Site icon Vistara News

Chocolate: ಏನಿದು ಮೀಲಿಬಗ್‌ ವೈರಸ್‌? ಚಾಕೊಲೇಟ್ ದರ ಏರಿಕೆಗೂ ಇದಕ್ಕೂ ಏನು ಸಂಬಂಧ?

Chocolate industry

ನವದೆಹಲಿ: ಚಾಕೊಲೇಟ್‌ನಲ್ಲಿ ಬಳಸುವ ಪ್ರಮುಖ ಸಾಮಗ್ರಿಯಾದ ಕೋಕೋ (cacao) ಮರಗಳಲ್ಲಿ ವೈರಸ್ (virus) ಕಾಣಿಸಿಕೊಂಡಿದ್ದು, ಇದು ಚಾಕೊಲೇಟ್ ಉತ್ಪಾದನೆ ಮೇಲೆ ಬಹುದೊಡ್ದ ಹೊಡೆತ ಬೀಳುವ ಸಾಧ್ಯತೆ ಇದೆ. ಇದರಿಂದ ಚಾಕೊಲೇಟ್‌ಗಳು ಮತ್ತಷ್ಟು ದುಬಾರಿಯಾಗಬಹುದು.

ಪ್ರಸ್ತುತ ಪಶ್ಚಿಮ ಆಫ್ರಿಕಾದ (West Africa) ಕೋಕೋ ಮರಗಳಲ್ಲಿ ವೈರಸ್ ಹರಡುತ್ತಿದ್ದು, ಇದು ಚಾಕೊಲೇಟ್ ಪೂರೈಕೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಮೀಲಿಬಗ್‌ (mealybugs) ವೈರಸ್ ಗಳಿಂದ ಚಿಗುರು ಊದಿಕೊಂಡಿದ್ದು, ಒಂದರಿಂದ ಇನ್ನೊಂದಕ್ಕೆ ವೇಗವಾಗಿ ಹರಡುತ್ತಿದೆ. ಇದು ಬಿಸಿ ವಾತಾವರಣದಲ್ಲಿ ಹೆಚ್ಚು ತೀವ್ರವಾಗಿ ಬೆಳೆಯುತ್ತಿದೆ.

ಈ ವೈರಸ್ ಭೂಮಿಯ ಮೇಲಿರುವ ಪರಿಸರ ವಿನಾಶಕಾರಿ ಜೀವಿ ಎನ್ನಲಾಗುತ್ತದೆ. ಇದು ಘಾನಾದಲ್ಲಿ 50,000 ಹೆಕ್ಟೇರ್ ಕೋಕೋ ಫಾರ್ಮ್‌ಗಳನ್ನು ನಾಶಪಡಿಸಿದೆ. ಇದು ವಿಶ್ವದ ಎರಡನೇ ಅತಿದೊಡ್ಡ ಚಾಕೊಲೇಟ್ ಉತ್ಪಾದಕ ದೇಶ. ಇದು ಜಾಗತಿಕ ಚಾಕೊಲೇಟ್ ಪೂರೈಕೆಯ ಮೇಲೆ ತೀವ್ರ ಪರಿಣಾಮ ಬೀರುವ ಸಾಧ್ಯತೆ ಇದೆ.

ಇದನ್ನೂ ಓದಿ: Areca Price: ಅಡಿಕೆ ದರ ಗಗನಮುಖಿ; ಚುನಾವಣೆ ಬಳಿಕ ಮತ್ತಷ್ಟು ಏರಿಕೆ?

ಯುಎಸ್ ಮತ್ತು ಘಾನಾದ ವಿಶ್ವವಿದ್ಯಾನಿಲಯಗಳ ವಿಜ್ಞಾನಿಗಳು ವೈರಸ್ ಹರಡುವುದನ್ನು ನಿಲ್ಲಿಸಲು ಪ್ರಯತ್ನಿಸುತ್ತಿದ್ದಾರೆ. ಪ್ರಪಂಚದ ಚಾಕೊಲೇಟ್‌ಗಳನ್ನು ಉಳಿಸಲು ಹೊಸ ಮಾರ್ಗವನ್ನು ಈಗಾಗಲೇ ಕಂಡುಹಿಡಿದಿದ್ದರೂ ಇದು ಚಾಕೊಲೇಟ್ ನ ಜಾಗತಿಕ ಪೂರೈಕೆ ಸರಪಳಿಗೆ ಅಡ್ಡಿಯಾಗುವ ಸಾಧ್ಯತೆ ಇದೆ.


