Kids Sunglasses Fashion: ಚಿಣ್ಣರ ಸ್ಟೈಲಿಂಗ್‌ಗೂ ಬಂತು ಕಲರ್‌ಫುಲ್‌ ಫಂಕಿ ಸನ್‌ ಗ್ಲಾಸ್‌ - Vistara News

ಫ್ಯಾಷನ್

Kids Sunglasses Fashion: ಚಿಣ್ಣರ ಸ್ಟೈಲಿಂಗ್‌ಗೂ ಬಂತು ಕಲರ್‌ಫುಲ್‌ ಫಂಕಿ ಸನ್‌ ಗ್ಲಾಸ್‌

ದೊಡ್ಡವರಿಗೆ ಮಾತ್ರ ಸೀಮಿತವಾಗಿದ್ದ ಕಲರ್‌ಫುಲ್‌ ಫ್ರೇಮ್‌ ಇರುವಂತಹ ಸನ್‌ಗ್ಲಾಸ್‌ಗಳು (Kids Sunglasses Fashion), ಇದೀಗ ಪುಟ್ಟ ಮಕ್ಕಳಿಗೂ ಬಂದಿವೆ. ನಾನಾ ಬ್ರಾಂಡ್‌ಗಳಲ್ಲಿ ದೊರೆಯುತ್ತಿರುವ ಇವುಗಳ ವಿನ್ಯಾಸ ಹಾಗೂ ಆಯ್ಕೆ ಹೇಗೆ? ಹೆಚ್ಚು ಬಳಸಬಹುದೇ ಎಂಬುದರ ಬಗ್ಗೆ ಸ್ಟೈಲಿಸ್ಟ್‌ಗಳು ಇಲ್ಲಿ ತಿಳಿಸಿದ್ದಾರೆ.

VISTARANEWS.COM


on

Kids Sunglass Fashion
ಚಿತ್ರಕೃಪೆ : ಪಿಕ್ಸೆಲ್‌
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಚಿಣ್ಣರ ಔಟಿಂಗ್‌ಗೆ ಇದೀಗ ಫಂಕಿ ಸನ್‌ಗ್ಲಾಸ್‌ಗಳು (Kids Sunglasses Fashion) ಮಾರುಕಟ್ಟೆಗೆ ಎಂಟ್ರಿ ನೀಡಿವೆ. ಧರಿಸಿದಾಗ ನೋಡಲು ಮುದ್ದು ಮುದ್ದಾಗಿ ಕಾಣುವ ಈ ಸನ್‌ಗ್ಲಾಸ್‌ಗಳು ಲೆಕ್ಕವಿಲ್ಲದಷ್ಟು ಕಲರ್‌ಫುಲ್‌ ಫ್ರೇಮ್‌ ಹಾಗೂ ಆಕಾರಗಳಲ್ಲಿ ಬಂದಿವೆ. “ಈ ಮೊದಲು ದೊಡ್ಡವರಿಗೆ ಮಾತ್ರ ಸೀಮಿತವಾಗಿದ್ದ, ಈ ಕಲರ್‌ಫುಲ್‌ ಫ್ರೇಮ್‌ ಇರುವಂತಹ ಮಿನಿ ಸನ್‌ಗ್ಲಾಸ್‌ಗಳು, ಪುಟ್ಟ ಮಕ್ಕಳಿಗೂ ಮುದ್ದಾದ ಚಿಣ್ಣರಿಗೂ ಬಗೆಬಗೆಯ ವಿನ್ಯಾಸದಲ್ಲಿ ಬಂದಿವೆ. ನಾನಾ ಬ್ರಾಂಡ್‌ಗಳಲ್ಲಿ ದೊರೆಯುತ್ತಿರುವ ಇವು ಆಯಾ ವಿನ್ಯಾಸ ಹಾಗೂ ಅದರಲ್ಲಿರುವ ಗ್ಲಾಸ್‌ಗೆ ತಕ್ಕಂತೆ ಬೆಲೆ ಹೊಂದಿರುತ್ತವೆ. ಅಷ್ಟೇಕೆ! ನೋಡಲು ಆಕರ್ಷಕವಾದ ಕ್ಯೂಟ್‌ ಡಿಸೈನ್‌ಗಳಲ್ಲೂ ಲಭ್ಯವಿದೆ” ಎನ್ನುತ್ತಾರೆ ಸ್ಟೈಲಿಸ್ಟ್‌ಗಳು. ಅವರ ಪ್ರಕಾರ, ಇತ್ತೀಚೆಗೆ ಇವು ದೊಡ್ಡವರು ಧರಿಸುವ ಪ್ಯಾಟರ್ನನಲ್ಲೂ ದೊರೆಯುತ್ತಿವೆ” ಎನ್ನುತ್ತಾರೆ.

Kids Sunglasses Variety

ಕಿಡ್ಸ್ ಸನ್‌ಗ್ಲಾಸ್‌ ವೆರೈಟಿ

ಮಕ್ಕಳಿಗೆ ದೊರೆಯುತ್ತಿರುವ ಸನ್‌ಗ್ಲಾಸ್‌ಗಳಲ್ಲಿ ಬಿಳಿ, ಹಳದಿ, ಪಿಂಕ್‌, ಬ್ಲ್ಯೂ, ವೈಟ್‌, ರೆಡ್‌ ಹೀಗೆ ಬಣ್ಣಬಣ್ಣದ ಫ್ರೇಮ್‌ಗಳಿಗೆ ಹೆಚ್ಚು ಮಾನ್ಯತೆ ಇರುವುರಿಂದ ಫಂಕಿ ಶೈಲಿಯ ಕ್ಯಾಟ್‌ ಐ ಶೇಪ್‌, ಹಾರ್ಟ್ ಶೇಪ್‌, ಓವಲ್‌, ರೆಕ್ಟಾಂಗಲ್‌, ರೌಂಡ್‌ ಶೇಪ್‌ನವು ಹೆಚ್ಚು ಚಾಲ್ತಿಯಲ್ಲಿವೆ. ಮಕ್ಕಳಿಗೆ ಯಾವುದೇ ಬಗೆಯ ಸನ್‌ಗ್ಲಾಸ್‌ ಹಾಕಿದರೂ ಚೆನ್ನಾಗಿಯೇ ಕಾಣುತ್ತದೆ. ಹಾಗಾಗಿ ಧರಿಸಲು ಯಾವುದಾದರೂ ಸರಿಯೇ ಎನ್ನುತ್ತಾರೆ ಕಿಡ್ಸ್‌ ಸ್ಟೈಲಿಸ್ಟ್ ರಾಘವ್‌. ಅವರ ಪ್ರಕಾರ, ಮಕ್ಕಳ ಸನ್‌ಗ್ಲಾಸ್‌ ಆಯ್ಕೆಯಲ್ಲಿ ಜಾಣತನ ತೋರುವುದು ಅಗತ್ಯ ಎನ್ನುತ್ತಾರೆ.

