–ಶೀಲಾ ಸಿ. ಶೆಟ್ಟಿ, ಬೆಂಗಳೂರು
ರಂಜಾನ್ ಫೆಸ್ಟಿವ್ ಸೀಸನ್‌ಗೆ ಜಗಮಗಿಸುವ ಆಕ್ಸೆಸರೀಸ್‌ಗಳು ಎಂಟ್ರಿ ನೀಡಿವೆ. ಧರಿಸಿದಾಗ ಕಣ್ಮನ ಸೆಳೆಯುವ ಈ ಆಕ್ಸೆಸರೀಸ್‌ಗಳು ಈ ಫೆಸ್ಟಿವ್ ಸೀಸನ್‌ನಲ್ಲಿ ಟ್ರೆಂಡಿಯಾಗಿವೆ. ಮಿನುಗುವ ನೆಕ್‌ಲೇಸ್, ಘಲ್ ಎನ್ನುತ್ತಲೇ ಕಣ್ಮನ ಸೆಳೆಯುವ ಬಳೆಗಳು, ಕ್ರಿಸ್ಟಲ್ ಹೆಡ್ ಕ್ಲಿಫ್ಸ್, ಬಿಗ್ ಎಥ್ನಿಕ್ ಫಿಂಗರ್ ರಿಂಗ್ಸ್, ಭುಜದವರೆಗೂ ನೇತಾಡುವ ಬಗೆಬಗೆಯ ಇಯರಿಂಗ್ಸ್, ಸೈಡ್ ಮಾಂಗ್‌ಟೀಕಾ ಸೇರಿದಂತೆ ನಾನಾ ಬಗೆಯ ಆಕ್ಸೆಸರೀಸ್ ಫ್ಯಾಷನ್‌ಲೋಕಕ್ಕೆ ಎಂಟ್ರಿ ನೀಡಿವೆ.
“ರಂಜಾನ್ ಹಬ್ಬದ ಸೀಸನ್ ಬೆಸ್ಟ್ ಆಕ್ಸೆಸರೀಸ್ ಕೊಳ್ಳಲು ಸುಸಮಯ. ನೀವೇನಾದರೂ ಗ್ರ್ಯಾಂಡ್ ಆಕ್ಸೆಸರೀಸ್ ಕೊಳ್ಳಬೇಕೆನಿಸಿದಲ್ಲಿ ಈ ಸೀಸನ್‌ನಲ್ಲೆ ಕೊಳ್ಳಿ. ನಾನಾ ಶೈಲಿಯ ಲೆಕ್ಕವಿಲ್ಲದಷ್ಟೂ ವಿನ್ಯಾಸದ ಆಕ್ಸೆಸರೀಸ್ ದೊರೆಯುತ್ತವೆ” ಎನ್ನುತ್ತಾರೆ ಸ್ಟೈಲಿಸ್ಟ್ ರಿಯಾ. ಈ ಫೆಸ್ಟಿವ್ ಸೀಸನ್‌ನಲ್ಲಿಹೆಚ್ಚು ವಿನ್ಯಾಸದಲ್ಲಿದೊರೆಯುತ್ತಿರುವ ಆಕ್ಸೆಸರೀಸ್ ಲಿಸ್ಟ್ ಇಲ್ಲಿದೆ.
ಜಗಮಗಿಸುವ ಗ್ರ್ಯಾಂಡ್ ನೆಕ್‌ಪೀಸ್
ನೆಕ್‌ಲೇಸ್ ಹಾಗೂ ಗ್ರ್ಯಾಂಡ್ ನೆಕ್‌ಪೀಸ್‌ಗಳು ಈ ಸೀಸನ್‌ನಲ್ಲಿ ಬಿಡುಗಡೆಯಾಗಿವೆ. ಪರ್ಲ್, ಕುಂದನ್, ಬೀಡ್ಸ್, ಸೆಮಿ ಪ್ರಿಷಿಯಸ್ ಸ್ಟೋನ್ಸ್ ಹೊಂದಿರುವಂತವು ಭಾರಿ ಹೆವ್ವಿ ಡಿಸೈನ್‌ನಲ್ಲಿ ಬಿಡುಗಡೆಗೊಂಡಿವೆ. ಒಂದಿಷ್ಟು ಮೊಗಲ್ ಡಿಸೈನ್‌ನಲ್ಲಿ ದೊರೆಯುತ್ತಿದ್ದರೇ, ಇನ್ನೊಂದಿಷ್ಟು ಬಿಗ್ ಲೆಯರ್ ಚೋಕರ್ ಶೈಲಿಯಲ್ಲಿ ಲಭ್ಯ. ಬೆಳಕಿಗೆ ಮಿನುಗುವ ಇವು ಈ ಫೆಸ್ಟಿವ್ ಸೀಸನ್‌ನಲ್ಲಿ ಅತಿ ಹೆಚ್ಚು ಮಾರಾಟವಾಗುತ್ತಿರುವ ಆಕ್ಸೆಸರೀಸ್ ಎನ್ನಬಹುದು.
ಶೈನಿಂಗ್ ಸೆಟ್ ಬ್ಯಾಂಗಲ್ಸ್
ಸ್ತ್ರೀಯರ ಕೈಗಳ ಸಿಂಗಾರಕ್ಕೆ ಸಾಥ್ ನೀಡುವ ಡಝನ್‌ಗಟ್ಟಲೇ ಇರುವ ಶೈನಿಂಗ್ ಸೆಟ್ ಬ್ಯಾಂಗಲ್ಸ್ ಆಗಮಿಸಿವೆ. ಮೆಟಲ್ ನಾನ್ ಮೆಟಲ್‌ನಲ್ಲಿಇವು ಲಭ್ಯ. ಸಿಲ್ವರ್, ಗೋಲ್ಡನ್ ಸೆಟ್‌ಗಳಿಗೆ ಬೇಡಿಕೆ ಹೆಚ್ಚಿದೆ. ಇದರೊಂದಿಗೆ ಹ್ಯಾಂಡ್ ಕಫ್ ಕೂಡ ಹೊಸ ಶೈಲಿಯಲ್ಲಿಬಿಡುಗಡೆಗೊಂಡಿವೆ. ಮಕ್ಕಳಿಗೆ ಬ್ರೆಸ್‌ಲೇಟ್ ಶೈಲಿಯವು ಬಂದಿವೆ.