ಚಾಕೊಲೇಟ್ ಪೂರೈಕೆ ಮೇಲೆ ಪರಿಣಾಮ

ಪ್ರಪಂಚದ ಶೇ. 50ರಷ್ಟು ಚಾಕೊಲೇಟ್‌ಗಳು ಘಾನಾ ಮತ್ತು ಐವರಿ ಕೋಸ್ಟ್‌ನಿಂದ ಬರುತ್ತವೆ. ಈ ಪ್ರದೇಶಗಳಲ್ಲಿನ ಕೋಕೋ ಮರಗಳ ಚಿಗುರು ವೈರಸ್ ನಿಂದ ನಾಶವಾಗಿವೆ. ಕೊಲಂಬಿಯಾದಲ್ಲಿ ರೈತರು ಒಡೆದು ಸಿಪ್ಪೆ ಸುಲಿದಿದ್ದರೂ ಕೋಕೋ ಮರಗಳ ಎಲೆ, ಮೊಗ್ಗು ಮತ್ತು ಹೂವುಗಳನ್ನು ತಿನ್ನುವ ಮೀಲಿಬಗ್ಸ್ ಎಂದು ಕರೆಯಲ್ಪಡುವ ಸಣ್ಣ ಕೀಟಗಳಿಂದ ವೈರಸ್ ಹರಡುತ್ತದೆ. ಘಾನಾವು 254 ಮಿಲಿಯನ್ ಮರಗಳನ್ನು ಹೊಂದಿದೆ ಮತ್ತು ಐವರಿ ಕೋಸ್ಟ್‌ನಲ್ಲಿ ಶೇ. 20ರಷ್ಟು ಬೆಳೆ ಸೋಂಕಿಗೆ ಒಳಗಾಗಿದೆ.

ಚಾಕೊಲೇಟ್‌ ಹೇಗೆ ತಯಾರಿಸಲಾಗುತ್ತದೆ?

ಉಷ್ಣವಲಯದ ಹವಾಮಾನದಲ್ಲಿ ಬೆಳೆಯುವ ಕೋಕೋ ಬೀನ್ಸ್‌ನಿಂದ ಚಾಕೊಲೇಟ್‌ಗಳನ್ನು ತಯಾರಿಸಲಾಗುತ್ತದೆ. ಅವುಗಳನ್ನು ಹುದುಗಿಸಿ, ಒಣಗಿಸಿ ಮತ್ತು ಹುರಿದು ಮಾಡಿದ ಪುಡಿಯನ್ನು ಹಾಲು ಮತ್ತು ಸಕ್ಕರೆಯೊಂದಿಗೆ ಬೆರೆಸಿ ಚಾಕೊಲೇಟ್ ತಯಾರಿಸಲಾಗುತ್ತದೆ.

2022ರಲ್ಲಿ ಐವರಿ ಕೋಸ್ಟ್ 2.2 ಮಿಲಿಯನ್ ಟನ್ ಕೋಕೋವನ್ನು ಉತ್ಪಾದಿಸಿತು ಮತ್ತು ಘಾನಾ 1.1 ಮಿಲಿಯನ್ ಉತ್ಪಾದಿಸಿತು. ಪ್ರಪಂಚದ ಅತಿದೊಡ್ಡ ಉತ್ಪಾದಕ ಇಂಡೋನೇಷ್ಯಾವು 2022 ರಲ್ಲಿ 6,67,000 ಟನ್‌ಗಳನ್ನು ಉತ್ಪಾದಿಸಿದೆ.

