿ.

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್‌ ಮಾಡಿ.

ಇದನ್ನೂ ಓದಿ: Edu Guide: ಉನ್ನತ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ಸಿಗಲಿವೆ ಇವೆಲ್ಲ ಸ್ಕಾಲರ್‌ಶಿಪ್‌

Exit mobile version