ಶೀಲಾ ಸಿ. ಶೆಟ್ಟಿ, ಬೆಂಗಳೂರು
ಹೇರ್ ಕಲರಿಂಗ್ (Hair colouring tips) ಇಂದು ಸಾಮಾನ್ಯವಾದ ವಿಷಯ. ಮನೆಯಲ್ಲಿ ಹೇರ್ ಕಲರಿಂಗ್ ಮಾಡಲಾಗದಿದ್ದವರು ಬ್ಯೂಟಿ ಪಾರ್ಲರ್, ಸ್ಪಾ ಹಾಗೂ ಸಲೂನ್‌ಗಳಲ್ಲಿ ಮಾಡಿಸುವುದು ಕಾಮನ್ ಆಗಿದೆ. ಆಯಾ ವ್ಯಕ್ತಿಯ ಆಯ್ಕೆಗೆ ತಕ್ಕಂತೆ ಬೇಕಾದ ಶೇಡ್‌ಗಳನ್ನು ಆಯ್ಕೆ ಮಾಡಿ ಹಾಕಿಸುವಲ್ಲಿ ಸ್ಪಾ ಹಾಗೂ ಸಲೂನ್‌ಗಳು ಸಹಾಯ ಮಾಡುತ್ತವೆ. ಆದರೆ, ಯಾವುದೇ ವ್ಯಕ್ತಿಯು ಸಲೂನ್ ಹಾಗೂ ಸ್ಪಾಗಳಲ್ಲಿ ಹೇರ್ ಕಲರಿಂಗ್ ಮಾಡಿಸುವಾಗ ಒಂದಿಷ್ಟು ಬೇಸಿಕ್ ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು ಎನ್ನುತ್ತಾರೆ ಹೇರ್ ಸ್ಟೈಲಿಸ್ಟ್‌ಗಳು.
“ ಅಂದಹಾಗೆ, ಬ್ಯೂಟಿ ಪಾರ್ಲರ್‌ಗಳಲ್ಲಿ ಹೇರ್ ಕಲರಿಂಗ್ ಶುಲ್ಕಕ್ಕಿಂತ ಸ್ಪಾಗಳಲ್ಲಿ ಮಾಡಿಸುವುದಕ್ಕೆ ದುಬಾರಿ ಶುಲ್ಕ ತೆರಬೇಕು. ನೀವು ಸಲೂನ್‌ನಲ್ಲಿ ಹೇರ್ ಕಲರಿಂಗ್ ಮಾಡಿಸುವಿರಾದಲ್ಲಿ, ಹಣ ನೀಡಿದರೆ ಸಾಕು, ಎಲ್ಲಾ ಅವರೇ ನೋಡಿಕೊಳ್ಳುತ್ತಾರೆ ಎಂದು ಸುಮ್ಮನಾಗುತ್ತೀರಾ? ಖಂಡಿತಾ ಸುಮ್ಮನೆ ಕೂರಬೇಡಿ. ಒಂದಿಷ್ಟು ವಿಷಯಗಳು ನಿಮಗೂ ತಿಳಿದಿರಲಿ” ಎನ್ನುತ್ತಾರೆ ಹೇರ್ ಸ್ಟೈಲಿಸ್ಟ್ ರಾಜ್ ಶರ್ಮಾ. ಅವರ ಪ್ರಕಾರ, ಹೇರ್ ಕಲರಿಂಗ್ ಮಾಡಿಸುವಾಗ ಈ ಕೆಳಗಿನ ಬೇಸಿಕ್ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು.
ಹೇರ್ ಕಲರಿಂಗ್ ಪ್ಯಾಕೇಜ್
ಬಹಳ ಜನರು ಮನೆಯಲ್ಲೆ ತಲೆಸ್ನಾನ ಮಾಡಿಕೊಂಡು ಹೋಗುತ್ತಾರೆ. ಹೀಗೆ ಮಾಡುವ ಅಗತ್ಯವಿಲ್ಲ. ಯಾಕೆಂದರೇ ಸ್ಪಾ ಅಥವಾ ಸಲೂನ್‌ನಲ್ಲಿ ಮೊದಲಿಗೆ ಹೇರ್ ವಾಶ್ ಮಾಡಿ, ಒಣಗಿಸಿದ ನಂತರವೇ ಹೇರ್ ಕಲರಿಂಗ್ ಮಾಡುತ್ತಾರೆ ಎಂಬುದು ತಿಳಿದಿರಲಿ.