Eye damage from street-side sunglasses

ಬೀದಿ ಬದಿಯ ಸನ್‌ಗ್ಲಾಸ್‌ನಿಂದ ಕಣ್ಣಿಗೆ ಧಕ್ಕೆ

ಇತ್ತೀಚೆಗೆ ಬೀದಿ ಬದಿಯ ಅಂಗಡಿಗಳಲ್ಲಿ ನಾನಾ ಬಗೆಯ ಸನ್‌ಗ್ಲಾಸ್‌ಗಳು ದೊರೆಯುತ್ತಿವೆ. ಕಡಿಮೆ ದೊರೆಯುತ್ತಿರುವ ಇವನ್ನು ಬಳಸುತ್ತಿರುವವರು ಹೆಚ್ಚಾಗಿದ್ದಾರೆ. ಹೆಚ್ಚು ಸಮಯ ಮಕ್ಕಳಿಗೆ ಇವನ್ನು ಹಾಕಿದಲ್ಲಿ ಕಣ್ಣಿನ ಸಮಸ್ಯೆಯಾಗಬಹುದು. ಹಾಗಾಗಿ ಇವನ್ನು ಕೊಳ್ಳುವ ಮುನ್ನ ಯೋಚಿಸಿ. ಹೆಚ್ಚು ಸಮಯ ಮಕ್ಕಳಿಗೆ ಹಾಕಬೇಡಿ ಎನ್ನುತ್ತಾರೆ ಐ ಸ್ಪೆಷಲಿಸ್ಟ್ ಡಾ. ಆರಾಧ್ಯ.

Let the choice of sunglasses for children be like this

ಮಕ್ಕಳಿಗೆ ಸನ್‌ ಗ್ಲಾಸ್‌ ಆಯ್ಕೆ ಹೀಗಿರಲಿ

  • ಗುಣಮಟ್ಟದ ಬ್ರಾಂಡೆಡ್‌ ಕಂಪನಿಯ ಸನ್‌ಗ್ಲಾಸ್‌ ಆಯ್ಕೆ ಮಾಡಿ.
  • ಬೀದಿ ಬದಿಯಲ್ಲಿ ಕೊಳ್ಳುವ ಸನ್‌ಗ್ಲಾಸ್‌ನಿಂದ ಕಣ್ಣಿಗೆ ಅಪಾಯ ಎಂಬುದು ತಿಳಿದಿರಲಿ.
  • ಫೋಟೋಶೂಟ್‌ಗಾಗಿ ಮಾತ್ರ ಬಳಸಿ.
  • ಹೆಚ್ಚು ಹೊತ್ತು ಮಕ್ಕಳಿಗೆ ಸನ್‌ಗ್ಲಾಸ್‌ ಬಳಸಲು ನೀಡದಿರಿ.

(ಲೇಖಕಿ : ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Star Saree Fashion: ಶ್ವೇತ ವರ್ಣದ ಸೀರೆಯಲ್ಲಿ ಮಲಯಾಳಿ ಕುಟ್ಟಿಯಂತೆ ಕಂಡ ನಟಿ ಮೋಕ್ಷಿತಾ ಪೈ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಫ್ಯಾಷನ್

Dogs Monsoon Fashion: ಮುದ್ದು ಶ್ವಾನಗಳಿಗೂ ಬಂತು ಮಾನ್ಸೂನ್‌ ಫ್ಯಾಷನ್‌!

Dogs Monsoon Fashion: ಮುದ್ದು ಶ್ವಾನಗಳನ್ನು ಸಿಂಗರಿಸುವ ಮಾನ್ಸೂನ್‌ ಡ್ರೆಸ್‌, ರೈನ್‌ಕೋಟ್ಸ್ ಹಾಗೂ ಇತರೇ ಆಕ್ಸೆಸರೀಸ್‌ಗಳು ಪೆಟ್‌ ಶಾಪ್‌ಗಳಿಗೆ ಎಂಟ್ರಿ ನೀಡಿವೆ. ಯಾವ್ಯಾವ ಬಗೆಯವು ದೊರೆಯುತ್ತಿವೆ? ಯಾವುದೆಲ್ಲಾ ಆಕ್ಸೆಸರೀಸ್‌ಗಳು ಬೇಡಿಕೆ ಪಡೆದುಕೊಂಡಿವೆ? ಎಂಬುದರ ಕುರಿತಂತೆ ಡಾಗ್‌ ಸ್ಟೈಲಿಸ್ಟ್‌ಗಳು ವಿವರಿಸಿದ್ದಾರೆ.

VISTARANEWS.COM


on

Dogs Monsoon Fashion
ಚಿತ್ರಕೃಪೆ: ಪಿಕ್ಸೆಲ್‌
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮುದ್ದು ಶ್ವಾನಗಳಿಗೂ ಬಂತು ಮಾನ್ಸೂನ್‌ ಫ್ಯಾಷನ್‌! (Dogs Monsoon Fashion) ಅರರೆ., ಇದೇನಿದು ಶ್ವಾನಗಳಿಗೂ ಮಳೆಗಾಲದ ಫ್ಯಾಷನ್‌ ಎಂದು ಹುಬ್ಬೇರಿಸಬಹುದು. ಹೌದು, ಇದೀಗ ಶ್ವಾನಗಳ ಮಾನ್ಸೂನ್‌ ಡ್ರೆಸ್‌ ಹಾಗೂ ರೈನ್‌ಕೋಟ್‌, ಮತ್ತಿತರೇ ಆಕ್ಸೆಸರೀಸ್‌ ಪೆಟ್‌ ಲೋಕದಲ್ಲಿ ಕಾಲಿಟ್ಟಿವೆ. ಆಯಾ ಜಾತಿಯ ಮುದ್ದು ಶ್ವಾನಗಳಿಗೆ ಹೊಂದುವಂತಹ, ನಾನಾ ವೆರೈಟಿ ಮಾನ್ಸೂನ್‌ ಡ್ರೆಸ್‌ಗಳು ಹಾಗೂ ವಾಟರ್‌ಪ್ರೂಫ್‌ ರೈನ್‌ಕೋಟ್‌ಗಳು ನಾಯಿಮರಿಗಳನ್ನು ಅಲಂಕರಿಸುತ್ತಿವೆ.

