ಶೀಲಾ ಸಿ. ಶೆಟ್ಟಿ, ಬೆಂಗಳೂರು
ಈ ವರ್ಷದ ವ್ಯಾಲೆಂಟೈನ್ಸ್ ವೀಕ್‌ನಲ್ಲಿ ಎರಡನೇಯ ದಿನ ಪ್ರಪೋಸ್ ಡೇ. ಈ ದಿನದಂದು ಲೆಕ್ಕವಿಲ್ಲದಷ್ಟು ಯುವಕರು ಲವ್ ಪ್ರಪೋಸ್ ಮಾಡುತ್ತಾರೆ ಎನ್ನುತ್ತದೆ ಸಮೀಕ್ಷೆಯೊಂದು. ಇನ್ನು ಈ ದಿನದಂದು ಪ್ರೇಮಿಯನ್ನು ಇಂಪ್ರೆಸ್ ಮಾಡಲು ಹುಡುಗರ ಕೇವಲ ಮಾತುಗಳು ಹಾಗೂ ಗಿಫ್ಟ್ ಮಾತ್ರ ಸಾಲುವುದಿಲ್ಲ! ಅದರೊಂದಿಗೆ ಧರಿಸುವ ಡ್ರೆಸ್‌ಕೋಡ್ ಹಾಗೂ ಡ್ರೆಸ್ಸಿಂಗ್ ಸೆನ್ಸ್ ಕೂಡ ಇಂಪ್ರೆಸ್ಸಿವ್ (Love proposal day look) ಆಗಿರಬೇಕಾಗುತ್ತದೆ. ಇದು ಎಂತಹ ಹುಡುಗಿಯರನ್ನು ಆಕರ್ಷಿಸಬಲ್ಲದು. ಹಾಗಾಗಿ ಈ ದಿನದಂದು ಪ್ರಪೋಸ್ ಮಾಡಲು ಬಯಸುವ ಪುರುಷರು ಯಾವ ಬಗೆಯ ಡ್ರೆಸ್‌ಕೋಡ್‌ನಲ್ಲಿ ಕಾಣಿಸಿಕೊಂಡರೇ ಉತ್ತಮ? ಹೇಗೆಲ್ಲಾ ಸ್ಟೈಲಿಂಗ್ ಮಾಡಿ ಇಂಪ್ರೆಸ್ ಮಾಡಬಹುದು ಎಂಬುದರ ಬಗ್ಗೆ ಮೆನ್ಸ್ ಸ್ಟೈಲಿಸ್ಟ್‌ಗಳು ಒಂದೈದು ಟಿಪ್ಸ್ ತಿಳಿಸಿದ್ದಾರೆ.
ಪರ್ಸನಾಲಿಟಿಗೆ ತಕ್ಕಂತಿರಲಿ ಡ್ರೆಸ್‌ಕೋಡ್
ಯುವಕರ ಪರ್ಸನಾಲಿಟಗೆ ತಕ್ಕಂತೆ ಡ್ರೆಸ್‌ಕೋಡ್ ಆಯ್ಕೆ ಮಾಡುವುದು ಉತ್ತಮ. ಪ್ರಪೋಸ್ ಮಾಡುವ ಹುಡುಗಿಯನ್ನು ಇದು ಇಂಪ್ರೆಸ್ ಮಾಡುವಂತಿರಬೇಕು. ಉದಾಹರಣೆಗೆ., ಯುವಕರ ಎತ್ತರ ಹಾಗೂ ಬಾಡಿ ಮಾಸ್ ಇಂಡೆಕ್ಸ್‌ಗೆ ಹೊಂದುವಂತಿರಬೇಕು.
ಯುವತಿಯ ಅಭಿರುಚಿಗೆ ಹೊಂದುವಂತಿರಲಿ
ಪ್ರಪೋಸ್ ಮಾಡುವ ಯುವತಿಯ ಅಭಿರುಚಿಯನ್ನು ಮೊದಲೇ ತಿಳಿದುಕೊಂಡಿರಬೇಕು. ಆಕೆ ಫಾರ್ಮಲ್ಸ್, ಕ್ಯಾಶುವಲ್ ಅಥವಾ ದೇಸಿ ಲುಕ್ ಪ್ರಿಯಳೇ ಎಂಬುದನ್ನುಮೊದಲೇ ಅರಿತುಕೊಂಡು ಆಕೆಗೆ ಇಷ್ಟವಾಗುವಂತಹ ರೀತಿಯಲ್ಲಿ ಔಟ್‌ಫಿಟ್ ಧರಿಸಿ ಪ್ರಪೋಸ್ ಮಾಡುವುದು ಉತ್ತಮ.
