ಶೀಲಾ ಸಿ. ಶೆಟ್ಟಿ, ಬೆಂಗಳೂರು
ಬೇಸಿಗೆಯ ಫ್ರಾಕ್ ಫ್ಯಾಷನ್‌ನಲ್ಲಿ ೫ ಶೈಲಿಯ ಫ್ಲೋರಲ್ ಪ್ರಿಂಟ್ಸ್ ಇರುವಂತಹ ಫ್ರಾಕ್‌ಗಳ ಕಾರುಬಾರು ಹೆಚ್ಚಾಗಿದೆ. ಯುವತಿಯರ ಮನ ಗೆದ್ದಿರುವ ಈ ಫ್ರಾಕ್‌ಗಳು ಕಾಲೇಜು ಹುಡುಗಿಯರನ್ನು ಮಾತ್ರವಲ್ಲ, ವಯಸ್ಸಿನ ಭೇದ-ಬಾವವಿಲ್ಲದೇ ಎಲ್ಲಾ ವಯಸ್ಸಿನ ಮಾನನಿಯರನ್ನು ಸೆಳೆಯಲಾರಂಭಿಸಿವೆ.
- ಅರಳಿದ ಹೂಗಳ ಲೈಟ್‌ವೈಟ್ ಫ್ರಾಕ್ಸ್
ನೋಡಿದರೇ ನೋಡಬೇಕೆನಿಸುವ ಅರಳಿದ ನಾನಾ ಹೂವುಗಳ ಪ್ರಿಂಟ್ಸ್ ಇರುವಂತಹ ಜಾರ್ಜೆಟ್ ಹಾಗೂ ಕ್ರೆಪ್ ಫ್ಯಾಬ್ರಿಕ್‌ನ ಲೈಟ್‌ವೈಟ್ ಫ್ರಾಕ್‌ಗಳು ಈ ಸೀಸನ್‌ನಲ್ಲಿ ಟ್ರೆಂಡಿಯಾಗಿವೆ. ನೋಡಲು ಸಿಂಪಲ್ ಆಗಿ ಕಾಣುವ ಈ ಹೂವುಗಳ ಪ್ರಿಂಟ್ಸ್ ಇರುವಂತಹ ಫ್ರಾಕ್‌ಗಳು ಇಂದು ಫ್ಯಾಷನ್‌ಲೋಕಕ್ಕೆ ಎಂಟ್ರಿ ನೀಡಿದ್ದು, ಕ್ಯಾಶುವಲ್ ಲುಕ್‌ಗೆ ಸಾಥ್ ನೀಡುತ್ತಿವೆ.
- ಎ ಲೈನ್ ಮೈಕ್ರೋ ಫ್ಲೀಟ್ಸ್ ಫ್ಲೋರಲ್ ಫ್ರಾಕ್ಸ್
ತಕ್ಷಣಕ್ಕೆ ಇದು ನೋಡಲು ಮಕ್ಕಳ ಫ್ರಾಕ್‌ನಂತೆ ಕಾಣುತ್ತದೆ. ಇವು ಇದೀಗ ವಿವಾಹಿತ ಮಹಿಳೆಯರನ್ನೂ ಕೂಡ ಆಕರ್ಷಿಸುತ್ತಿದೆ. ಇದಕ್ಕೆ ಕಾರಣ, ಎ ಲೈನ್ ಡಿಸೈನ್‌ನ ಮೈಕ್ರೋ ಫ್ಲೀಟ್ಸ್ ಫ್ರಾಕ್‌ಗಳು ಯಂಗ್ ಲುಕ್ ಕಲ್ಪಿಸುತ್ತವೆ. ಅದರಲ್ಲೂ ಸಾಫ್ಟ್ ಕಾಟನ್ ಸಿಲ್ಕ್ ಮೆಟಿರೀಯಲ್‌ನವು ನೋಡಲು ಅತ್ಯಾಕರ್ಷವಾಗಿ ಕಾಣುತ್ತವೆ. ಒಂದರ ಹಿಂದೊಂದರಂತೆ ಕಾಣುವ ನೆರಿಗೆಗಳು ಸೊಂಟದ ಸುತ್ತಾ ವಿನ್ಯಾಸಗೊಳಿಸಿದಂತೆ ಬಿಂಬಿಸುತ್ತವೆ. ಅಂದಹಾಗೆ, ಮೈಕ್ರೋಫ್ಲೀಟ್ಸ್ ಇರುವ ಸಿಲ್ಕ್ ಫ್ರಾಕ್‌ಗಳು ಪ್ಲಂಪಿಯಾಗಿರುವವರಿಗೆ ಚೆನ್ನಾಗಿ ಕಾಣುತ್ತವೆ. ಇವು ಬಾಡಿ ಮಾಸ್‌ಇಂಡೆಕ್ಸ್ ಹೆಚ್ಚಾಗಿ ಬಿಂಬಿಸುತ್ತವೆ. ಹಾಗಾಗಿ, ಆದಷ್ಟೂ ತಮ್ಮ ಬಾಡಿ ಸೂಟ್ ಆಗುವಂತಹ ಫ್ಯಾಬ್ರಿಕ್‌ನ ಫ್ರಾಕ್‌ಗಳನ್ನು ಸೆಲೆಕ್ಟ್ ಮಾಡುವುದು ಉತ್ತಮ ಎನ್ನುತ್ತಾರೆ ಡಿಸೈನರ್ ದಿವಿಜಾ.