Dogs Monsoon Fashion

ಮುದ್ದು ಶ್ವಾನಗಳಿಗೂ ಮಾನ್ಸೂನ್‌ ಫ್ಯಾಷನ್‌

“ಇಂದು ಕಾಲ ಬದಲಾಗಿದೆ. ಮನೆಯಲ್ಲಿ ಮುದ್ದು ಶ್ವಾನಗಳಿಗೂ ಮಕ್ಕಳ ಸ್ಥಾನ ಮಾನ ದೊರಕಿದೆ. ಪ್ರತಿಯೊಬ್ಬರು ಅವರು ಸಾಕಿದ ನಾಯಿಮರಿಗಳನ್ನು ಯಾವ ಮಟ್ಟಿಗೆ ಇಷ್ಟ ಪಡುತ್ತಾರೆಂದರೇ, ಅವಕ್ಕೆ ಇತ್ತೀಚೆಗೆ ನಾನಾ ಬಗೆಯಲ್ಲಿ ಸ್ಟೈಲಿಂಗ್‌ ಕೂಡ ಮಾಡುತ್ತಾರೆ. ಇನ್ನು, ಹಿರಿಯರು ಕಿರಿಯರೆನ್ನದೇ ಎಲ್ಲರೂ ವಾಕಿಂಗ್‌ ಹಾಗೂ ಜಾಕಿಂಗ್‌ ಸಮಯದಲ್ಲೂ ಶ್ವಾನಗಳನ್ನು ಜೊತೆಯಲ್ಲಿಯೇ ಕರೆದೊಯ್ಯುತ್ತಾರೆ. ಇದಕ್ಕೆ ಪೂರಕ ಎಂಬಂತೆ, ಪೆಟ್‌ ಲೋಕದಲ್ಲೂ ನಾನಾ ಬಗೆಯ ಆಕ್ಸೆಸರೀಸ್‌ಗಳು ಹಾಗೂ ಉಡುಗೆಗಳು ಬಂದಿವೆ. ಆಯಾ ಸೀಸನ್‌ಗೆ ಮ್ಯಾಚ್‌ ಆಗುವಂತೆ ದೊರಕುತ್ತಿವೆ. ಅವುಗಳಲ್ಲಿ ಇದೀಗ ಮಾನ್ಸೂನ್‌ ಸೀಸನ್‌ಗೆ ಹೊಂದುವಂತಹ ಫ್ಯಾಷನ್‌ ಉಡುಗೆ ಹಾಗೂ ರೈನ್‌ಕೋಟ್‌ಗಳು ಬಿಡುಗಡೆಗೊಂಡಿವೆ” ಎನ್ನುತ್ತಾರೆ ಪೆಟ್‌ ಸ್ಪಾನ ಸ್ಟೈಲಿಂಗ್‌ ಎಕ್ಸ್‌ಫರ್ಟ್ ಜಾಕಿ. ಅವರ ಪ್ರಕಾರ, ಶ್ವಾನಗಳು ಇದೀಗ ಸ್ಟೈಲಿಶ್‌ ಆಗಿ ಕಾಣಿಸಲು ಈ ಆಕ್ಸೆಸರೀಸ್‌ಗಳು ಸಹಕರಿಸುತ್ತಿವೆಯಂತೆ.

Dogs Monsoon Fashion

ಮಾನ್ಸೂನ್‌ಗೆ ಮ್ಯಾಚಿಂಗ್‌

ಶ್ವಾನಗಳಿಗೆ ಬಂದಿರುವ ಕಲರ್‌ಫುಲ್‌ ಉಡುಗೆ ಹಾಗೂ ರೈನ್‌ಕೋಟ್‌ ಮತ್ತು ಅವುಗಳ ಕಾಲಿನ ಪಾದಗಳಿಗೆ ಹಾಕಬಹುದಾದ ಪೆಟ್‌ ವೆಲ್ಲೈಸ್‌, ರೈನ್‌ ಬೂಟ್ಸ್ ಹಾಗೂ ಟವೆಲ್‌ ಮತ್ತು ವೈಪ್ಸ್ ಈ ಸೀಸನ್‌ನಲ್ಲಿ ಬೇಡಿಕೆ ಹೆಚ್ಚಿಸಿಕೊಂಡಿವೆ.

Dogs Monsoon Fashion

ಕಲರ್‌ಫುಲ್‌ ಡಾಗ್ಗಿ ರೈನ್‌ ಕೋಟ್ಸ್

ಪಿರಿ ಪಿರಿ ಸಣ್ಣ ಮಳೆಯಲ್ಲೂ ಡಾಗ್ಗಿಯಿಲ್ಲದೇ ವಾಕ್‌ ಮಾಡಲಾಗುವುದಿಲ್ಲ ಎನ್ನುವ ಶ್ವಾನಗಳ ಪೋಷಕರು, ಈ ಮಾನ್ಸೂನ್‌ ಡಾಗ್‌ ರೈನ್‌ಕೋಟ್ಸ್‌ಗಳ ಖರೀದಿ ಮಾಡತೊಡಗಿದ್ದಾರೆ. ಬೇಡಿಕೆ ಹೆಚ್ಚಾದಂತೆ, ಸಿಂಥಟಿಕ್‌, ಪಾಲಿಸ್ಟರ್‌ ಸೇರಿದಂತೆ ವಾಟರ್‌ ಪ್ರೂಫ್‌ ಫ್ಯಾಬ್ರಿಕ್‌ನಲ್ಲಿ ಇವು ನಾನಾ ಡಿಸೈನ್‌ನಲ್ಲಿ ಆಗಮಿಸಿವೆ.

Dogs Monsoon Fashion

ಪೆಟ್ಸ್ ರೈನ್‌ ಬೂಟ್ಸ್

ನಾಯಿ ಮರಿಗಳಿಗೆ ರಸ್ತೆಯ ಹಾಗೂ ನೆಲದ ಕೊಚ್ಚೆ, ಕೆಸರು ಹತ್ತದಂತೆ ಕಾಪಾಡಬಹುದಾದ ಪುಟ್ಟ ಪುಟ್ಟ ರೈನ್‌ ಬೂಟ್ಸ್‌ಗಳು ಕೂಡ ನಾನಾ ವಿನ್ಯಾಸದಲ್ಲಿ ಪೆಟ್‌ ಶಾಪ್‌ಗಳಿಗೆ ಬಂದಿವೆ. ಇನ್ನು, ಡಾಗ್‌ ಟವೆಲ್ಸ್ ಹಾಗೂ ವೈಪ್ಸ್ ಸೇರಿದಂತೆ, ಬೋ ಹಾಗೂ ಬೆಲ್ಟ್‌ಗಳು ಕೂಡ ಪೆಟ್‌ ಶಾಪ್‌ಗಳಿಗೆ ಲಗ್ಗೆ ಇಟ್ಟಿವೆ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Monsoon Fashion 2024: ಮಾನ್ಸೂನ್‌ ಫ್ಯಾಷನ್‌ಗೆ ಲಗ್ಗೆ ಇಟ್ಟ ಡ್ರೆಸ್ ಕೋಡ್ಸ್

Continue Reading

ಫ್ಯಾಷನ್

Monsoon Fashion 2024: ಮಾನ್ಸೂನ್‌ ಫ್ಯಾಷನ್‌ಗೆ ಲಗ್ಗೆ ಇಟ್ಟ ಡ್ರೆಸ್ ಕೋಡ್ಸ್

Monsoon Fashion 2024: ಈ ಬಾರಿಯ 2024ರ ಮಾನ್ಸೂನ್‌ ಫ್ಯಾಷನ್‌ ಈಗಾಗಲೇ ಆರಂಭಗೊಂಡಿದ್ದು, ಲೆಕ್ಕವಿಲ್ಲದಷ್ಟು ಶೈಲಿಯವು ಎಂಟ್ರಿ ನೀಡಿವೆ. ಯಾವ್ಯಾವ ಬಗೆಯವು ಈ ಸೀಸನ್‌ನಲ್ಲಿ ರಾರಾಜಿಸಲಿವೆ? ಪಾಪುಲರ್‌ ಆಗಬಹುದಾದ ವಿನ್ಯಾಸಗಳ್ಯಾವುವು? ಎಂಬುದೆಲ್ಲರ ಕುರಿತಾಗಿ ಫ್ಯಾಷನಿಸ್ಟ್‌ಗಳು ಭವಿಷ್ಯ ನುಡಿದಿದ್ದಾರೆ. ಈ ಕುರಿತಂತೆ ಇಲ್ಲಿದೆ ಸಂಕ್ಷೀಪ್ತ ಡಿಟೇಲ್ಸ್.

