Site icon Vistara News

3D Tatoo Trend | 3ಡಿ ಟ್ಯಾಟೂಗಳ ಲೋಕದಲ್ಲೊಂದು ಸುತ್ತು

3D Tatoo Trend

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಊಹೆಗೂ ಮೀರಿದ, ಒಂದಕ್ಕಿಂತ ಒಂದು ಭಿನ್ನ-ವಿಭಿನ್ನ ವಿನ್ಯಾಸದಲ್ಲಿ ಕಾಣುವ, ಎಂತಹವರನ್ನು ನಿಬ್ಬೆರಗಾಗಿಸುವ 3ಡಿ ಟ್ಯಾಟೂಗಳು (3D Tatoo Trend) ಅಂತರ್ಜಾಲದಲ್ಲಿ ಎಲ್ಲೆಡೆ ಹರಿದಾಡುತ್ತಿವೆ. ಯುವಜನಾಂಗವನ್ನು ಇವು ತಮ್ಮತ್ತ ಸೆಳೆಯುತ್ತಿವೆ.

ಏನಿದು 3ಡಿ ಟ್ಯಾಟೂ?
ಮೂರು ಡೈಮೆನ್ಷನ್‌ವುಳ್ಳ ಟ್ಯಾಟೂವನ್ನು 3ಡಿ ಟ್ಯಾಟೂ ಎನ್ನಲಾಗುತ್ತದೆ. ಈ ಟ್ಯಾಟೂಗಳು ಚರ್ಮದ ಮೇಲೆ ರಚಿತವಾದ ನಂತರ ನೈಜವಾಗಿರುವಂತೆ ಇಲ್ಯೂಷನ್‌ ಸೃಷ್ಟಿಸುತ್ತವೆ. ಟ್ಯಾಟೂ ತಜ್ಞ ಕೈಲೈನ್‌ ಪ್ರಕಾರ, ವಿಶೇಷ ಡೈಮೆನ್ಷನ್‌ ಒಳಗೊಂಡ ಈ ಟ್ಯಾಟುಗಳು ಕೇವಲ ಚರ್ಮದ ಮೇಲೆ ಮೂಡಿಸಿದ ಚಿತ್ರದಂತೆ ಕಾಣುವುದಿಲ್ಲ! ಬದಲಿಗೆ ಜೀವ ತುಂಬಿರುವಂತೆ ಬಿಂಬಿಸುತ್ತವೆ ಎನ್ನುತ್ತಾರೆ. ಅವರ ಪ್ರಕಾರ, ಇವುಗಳನ್ನು ಫೋಟೋ ರಿಯಲೆಸ್ಟಿಕ್‌ ಟ್ಯಾಟೂ ಎಂದೂ ಕೂಡ ಕರೆಯಲಾಗುತ್ತದೆ.

3ಡಿ ಟ್ಯಾಟೂ ಕಲಾತ್ಮಕ ಚಿತ್ತಾರ
ಟ್ಯಾಟೂ ಆರ್ಟಿಸ್ಟ್ ಜಾನ್‌ ಹೇಳುವಂತೆ, ಮೂಲತಃ ವಿದೇಶದಲ್ಲಿ ಹೆಚ್ಚು ಪ್ರಚಲಿತದಲ್ಲಿದ್ದ ಇವು ಇದೀಗ ನಿಧಾನಗತಿಯಲ್ಲಿ ನಮಲ್ಲೂ ಟ್ರೆಂಡಿಯಾಗಲಾರಂಭಿಸಿವೆ . ನಮ್ಮಲ್ಲಿ ಮೊದಲಿನಿಂದಲೂ ನಾನಾ ಬಗೆಯ ಟ್ಯಾಟೂ ಆರ್ಟ್ ಚಿತ್ತಾರಗಳು ಟ್ರೆಂಡ್‌ನಲ್ಲಿದ್ದವು. ಕೋವಿಡ್‌ ನಂತರದ ದಿನಗಳಲ್ಲಿ ಸ್ಥಳೀಯ ಟ್ಯಾಟೂ ಕ್ಷೇತ್ರದಲ್ಲೂ ಮಹತ್ತರ ಬದಲಾವಣೆಗಳಾದವು. ವಿದೇಶಿ ಕಾನ್ಸೆಪ್ಟಿನ ಟ್ಯಾಟೂ ಚಿತ್ತಾರವಾದ 3ಡಿ ಆರ್ಟ್ ನಮ್ಮಲ್ಲೂ ಎಂಟ್ರಿ ನೀಡಿತು. ಸ್ಥಳೀಯ ಟ್ಯಾಟೂ ಆರ್ಟಿಸ್ಟ್‌ಗಳು ಈ ಕಾನ್ಸೆಪ್ಟನ್ನು ಮತ್ತಷ್ಟು ಲೋಕಲೈಸ್‌ ಮಾಡಿ ವಿನೂತನ ಚಿತ್ತಾರಗಳನ್ನು ಪರಿಚಯಿಸಿದರು. ಇದರೊಂದಿಗೆ ವಿದೇಶದಲ್ಲಿ ಲಭ್ಯವಿದ್ದ, ನಾನಾ ವಿನ್ಯಾಸದ 3ಡಿ ಆರ್ಟ್ ಮಾಡಬಹುದಾದ ಅತ್ಯಾಧುನಿಕ ಟ್ಯಾಟೂ ಪರಿಕರಗಳು ಇಲ್ಲಿಯೂ ಆಗಮಿಸಿದ್ದು, ಯುವಕ-ಯುವತಿಯರನ್ನು ಸೆಳೆಯಲು ಕಾರಣವಾಯಿತು ಎನ್ನುತ್ತಾರೆ.

