Site icon Vistara News

Beauty Tips : ಲಿಪ್‌ ಲೈನರ್ಸ್ ಪ್ರಿಯರು ಪಾಲಿಸಬೇಕಾದ 5 ಬ್ಯೂಟಿ ರೂಲ್ಸ್

Lipstick

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಲಿಪ್‌ಸ್ಟಿಕ್‌ ಪ್ರೇಮಿಗಳು ಲಿಪ್‌ ಲೈನರ್‌ ಬಳಕೆ ಮಾಡುವುದರಿಂದ ತುಟಿಗಳನ್ನು ಮತ್ತಷ್ಟು ಆಕರ್ಷಕವಾಗಿ ಕಾಣುವಂತೆ ಮಾಡಬಹುದು. ಬಾರ್ಡರ್‌ ಲೈನರ್‌ಎಳೆಯುವುದರಿಂದ (lip liners beauty rules) ಅಧರಕ್ಕೆ ಪರ್ಫೆಕ್ಟ್‌ ಶೇಪ್‌ ಕೂಡ ನೀಡಬಹುದು. ಇದಕ್ಕಾಗಿ ಒಂದಿಷ್ಟು ಬ್ಯೂಟಿ ರೂಲ್ಸ್ ಫಾಲೋ ಮಾಡಬೇಕಷ್ಟೇ! ಎನ್ನುತ್ತಾರೆ ಸೌಂದರ್ಯ (Beauty Tips) ತಜ್ಞರು. “ ತುಟಿಯ ಅಂದ ಹೆಚ್ಚಿಸುವಲ್ಲಿ ಲಿಪ್‌ಸ್ಟಿಕ್‌ಗಳ ಪಾತ್ರ ಎಷ್ಟು ಮುಖ್ಯವೋ ಅಷ್ಟೇ! ಲಿಪ್‌ ಲೈನರ್‌ಗಳು ಕೂಡ ಪ್ರಮುಖ ಪಾತ್ರ ವಹಿಸುತ್ತವೆ. ಕೆಲವರು ತುಟಿಯ ಅಂದಕ್ಕೆ ಕೇವಲ ಲಿಪ್‌ಸ್ಟಿಕ್‌ ಸಾಕು ಎಂದುಕೊಳ್ಳುತ್ತಾರೆ. ಆದರೆ, ಇವುಗಳು ಪರ್ಫೆಕ್ಟ್‌ ಶೇಪ್‌ನಲ್ಲಿರುವಂತೆ ಕಾಣಲು ಲಿಪ್‌ ಲೈನರ್‌ಗಳ ಅಗತ್ಯವೂ ಇದೆ ಎಂಬುದನ್ನು ಅರಿಯಬೇಕು. ಇದಕ್ಕೆ ಪೂರಕ ಎಂಬಂತೆ, ಆಯಾ ತುಟಿಯ ಬಣ್ಣಕ್ಕೆ ಇಲ್ಲವೇ ಲಿಪ್‌ಸ್ಟಿಕ್‌ ಬಣ್ಣಕ್ಕೆ ತಕ್ಕಂತೆ ಲಿಪ್‌ ಲೈನರ್‌ ಹಚ್ಚಿದಾಗ ಅಂದವಾಗಿ ಕಾಣಬಹುದು” ಎನ್ನುತ್ತಾರೆ ಬ್ಯೂಟಿ ಎಕ್ಸ್ಪರ್ಟ್ ಜೀನತ್‌.

ಲಿಪ್‌ ಲೈನರ್‌ ಆಯ್ಕೆ ಹೀಗಿರಲಿ

ನಿಮ್ಮ ಬಳಿಯಿರುವ ಲಿಪ್‌ಸ್ಟಿಕ್ಸ್‌ಗಳಿಗೆ ತಕ್ಕಂತೆ ಮ್ಯಾಚ್‌ ಆಗುವ ಲಿಪ್‌ ಲೈನರ್‌ಗಳನ್ನು ಸೆಲೆಕ್ಟ್‌ ಮಾಡಿ. ಆದಷ್ಟೂ ಲಿಪ್‌ಸ್ಟಿಕ್‌ಗಳಿಗಿಂತ ಡಾರ್ಕ್ ಶೇಡ್‌ ಲಿಪ್‌ ಲೈನರ್‌ಗಳಿರಲಿ. ಆಗ ತುಟಿಯ ಬಣ್ಣ ಹೈಲೈಟಾಗುತ್ತದೆ.