ಬೆಚ್ಚಗಿನ ತಾಪಮಾನವು ಮೀಲಿಬಗ್ ಗೆ ಹೆಚ್ಚು ಪೂರಕವಾಗಿರುವುದರಿಂದ ಪರಿಸ್ಥಿತಿ ಇನ್ನಷ್ಟು ಹದಗೆಡುವ ಸಾಧ್ಯತೆ ಇದೆ. ಆರ್ಲಿಂಗ್ಟನ್‌ನಲ್ಲಿರುವ ಟೆಕ್ಸಾಸ್ ವಿಶ್ವವಿದ್ಯಾನಿಲಯದ ತಜ್ಞರ ಪ್ರಕಾರ, ಈ ವೈರಸ್ ಪ್ರಪಂಚದ ಚಾಕೊಲೇಟ್ ಪೂರೈಕೆಗೆ ಅಪಾಯವನ್ನುಂಟು ಮಾಡುತ್ತದೆ.

ವೈರಸ್ ಅನ್ನು ನಿಲ್ಲಿಸಬಹುದೇ?

ಕೀಟನಾಶಕಗಳಿಂದ ಮೀಲಿಬಗ್‌ಗಳ ವಿರುದ್ಧ ಹೋರಾಡಲು ಸಾಧ್ಯವಿಲ್ಲ. ಸೋಂಕಿತ ಮರಗಳನ್ನು ಕಡಿಯುವುದು ಮತ್ತು ನಿರೋಧಕ ಮರಗಳನ್ನು ನೆಡುವುದು ಸುಲಭ ಮತ್ತು ಅಗ್ಗದ ಮಾರ್ಗವಾಗಿದೆ. ರೈತರು ಮರಗಳಿಗೆ ಲಸಿಕೆಯನ್ನೂ ನೀಡಬಹುದು. ಆದರೆ ಇದು ದುಬಾರಿಯಾಗಿರುವುದರಿಂದ ಇದು ಮರಗಳಿಂದ ಉತ್ಪತ್ತಿಯಾಗುವ ಕೋಕೋ ಮೇಲೆ ಪರಿಣಾಮವನ್ನು ಬೀರುತ್ತದೆ.

ದೂರದೂರ ಮರಗಳನ್ನು ನೆಡುವುದರಿಂದ ವೈರಸ್ ಹರಡುವುದನ್ನು ತಡೆಯಲು ಸಹಾಯ ಮಾಡುತ್ತದೆ ಎನ್ನುತ್ತಾರೆ ಸಂಶೋಧಕರು. ಆದರೆ ಇದು ಇನ್ನೂ ಪ್ರಯೋಗ ಹಂತದಲ್ಲಿದೆ. ಇದು ರೈತರಿಗೆ ತಮ್ಮ ಬೆಳೆಯನ್ನು ರಕ್ಷಿಸಲು ಸಹಾಯ ಮಾಡುವ ಸಾಧ್ಯತೆಯಿದೆ.


ಮೀಲಿಬಗ್‌ನಿಂದ ಮಾತ್ರ ತೊಂದರೆಯೇ?

ಈ ಹಿಂದೆ ಕಪ್ಪು ಪಾಡ್ ರೋಗವು ಚಾಕೊಲೇಟ್ ಉತ್ಪನ್ನಗಳ ಮೇಲೆ ಪರಿಣಾಮ ಬೀರಿತ್ತು. ಈ ರೋಗವು ಕೋಕೋ ಬೀಜಗಳನ್ನು ಕಪ್ಪು ಅಥವಾ ಕಂದು ಬಣ್ಣಕ್ಕೆ ತಿರುಗಿಸುತ್ತದೆ. ಇದು 2022 ರಲ್ಲಿ ವಿಶ್ವದ ವಾರ್ಷಿಕ ಕೋಕೋ ಬೆಳೆಗಳಲ್ಲಿ ಶೇ. 30ರಷ್ಟನ್ನು ನಾಶಪಡಿಸಿತು. ಈ ಪ್ರದೇಶದಲ್ಲಿ ಉಂಟಾದ ಭಾರೀ ಮಳೆಯಿಂದಾಗಿ ರೋಗವನ್ನು ಮತ್ತಷ್ಟು ಉಲ್ಬಣವಾಗಿತ್ತು. ಏಕೆಂದರೆ ಸೋಂಕು ತೇವಾಂಶವುಳ್ಳ ಸ್ಥಿತಿಯಲ್ಲಿ ಹೆಚ್ಚು ವೇಗವಾಗಿ ಬೆಳೆಯುತ್ತದೆ ಮತ್ತು ಹರಡುತ್ತದೆ.

Exit mobile version