VISTARANEWS.COM


on

Monsoon Fashion 2024
ಚಿತ್ರ ಕೃಪೆ : ಪಿಕ್ಸೆಲ್‌
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮಾನ್ಸೂನ್‌ ಫ್ಯಾಷನ್‌ ಸೀಸನ್‌ಗೆ ಲಗ್ಗೆ ಇಟ್ಟಿದೆ. ಹೌದು. ಈ ಬಾರಿಯ ಮಳೆಗಾಲದ ಫ್ಯಾಷನ್‌ (Monsoon Fashion 2024) ಈಗಾಗಲೇ ಎಂಟ್ರಿ ನೀಡಿದ್ದು, ಮುಂದಿನ ಎರಡ್ಮೂರು ತಿಂಗಳವರೆಗೆ 2024ರ ಮಾನ್ಸೂನ್‌ ಫ್ಯಾಷನ್‌ನ ಕಾರುಬಾರು ನಡೆಯಲಿದೆ. ಈ ಜಡಿ ಮಳೆಗಾಲದಲ್ಲಿ ಟ್ರೆಂಡಿಯಾಗಲಿರುವ ಡಿಸೈನರ್‌ವೇರ್ಸ್, ವೆಸ್ಟರ್ನ್‌ವೇರ್‌, ಲೇಯರ್‌ ಲುಕ್‌, ಸೀಸನ್‌ವೇರ್ಸ್, ಕಲರ್ಸ್ ಥೀಮ್‌ ಎಲ್ಲವೂ ನಿಧಾನಗತಿಯಲ್ಲಿ ಟ್ರೆಂಡಿಯಾಗಲಿರುವ ಮುನ್ಸೂಚನೆಗಳು ಕಾಣಿಸುತ್ತಿವೆ. ಅಂದಹಾಗೆ, ಯಾವ್ಯಾವ ಶೇಡ್‌ಗಳು ಈ ಮಾನ್ಸೂನ್‌ ಫ್ಯಾಷನ್‌ ಡ್ರೆಸ್‌ಕೋಡ್‌ಗಳಲ್ಲಿ ರಾರಾಜಿಸಬಹುದು? ಯಾವ ಬಗೆಯ ವಿನ್ಯಾಸಗಳು ಟ್ರೆಂಡಿಯಾಗಬಹುದು? ಎಂಬುದೆಲ್ಲರ ಕುರಿತಾಗಿ ಫ್ಯಾಷನಿಸ್ಟ್‌ಗಳು ಇಲ್ಲಿ ಭವಿಷ್ಯ ನುಡಿದಿದ್ದಾರೆ. ಈ ಕುರಿತಂತೆ ಇಲ್ಲಿದೆ ಸಂಕ್ಷೀಪ್ತ ಡಿಟೇಲ್ಸ್.

Monsoon Fashion 2024

ಮಾನ್ಸೂನ್‌ ಫ್ಯಾಷನ್‌ಗೆ ಎಂಟ್ರಿ

“ಪ್ರತಿಬಾರಿಯಂತೆ ಈ ಬಾರಿಯೂ ಕೂಡ ಮಾನ್ಸೂನ್‌ ಸೀಸನ್‌ನಲ್ಲಿ, ಮಳೆಗಾಲಕ್ಕೆ ತಕ್ಕಂತಹ ಡ್ರೆಸ್‌ಕೋಡ್‌ಗಳ ಕಾನ್ಸೆಪ್ಟ್‌ ಬಿಡುಗಡೆಯಾಗಿದೆ. ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದ ಫ್ಯಾಷನಿಸ್ಟ್‌ಗಳು ಹಾಗೂ ಅಪರೆಲ್‌ ಇಂಡಸ್ಟ್ರೀಯ ತಜ್ಞರು ಈ ಸೀಸನ್‌ಗೆ ಬಿಡುಗಡೆಯಾಗುತ್ತಿರುವ ಉಡುಗೆ-ತೊಡುಗೆಗಳ ಸಂಕ್ಷೀಪ್ತ ವಿವರವನ್ನು ಬ್ಯೂಟಿ ಬ್ಲಾಗ್‌ಗಳಲ್ಲಿ ಹಾಗೂ ಫ್ಯಾಷನ್‌ ಸಂದರ್ಶನಗಳಲ್ಲಿ ಹಂಚಿಕೊಂಡಿದ್ದಾರೆ. ಅವರೆಲ್ಲರ ಪ್ರಕಾರ, ಎಂದಿನಂತೆ, ಭಾರತೀಯ ಫ್ಯಾಷನ್ ಪ್ರಿಯರಿಗೆ ಒಗ್ಗುವಂತ ಸ್ಟೈಲಿಶ್‌ ಡ್ರೆಸ್‌ಗಳು ಈ ಮಳೆಗಾಲಕ್ಕೆ ಎಂಟ್ರಿ ನೀಡಿವೆ” ಎನ್ನುತ್ತಾರೆ ಫ್ಯಾಷನಿಸ್ಟ್‌ ಧವನ್‌. ಇನ್ನು ಸ್ಟೈಲಿಸ್ಟ್ ರಾಮ್‌ ಪ್ರಕಾರ, ಮಾನ್ಸೂನ್‌ ಫ್ಯಾಷನ್‌ ಇದೀಗ ಗ್ಲಾಮರಸ್‌ ರಹಿತ ಎನ್ನುವ ಮಾತು ಸುಳ್ಳಾಗಿದೆ. ಈ ಡ್ರೆಸ್‌ಕೋಡ್‌ಗೂ ಗ್ಲಾಮರಸ್‌ ಟಚ್‌ ದೊರಕಿದೆ ಎನ್ನುತ್ತಾರೆ.

Monsoon Fashion 2024

ಮಾನ್ಸೂನ್‌ ಫ್ಯಾಷನ್‌ನಲ್ಲಿ ಅಂತಹದ್ದೇನಿದೆ?

