ಶೀಲಾ ಸಿ. ಶೆಟ್ಟಿ, ಬೆಂಗಳೂರು
ಐಬ್ರೋಗೂ ಮೇಕಪ್! ಹೌದು. ಮುಖದ ಸೌಂದರ್ಯ ಹೆಚ್ಚಿಸಲು ಇದೀಗ ಹುಬ್ಬಿಗೆ ಮೇಕಪ್ (Eyebrow Makeup) ಮಾಡುವ ಸಾಕಷ್ಟು ವಿಧಾನಗಳು ಬಂದಿವೆ. ಈ ಬಗ್ಗೆ ಇಲ್ಲಿದೆ ಉಪಯುಕ್ತ ಮಾಹಿತಿ.
ಐಬ್ರೋ ಮೇಕಪ್ ಕಿಟ್
ಮಿನರಲ್ ಬ್ರಾಂಝ್ ಫೌಂಡೇಶನ್, ಮಿನೆರಲ್ ಮಿಸ್ಟೆಕ್ ಫೌಂಡೇಶನ್, ಎಸ್‌ಪಿಎಫ್‌ಯುಕ್ತ ಫೌಂಡೇಶನ್ ಮತ್ತು ಸೂಪರ್ ಸ್ಟೈಲರ್ ಇಂಟೆನ್ಸಿ ಹಾಗೂ ರೆಡಿಯಂಟ್ ಐ ಶ್ಯಾಡೊ ಮತ್ತು ಕೌಂಟರ್ ಡೆಫನೇಶನ್ ಬ್ರಷ್ ಸಿಗುತ್ತದೆ. ಒಟ್ಟು ಇಪ್ಪತ್ತಕ್ಕೂ ಹೆಚ್ಚು ಬ್ರಾಂಝ್ ಕಲರ್ ಶ್ಯಾಡೋಗಳು ಸಿಗುತ್ತವೆ. ಟ್ರೈ ಮಾಡಿ ನೋಡಬಹುದು.
ಐಬ್ರೋ ಪೆನ್ಸಿಲ್
ಐಬ್ರೋ ಮೇಕಪ್‌ನಲ್ಲಿ ಪೆನ್ಸಿಲ್‌ನ ಪಾತ್ರ ಬಹು ಮುಖ್ಯ. ಬ್ಲಾಕ್ ಮಾತ್ರವಲ್ಲ, ಚಾಕೋಲೇಟ್, ಬ್ರೌನ್ ಹೀಗೆ ನಾನಾ ಶೇಡ್‌ನವೂ ದೊರೆಯುತ್ತವೆ. ತ್ವಚೆಯ ವರ್ಣಕ್ಕೆ ಹೊಂದುವಂತೆ ಇವನ್ನು ಬಳಸಬಹುದು.
ಐಬ್ರೋಗೂ ಬಾಚಣಿಗೆ
ಐಬ್ರೋ ಶೇಪ್ ನೀಡಲು ಬಾಚಣಿಗೆ ಇದೆ. ಇದರಿಂದ ಬಾಚಿ ಐಬ್ರೋವನ್ನು ಮತ್ತಷ್ಟು ಸುಂದರವಾಗಿಸಿಕೊಳ್ಳಬಹುದು. ಬ್ರಶ್‌ನಂತೆ ಕಾಣುವ ಈ ಮಿನಿ ಬಾಚಣಿಕೆಗಳನ್ನು ಸಿಂಪಲ್ ಆಗಿ ಬಳಸಬಹುದು. ನಿಮ್ಮ ಪರ್ಸ್ ನಲ್ಲೆ ಕ್ಯಾರಿ ಮಾಡಬಹುದು.
ಇದನ್ನೂ ಓದಿ | Eye Makeup Care: ಐ ಶ್ಯಾಡೋ ಹಚ್ಚುವ ಮುನ್ನ 5 ಸಂಗತಿ ತಿಳಿದಿರಲಿ
ಐಬ್ರೋ ರೂಲ್ಸ್
ಐಬ್ರೋ ಶೆಪ್‌ಗೆ ತಕ್ಕಂತೆ ಮೇಕಪ್ ಮಾಡಿ. ಇಲ್ಲವಾದಲ್ಲಿನೋಡಲು ಅಭಾಸವಾಗಬಹುದು. ಸ್ಕಿನ್ ಟೋನ್‌ಗೆ ತಕ್ಕಂತೆ ಪೆನ್ಸಿಲ್ ಇಲ್ಲವೇ ಶೇಡ್‌ಗಳನ್ನು ಬಳಸಿ. ಸೀಸನ್‌ಗೆ ತಕ್ಕಂತೆ ಮೇಕಪ್ ಮಾಡಿ. ಹಚ್ಚಿದ ಶೇಡ್ಸ್ ಹರಡದಿರಲಿ.
ಮೇಕಪ್ ಆರ್ಟಿಸ್ಟ್ ರಮೇಶ್ ವೆಂಕಟ್ ಹೇಳುವಂತೆ, ಮೇಕಪ್‌ನಿಂದಲೂ ಹುಬ್ಬುಗಳ ಅಂದ ಹೆಚ್ಚಿಸಬಹುದು. ಈ ವಿಧಾನದಲ್ಲಿಐಬ್ರೋ ಲಿಕ್ವಿಡ್ ಬಹು ಮುಖ್ಯ ಪಾತ್ರ ವಹಿಸುತ್ತದೆ. ಮೇಕಪ್ ನಂತರ ಬಳಸುವ ಈ ಲಿಕ್ವಿಡನ್ನು ಬ್ರಷ್ ಸಹಾಯದಿಂದ ಹುಬ್ಬುಗಳ ಮೇಲೆ ತೀಡಬೇಕು. ಅಷ್ಟು ಮಾತ್ರವಲ್ಲ, ಇದೀಗ ಸಾಕಷ್ಟು ಬಗೆಯ ಐಬ್ರೋ ಕಲರಿಂಗ್ ಸ್ಕೆಚ್ ಪೆನ್‌ಗಳು ಹಾಗೂ ಕ್ರಯಾನ್‌ಗಳು ಆನ್‌ಲೈನ್‌ನಲ್ಲಿ ಕೂಡ ದೊರೆಯುತ್ತಿವೆ. ಇನ್ನು ಇದನ್ನು ರಿಮೂವ್ ಮಾಡಲು ಕ್ಲೆನ್ಸರ್ ಕೂಡ ದೊರೆಯುತ್ತದೆ.
ಇದನ್ನೂ ಓದಿ | ಈ ಫ್ಯಾಷನ್ ಪ್ರಿಯ ಆಮೆಗೆ ಕಪ್ಪು ಶೂ ಕಂಡರೆ ಕೆಂಡಾಮಂಡಲ ಕೋಪ!