ಕಲರಿಂಗ್ ಜೊತೆಗೆ ಹೇರ್ ಸ್ಪಾ
ಬಹಳಷ್ಟು ಕಡೆ ಹೇರ್ ಕಲರಿಂಗ್ ಮಾಡುವ ಜೊತೆಜೊತೆಗೆ ಹೇರ್ ಸ್ಪಾ ಕೂಡ ಮಾಡುತ್ತಾರೆ. ಕಂಡೀಷನರ್ ಹಾಕಿ, ಮಸಾಜ್ ಮಾಡಿ ಆರೈಕೆ ಮಾಡುತ್ತಾರೆ. ಇದು ಕಲರಿಂಗ್ ಜೊತೆಗೆ ಒಳಗೊಂಡಿದೆ ಎಂಬುದನ್ನು ಗೊತ್ತಿರಲಿ.
ಇದನ್ನೂ ಓದಿ : Kids Sunglasses Fashion: ಚಿಣ್ಣರ ಸ್ಟೈಲಿಂಗ್‌ಗೂ ಬಂತು ಕಲರ್‌ಫುಲ್ ಫಂಕಿ ಸನ್ ಗ್ಲಾಸ್
ಕಲರಿಂಗ್ ಶೇಡ್ ಪ್ಯಾಕ್ ನೋಡಿ ತಿಳಿದುಕೊಳ್ಳಿ
ನೀವು ಹೇಳಿದ ಬಣ್ಣ ಅವರು ಹಚ್ಚುವವರೆಂದು ಸುಮ್ಮನಾಗಬೇಡಿ. ಯಾವುದೋ ತೋರಿಸಿ, ಇನ್ಯಾವುದೋ ಹಚ್ಚುವುದು. ನಂತರ, ನೀವಂದುಕೊಂಡ ಬಣ್ಣ ಕಾಣದಿರುವುದು. ಇವೆಲ್ಲ ಗೊಂದಲಕ್ಕೆ ತೆರೆ ಎಳೆಯಲು ಖುದ್ದು ನೀವೇ ಪ್ಯಾಕ್ ಮೇಲಿನ ನಂಬರ್ ಹಾಗೂ ಶೇಡ್ ನೋಡಿ ಡಿಸೈಡ್ ಮಾಡಿ.
ಅಮೋನಿಯಾ ಫ್ರೀ ಕಲರ್
ಆದಷ್ಟೂ ಅಮೋನಿಯಾ ಫ್ರೀ ಇರುವಂತಹ ಕಲರಿಂಗ್‌ಗೆ ಆದ್ಯತೆ ನೀಡಿ. ಇದು ತಲೆಗೆ ಕಿರಿಕಿರಿ ಉಂಟು ಮಾಡುವುದಿಲ್ಲ ಹಾಗೂ ಅಲರ್ಜಿಯಾಗುವುದಿಲ್ಲ.
ಉಚಿತ ಹೇರ್ ಸೆಟ್ಟಿಂಗ್
ಹೇರ್ ಕಲರಿಂಗ್ ಆದ ನಂತರ ಉಚಿತವಾಗಿಯೇ ಹೇರ್ ಡ್ರೈ ಅಥವಾ ಡ್ರೈ ಹೇರ್ ಬ್ಲೋ ಮಾಡಿ ನಿಮಗೆ ಬೇಕಾದ ಹಾಗೆ ಹೇರ್ ಸೆಟ್ಟಿಂಗ್ ಮಾಡಿ ಕೊಡುತ್ತಾರೆ ಎಂಬುದು ತಿಳಿದಿರಲಿ.