Site icon Vistara News

Fact Check: ಸ್ಟಾರ್ ಗುರುತಿರುವ 500 ರೂಪಾಯಿ ನೋಟು ನಕಲಿಯೇ?

Is 500 note with star symbol is fake, What Fact Check says?

ಬೆಂಗಳೂರು: ಚುಕ್ಕೆ(ಸ್ಟಾರ್) ಗುರುತು ಇರುವ (Star Symbol) 500 ರೂ. ನೋಟುಗಳು ನಕಲಿ (Fake Rs 500 notes), ಆ ನೋಟುಗಳನ್ನು ಬ್ಯಾಂಕ್‌ಗೆ ವಾಪಸ್ ಮಾಡಿ (Return to Bank) ಎಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ (Social Media) ಜೋರಾಗಿದೆ. ಹಲವರು ಈ ಸುದ್ದಿಯನ್ನು ನಂಬಿ ನೋಟುಗಳನ್ನು ವಾಪಸ್ ಮಾಡಲು ಮುಂದಾದ ಉದಾಹರಣೆಗಳಿವೆ. ಈ ಸುದ್ದಿ ಕಳೆದ ಐದಾರು ತಿಂಗಳಿಂದ ಚಾಲ್ತಿಯಲ್ಲಿದ್ದು, ಈ ಕುರಿತು ಆಗಲೇ ಭಾರತೀಯ ರಿಸರ್ವ್ ಬ್ಯಾಂಕ್ ಸ್ಪಷ್ಟಣೆ ನೀಡಿದೆ(Reserve bank of India). ಆದರೂ ಈ ವದಂತಿ ನಿಲ್ಲುತ್ತಿಲ್ಲ. ಪಿಐಬಿ ಫ್ಯಾಕ್ಟ್ ಚೆಕ್(PIB Fact Check), ಸ್ಟಾರ್‌ ಗುರುತಿರುವ ನೋಟುಗಳು ನಕಲಿ ಅಲ್ಲ; ಅಸಲಿ ಎಂದು ಈಗ ಮತ್ತೆ ಟ್ವೀಟ್ ಮಾಡಿದೆ.

500 ರೂ. ನೋಟು ಕುರಿತು ಸಾರ್ವಜನಿಕರಲ್ಲಿ ಉಂಟಾಗಿರುವ ಗೊಂದಲ ಕುರಿತು ಆರ್‌ಬಿಐ ಈ ಹಿಂದೆಯೇ ಮಾಹಿತಿ ನೀಡಿದೆ. ಸ್ಟಾರ್ ಗುರುತು ಈ ನೋಟುಗಳು ಚಲಾವಣೆಯ ಒಂದು ಭಾಗವಾಗಿದೆ. ನಕ್ಷತ್ರ ಚಿಹ್ನೆಯು ಸರಳವಾಗಿ ಗುರುತಿಸುವಿಕೆಯ ಭಾಗವಾಗಿದೆ. ಅಂದರೆ, ಈ ನೋಟು ಮರುಮುದ್ರಣಗೊಂಡ ಅಥವಾ ಬದಲಿಸಲಾದ ನೋಟಿಗೆ ಬದಲಿಯಾಗಿ ಚಲಾವಣೆಯಾಗುತ್ತಿರುವ ನೋಟು ಎಂದು ಆರ್‌ಬಿಐ ಹೇಳಿದೆ.

ಇದರರ್ಥ ನೋಟು ಮೂಲತಃ ದೋಷದಿಂದ ಮುದ್ರಿಸಲ್ಪಟ್ಟಿರುತ್ತದೆ. ಆ ನೋಟನ್ನು ಸ್ಟಾರ್ ಗುರುತಿನ ಚಿಹ್ನೆ ಹೊಸ ನೋಟಿನೊಂದಿಗೆ ಬದಲಾಯಿಸಲಾಗಿರುತ್ತದೆ. ಈ ನೋಟುಗಳು ಮೌಲ್ಯವು ಕಾನೂನುಬದ್ಧವಾಗಿರುತ್ತದೆ. ನಕ್ಷತ್ರ ಚಿಹ್ನೆಯೊಂದಿಗೆ ನೋಟುಗಳ ಮೊದಲ ಸರಣಿಯು 2006 ರಲ್ಲಿ ಚಲಾವಣೆ ಆಗಲಾರಂಭಿಸಿದವು ಎಂದು ಆರ್‌ಬಿಐ ಹೇಳಿದೆ.

ಸ್ಟಾರ್ ಗುರುತಿರುವ ಈ ನೋಟುಗಳು ನಕಲಿ ಎಂಬ ಕುರಿತು ಸಾಕಷ್ಟು ಪೋಸ್ಟ್‌ಗಳು ಐದಾರು ತಿಂಗಳ ಹಿಂದೆ ಟ್ವಿಟರ್ ಮತ್ತು ಫೇಸ್‍‌ಬುಕ್‌ನಲ್ಲಿ ಹರಿದಾಡಿದ್ದವು. ಜನರು ಈ ಕೂಡ ನಕಲಿ ಸುದ್ದಿಯನ್ನು ನಿಜವೆಂದೇ ನಂಬಿದ್ದರು. ಈಗ ಮತ್ತೆ ಅಂಥದ್ದೇ ಪುಕಾರುಗಳು ಎದ್ದಿವೆ. ಆದರೆ, ಸ್ಟಾರ್ ಗುರುತಿರುವ ನೋಟುಗಳು ಖಂಡಿತವಾಗಿಯೂ ನಕಲಿಯಲ್ಲ, ಅಸಲಿಯಾಗಿದ್ದು, ಕಾನೂನು ಬದ್ಧ ಮಾನ್ಯತೆ ಇದೆ ಎಂದು ಆರ್‌ಬಿಐ ಸ್ಪಷ್ಟಪಡಿಸಿದೆ.

ಈ ಸುದ್ದಿಯನ್ನೂ ಓದಿ: Fact Check Cell : ಸರ್ಕಾರದ ಫ್ಯಾಕ್ಟ್‌ ಚೆಕ್‌ ಪ್ರಯತ್ನಕ್ಕೆ ಹಿನ್ನಡೆ; ಮಾನ್ಯತೆ ಪಡೆದ ಚೆಕರ್ಸ್‌ ನಿರಾಸಕ್ತಿ, ಯಾಕೆ?

Exit mobile version