ಡ್ರೆಸ್‌ಕೋಡ್ ಟ್ರೆಂಡಿಯಾಗಿರಲಿ
ಹಳೆ ಜಮಾನದಂತಿರುವ ಔಟ್‌ಫಿಟ್ ಸೈಡಿಗಿಟ್ಟು, ಇದೀಗ ಟ್ರೆಂಡಿಯಾಗಿರುವ ಡ್ರೆಸ್‌ಕೋಡ್ ಧರಿಸಿ. ಅದು ಟ್ರೆಂಡ್‌ನಲ್ಲಿದ್ದರೇ, ನೀವೂ ಕೂಡ ಅಪ್‌ಡೇಟೆಡ್ ಎಂದು ತಿಳಿದುಕೊಳ್ಳುತ್ತಾರೆ. ಇದು ನಿಮಗೆ ಸಹಕಾರಿಯಾಗಬಹುದು.
ರೆಡ್ ಶೇಡ್ ಔಟ್‌ಫಿಟ್‌ಗೆ ಜೋತು ಬೀಳಬೇಡಿ
ಕೆಲವರು ವ್ಯಾಲೆಂಟೈನ್ಸ್ ವೀಕ್ ಎಂದಾಕ್ಷಣಾ ರೆಡ್ ಶೇಡ್‌ಗೆ ಜೋತು ಬೀಳುತ್ತಾರೆ. ಇದು ಹುಡುಗಿಯರಿಗೆ ಚೆನ್ನಾಗಿ ಕಾಣುತ್ತದೆ. ಯುವಕರು ಈ ಶೇಡ್ ಆಯ್ಕೆ ಮಾಡುವಾಗ ಎಚ್ಚರವಹಿಸಬೇಕಾಗುತ್ತದೆ. ಯಾಕೆಂದರೇ, ರೆಡ್‌ಮಯವಾಗಿರುವ ಡ್ರೆಸ್‌ಕೋಡ್ ಹುಡುಗರನ್ನು ಜೋಕರ್‌ನಂತೆ ಬಿಂಬಿಸಬಹುದು. ಹಾಗಾಗಿ ಎಚ್ಚರವಹಿಸಿ ಆಯ್ಕೆ ಮಾಡಿ.
ಸ್ಮಾರ್ಟ್ ಲುಕ್‌ಗೆ ಆದ್ಯತೆ ನೀಡಿ
ಎಲ್ಲದಕ್ಕಿಂತ ಹೆಚ್ಚಾಗಿ ನೀವು ಧರಿಸುವ ಉಡುಪು ನೋಡಿದಾಕ್ಷಣ ಆಕರ್ಷಕವಾಗಿ ಕಾಣಬೇಕು. ನಿಮಗೆ ಫಿಟ್ ಆಗಿರುವಂತೆ ಬಿಂಬಿಸಬೇಕು. ಪ್ಲಂಪಿಯಾಗಿದ್ದಲ್ಲೂ ಯೋಚನೆ ಬೇಡ. ನಿಮಗೆ ಹೊಂದುವಂತಹ ಔಟ್‌ಫಿಟ್ ಆಯ್ಕೆ ಮಾಡಿ. ಮುಖದಲ್ಲಿ ಮಂದಹಾಸ ತುಂಬಿರಲಿ. ಉಡುಪಿನೊಂದಿಗೆ ನಿಮ್ಮ ಮಾತುಗಳು ಸಕಾರತ್ಮಕವಾಗಿರಲಿ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Model Fashion Life: ಕಲಾವಿದೆ ಸ್ಮಿತಾ ಪ್ರಕಾಶ್ ವಿಂಟರ್ ಫ್ಯಾಷನ್ ಝಲಕ್ ಹೀಗಿದೆ!