ಸಮ್ಮರ್‌ ಸ್ಪ್ರಿಂಗ್‌ಗೆ ಮಾತ್ರ ಸೀಮಿತವಾಗಿದ್ದ ಫ್ಲೋರಲ್‌ ಹಾಗೂ ಗಾರ್ಡನ್‌ ಪ್ರಿಂಟ್ಸ್ ಡ್ರೆಸ್‌ಗಳು ಈ ಸೀಸನ್‌ನಲ್ಲೂ ಮುಂದುವರೆಯಲಿವೆ. ಲಕ್ಷುರಿ ಜಂಪ್‌ಸೂಟ್‌ಗಳು, ಆಂಕೆಲ್‌ ಲೆಂಥ್‌ , ಹೈ ವೇಸ್ಟ್ ಪ್ಯಾಂಟ್ಸ್, ಶಾರ್ಟ್ ಸೂಟ್ಸ್, ಟ್ರಾಕ್‌ ಸ್ಟಾರ್‌ ಸ್ಟೈಲ್‌ ಡ್ರೆಸ್‌, ನೋ ಪ್ಯಾಂಟ್ಸ್ ಲುಕ್‌, ಬೋಹೋ, ಅಥ್ಲೆಟಿಕ್‌ ಲುಕ್‌, ಬಾಸ್‌ ಲೇಡಿ ಲುಕ್ಸ್, ಮ್ಯಾಕ್ಸಿ ಸ್ಕರ್ಟ್ಸ್, ವಾಟರ್‌ಪ್ರೂಫ್‌ ಬ್ರಿಥೆಬಲ್‌ ಗ್ಲಾಮರಸ್‌ ಡ್ರೆಸ್‌ಗಳು, ಲೇಯರ್‌ ಶೀರ್‌ ಡ್ರೆಸ್‌ಗಳು ಪ್ರಮುಖವಾಗಿ ಎಂಟ್ರಿ ನೀಡಿವೆ.

ಇದನ್ನೂ ಓದಿ: Twinning Fashion: ಪರ್ಫೆಕ್ಟ್ ಟ್ವಿನ್ನಿಂಗ್ ಫ್ಯಾಷನ್‌ಗೆ ಇಲ್ಲಿದೆ 5 ಐಡಿಯಾ!

ವಿನ್ಯಾಸಕ್ಕೆ ಒತ್ತು ನೀಡಿದ ಫ್ಯಾಷನ್‌

ಇನ್ನು, ರಫಲ್ಸ್, ವಿಂಟೇಜ್‌, ಕ್ರೊಚೆಟ್‌, ಪೊಂಚೋ ಡಿಸೈನ್‌ನ ಲೇಯರ್‌ ಲುಕ್‌ ಔಟ್‌ಫಿಟ್ಸ್, ಜಾಕೆಟ್‌ ಡ್ರೆಸ್‌, ಕೋಟ್‌ ಡ್ರೆಸ್‌ಗಳು ಡಿಫರೆಂಟ್‌ ಲುಕ್‌ನಲ್ಲಿ ಜೆನ್‌ ಜಿ ಹುಡುಗಿಯರಿಗೂ ಪ್ರಿಯವಾಗುವಂತಹ ಡಿಸೈನ್‌ನಲ್ಲಿ ಬಿಡುಗಡೆಗೊಂಡಿವೆ. ರಿಚ್‌ ರೆಡ್‌, ಮೆಟಾಲಿಕ್‌, ಗೋಲ್ಡನ್‌, ಯೆಲ್ಲೋ, ಸಿಲ್ವರ್‌, ಪರ್ಪಲ್‌, ಗ್ರೀನ್‌ನಂತಹ ಶೇಡ್‌ಗಳು ಮಳೆಗಾಲದ ಡ್ರೆಸ್‌ಗಳಲ್ಲಿ ಮೆಳೈಸಲಿವೆ ಎನ್ನುತ್ತಾರೆ ಫ್ಯಾಷನಿಸ್ಟ್‌ ರಿಂಕು ವರ್ಮಾ.

( ಲೇಖಕಿ ಫ್ಯಾಷನ್‌ ಪತ್ರಕರ್ತೆ )

Continue Reading

ಫ್ಯಾಷನ್

Twinning Fashion: ಪರ್ಫೆಕ್ಟ್ ಟ್ವಿನ್ನಿಂಗ್ ಫ್ಯಾಷನ್‌ಗೆ ಇಲ್ಲಿದೆ 5 ಐಡಿಯಾ!

Twinning Fashion: ನೋಡಿದಾಗ ಟ್ವಿನ್ನಿಂಗ್‌ ಫ್ಯಾಷನ್‌ ಮಾಡುವುದು ಸುಲಭ ಎಂದೆನಿಸಬಹುದು. ಆದರೆ, ಇದಕ್ಕೂ ಒಂದಿಷ್ಟು ಫ್ಯಾಷನ್‌ ಹಾಗೂ ಸ್ಟೈಲಿಂಗ್‌ ರೂಲ್ಸ್ ಪಾಲಿಸಬೇಕಾಗುತ್ತದೆ. ಈ ಕುರಿತಂತೆ ಸ್ಟೈಲಿಸ್ಟ್‌ಗಳು ಐದು ಐಡಿಯಾ ನೀಡಿದ್ದಾರೆ.

VISTARANEWS.COM


on

Twinning Fashion
ಚಿತ್ರಗಳು: ಸುರಭಿ-ಸಮೃದ್ಧಿ, ನಟಿಯರು
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಪರ್ಫೆಕ್ಟ್ ಟ್ವಿನ್ನಿಂಗ್‌ ಫ್ಯಾಷನ್‌ಗೆ (Twinning Fashion) ಇಲ್ಲಿದೆ 5 ಸಿಂಪಲ್‌ ಐಡಿಯಾ. ಹೌದು, ಯಾರೇ ಟ್ವಿನ್ನಿಂಗ್‌ ಮಾಡಿದಾಗ ಅದನ್ನು ನೋಡಿದವರಿಗೆ ಈ ಫ್ಯಾಷನ್‌ ಮಾಡುವುದು ಸುಲಭ ಎಂದೆನಿಸಬಹುದು. ಆದರೆ, ಇದಕ್ಕೂ ಒಂದಿಷ್ಟು ಫ್ಯಾಷನ್‌ ಹಾಗೂ ಸ್ಟೈಲಿಂಗ್‌ ರೂಲ್ಸ್‌ಗಳಿವೆ. ಅವನ್ನು ಪಾಲಿಸಬೇಕಾಗುತ್ತದೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು ಈ ಕುರಿತಂತೆ ಒಂದೈದು ಐಡಿಯಾ ನೀಡಿದ್ದಾರೆ.

Twinning Fashion

ಒಂದೇ ಬಗೆಯ ಡ್ರೆಸ್ಕೋಡ್‌ ಆಯ್ಕೆ

ಟ್ವಿನ್ನಿಂಗ್‌ ಮಾಡಲು ಬಯಸುವ ಸಹೋದರಿಯರು, ಸ್ನೇಹಿತರು ಅಥವಾ ಯಾರೇ ಆಗಲಿ ಒಂದೇ ಬಗೆಯ ಡ್ರೆಸ್‌ ಕೋಡ್‌ ಆಯ್ಕೆ ಮಾಡಬೇಕು. ನೋಡಲು ಒಂದೇ ಶೈಲಿ ಹಾಗೂ ಬಣ್ಣದ್ದಾಗಿರಬೇಕು. ಡಿಸೈನ್‌ ಕೂಡ ಸೇಮ್‌ ಟು ಸೇಮ್‌ ಆಗಿದ್ದರಂತೂ, ಪರ್ಫೆಕ್ಟ್ ಟ್ವಿನ್ನಿಂಗ್‌ ಎಂದನಿಸಿಕೊಳ್ಳುವುದು.