ಗುಣಮಟ್ಟದ ಲಿಪ್‌ ಲೈನರ್ಸ್‌ ಬಳಕೆ

ಬೀದಿ ಬದಿಯಲ್ಲಿ ದೊರೆಯುವ ಲಿಪ್‌ ಲೈನರ್ಸ್ ನಿಮ್ಮ ತುಟಿಯ ಅಂದಗೆಡಿಸಬಹುದು. ಕಳಪೆ ಗುಣಮಟ್ಟದ್ದು ತುಟಿಯ ರಂಗನ್ನು ಮಾಸುವಂತೆ ಮಾಡಬಹುದಲ್ಲದೇ ಕಪ್ಪಾಗಿಸಬಹುದು. ಹಾಗಾಗಿ ಬ್ರಾಂಡೆಡ್‌ ಲಿಪ್‌ ಲೈನರ್ಸ್‌ ಬಳಕೆ ಉತ್ತಮ.

ಲಿಪ್‌ ಲೈನರ್‌ ಬಳಸುವುದು ಹೀಗೆ

ಮೊದಲು ಲಿಪ್‌ಲೈನರ್‌ನಿಂದ ತುಟಿಯ ಔಟ್‌ಲೈನ್‌ಮೇಲೆ ಬಾರ್ಡರ್‌ ಲೈನ್‌ಎಳೆಯಿರಿ. ನಂತರ ಲಿಪ್‌ಸ್ಟಿಕ್‌ ಹಚ್ಚಿದಲ್ಲಿ ಬಣ್ಣ ಹೊರ ಹೋಗದು ಹಾಗೂ ಸ್ಮಡ್ಜ್‌ಆಗದು. ಬಾರ್ಡರ್‌ನಿಂದ ಲೈನ್‌ಹೊರ ಬರಕೂಡದು. ಬಂದಲ್ಲಿ ಮಾಯಿಶ್ಚರೈಸರ್‌ನಿಂದ ಒರೆಸಿ. ಸರಿ ಮಾಡಿ.

ಶಿಮ್ಮರ್‌ ಹಾಗೂ ಮ್ಯಾಟ್‌ ಲಿಪ್‌ ಲೈನರ್‌ ಸೆಲೆಕ್ಷನ್‌

ಇದೀಗ ಟ್ರೆಂಡ್‌ನಲ್ಲಿರುವ ಶಿಮ್ಮರ್‌ ಹಾಗೂ ಮ್ಯಾಟ್‌ ಲಿಪ್‌ ಲೈನರ್‌ಗಳನ್ನು ಅಗತ್ಯವಿದ್ದಲ್ಲಿ ಲಿಪ್‌ಸ್ಟಿಕ್‌ನಂತೆಯೂ ಬಳಸಬಹುದು. ಲಿಪ್‌ಸ್ಟಿಕ್‌ ಜೊತೆ ಬಳಸುವುದಾದಲ್ಲಿ ಬಣ್ಣ ಹೊಂದುತ್ತದೆಯೇ ಎಂಬುದನ್ನು ನೋಡಿ ಲೇಪಿಸಿ.

ಟೂ ಇನ್‌ ವನ್‌ ಲೈನರ್ಸ್ ಜಾದೂ

          ಕೆಲವು ಬ್ರಾಂಡ್‌ಗಳಲ್ಲಿ ಐ ಲೈನರ್‌ ಹಾಗೂ ಲಿಪ್‌ ಲೈನರ್‌ ಒಂದೇ ಪೆನ್ಸಿಲ್‌ನಲ್ಲಿ ಎರಡು ಕಡೆ ಇರುವಂತೆ ದೊರೆಯುತ್ತದೆ. ಇವುಗಳ ಆಯ್ಕೆ ಮಾಡುವಾಗ ಆದಷ್ಟೂ ಎರಡೂ ಬಗೆಯಲ್ಲಿ ಬಳಸಬಹುದಾದ ಕಾಮನ್‌ ಶೇಡ್‌ ನೋಡಿ ಖರೀದಿಸಿ.

          Exit mobile version