Site icon Vistara News

liquid lipsticks awareness : ಮಾನ್ಸೂನ್​​ನಲ್ಲಿ ಲಿಕ್ವಿಡ್‌ ಲಿಪ್​ಸ್ಟಿಕ್​ ಬಗ್ಗೆ ತಿಳಿದಿರಬೇಕಾದ 5 ಸಿಕ್ರೇಟ್ಸ್

Lipsticks awareness

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ಅಧರಕ್ಕೆ ಆಕರ್ಷಕವಾಗಿ ಲಿಕ್ವಿಡ್‌ ಲಿಪ್‌ಸ್ಟಿಕ್ಸ್ ಹಚ್ಚುವುದು ಒಂದು ಕಲೆ. ಇದು ಎಲ್ಲರಿಗೂ ಸಿದ್ಧಿಸಿರುವುದಿಲ್ಲ! ಈ ಶೈಲಿಯ ಲಿಪ್‌ಸ್ಟಿಕ್‌ಗಳನ್ನು ಬ್ರಶ್‌ನಿಂದ ತುಟಿಗೆ ಲೇಪಿಸುವಾಗ ಅದರಲ್ಲೂ ಮಾನ್ಸೂನ್‌ ಸೀಸನ್‌ನಲ್ಲಿ ಇವುಗಳನ್ನು ಅಪ್ಲೈ ಮಾಡುವಾಗ ಒಂದಿಷ್ಟು ಬೇಸಿಕ್‌ ವಿಷಯಗಳನ್ನು ಅರಿತಿರುವುದು ಅಗತ್ಯ. ಆಗಷ್ಟೇ ಆಕರ್ಷಕವಾಗಿ ಬಿಂಬಿಸಬಹುದು ಎನ್ನುತ್ತಾರೆ ಸೌಂದರ್ಯ ತಜ್ಞರು.

ಲಿಕ್ವಿಡ್‌ ಲಿಪ್‌ಸ್ಟಿಕ್‌ ಬೇಸಿಕ್‌ ಜ್ಞಾನ

ಲಿಕ್ವಿಡ್‌ ಲಿಪ್‌ಸ್ಟಿಕ್‌ ಅತಿ ಹೆಚ್ಚು ಬಳಕೆ ಮಾಡುವವರು ಎಂಟರ್‌ಟೈನ್‌ಮೆಂಟ್‌ ಕ್ಷೇತ್ರದವರು, ಮಾಡೆಲ್‌ಗಳು ಹಾಗೂ ಕಲಾವಿದರು. ಆದರೆ, ಇದೀಗ ಇದರ ಬಳಕೆ ಸಾಮಾನ್ಯ ಸ್ತ್ರೀಯರು ಮಾಡಲಾರಂಭಿಸಿದ್ದಾರೆ. ಹಾಗಾಗಿ ಈ ಲಿಪ್‌ಸ್ಟಿಕ್‌ ಬಗ್ಗೆ ಬೇಸಿಕ್‌ ಅರಿವು ಇರುವುದು ಅಗತ್ಯ. ಮೊದಲಿಗೆ ಬ್ರಶ್‌ ಬಳಕೆ ಮಾಡುವುದು ತಿಳಿದಿರಬೇಕು. ಇದಕ್ಕಾಗಿ ಯೂ ಟ್ಯೂಬ್‌ ಟ್ಯುಟೋರಿಯಲ್‌ ಸಹಾಯ ಪಡೆಬಹುದು. ಇಷ್ಟೇ ಪ್ರಮಾಣ ತುಟಿಗೆ ಹಚ್ಚಬೇಕು ಎಂಬುದು ಗೊತ್ತಿರಬೇಕು.

ಗುಣಮಟ್ಟದ ಬ್ರಾಂಡ್‌ ಆಯ್ಕೆ

ಲೋಕಲ್‌ ಬ್ರಾಂಡ್‌ಗಳವನ್ನು ಹಚ್ಚಿದ ತಕ್ಷಣ ಬಣ್ಣ ಮಾಸಬಹುದು ಅಥವಾ ತುಟಿಯನ್ನು ಕಪ್ಪಾಗಿಸಬಹುದು. ಹಾಗಾಗಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಗುಣ ಮಟ್ಟದ್ದನ್ನು ಮಾತ್ರ ಖರೀದಿಸಿ. ಅವರು ನಿಮ್ಮ ತುಟಿಗೆ ಹಚ್ಚಿ ಟ್ರಯಲ್‌ ಮಾಡುತ್ತಾರೆ. ಪರೀಕ್ಷಿಸಿ ನೋಡಿ. ತುಟಿಗೆ ಹೊಂದಿದಲ್ಲಿ ಮಾತ್ರ ಖರೀದಿಸಿ.