ಮಿನುಗುವ ಬಿಗ್ ಇಯರಿಂಗ್ಸ್ – ಫಿಂಗರ್ ರಿಂಗ್ಸ್
ಅಗಲವಾದ ಸ್ಟಡ್ಸ್ ಇಯರಿಂಗ್ಸ್‌ಗಳು ಈ ಬಾರಿ ಬಂದಿಲ್ಲ! ಬದಲಿಗೆ ಕಿವಿಯಿಂದ ಭುಜದವರೆಗೂ ನೇತಾಡುವ ಬಿಗ್ ಇಯರಿಂಗ್ಸ್ ಎಂಟ್ರಿ ನೀಡಿವೆ. ಮಿನುಗುವ ಕ್ರಿಸ್ಟಲ್ಸ್ ಹಾಗೂ ಶ್ಯಾಂಡಲಿಯರ್ ಡಿಸೈನ್‌ಗೆ ಹೆಚ್ಚು ಬೇಡಿಕೆ ಇದೆ. ಇನ್ನು ಬಿಗ್ ಎಥ್ನಿಕ್ ಉಂಗುರಗಳು ಹಬ್ಬದ ಡ್ರೆಸ್‌ಗೆ ಮ್ಯಾಚ್ ಆಗುವಂತಹ ಡಿಸೈನ್‌ಗಳಲ್ಲಿ ಮಾನಿನಿಯರ ಕೈಗಳ ಸೌಂದರ್ಯ ಹೆಚ್ಚಿಸಲು ಸಜ್ಜಾಗಿವೆ. ಕಲರ್‌ಫುಲ್ ಸ್ಟೋನ್ಸ್‌ನ ಈ ಉಂಗುರಗಳು ಹೆಚ್ಚು ಬಿಕರಿಯಾಗುತ್ತಿವೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
ಇದನ್ನೂ ಓದಿ: Celebrity Fashion corner: ಮಿಸೆಸ್ ಇಂಟರ್‌ನ್ಯಾಷನಲ್ ಸೂಪರ್ ಕ್ವೀನ್ ಸಂಧ್ಯಾ ಜೈನ್ ಫ್ಯಾಷನ್ ಮಂತ್ರ
ಮಿಂಚುವ ಪಾದರಕ್ಷೆಗಳು
ಈ ಸೀಸನ್‌ನಲ್ಲಿ ಬಿಡುಗಡೆಯಾದ ನಾನಾ ಶೈಲಿಯ ಪಾದರಕ್ಷೆಗಳಲ್ಲಿ ಮಿಂಚುವ ಫುಟ್‌ವೇರ್‌ಗಳು ಡಿಮ್ಯಾಂಡ್ ಹೆಚ್ಚಿಸಿಕೊಂಡಿವೆ. ಗ್ರ್ಯಾಂಡ್ ಡ್ರೆಸ್‌ಗೆ ಮ್ಯಾಚ್ ಆಗುವಂತಹ ಮಿಂಚುವ ಫುಟ್‌ವೇರ್‌ಗಳು ಲಭ್ಯ. ಈ ಸೀಸನ್‌ನಲ್ಲಿ ಉಡುಗೆ ತೊಡುಗೆಗಳಿಗೆ ಪ್ರಾಮುಖ್ಯತೆ ನೀಡುವಷ್ಟೇ ಇವಕ್ಕೂ ನೀಡಲಾಗುತ್ತದೆ. ಸಿಂಗಲ್ ಸ್ಟ್ರಾಪ್‌ನಿಂದಿಡಿದು ವೆಡ್ಜೇಸ್, ಸ್ಪೆಗೆಟಿ, ಲೇಸ್ ಹೀಗೆ ನಾನಾ ಬಗೆಯವು ಸಿಲ್ವರ್ ಹಾಗೂ ಗೋಲ್ಡನ್ ಕ್ರಿಸ್ಟಲ್ ವಿನ್ಯಾಸದಲ್ಲಿ ಬಂದಿವೆ.
5 ಗ್ರ್ಯಾಂಡ್ ಕ್ಲಚ್
ಅಷ್ಟು ಮಾತ್ರವಲ್ಲ, ಉಡುಪಿನೊಂದಿಗೆ ಸಾಥ್ ನೀಡಲು ಸ್ಟೇಟ್‌ಮೆಂಟ್ ಕ್ಲಚ್‌ಗಳು ಬಿಡುಗಡೆಗೊಂಡಿವೆ. ಒಂದಕ್ಕಿಂತ ಒಂದು ಆಕರ್ಷಕ ವಿನ್ಯಾಸದಲ್ಲಿ ಲಭ್ಯವಿರುವ ಇವು ಗಿಫ್ಟ್ ನೀಡುವ ಪರ್ಪಸ್‌ಗೂ ಖರೀದಿಸುವುದು ಹೆಚ್ಚಾಗಿದೆ ಎನ್ನುತ್ತಾರೆ ಮಾರಾಟಗಾರರು.
( ಲೇಖಕಿ : ಫ್ಯಾಷನ್ ಪತ್ರಕರ್ತೆ)