- ಫ್ಲೋರಲ್ ಪ್ರಿಂಟ್ಸ್ ವ್ರಾಪ್ ಫ್ರಾಕ್ಸ್
ಪಂಚೆಯಂತೆ ಸುತ್ತಿಕೊಂಡಂತೆ ಕಾಣುವ ಈ ಫ್ರಾಕ್ ಡಿಸೈನ್ ಇದೀಗ ಸಾಕಷ್ಟು ಪ್ರಚಲಿತದಲ್ಲಿವೆ. ನೋಡಲು ಯಂಗ್ ಲುಕ್ ನೀಡುವ ಈ ಫ್ರಾಕ್ ಡಿಸೈನ್ಸ್ ಸಾಕಷ್ಟು ಟ್ರೆಂಡಿಯಾಗಿದೆ. ಟೈಯಿಂಗ್ ಅಪ್ಷನ್ ಇರುವುದು ನೋಡಲು ಬಿಂದಾಸ್ ಲುಕ್ ನೀಡುತ್ತದೆ ಎನ್ನಬಹುದು.
- ಫ್ಲೋರಲ್ ಬ್ಲೌಸಾನ್ ಫ್ರಾಕ್ಸ್
ಧರಿಸಿದಾಗ ನೋಡಲು ಪ್ರತ್ಯೇಕ ಬ್ಲೌಸ್ ಹಾಗೂ ಸ್ಕರ್ಟ್ನಂತೆ ಕಾಣುವ ಈ ಫ್ಲೋರಲ್ ವಿನ್ಯಾಸದ ಫ್ರಾಕ್, ಸಿಂಗಲ್ ಪೀಸ್ ಡ್ರೆಸ್. ಕೆಲವು ಟಮ್ಮಿಯ ಭಾಗವನ್ನು ಟೈಟಾಗಿರುವಂತೆ ಬಿಂಬಿಸುತ್ತವೆ. ಈ ಫ್ರಾಕ್ ಇಂದು ಟೀನೇಜ್ ಹುಡುಗಿಯರ ಹಾಗೂ ವರ್ಕಿಂಗ್ ವುಮೆನ್ ಕೆಟಗರಿಯಲ್ಲಿ ಟಾಪ್ ಲಿಸ್ಟ್‌ನಲ್ಲಿದೆ. ಇದು ಟ್ರೆಂಡ್‌ನಲ್ಲಿರುವುದು ಮಾತ್ರವಲ್ಲ, ನಾನಾ ಡಿಸೈನ್‌ಗಳಲ್ಲಿಹಾಗೂ ವೈವಿಧ್ಯಮಯ ಸ್ಟಿಚ್ಚಿಂಗ್ ಸ್ಟೈಲ್‌ನಲ್ಲಿ ಪಾಪ್ಯುಲರ್ ಆಗಿವೆ.
ಇದನ್ನೂ ಓದಿ : Summer Fashion : ಯುವಕರ ಸಮ್ಮರ್ ಕೂಲ್ ಲುಕ್‌ಗೆ ಬಂತು ವೆರೈಟಿ ಟ್ರೆಂಡಿ ವೈಟ್ ಟೀ ಶರ್ಟ್ಸ್
- ಫ್ಲೋರಲ್ ಫಿಟ್ ಆ್ಯಂಡ್ ಫ್ಲೇರ್ ಸ್ಕೇಟರ್ ಫ್ರಾಕ್ಸ್
ಸ್ಕೇಟರ್ ಫ್ರಾಕ್‌ನ ಮೇಲ್ಭಾಗದಲ್ಲಿ ಫಿಟ್ ಆಗಿ ಕೂರುವ ಈ ಫ್ರಾಕ್ ವೇಸ್ಟ್‌ಲೈನ್‌ನಿಂದ ಕೆಳಗೆ ಫ್ಲೇರ್ ಆಗಿರುತ್ತವೆ. ಸಮ್ಮರ್ ಕ್ಯಾಶುವಲ್ ಲುಕ್‌ನಲ್ಲಿ ಸ್ಥಾನ ಪಡೆದಿವೆ. ಇವು ಕೇವಲ ಸಿಂಪಲ್ ಡಿಸೈನ್ಸ್‌ನಲ್ಲಿದೊರೆಯುತ್ತವೆ. ಟೀನೇಜ್ ಹುಡುಗಿಯರ ಫೆವರೇಟ್ ಲಿಸ್ಟ್‌ಗೆ ಸೇರಿವೆ. ಸದ್ಯಕ್ಕೆ ಎಲ್ಲಾ ಬಗೆಯ ಫ್ಲೋರಲ್ ಪ್ರಿಂಟ್ಸ್‌ನಲ್ಲಿ ದೊರೆಯುತ್ತಿವೆ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)