ಇದನ್ನೂ ಓದಿ | Winter Mens Fashion | ಮ್ಯಾನ್ಲಿ ಲುಕ್‌ಗೆ ಸಾಥ್‌ ನೀಡುವ ಪುರುಷರ ವಿಂಟರ್‌ ಫ್ಯಾಷನ್‌

3ಡಿ ಟ್ಯಾಟೂ ವಿನ್ಯಾಸಕ್ಕೆ ತಕ್ಕಂತೆ ಶುಲ್ಕ
ಸಾಮಾನ್ಯ ಟ್ಯಾಟೂಗಳಿಗಿಂತ 3ಡಿ ಟ್ಯಾಟೂಗಳ ಶುಲ್ಕ ಕೊಂಚ ದುಬಾರಿ. ಆಯಾ ಡಿಸೈನ್‌ ಹಾಗೂ ಚರ್ಮದ ಮೇಲೆ ಹಾಕಿಸುವ ಜಾಗದ ಇಂಚು ಇಲ್ಲವೇ ಸೆಂಟಿ ಮೀಟರ್‌ ಲೆಕ್ಕದಲ್ಲಿ ದರ ನಿಗದಿಯಾಗಿರುತ್ತದೆ. ಕೆಲವೊಂದು ಚಿತ್ತಾರ ಮೂಡಿಸುವ ಗಂಟೆಗಳ ಸಮಯವನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಕೆಲವು ಟ್ಯಾಟೂಗಳು ಇಡೀ ದಿನವನ್ನು ತೆಗೆದುಕೊಳ್ಳಬಲ್ಲದು. ಆಯಾ ಡಿಸೈನ್‌ ಹಾಗೂ ಸಮಯಕ್ಕೆ ಇಲ್ಲಿ ಆದ್ಯತೆ ನೀಡಲಾಗುತ್ತದೆ ಎನ್ನುತ್ತಾರೆ ಟ್ಯಾಟೂ ವಿನ್ಯಾಸಕ ರಿಚರ್ಡ್.

ಯಾವ್ಯಾವ ವಿನ್ಯಾಸಕ್ಕೆ ಬೇಡಿಕೆ?
ವಿದೇಶದಲ್ಲಿ 3ಡಿ ಟ್ಯಾಟೂ ಎಂದಾಕ್ಷಣ ಅಚ್ಚರಿ ಮೂಡಿಸುವಂತಹ ಗ್ರಾಫಿಕ್‌ ಡಿಸೈನ್‌ ಇರುವಂತಹ ಮೆಷಿನ್‌ ಬಾಡಿ ಆರ್ಟ್, ಬಯೋಮೆಕಾನಿಕಲ್‌, ಸೂಪರ್‌ ಹೀರೋಸ್‌, ಪಾಪ್‌ ಅಪ್‌ ಕಲ್ಚರ್‌ ಎಲಿಮೆಂಟ್ಸ್, ಎಂಬೋಸಿಂಗ್‌, ಎಂಬ್ರಾಯ್ಡರಿ ಟ್ಯಾಟೂ, ಬ್ಲಾಕ್ಸ್‌ ಟ್ಯಾಟೂ, ಸ್ಪೂಕಿ, ಸ್ಕಲ್‌, ಡೆಮೋನ್‌, ವೈಬ್ರೇಷನ್‌, ಕನೆಕ್ಷನ್‌, ಹಾರರ್‌, ಸ್ಕೈನೆಟ್‌, ಸ್ಪೇಸ್‌ ಸೇರಿದಂತೆ ಲೆಕ್ಕವಿಲ್ಲದಷ್ಟು ವಿನ್ಯಾಸಕ್ಕೆ ಬೇಡಿಕೆ ಇದೆ. ಇನ್ನು ನಮ್ಮಲ್ಲಿ ಮಾತ್ರ ಯುವತಿಯರು ಇಂದಿಗೂ ಆಕರ್ಷಕ ಹೂವುಗಳು, ಹಾರುತ್ತಿರುವ ಪಕ್ಷಿಗಳು, ಚಿಟ್ಟೆ, ಆಧ್ಯಾತ್ಮದ ಸಿಂಬಲ್ಸ್‌, ಪದಗಳು, ಹಾರ್ಟ್, ಫೇರಿಟೇಲ್‌ ಚಿತ್ತಾರಕ್ಕೆ ಮನಸೋತರೇ, ಯುವಕರು ಮಾತ್ರ ಹಾರ್ಡ್ ಲುಕ್‌ ನೀಡುವ ತ್ರೀ ಡಿ ಆರ್ಮ್, ಕಫ್‌, ಸ್ಕಲ್‌, ಓಂ, ಸನ್‌, ಮೂನ್‌ ಸಿಂಬಲ್ಸ್‌, ಬ್ಯಾಕ್‌ ಥ್ರೋನ್‌, ಕ್ರೌನ್‌, ಹಾಲಿವುಡ್‌ ಕ್ಯಾರೆಕ್ಟರ್ಸ್‌ನ ಬಾಡಿ ಆರ್ಟ್ 3ಡಿ ಟ್ಯಾಟೂಗಳನ್ನು ಹಾಕಿಸಿಕೊಳ್ಳಲು ಬಯಸುತ್ತಾರೆ.

3D Tatoo Trend

3ಡಿ ಆರ್ಟ್ ಪ್ರಿಯರಿಗೆ ಒಂದಿಷ್ಟು ಟಿಪ್ಸ್‌

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ | Weekend style | ಮಾಡೆಲಿಂಗ್‌ನಿಂದ ಡಿಸೈನಿಂಗ್‌ವರೆಗೆ ಹರ್ಷ್ ಬೇಡಿ ಫ್ಯಾಷನ್‌ ಜರ್ನಿ

Exit mobile version