ಟ್ವಿನ್ನಿಂಗ್‌ಗೆ ಮೇಕಪ್‌ ಸಾಥ್‌

ಒಂದೇ ಬಗೆಯ ಡ್ರೆಸ್‌ ಧರಿಸಿ ಟ್ವಿನ್ನಿಂಗ್‌ ಮಾಡಿದರೇ ಸಾಲದು. ಮುಖದ ಮೇಕಪ್‌ ಕೂಡ ಹೊಂದಬೇಕು. ಒಬ್ಬರು ಸಿಂಪಲ್‌ ಮೇಕಪ್‌ ಮತ್ತೊಬ್ಬರು ಮಿನೆರಲ್‌ ಮೇಕಪ್‌, ಇಲ್ಲವೇ ಗ್ರ್ಯಾಂಡ್‌ ಮೇಕಪ್‌ ಮಾಡಿದಲ್ಲಿ, ನೋಡುಗರಿಗೆ ಒಂದೇ ಬಗೆಯದ್ದಾಗಿ ಕಾಣದು. ವಿಭಿನ್ನವಾಗಿ ಕಾಣಿಸಬಹುದು. ಹಾಗಾಗಿ ಟ್ವಿನ್ನಿಂಗ್‌ ಮಾಡುವವರು ಒಂದೇ ಬಗೆಯ ಮೇಕಪ್ ಮಾಡುವುದು ಉತ್ತಮ. ಆಕರ್ಷಕವಾಗಿ ಕಾಣಿಸುವುದು.

Twinning Fashion

ಹೇರ್‌ಸ್ಟೈಲ್‌ ಮ್ಯಾಚಿಂಗ್‌

ಡ್ರೆಸ್‌ಕೋಡ್‌, ಮೇಕಪ್‌ ಜೊತೆಜೊತೆಗೆ ಹೇರ್‌ಸ್ಟೈಲ್‌ ಕೂಡ ಇವೆಲ್ಲಕ್ಕೂ ಮ್ಯಾಚಿಂಗ್‌ ಆಗಬೇಕು. ಆಗ ಟ್ವಿನ್ನಿಂಗ್‌ ಕಾನ್ಸೆಪ್ಟ್ ಚೆನ್ನಾಗಿ ಕಾಣಿಸುವುದು. ಅದು ಯಾವುದೇ ಬಗೆಯ ಹೇರ್‌ಸ್ಟೈಲ್‌ ಆಗಬಹುದು. ಇಬ್ಬರದು ಸೇಮ್‌ ಟು ಸೇಮ್‌ ಹೇರ್‌ಸ್ಟೈಲ್‌ ಆಗಿದ್ದರೇ ಸಾಕು ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

Twinning Fashion

ಆಕ್ಸೆಸರೀಸ್‌ ಒಂದೇ ಬಗೆಯದ್ದಾಗಿರಲಿ

ಉಡುಪು, ಮೇಕಪ್‌, ಹೇರ್‌ಸ್ಟೈಲ್‌ ಇವೆಲ್ಲದರ ಜೊತೆಗೆ ಹೊಂದುವಂತೆ ಧರಿಸುವ ಆಕ್ಸೆಸರೀಸ್‌ ಆಯಾ ಡ್ರೆಸ್‌ಕೋಡ್‌ಗೆ ಸರಿಯಾದಲ್ಲಿ ಟ್ವಿನ್ನಿಂಗ್‌ಗೆ ಫುಲ್‌ ಮಾರ್ಕ್ಸ್ ದೊರೆತಂತೆ. ಸ್ಟೇಟ್‌ಮೆಂಟ್‌ ಜ್ಯುವೆಲರಿಗಳು ಈ ಟ್ವಿನ್ನಿಂಗ್‌ ಡ್ರೆಸ್‌ಕೋಡ್‌ಗೆ ಬೆಸ್ಟ್‌ ಜ್ಯುವೆಲರಿಗಳು ಎನ್ನುತ್ತಾರೆ ಡಿಸೈನರ್ಸ್.

Twinning Fashion

ಫೋಟೋಶೂಟ್‌ಗೆ ತಕ್ಕಂತೆ ಪೋಸ್‌

ಟ್ವಿನ್ನಿಂಗ್‌ ಮಾಡುವವರು ಫ್ಯಾಷನೆಬಲ್‌ ಆಗಿ ಕಾಣಿಸಿಕೊಳ್ಳುವುದು ಮಾತ್ರ ಮುಖ್ಯವಲ್ಲ, ಅದರ ಜೊತೆಗೆ ಫೋಟೋಗಳಿಗೆ ಪೋಸ್‌ ನೀಡುವಾಗ ಇಬ್ಬರ ಮೇಕೋವರ್‌ನಿಂದಿಡಿದು ಧರಿಸಿದ ಡ್ರೆಸ್‌ ಹಾಗೂ ಎಲ್ಲವೂ ಒಂದೇ ಬಗೆಯದ್ದಾಗಿ ಬಿಂಬಿಸಲು, ಒಂದೇ ಬಗೆಯ ಪೋಸ್‌ ನೀಡುವುದು ಮುಖ್ಯ ಎಂಬುದು ಸ್ಟೈಲಿಸ್ಟ್ ರಿಂಕು ಅಭಿಪ್ರಾಯ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Floral Jumpsuit fashion: ಔಟಿಂಗ್‌ಗೆ ಪರ್ಫೆಕ್ಟ್ ಔಟ್‌ ಫಿಟ್‌ ಈ ಫ್ಲೋರಲ್‌ ಜಂಪ್‌ ಸೂಟ್‌!

Continue Reading

ಲೈಫ್‌ಸ್ಟೈಲ್

Floral Jumpsuit fashion: ಔಟಿಂಗ್‌ಗೆ ಪರ್ಫೆಕ್ಟ್ ಔಟ್‌ ಫಿಟ್‌ ಈ ಫ್ಲೋರಲ್‌ ಜಂಪ್‌ ಸೂಟ್‌!

Floral Jumpsuit fashion: ಇದೀಗ ಟ್ರೆಂಡಿಯಾಗಿರುವ ಫ್ಲೋರಲ್‌ ಜಂಪ್‌ ಸೂಟ್‌ಗಳು ಕಾಲೇಜು ಹುಡುಗಿಯರನ್ನು ಆಕರ್ಷಿಸಿವೆ. ನೋಡಲು ಲೈವ್ಲಿಯಾಗಿ ಬಿಂಬಿಸುವ ಈ ಔಟ್‌ಫಿಟ್‌ಗಳು ಯಾವ್ಯಾವ ವಿನ್ಯಾಸದಲ್ಲಿ ಹೆಚ್ಚು ಟ್ರೆಂಡಿಯಾಗಿವೆ? ಹೇಗೆಲ್ಲಾ ಧರಿಸಬಹುದು ಎಂಬುದರ ಬಗ್ಗೆ ಸ್ಟೈಲಿಸ್ಟ್‌ಗಳು ಇಲ್ಲಿ ವಿವರಿಸಿದ್ದಾರೆ.

