ಹುಲಿ (tiger), ಚಿರತೆ (Leopard), ಸಿಂಹ (lion) ಇವುಗಳನ್ನು ನೋಡಿದರೆ (Tigers fasting) ಎಷ್ಟು ಗಟ್ಟಿ ಹೃದಯವಾದರೂ ಒಮ್ಮೆ ಮೈ ನಡುಗುತ್ತದೆ. ಯಾಕೆಂದರೆ ಇವುಗಳು ಯಾರ ಮೇಲೂ ಕರುಣೆಯನ್ನು ತೋರುವುದಿಲ್ಲ. ಅವುಗಳ ಆಕ್ರಮಣದಿಂದ ಬದುಕಿ ಉಳಿದರೆ ಅದು ಇನ್ನೊಂದು ಜನ್ಮ ಸಿಕ್ಕಿದಂತೆಯೇ.. ಇವುಗಳನ್ನು ಪಳಗಿಸುವುದು,. ಕೂಡಿ ಹಾಕುವುದು ಅಷ್ಟು ಸುಲಭವಲ್ಲ. ಆದರೂ ಪ್ರಾಣಿ ಸಂಗ್ರಹಾಲಯದಲ್ಲಿ ಅತ್ಯಂತ ಎಚ್ಚರಿಕೆಯಿಂದ ಇವುಗಳನ್ನು ಸಂರಕ್ಷಿಸಿ ಇಡಲಾಗುತ್ತದೆ.
ಪ್ರಕೃತಿಯೇ ಕೆಲವೊಂದು ಪ್ರಾಣಿಗಳನ್ನು ಸಂಪೂರ್ಣವಾಗಿ ಮಾಂಸಹಾರಿಗಳನ್ನಾಗಿ ಮಾಡಿದೆ. ಇದರಲ್ಲಿ ಹುಲಿಗಳು ಸೇರಿವೆ. ಇದು ಬೇಟೆಯಾಡುವಾಗ ಮಾತ್ರ ಯಾರ ಮೇಲೂ ಕರುಣೆ ತೋರಿಸುವುದಿಲ್ಲ. ಹೊಟ್ಟೆ ತುಂಬಿದಾಗ ಮಾತ್ರ ಸುಮ್ಮನಿರುತ್ತವೆ.
ಹುಲಿಗಳು ಸಂಪೂರ್ಣವಾಗಿ ಮಾಂಸಾಹಾರಿಗಳು ಮತ್ತು ಬದುಕಲು ಮಾಂಸವನ್ನು ಅವಲಂಬಿಸಿರುತ್ತವೆ. ಆದರೆ ಈ ಹುಲಿಗಳು ಇದೀಗ ಮೃಗಾಲಯದಲ್ಲಿ ವಾರದಲ್ಲಿ ಒಂದು ದಿನ ಉಪವಾಸ (Tigers fasting) ಮಾಡುತ್ತಿವೆ. ಆ ದಿನ ಮಾಂಸಾಹಾರವನ್ನು ಅದು ಸೇವಿಸುವುದೇ ಇಲ್ಲ.
ಎಲ್ಲಿ?
ನೇಪಾಳದ (nepal) ಕೇಂದ್ರ ಮೃಗಾಲಯದಲ್ಲಿರುವ (Central Zoo) ಹುಲಿಗಳು ಉಪವಾಸ ಆಚರಿಸುತ್ತಿರುವುದಾಗಿ ತಿಳಿದು ಬಂದಿದೆ. ಇದು ಆಹಾರದ ಕೊರತೆಯಿಂದ ಅಂತೂ ಅಲ್ಲ.
ಇದನ್ನೂ ಓದಿ: Health Benefits of Walnuts: ವಾಲ್‌ನಟ್ ತಿಂದರೆ ಆಗುವ ಪ್ರಯೋಜನಗಳು ಹಲವು!
ಉಪವಾಸ ಯಾಕೆ?
ನೇಪಾಳದ ಮೃಗಾಲಯದಲ್ಲಿ ಹುಲಿಗಳನ್ನು ಉದ್ದೇಶಪೂರ್ವಕವಾಗಿ ವಾರದಲ್ಲಿ ಒಂದು ದಿನ ಉಪವಾಸ ಇರುವಂತೆ ಮಾಡಲಾಗುತ್ತದೆ. ಯಾಕೆಂದರೆ ಇದು ಅವುಗಳ ಅರೋಗ್ಯಕ್ಕಾಗಿ.
ಏನಾಗಿದೆ?
ಈ ಕುರಿತು ಮಾಹಿತಿ ನೀಡಿರುವ ಮೃಗಾಲಯದ ಮಾಹಿತಿ ಅಧಿಕಾರಿ ಗಣೇಶ್ ಕೊಯಿರಾಲಾ, ಹುಲಿಗಳ ಆರೋಗ್ಯವನ್ನು ಸುಧಾರಿಸುವ ಸಲುವಾಗಿ ಪ್ರತಿ ಶನಿವಾರ ಉಪವಾಸ ಇರಿಸಲಾಗುತ್ತದೆ. ಈ ಸಂದರ್ಭದಲ್ಲಿ ಅವುಗಳಿಂದ ಯಾವುದೇ ಪ್ರಾಣಿಗಳಿಗೂ ತೊಂದರೆಯಾಗುವುದಿಲ್ಲ. ಹುಲಿಗಳನ್ನು ಉಪವಾಸಕ್ಕೆ ಹಾಕಲು ಮುಖ್ಯ ಕಾರಣ ತೂಕ ಹೆಚ್ಚಳ ಸಮಸ್ಯೆ. ಹೀಗಾಗಿ ಅವುಗಳನ್ನು ಒಂದು ದಿನ ಉಪವಾಸವಿಟ್ಟು ಅವುಗಳ ಜೀರ್ಣಕ್ರಿಯೆ ಚೆನ್ನಾಗಿ ಇರುವಂತೆ ನೋಡಿಕೊಳ್ಳಲಾಗುತ್ತದೆ ಎನ್ನುತ್ತಾರೆ.
