ಪಂಜಾಬ್: ನಿರಂತರ ಒಂದಲ್ಲ ಒಂದು (Fact Check) ಕಾರಣದಿಂದ ಸುದ್ದಿಯಲ್ಲಿರುವ ಹೊಸದಾಗಿ ಚುನಾಯಿತರಾದ ಪಂಜಾಬ್ (Punjab) ಮುಖ್ಯಮಂತ್ರಿ (Chief Minister) ಭಗವಂತ್ ಮಾನ್ (Bhagwant Mann) ಅವರನ್ನು ಈ ಹಿಂದೆ ಬೈಕ್ ಕಳವು ಪ್ರಕರಣವೊಂದಕ್ಕೆ ಸಂಬಂಧಿಸಿ ಬಂಧನಕ್ಕೆ ಒಳಪಡಿಸಲಾಗಿತ್ತು ಎನ್ನುವ ಫೋಟೋ ಸಹಿತ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ (social media) ವೈರಲ್ (Viral news) ಆಗಿದೆ.
ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ವಿವಾದಗಳಿಗೆ ಹೊಸದೇನಲ್ಲ. ರಾಜ್ಯದ ಅತ್ಯುನ್ನತ ಹುದ್ದೆಗೇರಿದ ಬಳಿಕ ಅವರ ಕುರಿತು ಜನರು ತಮ್ಮ ಅಭಿಪ್ರಾಯಗಳನ್ನು ಮತ್ತು ಹಳೆಯ ಪೋಸ್ಟ್‌ಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇದನ್ನು ಸಾಕಷ್ಟು ಮಂದಿ ವೀಕ್ಷಿಸುತ್ತಿದ್ದಾರೆ.
ಇದೀಗ ಸುಮಾರು ಒಂದು ದಶಕದ ಹಿಂದೆ ಬೈಕ್ ದರೋಡೆ ಪ್ರಕರಣದಲ್ಲಿ ಮಾನ್ ಬಂಧನಕ್ಕೊಳಗಾದ ಛಾಯಾ ಚಿತ್ರ ಎಂದು ಹೇಳುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಾನ್ ಅವರು ಇತರ ಮೂವರೊಂದಿಗೆ ನೆಲದ ಮೇಲೆ ಕುಳಿತಿರುವ ಈ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಮಂದಿ ವೀಕ್ಷಿಸಿದ್ದಾರೆ.
ಇದನ್ನೂ ಓದಿ: Video Viral: ಜಲ ತರಂಗ್‌ನಲ್ಲಿ ಮಹಿಳೆ ನುಡಿಸಿದ ಐಗಿರಿ ನಂದಿನಿ ವಿಡಿಯೋ ವೈರಲ್
ಈ ಫೋಟೋ ದ ಕುರಿತು ಸತ್ಯಾಸತ್ಯತೆಯನ್ನು ಪರಿಶೀಲನೆ ನಡೆಸಿದ ನ್ಯೂಸ್‌ಚೆಕರ್ ಇದು ಸುಳ್ಳೆಂದು ತಿಳಿಸಿದೆ. ಆದರೂ ಈ ಚಿತ್ರವನ್ನು ಟ್ವಿಟರ್‌ನಲ್ಲಿ ಸಾಕಷ್ಟು ಮಂದಿ ವೀಕ್ಷಿಸುತ್ತಿದ್ದಾರೆ ಮತ್ತು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.
ಭಗವಂತ್ ಮಾನ್ ಅವರು 2022ರ ಮಾರ್ಚ್ 16ರಂದು ಪಂಜಾಬ್ ನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಬಳಿಕ ಮಾಜಿ ಶಾಸಕರಿಗೆ ಪಿಂಚಣಿ ಪಾವತಿ, ಶಿಕ್ಷಣ ಸೇರಿದಂತೆ ಹಲವಾರು ವಿಷಯಗಳ ಕುರಿತು ಅವರ ಸರ್ಕಾರದ ‘ದೊಡ್ಡ’ ನಿರ್ಧಾರಗಳಿಗಾಗಿ ಅವರು ನಿರಂತರ ಸುದ್ದಿಯಲ್ಲಿದ್ದಾರೆ.