VISTARANEWS.COM


on

Floral Jumpsuit fashion
ಚಿತ್ರಗಳು: ಕರೀಷ್ಮಾ ತನ್ನಾ , ನಟಿ
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮನೋಲ್ಲಾಸ ಹೆಚ್ಚಿಸುವಂತಹ ವೈವಿಧ್ಯಮಯ ಪ್ರಿಂಟ್ಸ್‌ನ ಫ್ಲೋರಲ್‌ ಜಂಪ್‌ಸೂಟ್‌ಗಳು (Floral Jumpsuit fashion) ಇದೀಗ ಕಾಲೇಜು ಹುಡುಗಿಯರನ್ನು ಸವಾರಿ ಮಾಡತೊಡಗಿವೆ. ಈಗಾಗಲೇ ಫ್ಯಾಷನ್‌ನಲ್ಲಿ ಲೆಕ್ಕವಿಲ್ಲದಷ್ಟು ಬಗೆಯ ಜಂಪ್‌ಸೂಟ್‌ಗಳು ಲಗ್ಗೆ ಇಟ್ಟಿದ್ದು, ಅವುಗಳಲ್ಲಿ ನೋಡಲು ಲೈವ್ಲಿಯಾಗಿ ಬಿಂಬಿಸುವಂತಹ ವೆರೈಟಿ ಫ್ಲೋರಲ್‌ ಪ್ರಿಂಟ್ಸ್ನವು ಹೆಚ್ಚು ಬೇಡಿಕೆ ಸೃಷ್ಟಿಸಿಕೊಂಡಿವೆ.

Floral Jumpsuit fashion

ಆಕರ್ಷಕ ಫ್ಲೋರಲ್‌ ಜಂಪ್‌ಸೂಟ್ಸ್

“ಜಂಪ್‌ಸೂಟ್‌ ಎಂದಿಗೂ ಫ್ಯಾಷನ್‌ನಿಂದ ಆಚೆ ಹೋಗದ ಔಟ್‌ಫಿಟ್‌ಗಳು. ಇವುಗಳ ಒಂದಲ್ಲ ಒಂದು ಡಿಸೈನ್ಸ್ ಅಥವಾ ವಿಭಿನ್ನ ಪ್ರಿಂಟ್ಸ್‌ನಿಂದಾಗಿ ಆಗಾಗ್ಗೆ ಫ್ಯಾಷನ್‌ ಲೋಕದಲ್ಲಿ ಸುದ್ದಿ ಮಾಡುತ್ತಿರುತ್ತವೆ. ಸೆಲೆಬ್ರೆಟಿಗಳು ಕೂಡ ತಮ್ಮ ಔಟಿಂಗ್‌ನಲ್ಲಿ ಹಾಗೂ ರಿಲಾಕ್ಸೇಷನ್‌ ಸಮಯದಲ್ಲಿ ಹಾಗೂ ಮಕ್ಕಳೊಂದಿಗೆ ಟ್ವಿನ್ನಿಂಗ್‌ ಮಾಡುವ ಸಮಯದಲ್ಲಿ ಈ ಫ್ಲೋರಲ್‌ ಜಂಪ್‌ ಸೂಟ್‌ಗಳನ್ನು ಧರಿಸುವುದು ಕಂಡು ಬರುತ್ತಿದೆ. ಎಲ್ಲದಕ್ಕಿಂತ ಹೆಚ್ಚಾಗಿ ಈ ಮೊದಲು ಸೀಸನ್‌ಗೆ ತಕ್ಕಂತೆ ಬಿಡುಗಡೆಯಾಗುತ್ತಿದ್ದ ಈ ಜಂಪ್‌ಸೂಟ್‌ಗಳು ಇದೀಗ ಎಲ್ಲಾ ಸೀಸನ್‌ಗೂ ಮ್ಯಾಚ್‌ ಆಗುವಂತಹ ಡಿಸೈನ್‌ನಲ್ಲಿ ಬಿಡುಗಡೆಗೊಳ್ಳುತ್ತಿವೆ. ಅದರಲ್ಲೂ ಮಕ್ಕಳು ಹಾಗೂ ಯುವತಿಯರ ಅಭಿರುಚಿಗೆ ಹೊಂದುವಂತಹ ಕಲರ್ಸ್ ಹಾಗೂ ಪ್ರಿಂಟ್ಸ್‌ನಲ್ಲಿ ಬರುತ್ತಿರುವುದು ಟ್ರೆಂಡಿಯಾಗಲು ಕಾರಣವಾಗುತ್ತಿದೆ” ಎಂದು ಹೇಳುತ್ತಾರೆ ವೆಸ್ಟರ್ನ್ ಔಟ್‌ಫಿಟ್ಸ್ ಸ್ಟೈಲಿಸ್ಟ್ ಗಾನ. ಅವರ ಪ್ರಕಾರ, ಇವು ಧರಿಸುವವರಿಗೆ ಯಂಗ್‌ ಲುಕ್‌ ನೀಡುತ್ತವಂತೆ.

ಟ್ರೆಂಡಿಯಾಗಿರುವ ಫ್ಲೋರಲ್‌ ಜಂಪ್‌ಸೂಟ್‌ಗಳಿವು

ಮೊದಲೆಲ್ಲಾ ಕೇವಲ ವಿದೇಶೀ ಹೂವುಗಳ ಪ್ರಿಂಟ್ಸ್‌ನಲ್ಲಿ ಲಭ್ಯವಿದ್ದ ಇವು ಇದೀಗ ದೇಸಿ ಹೂವುಗಳ ಪ್ರಿಂಟ್ಸ್‌ನಲ್ಲೂ ಕಾಣಬಹುದು. ಲಿಲ್ಲಿ, ಆರ್ಕಿಡ್‌, ಟುಲಿಪ್‌, ಸೇವಂತಿ, ಸನ್‌ಫ್ಲವರ್ಸ್ ಬಂಚ್‌, ರೋಸ್‌ ಗಾರ್ಡನ್‌, ಬಟನ್‌ ರೋಸ್‌, ಕಲರ್‌ಫುಲ್‌ ರೋಸ್‌ ಹೀಗೆ ನಾನಾ ಹೂವುಗಳ ಚಿಕ್ಕ ಹಾಗೂ ದೊಡ್ಡ ಫ್ಲೋರಲ್‌ ಪ್ರಿಂಟ್ಸ್ ಇದೀಗ ಚಾಲ್ತಿಯಲ್ಲಿವೆ.