ಲಿಪ್‌ ಟೋನ್‌ಗೆ ತಕ್ಕಂತೆ ಶೆಡ್‌ ಆಯ್ಕೆ

ಲಿಕ್ವಿಡ್‌ ಲಿಪ್‌ಸ್ಟಿಕ್‌ಗಳು ದುಬಾರಿ ಕೂಡ. ಹಾಗಾಗಿ ಖರೀದಿಸುವಾಗ ನಿಮ್ಮ ತುಟಿಯ ಬಣ್ಣಕ್ಕೆ ಹೊಂದುವಂತಹ ಕಲರ್‌ನದ್ದನ್ನು ಟ್ರಯಲ್‌ ನೋಡಿ ಆಯ್ಕೆ ಮಾಡಿ. ಇಲ್ಲವಾದಲ್ಲಿ ನಿಮ್ಮ ಮುಖಕ್ಕೆ ಹೊಂದದೇ ಇರಬಹುದು. ಹಚ್ಚುವ ಮೊದಲು ತುಟಿಗೆ ಮಾಯಿಶ್ಚರೈಸರ್‌ ಮಾಡಿ. ಓಡೆದ ತುಟಿಗಳಿಗೆ ಹಚ್ಚಬೇಡಿ. ಮತ್ತಷ್ಟು ಹಾಳಾಗಬಹುದು.

ಲಿಕ್ವಿಡ್‌ ಹಚ್ಚುವುದು ಹೀಗೆ

ಮಾಯಿಶ್ಚರೈಸರ್‌ ಆದ ತುಟಿಗೆ ಮೊದಲಿಗೆ ಲಿಪ್‌ಲೈನರ್‌ನಿಂದ ಸುತ್ತಲೂ ಬಾರ್ಡರ್‌ ಲೈನ್‌ ಹಾಕಿ. ಲಿಪ್‌ಗಳನ್ನು ಅಗಲವಾಗಿ ತೆರೆದು, ನಂತರ ಬ್ರಶ್‌ನಿಂದ ತೆಳ್ಳಗಿನ ಕೋಟ್‌ ಮಾಡಿ. ನಿಧಾನವಾಗಿ ಬ್ರಶ್‌ನಿಂದ ಹರಡಿ. ಯಾವುದೇ ಕಾರಣಕ್ಕೂ ಹಲ್ಲುಗಳಿಗೆ ತಾಗಕೂಡದು. ನಿಮಗೆ ಬೇಕಾದ ಹಾಗೆ ಲೈಟ್‌ ಹಾಗೂ ಡಾರ್ಕ್ ಶೇಡ್‌ ಹಚ್ಚಿ. ಕೋಟ್‌ ಅತಿಯಾಗಬಾರದು. ಗಾಳಿಯಲ್ಲಿ ಒಂದು ನಿಮಿಷ ಒಣಗಿಸಿ.

ಇದನ್ನೂ ಓದಿ : Monsoon Beauty Tips: ಮಾನ್ಸೂನ್‌ಗೆ ಬದಲಾಗುವ ಕಾಲೇಜ್‌ ಹುಡುಗಿಯರ ಬ್ಯೂಟಿ ಕೇರ್‌ ರೂಟೀನ್!

    ಮಳೆಗಾಲಕ್ಕೆ ವಾಟರ್‌ ಪ್ರೂಫ್‌ ಲಿಕ್ವಿಡ್‌ ಲಿಪ್‌ಸ್ಟಿಕ್ಸ್

    ಮಳೆಗಾಲದಲ್ಲಿ ಲಿಕ್ವಿಡ್‌ ಲಿಪ್‌ಸ್ಟಿಕ್‌ಗಳನ್ನು ಆಯ್ಕೆ ಮಾಡುವಾಗ ಆದಷ್ಟೂ ಮ್ಯಾಟ್‌ ಆಯ್ಕೆ ಮಾಡಿ. ಗ್ಲಾಸಿ ಬೇಡ. ವಾಟರ್‌ ಪ್ರೂಫ್‌ ಲಿಕ್ವಿಡ್‌ ಲಿಪ್‌ಸ್ಟಿಕ್‌ಗಳು ದೊರೆಯುತ್ತವೆ. ಇವು ಈ ಸೀಸನ್‌ಗೆ ಸೂಕ್ತ. ಕೇಳಿ ಖರೀದಿಸಿ.

      (ಲೇಖಕಿ : ಫ್ಯಾಷನ್‌ ಪತ್ರಕರ್ತೆ)

      Exit mobile version