ಎಷ್ಟು ಆಹಾರ ಸೇವಿಸುತ್ತದೆ?
ಮೃಗಾಲಯದಲ್ಲಿ ಹೆಣ್ಣು ಹುಲಿಗಳಿಗೆ ಐದು ಕೆ.ಜಿ ಎಮ್ಮೆ ಮಾಂಸ ಮತ್ತು ಗಂಡು ಹುಲಿಗಳು ದಿನಕ್ಕೆ 6 ಕೆ.ಜಿ ಮಾಂಸವನ್ನು ತಿನ್ನುತ್ತವೆ. ಆದರೆ ಶನಿವಾರದಂದು ಅವುಗಳ ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುವ ಸಲುವಾಗಿ ಮಾಂಸವನ್ನು ತಿನ್ನುವುದಿಲ್ಲ.
ಯಾವ ಸಮಸ್ಯೆ ?
ಮೃಗಾಲಯದ ಹುಲಿಗಳು ಇತ್ತೀಚಿಗೆ ಸ್ಥೂಲಕಾಯ ಸಮಸ್ಯೆಗಳನ್ನು ಎದುರಿಸಿವೆ. ಇದಕ್ಕಾಗಿ ಔಷಧವನ್ನು ಅವಲಂಬಿಸುವುದು ಅವುಗಳ ಅರೋಗ್ಯ ದೃಷ್ಟಿಯಿಂದ ಒಳ್ಳೆಯದಲ್ಲ. ಹೀಗಾಗಿ ಒಂದು ದಿನ ಉಪವಾಸ ಮಾಡಿಸಿ ಅವುಗಳ ಅರೋಗ್ಯ ರಕ್ಷಣೆ ಮಾಡಲಾಗುತ್ತಿದೆ. ಇದು ಅವುಗಳ ಆರೋಗ್ಯವನ್ನು ನಿರ್ವಹಿಸಲು ಸುಲಭವಾದ ಮಾರ್ಗ. ಇದು ಅವುಗಳ ದೀರ್ಘಾವಧಿಯ ಮೇಲೆ ಪರಿಣಾಮ ಬೀರುತ್ತದೆ ಎನ್ನಲಾಗುತ್ತಿದೆ. ಯಾಕೆಂದರೆ ಮಾಂಸಾಹಾರಿ ಪ್ರಾಣಿಗಳು ಒಂದು ದಿನದ ಉಪವಾಸ ಮಾಡುವಾಗ ಅದು ಅವರ ಆರೋಗ್ಯದ ಮೇಲೆ ಗಮನಾರ್ಹವಾದ ಧನಾತ್ಮಕ ಪರಿಣಾಮ ಬಿರುವುದಾಗಿ ತಜ್ಞರು ಗಮನಿಸಿದ್ದಾರೆ.
ಆಹಾರ ಹೇಗಿರುತ್ತದೆ ?
ಸಾಮಾನ್ಯವಾಗಿ ಹುಲಿಗಳು ಗೆದ್ದಲುಗಳಂತಹ ಸಣ್ಣ ಕೀಟಗಳಿಂದ ಹಿಡಿದು ದೊಡ್ಡ ಆನೆ, ಕರುಗಳನ್ನೂ ಸೇವಿಸುತ್ತದೆ. ಜಿಂಕೆ, ಹಂದಿ, ಹಸು, ಕುದುರೆ, ಎಮ್ಮೆ ಮತ್ತು ಮೇಕೆಗಳಂತಹ ಪ್ರಾಣಿಗಳನ್ನು ಅವು ಬೇಟೆಯಾಡಿ ತಿನ್ನುತ್ತವೆ. ಸಾಮಾನ್ಯವಾಗಿ ಅವುಗಳ ಆಹಾರ ಕನಿಷ್ಠ 20 ಕೆ.ಜಿ. (45 ಪೌಂಡ್) ನಷ್ಟಿರುತ್ತದೆ.
ನೇಪಾಳದ ಕೇಂದ್ರ ಮೃಗಾಲಯ
ನೇಪಾಳದ ಕೇಂದ್ರ ಮೃಗಾಲಯವು ಜವಾಲಾಖೇಲ್‌ನ ಹತ್ತಿರದಲ್ಲಿದೆ. ಇಲ್ಲಿ 109 ವಿಭಿನ್ನ ಜಾತಿಗಳ 969 ಪ್ರಾಣಿಗಳ ಆವಾಸಸ್ಥಾನವಾಗಿದೆ. ಪ್ರಸ್ತುತ ನ್ಯಾಷನಲ್ ಟ್ರಸ್ಟ್ ಫಾರ್ ನೇಚರ್ ಕನ್ಸರ್ವೇಶನ್ (NTNC) ನಿಂದ ನಿರ್ವಹಿಸಲ್ಪಡುತ್ತಿದೆ. 15 ಎಕರೆ ಪ್ರದೇಶದಲ್ಲಿ ವ್ಯಾಪಿಸಿರುವ ಈ ಮೃಗಾಲಯವು ಮೊದಲು ಖಾಸಗಿ ಸಂಸ್ಥೆಯಿಂದ ನಡೆಸಲ್ಪಡುತ್ತಿತ್ತು. 1956 ರಲ್ಲಿ ಇದನ್ನು ಸಾರ್ವಜನಿಕರಿಗಾಗಿ ತೆರೆಯಲಾಯಿತು.