ಇದನ್ನೂ ಓದಿ: Mini Coins Jewel Fashion: ಹುಡುಗಿಯರನ್ನು ಸೆಳೆಯುತ್ತಿರುವ ಮಿನಿ ಕಾಯಿನ್ಸ್ ನೆಕ್ಲೇಸ್‌

ಫ್ಲೋರಲ್‌ ಜಂಪ್‌ಸೂಟ್‌ ಪ್ರಿಯರಿಗೆ 7 ಟಿಪ್ಸ್

  • ಈ ಶೈಲಿಯ ಜಂಪ್‌ಸೂಟ್‌ ಧರಿಸುವಾಗ ಆದಷ್ಟೂ ಸೀಸನ್‌ಗೆ ಹೊಂದುವ ಫ್ಯಾಬ್ರಿಕ್‌ನದ್ದನ್ನು ಆಯ್ಕೆ ಮಾಡಬಹುದು. ಇದರಿಂದ ಕಂಫರ್ಟಬಲ್‌ ಫೀಲ್‌ ಆಗುತ್ತದೆ.
  • ಹೈ ಹೀಲ್ಸ್ ಈ ಔಟ್‌ಫಿಟ್‌ನ ಸೌಂದರ್ಯ ಹೆಚ್ಚಿಸುತ್ತದೆ.
  • ಆಕ್ಸೆಸರೀಸ್‌ ಧರಿಸುವ ಅಗತ್ಯವಿಲ್ಲ.
  • ಸ್ಲಿವ್‌ಲೆಸ್‌ ಹಾಗೂ ಸ್ಲೀವ್‌ ಡಿಸೈನ್‌ ಇರುವಂತವು ದೊರೆಯುತ್ತವೆ.
  • ಜಿಪ್‌ ಹಾಗೂ ಬಟನ್‌ನ ಫ್ಲೋರಲ್‌ ಜಂಪ್‌ಸೂಟ್‌ಗಳಲ್ಲಿ ಜಿಪ್‌ನದ್ದು ಬೆಸ್ಟ್. ಇವನ್ನು ಇನ್ನರ್‌ ಫ್ಯಾಷನ್‌ವೇರ್‌ ಮೇಲೆ ಧರಿಸಬಹುದು.
  • ಒಮ್ಮೆ ಧರಿಸಿದರೇ ಇದನ್ನು ಸುಲಭವಾಗಿ ಬಿಚ್ಚಲು ಸಾಧ್ಯವಿಲ್ಲ.
  • ಆದಷ್ಟೂ ದೊಗಲೆಯಾದ್ದನ್ನು ಆವಾಯ್ಡ್ ಮಾಡಿ. ಸ್ಲಿಮ್‌ ಫಿಟ್‌ ಆಕರ್ಷಕವಾಗಿ ಕಾಣಿಸುತ್ತದೆ.

( ಲೇಖಕಿ ಫ್ಯಾಷನ್‌ ಪತ್ರಕರ್ತೆ )

Continue Reading
Advertisement
Suraj Revanna Case
ಕರ್ನಾಟಕ10 mins ago

Suraj Revanna Case: ಅಸಹಜ ಲೈಂಗಿಕ ದೌರ್ಜನ್ಯ ಕೇಸ್‌; ಎಂಎಲ್‌ಸಿ ಪ್ರಜ್ವಲ್‌ ರೇವಣ್ಣ ಅರೆಸ್ಟ್‌

Doodle V3 E-Cycle
ಆಟೋಮೊಬೈಲ್18 mins ago

Doodle V3 E-Cycle: ‘ಕಲ್ಕಿ 2898 ಎಡಿ’ನಿಂದ ಪ್ರೇರಿತವಾದ ಇ-ಸೈಕಲ್ ಮಾರುಕಟ್ಟೆಗೆ

Suraj Revanna Case
ಕರ್ನಾಟಕ39 mins ago

Suraj Revanna Case:  ಸಲಿಂಗ ಕಾಮ ಆರೋಪ; ಸಂತ್ರಸ್ತನ ವೈದ್ಯಕೀಯ ಪರೀಕ್ಷೆ ಬಳಿಕ ಇಂದೇ ಅರೆಸ್ಟ್‌ ಆಗ್ತರಾ ಸೂರಜ್‌ ರೇವಣ್ಣ?

Empty Stomach Foods
ಆರೋಗ್ಯ1 hour ago

Empty Stomach Foods: ಬೆಳಗ್ಗೆ ಎದ್ದ ಕೂಡಲೇ ಖಾಲಿ ಹೊಟ್ಟೆಯಲ್ಲಿ ಈ ಆಹಾರಗಳನ್ನು ತಿನ್ನಬೇಡಿ!

karnataka weather Forecast
ಮಳೆ2 hours ago

Karnataka Weather : ಕರಾವಳಿ, ಮಲೆನಾಡಿಗೆ ಗುಡುಗು ಸಹಿತ ಭಾರಿ ಮಳೆ; 9 ಜಿಲ್ಲೆಗಳಿಗೆ ರೆಡ್‌ ಅಲರ್ಟ್‌

Menopausal Weight Gain
ಆರೋಗ್ಯ2 hours ago

Menopausal Weight Gain: ಋತುಚಕ್ರ ನಿಂತ ಬಳಿಕ ತೂಕ ಹೆಚ್ಚುವುದನ್ನು ತಡೆಯಬಹುದೇ?

Vastu Tips
ಧಾರ್ಮಿಕ3 hours ago

Vastu Tips: ತಿಳಿದಿರಲಿ, ಕನ್ನಡಿಯೂ ನುಡಿಯುತ್ತದೆ ನಮ್ಮ ಭವಿಷ್ಯ!

Virat kohli
ಪ್ರಮುಖ ಸುದ್ದಿ3 hours ago

Virat Kohli : ಐಸಿಸಿ ಟೂರ್ನಿಯಲ್ಲಿ ಗರಿಷ್ಠ ರನ್ ಬಾರಿಸಿ ವಿಶೇಷ ಮೈಲುಗಲ್ಲು ಸ್ಥಾಪಿಸಿದ ವಿರಾಟ್​ ಕೊಹ್ಲಿ

Dina bhavishya
ಭವಿಷ್ಯ3 hours ago

Dina Bhavishya : ಈ ರಾಶಿಯವರು ಮಡದಿಯ ಪ್ರೀತಿಗೆ ಸೋಲುವಿರಿ; ಮನೆಯಲ್ಲಿ ಸಂತೋಷದ ದಿನ

NEET UG
ಪ್ರಮುಖ ಸುದ್ದಿ8 hours ago

NEET UG : ನೀಟ್​ ಪರೀಕ್ಷೆ ಅಕ್ರಮಗಳ ತನಿಖೆ ಹೊಣೆ ಸಿಬಿಐಗೆ ಒಪ್ಪಿಸಿದ ಕೇಂದ್ರ ಸರ್ಕಾರ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ2 days ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ2 days ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

Karnataka Weather Forecast
ಮಳೆ3 days ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

Actor Darshan
ಮೈಸೂರು6 days ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು6 days ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ7 days ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ7 days ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ7 days ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ1 week ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

Karnataka Weather Forecast
ಮಳೆ1 week ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

ಟ್ರೆಂಡಿಂಗ್‌