Gang of bike thieves caught by Punjab Police some years back. One of them is an alcoholic and now CM of the state! pic.twitter.com/G9psjzPDN3
— Hinduvaadi Tapan (@hinduvaaditapan) April 1, 2022
ಮಾನ್ ಅವರನ್ನು ಪಂಜಾಬ್‌ನಲ್ಲಿ ಎಎಪಿ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದಾಗಿನಿಂದ ಹಾಸ್ಯನಟ-ರಾಜಕಾರಣಿ ಮಾನ್ ಅವರನ್ನು ಪದೇ ಪದೇ ಸಾಮಾಜಿಕ ಮಾಧ್ಯಮದಲ್ಲಿ ಟ್ರೋಲ್ ಮಾಡಲಾಗುತ್ತಿದೆ. ಪಂಜಾಬ್ ಸಿಎಂ ಬಗೆಗಿನ ಹಲವಾರು ಸುಳ್ಳು ಮಾಹಿತಿಗಳನ್ನು ನ್ಯೂಸ್‌ಕೆಕರ್ ತನಿಖೆ ನಡೆಸಿದೆ.
ಇದೀಗ ವೈರಲ್ ಆಗಿರುವ ಚಿತ್ರದ ಹುಡುಕಾಟ ನಡೆಸಿದಾಗ ಪಂಜಾಬಿ ಗಾಯಕ ಮತ್ತು ನಟ ಕರಮ್‌ಜಿತ್ ಅನ್ಮೋಲ್ ಅವರು ಮ್ಯಾಚ್ 18ರಂದು ಫೇಸ್‌ಬುಕ್ ನಲ್ಲಿ ಮಾಡಿರುವ ಪೋಸ್ಟ್ ಸಿಕ್ಕಿದೆ. ಅದರಲ್ಲಿ ಅವರು ಭಗವಂತ್ ಮಾನ್ ಮತ್ತು ಮಂಜಿತ್ ಸಿಧು ಅವರೊಂದಿಗೆ ಹೋಳಿ ನೆನಪುಗಳು ಎಂಬ ಶೀರ್ಷಿಕೆಯೊಂದಿಗೆ ಈ ಚಿತ್ರವನ್ನು ಹಂಚಿಕೊಂಡಿದ್ದಾರೆ.
ಬೈಕ್ ಕಳ್ಳತನ ಪ್ರಕರಣದಲ್ಲಿ ಮಾನ್ ಬಂಧನ ಎಂಬಂತೆ ಬಿಂಬಿಸಿರುವ ಈ ಚಿತ್ರ ದ ಹೇಳಿಕೆಯನ್ನು ಮಂಜಿತ್ ಸಿಧು ಅವರು ತಳ್ಳಿಹಾಕಿದ್ದಾರೆ. ಇದು ನಕಲಿ ಸುದ್ದಿ ಎಂದು ಹೇಳಿದ್ದಾರೆ.
ಈ ಚಿತ್ರವನ್ನು 1994 ಅಥವಾ 1995 ರಲ್ಲಿ ಕೆನಡಾದ ಗಾಯಕ ಹರ್ಭಜನ್ ಮಾನ್ ಭಾರತಕ್ಕೆ ಬಂದಾಗ ಪಟಿಯಾಲದಲ್ಲಿ ತೆಗೆದಿದ್ದಾರೆ. ಹೋಳಿ ಹಬ್ಬದಂದು ಹರ್ಭಜನ್ ಮಾನ್ ಅವರ ಮನೆಯ ಟೆರೇಸ್‌ನಲ್ಲಿ ಚಿತ್ರ ತೆಗೆಯಲಾಗಿದೆ. ಭಗವಂತ್ ಮಾನ್, ಕರಮ್ಜಿತ್ ಅನ್ಮೋಲ್ ಮತ್ತು ಹರ್ಭಜನ್ ಮಾನ್ ಕೂಡ ಅಲ್ಲಿ ಹಾಜರಿದ್ದರು. ಭಗವಂತ್ ಮಾನ್ ಮತ್ತು ನಾನು ಕಾಲೇಜು ದಿನಗಳಿಂದಲೂ ಸ್ನೇಹಿತರಾಗಿದ್ದೇವೆ ಎಂದು ಸಿಧು ತಿಳಿಸಿದ್ದಾರೆ.
ಈ ಕುರಿತು ಮತ್ತಷ್ಟು ಸ್ಪಷ್ಟಿಕರಣಕ್ಕಾಗಿ ಮಾನ್ ಅವರು ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಅಫಿಡವಿಟ್ ಅನ್ನು ಪರಿಶೀಲಿಸಲಾಗಿದೆ. ಆದರೆ ಯಾವುದೇ ಅಪರಾಧ ಪ್ರಕರಣದಲ್ಲಿ ಅವರು ಭಾಗಿಯಾಗಿರುವ ಬಗ್ಗೆ ಅದರಲ್ಲಿ ಯಾವುದೇ ಉಲ್ಲೇಖವಿಲ್ಲ ಎಂದು ತಿಳಿದು ಬಂದಿದೆ.